ಸೀರೆ ಉಡುವ ನೀರೆಯರೇ ಗಮನಿಸಿ, ಸೀರೆ ಉಟ್ಟಾಗ ಈ 3 ತಪ್ಪು ಮಾಡಿಲ್ಲ ಅಂದ್ರೆ ನೀವು ಕೂಡ ಸೆಲೆಬ್ರಿಟಿಯಂತೆ ಕಾಣ್ತೀರಿ
ಭಾರತೀಯ ಹೆಣ್ಣುಮಕ್ಕಳಿಗೆ ಸೀರೆ ಮೇಲೆ ಅದೇನೋ ವಿಶೇಷ ಒಲವು. ಜೀವನದಲ್ಲಿ ಒಮ್ಮೆಯಾದ್ರೂ ಸೀರೆ ಉಡಬೇಕು ಎನ್ನುವ ಆಸೆ ಪ್ರತಿ ಹೆಣ್ಣುಮಗಳಿಗೂ ಇರುತ್ತದೆ. ಆದರೆ ಸೀರೆ ಉಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ ಅಂದ ಹಾಳಾಗುತ್ತೆ. ಇದರಿಂದ ಮತ್ತೆ ನಿಮಗೆ ಸೀರೆ ಉಡಲು ಮನಸ್ಸು ಬಾರದೇ ಇರಬಹುದು. ಸೀರೆ ಉಡುವಾಗ ಈ ಟಿಪ್ಸ್ ಅನುಸರಿಸಿದ್ರೆ ಸೆಲೆಬ್ರೆಟಿಗಳಂತೆ ಕಾಣ್ತೀರಿ.

ಸೀರೆ ಭಾರತೀಯ ನೀರೆಯರ ನೆಚ್ಚಿನ ಉಡುಪು. ಮೊದಲ ಸಲ ಸೀರೆ ಉಡುವಾಗ ಹೆಣ್ಣುಮಕ್ಕಳು ಸಾಕಷ್ಟು ಎಕ್ಸೈಟ್ ಆಗಿರುತ್ತಾರೆ. ಸೀರೆ ಉಡೋದು ಹೇಗೆ ಅಂತ ಗೊತ್ತಿಲ್ಲ ಅಂದ್ರು ಸೀರೆ ಉಟ್ಟು ಮಿಂಚುಬೇಕು ಎನ್ನುವ ಆಸೆ ಇರುವುದು ಸಹಜ. ಆದರೆ ಕೆಲವರು ಸೀರೆ ಉಡುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಅಲ್ಲದೇ ಸೀರೆ ಉಡುವಾಗ ಮಾಡುವ ಕೆಲವು ತಪ್ಪುಗಳು ಅಂದ ಹೆಚ್ಚುವ ಬದಲು ಅಂದ ಹಾಳಾಗುವಂತೆ ಮಾಡುತ್ತದೆ.
ಕೆಲವರಿಗೆ ಸೀರೆ ಉಟ್ಟಾಗ ಸೆಲೆಬ್ರೆಟಿಗಳಂತೆ ಲುಕ್ ಬರುತ್ತದೆ. ಬಹುತೇಕರಿಗೆ ತಾವು ಹಾಗೆ ಕಾಣಿಸಬೇಕು ಎನ್ನುವ ಆಸೆ ಇರುತ್ತದೆ. ಆದರೆ ಸೀರೆ ಎಷ್ಟೇ ಉಟ್ಟರು ಹೊಟ್ಟೆಯ ಭಾಗದಲ್ಲಿ ಉಬ್ಬಿದಂತೆ ಕಾಣುವುದು, ನೆರಿಗೆ ಭಾಗದಲ್ಲಿ ಹರಡಿದಂತೆ ಕಾಣಿಸುವುದು ಆಗಬಹುದು. ಅದಕ್ಕೆಲ್ಲಾ ನೀವು ಸೀರೆ ಉಡುವಾಗ ಮಾಡುವ ಈ ತಪ್ಪುಗಳೇ ಕಾರಣ. ಸೀರೆ ಉಡುವ ಸಂದರ್ಭ ನೀವು ಈ ತಪ್ಪುಗಳನ್ನು ಮಾಡಿಲ್ಲ ಅಂದ್ರೆ ಸೆಲೆಬ್ರಿಟಿಗಳಂತೆ ಕಾಣ್ತೀರಿ.
