ಅಧಿಕ ತೂಕ, ಋತುಚಕ್ರದ ಬದಲಾವಣೆಗೂ ಸಂಬಂಧವಿದೆಯೇ? ತಜ್ಞರು ಹೇಳುವುದು ಹೀಗೆ
ಕನ್ನಡ ಸುದ್ದಿ  /  ಜೀವನಶೈಲಿ  /  ಅಧಿಕ ತೂಕ, ಋತುಚಕ್ರದ ಬದಲಾವಣೆಗೂ ಸಂಬಂಧವಿದೆಯೇ? ತಜ್ಞರು ಹೇಳುವುದು ಹೀಗೆ

ಅಧಿಕ ತೂಕ, ಋತುಚಕ್ರದ ಬದಲಾವಣೆಗೂ ಸಂಬಂಧವಿದೆಯೇ? ತಜ್ಞರು ಹೇಳುವುದು ಹೀಗೆ

ಅನಿಯಮಿತ ಋತುಚಕ್ರವು ದೇಹದ ತೂಕ ಮತ್ತು ಬೊಜ್ಜಿಗೆ ಸಂಪರ್ಕವನ್ನು ಹೊಂದಿದೆ. ಬೊಜ್ಜು ಹಾರ್ಮೋನು ಏರುಪೇರು ಮಾಡುವುದರಿಂದ ದೇಹದ ತೂಕವು ಅನಿಯಮಿತ ಋತುಚಕ್ರವನ್ನು ಉಂಟುಮಾಡುತ್ತದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ. (ಬರಹ: ಪ್ರೀತಿ)

ಅಧಿಕ ತೂಕ, ಋತುಚಕ್ರದ ಬದಲಾವಣೆಗೂ ಸಂಬಂಧವಿದೆಯೇ? ತಜ್ಞರು ಹೇಳುವುದು ಹೀಗೆ
ಅಧಿಕ ತೂಕ, ಋತುಚಕ್ರದ ಬದಲಾವಣೆಗೂ ಸಂಬಂಧವಿದೆಯೇ? ತಜ್ಞರು ಹೇಳುವುದು ಹೀಗೆ (PC: Canva)

ಆರೋಗ್ಯಕರ ಹಾರ್ಮೋನುಗಳ ಸಮತೋಲನ ಕಾಪಾಡಿಕೊಳ್ಳುವಲ್ಲಿ ತೂಕವು ಪ್ರಮುಖ ಪಾತ್ರವಹಿಸುತ್ತದೆ. ಇದು ನಿಮ್ಮ ಋತುಚಕ್ರ ಮತ್ತು ಅಂಡನೋತ್ಪತಿ ಮೇಲೆ ನೇರವಾಗಿ ಪ್ರಭಾವ ಬೀರುವುದರಿಂದ ನಿಮ್ಮಲ್ಲಿ ಅನೇಕ ದೈಹಿಕ ನ್ಯೂನತೆಗಳನ್ನು ಉಂಟುಮಾಡುವುದರ ಜೊತೆಗೆ ತಿಂಗಳಿನ ಋತುಸ್ರಾವದ ಮೇಲೂ ಅಡ್ಡಪರಿಣಾಮವಾಗುತ್ತದೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ.

ಅನಿಯಮಿತ ಋತುಚಕ್ರವು ದೇಹದ ತೂಕ ಮತ್ತು ಬೊಜ್ಜಿಗೆ ಸಂಪರ್ಕವನ್ನು ಹೊಂದಿದೆ. ಬೊಜ್ಜು ಹಾರ್ಮೋನುಗಳ ವ್ಯಾಧಿಯನ್ನುಂಟು ಮಾಡುವುದರಿಂದ ದೇಹದ ತೂಕವು ಅನಿಯಮಿತ ಋತುಚಕ್ರವನ್ನು ಉಂಟುಮಾಡುತ್ತದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಮತ್ತು ಹೈಪೋಥೈರಾಯ್ಡಿಸಮ್‌‎ನಂತಹ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರು ಅನಿಯಮಿತ ಮುಟ್ಟಿನ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ತೂಕದಲ್ಲಿ ಆಗುವ ಏರಿಳಿತವು ಋತುಚಕ್ರ ಬದಲಾವಣೆಯಾಗಲು ಸಹಕಾರಿ ಎಂಬುದನ್ನು ಮಹಿಳೆಯರು ಅರಿತುಕೊಳ್ಳುವುದು ತುಂಬಾ ಮುಖ್ಯ.

