Women Fashion: ಸೀರೆಯಲ್ಲಿ ಸಖತ್ ಆಗಿ ಕಾಣಬೇಕೆ? ಈ ಹೇರ್ಸ್ಟೈಲ್ಗಳನ್ನು ಮಿಸ್ ಮಾಡ್ದೇ ಟ್ರೈ ಮಾಡಿ
ಸೀರೆ ಕೇವಲ ಒಂದು ಉಡುಪಲ್ಲ ಅದೊಂದು ಭಾವನೆ. ಸೀರೆಗೆ ಇಲ್ಲ ಎನ್ನುವ ಮಹಿಳೆಯರು ಸಿಗುವುದೇ ಅಪರೂಪ. ಸೀರೆ ಕೇವಲ ಸಾಂಪ್ರದಾಯಿಕ ಉಡುಪಾಗಿ ಉಳಿದಿಲ್ಲ. ಈಗ ಸೀರೆಯಿಂದ ಮಾಡರ್ನ್ ಲುಕ್ ಕೂಡ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಈ ಕೆಳಗೆ ಹೇಳಲಾದ ಹೇರ್ಸ್ಟೈಲ್ಗಳನ್ನು ಸೀರೆಯೊಂದಿಗೆ ಟ್ರೈ ಮಾಡಿ ನೋಡಬೇಕು.
ನೀವು ದಪ್ಪವಿರಲಿ ಸಣ್ಣವಿರಲಿ. ನಿಮಗೆ ಅಂದವಾಗಿ ಒಪ್ಪುವುದು ಹಾಗೂ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಸೀರೆ ಮಾತ್ರ. ಹೀಗಾಗಿ ಸೀರೆಯನ್ನು ಕೇವಲ ಒಂದು ಉಡುಪು ಎಂದು ಕರೆಯಲು ಸಾಧ್ಯವಿಲ್ಲ. ಅದೊಂದು ಭಾವನೆ. ಸುಂದರವಾದ ಕೇಶ ವಿನ್ಯಾಸ, ಹಣೆಗೆ ಚಂದನೆಯ ಬಿಂದಿ ಧರಿಸಿದ್ರೆ ಸಾಕು ನಿಮ್ಮಷ್ಟು ಅಂದ ತೋರಲು ಇನ್ಯಾರಿಗೂ ಸಾಧ್ಯವಿಲ್ಲ. ನೀವು ಎಷ್ಟೇ ಮಾಡರ್ನ್ ಆಗಿರಿ, ಸೀರೆ ಧರಿಸಿದಾಗ ಬರುವ ಲಕ್ಷಣ ಇನ್ಯಾವುದರಲ್ಲೂ ಬರಲು ಸಾಧ್ಯವಿಲ್ಲ.
ಸೀರೆಯನ್ನು ಕೇವಲ ಸಾಂಪ್ರದಾಯಕವಾಗಿ ಉಡುವುದು ಹಳೆಯ ಕಾಲವಾಯ್ತು. ಈಗ ಟ್ರೆಂಡ್ಗೆ ತಕ್ಕಂತೆ ನೀವು ಕ್ಲಾಸಿ ಹಾಗೂ ಸ್ಟೈಲಿಶ್ ಆಗಿ ಸೀರೆಯಿಂದ ನಿಮ್ಮನ್ನು ನೀವು ಸಿಂಗರಿಸಿಕೊಳ್ಳಬಹುದು. ಸಾಮಾನ್ಯವಾಗಿ ಸೀರೆ ಧರಿಸಿದಾಕ್ಷಣ ಮಹಿಳೆಯರು ಜಡೆ ಅಥವಾ ತುರುಬು ಕಟ್ಟಿಕೊಂಡು ಬಿಡುತ್ತಾರೆ. ಆದರೆ ಇದು ಮಾತ್ರವಲ್ಲ ನೀವು ಸಾಕಷ್ಟು ಬಗೆಯ ಹೇರ್ಸ್ಟೈಲ್ನ್ನು ಸೀರೆಯೊಂದಿಗೆ ಮಾಡಿಕೊಳ್ಳಬಹುದು. ಹಾಗಾದರೆ ಆ ಕೇಶ ವಿನ್ಯಾಸಗಳು ಯಾವುದು ಅಂತಾ ತಿಳಿದುಕೊಳ್ಳೋಣ.