ಸೀರೆ ಉಡುವಾಗ ಗಮನಿಸಬೇಕಾದ ಅಂಶಗಳು
ಪಿನ್ ಹಾಕುವಾಗ ಮಾಡುವ ತಪ್ಪು: ಸೀರೆ ಉಡುವಾಗ ಹೆಂಗಸರು ಮಾಡುವ ಮೊದಲ ತಪ್ಪು ಎಂದರೆ ಸೊಂಟದ ಬಳಿ ಸೀರೆಯನ್ನು ಹಿಂದಿನಿಂದ ಮುಂದಕ್ಕೆ ತಂದು ನೆರಿಗೆ ಮಾಡುವುದು. ನಂತರ ಇದನ್ನು ಮಡಿಚಿ ಪಿನ್ ಹಾಕುತ್ತಾರೆ. ಆದರೆ ಪಿನ್ ಹಾಕುವಾಗ ಮಾಡುವ ವ್ಯತ್ಯಾಸವು ಸೀರೆ ವಿಚಿತ್ರವಾಗಿ ಕಾಣುವಂತೆ ಮಾಡುವ ಜೊತೆಗೆ ನಿಮ್ಮ ಅಂದವನ್ನೂ ಹಾಳು ಮಾಡುತ್ತದೆ. ಇದು ನಡುವೆ ಸೀರೆ ನೆರಿಗೆಯನ್ನ ವಿಚಿತ್ರವಾಗಿ ಸಿಕ್ಕಿಸಿದ ಅನುಭವ ನೀಡುತ್ತದೆ. ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಸರಿಯಾಗಿ ಪಿನ್ ಹಾಕಲು ಆಗದೇ ಇರಬಹುದು.
ಸೀರೆಯ ಮುಂಭಾಗವನ್ನು ಪಿನ್ ಮಾಡಿದ ನಂತರ, ಕನಿಷ್ಠ 12 ರಿಂದ 14 ಇಂಚುಗಳಷ್ಟು ಸೀರೆ ಬಟ್ಟೆಯನ್ನು ಬಿಡಬೇಕು. ಹೆಚ್ಚಿನ ಹುಡುಗಿಯರು, ಮಹಿಳೆಯರು ಹೀಗೆ ಮಾಡುವುದಿಲ್ಲ. ಹೀಗೆ ಕಡಿಮೆ ಬಟ್ಟೆ ಬಿಟ್ಟರೆ ಮುಂಭಾಗದಲ್ಲಿ ಸಿಕ್ಕಿಸಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಸೀರೆಯನ್ನು ಮುಂಭಾಗದಿಂದ ಅಳತೆ ಮಾಡಿದ ನಂತರ, ಬಟ್ಟೆಯನ್ನು ತೋಳಿನವರೆಗೆ ಬಿಟ್ಟು ನಂತರ ಸೀರೆಯನ್ನು ಸೊಂಟಕ್ಕೆ ಸಿಕ್ಕಿಸಿ. ಇದು ಸ್ಟ್ರೈಟ್ ಮತ್ತು ಸೈಡ್ ಫಿಟ್ಟಿಂಗ್ ತುಂಬಾ ಚೆನ್ನಾಗಿ ಕಾಣುವಂತೆ ಮಾಡುತ್ತದೆ.
ಕೊನೆಯ ಸೆರಗನ್ನು ಹೀಗೆ ಮಾಡಿ: ಸೀರೆಯನ್ನು ಸೊಂಟದ ಬಳಿ ನೀಟಾಗಿ ಮಡಿಸಿ ಸಿಕ್ಕಿಸುವಾಗ ಒಂದಿಷ್ಟು ಅಂಚು ಉಳಿದಿದ್ದರೆ ಅದನ್ನು ಕೊನೆಯ ಸೆರಗಿನ ಒಳಗಿನಿಂದ ಸೇರಿಸಿ ಟಕ್ ಮಾಡಿ. ಹಾಗೆ ಅಡ್ಜಸ್ಟ್ ಮಾಡುವುದರಿಂದ ನೆರಿಗೆ ಭಾಗದಲ್ಲಿ ಉಬ್ಬಿದಂತೆ ಕಾಣುತ್ತದೆ. ಇದರಿಂದ ಸೀರೆ ನಿಮಗೆ ಅಸಹ್ಯವಾಗಿ ಕಾಣಿಸಬಹುದು.
ನೆರಗಿ ಹೀಗೆ ಜೋಡಿಸಿ: ಸೀರೆ ನೆರಿಗೆ ಮಾಡುವುದು ಒಂದು ಕಲೆ. ಸೀರೆ ನೆರಿಗೆ ಸರಿಯಾಗಿ ಮಾಡಿಲ್ಲ ಎಂದರೆ ಕೋಲಿಗೆ ಸೀರೆ ಸುತ್ತಿದಂತಿರುತ್ತದೆ. ಸೀರೆ ನೆರಿಗೆಯನ್ನು ಸೊಂಟಕ್ಕೆ ಸಿಕ್ಕಿಸುವ ಮುನ್ನ ಅಥವಾ ನೆರಿಗೆಯನ್ನು ತೆಗೆಯುವ ಮುನ್ನ ಬಲಗಾಲಿನಿಂದ ಒಮ್ಮೆ ನೆರಿಗೆಯನ್ನು ಮೆಟ್ಟಿಕೊಳ್ಳಿ. ನಂತರ ನೀಟಾಗಿ ಇನ್ನೊಮ್ಮೆ ಜೋಡಿಸಿ, ಸೊಂಟಕ್ಕೆ ಸಿಕ್ಕಿಸಿಕೊಳ್ಳಿ.