ಮೆಸ್ಸಿ ಜಡೆ
ಸೀರೆಯೊಂದಿಗೆ ಜಡೆ ಕಾಂಬಿನೇಷನ್ ಎಂದಿಗೂ ಔಟ್ ಆಫ್ ಫ್ಯಾಶನ್ ಆಗೋಕೆ ಸಾಧ್ಯವೇ ಇಲ್ಲ. ಅಲ್ಲದೇ ಈ ಹೇರ್ಸ್ಟೈಲ್ ಎಲ್ಲರಿಗೂ ಒಪ್ಪುತ್ತೆ ಕೂಡ. ಅದರಲ್ಲೂ ದುಂಡನೆಯ ಮುಖ ಹೊಂದಿರುವವರಿಗೆ ಜಡೆ ತುಂಬಾನೆ ಚಂದ ಕಾಣುತ್ತದೆ. ನೀವು ಮೆಸ್ಸಿ ರೀತಿಯಲ್ಲಿ ಜಡೆಯನ್ನು ಹಣೆದುಕೊಳ್ಳುವ ಮೂಲಕ ಸಿಂಗಾರ ಮಾಡಿಕೊಳ್ಳಬಹುದು. ಇದು ಟ್ರೆಂಡಿಯಾಗಿ ಕೂಡ ಇರುತ್ತದೆ.
ಕಡಿಮೆ ಕೂದಲು ಇರುವವರು ಗುಂಗುರು ಹೇರ್ಸ್ಟೈಲ್ ಮಾಡಬಹುದು
ಅನೇಕರು ಶಾರ್ಟ್ ಹೇರ್ಸ್ಟೈಲ್ ಸೀರೆಗಳಿಗೆ ಮ್ಯಾಚ್ ಆಗುವುದಿಲ್ಲ ಎಂದೇ ತಿಳಿದುಕೊಳ್ಳುತ್ತಾರೆ. ಆದರೆ ಶಾರ್ಟ್ ಕೂದಲು ಇರುವವರು ನಿಮ್ಮ ಕೂದಲನ್ನು ಕರ್ಲಿ ಮಾಡಿಕೊಂಡರೆ ಸೀರೆಗೆ ಸಖತ್ ಆಗಿ ಹೊಂದುತ್ತದೆ. ಆಫೀಸ್ ಲುಕ್ಗಳಿಗೆ ಇದು ಇನ್ನೂ ಚಂದ ಕಾಣುತ್ತದೆ. ನೈಸರ್ಗಿಕವಾಗಿಯೇ ನಿಮಗೆ ಗುಂಗುರು ಕೂದಲಿದ್ದರೆ ಮಿಷನ್ಗಳ ಅಗತ್ಯವೂ ಇರುವುದಿಲ್ಲ.
ತುರುಬು ಈ ರೀತಿ ಹಾಕಿಕೊಳ್ಳಿ
ತುರುಬು ಹಳೆ ಕಾಲದ ಫ್ಯಾಶನ್ ಅಂತಾ ನಿರ್ಲಕ್ಷಿಸಬೇಡಿ. ನೀವು ಮೆಸ್ಸಿ ಬನ್ ಹಾಕಿಕೊಂಡರೆ ಇದು ಸೀರೆಗೆ ಎಂಥಾ ಚಂದ ಲುಕ್ ಕೊಡುತ್ತದೆ ಎಂದರೆ ಅದನ್ನು ವರ್ಣಿಸಲು ಅಸಾಧ್ಯ. ಇದಕ್ಕಾಗಿ ನೀವು ಮಾಡಬೇಕಾಗಿದ್ದು ಇಷ್ಟೇ. ತುಂಬಾ ಕೆಳಗೆ ನೀವು ಜಡೆಯನ್ನು ಹಾಕಿಕೊಳ್ಳಿ. ಬಳಿಕ ಈ ಜಡೆಯನ್ನು ತುರುಬಿನ ರೀತಿಯಲ್ಲಿ ಸುತ್ತಿ. ಒಂದು ರೀತಿಯಲ್ಲಿ ಇದು ಮೆಸ್ಸಿ ಮೆಸ್ಸಿಯಾಗಿ ಕಾಣುವಂತಿರಲಿ.
ಕೂದಲನ್ನು ಹಾಗೆಯೇ ಬಿಡಿ
ತುಂಬಾ ಸಂದರ್ಭಗಳಲ್ಲಿ ನೀವು ಚಂದವಾಗಿ ಕಾಣಬೇಕು ಎಂದರೆ ಸಿಂಪಲ್ ಆಗಿ ತಯಾರಾಗಬೇಕು. ನಿಮಗೆ ನೀಳವಾದ ಕೂದಲಿದ್ದರೆ ಸುಮ್ಮನೇ ಫ್ರೀಯಾಗಿ ಅದನ್ನು ಬಿಡಿ. ಬೇಕಿದ್ದರೆ ನೀವು ಅದನ್ನು ಸ್ಟ್ರೈಟ್ ಅಥವಾ ಕರ್ಲ್ ಕೂಡ ಮಾಡಿಕೊಳ್ಳಬಹುದು. ಈ ಸಿಂಪಲ್ ಹೇರ್ಸ್ಟೈಲ್ ಕೂಡ ತುಂಬಾ ಚಂದನೆಯ ಲುಕ್ ನೀಡುತ್ತದೆ.