ಅಧಿಕ ತೂಕ ಮತ್ತು ಋತುಚಕ್ರದ ಬದಲಾವಣೆಗೆ ಸಂಬಂಧವಿದೆಯೇ?

ಅಧಿಕ ತೂಕವು ಮಾಸಿಕ ಋತುಮಾನದ ಮೇಲೆ ಪ್ರಭಾವ ಬೀರುತ್ತದೆ. ಇತ್ತೀಚೆಗಷ್ಟೆ ತೂಕ ಹೆಚ್ಚಿಸಿಕೊಂಡ ನಂತರವು ಪದೇ ಪದೇ ತೂಕ ಏರುತ್ತಲೇ ಇದ್ದರೆ ಮಾಸಿಕ ಋತುಚಕ್ರದ ಮೇಲೆ ನಾನಾ ರೀತಿಯಲ್ಲಿ ಪ್ರಭಾವ ಬೀರುತ್ತದೆ. ಈ ಬಗ್ಗೆ ಇಲ್ಲಿದೆ ವಿವರ:

ಅನಿಯಮಿತ ಋತುಚಕ್ರ: ಅನಿಯಮಿತ ಋತುಚಕ್ರವು ದೇಹದ ತೂಕ ಮತ್ತು ಬೊಜ್ಜಿಗೆ ಸಂಪರ್ಕವನ್ನು ಹೊಂದಿದೆ. ಬೊಜ್ಜು ಹಾರ್ಮೊನುಗಳ ವ್ಯಾಧಿಯನ್ನುಂಟು ಮಾಡುವುದರಿಂದ ದೇಹದ ತೂಕವು ಅನಿಯಮಿತ ಋತುಚಕ್ರವನ್ನು ಉಂಟುಮಾಡುತ್ತದೆ. ನಿಮ್ಮ ದೇಹದಲ್ಲಿ ಈಸ್ಟ್ರೊಜನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಮಟ್ಟವೂ ನಿಮ್ಮ ಋತುಚಕ್ರವನ್ನು ನಿರ್ಧರಿಸುತ್ತದೆ.

ಅಧಿಕ ತೂಕ: ಅಧಿಕ ತೂಕದಿಂದ ಬಳಲುತ್ತಿರುವ ಮಹಿಳೆಯರೇ ಅಧಿಕ ಋತುಚಕ್ರವನ್ನು ಅನುಭವಿಸುತ್ತಾರೆ. ಸುಮಾರು ಏಳು ದಿನಗಳಿಗಿಂತ ಹೆಚ್ಚು ಋತುಚಕ್ರವಾದರೆ ಅದನ್ನು ರಕ್ತಸ್ರಾವ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಮೃದು ಮತ್ತು ಉತ್ತಮ ಗುಣಮಟ್ಟದ ಹೊರ ಪದರವಿರುವ, ರಕ್ತವನ್ನು ಚೆನ್ನಾಗಿ ಹೀರಿಕೊಳ್ಳುವ ಪ್ಯಾಡ್‌ಗಳನ್ನು ಆರಿಸಿ. ಡ್ರೈ ಶೀಟ್ (ಪಿಪಿಎಫ್ ಶೀಟ್) ಪ್ಯಾಡ್ ಬಳಸಿದರೆ ನಿಮಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿರುತ್ತದೆ. ಚಿಕಿತ್ಸೆ ನೀಡದಿದ್ದರೆ, ಕಬ್ಬಿಣದ ಕೊರತೆ, ರಕ್ತಹೀನತೆ, ಆಯಾಸ ಮತ್ತು ದೌರ್ಬಲ್ಯಕ್ಕೆ ಕಾರಣವಾಗುತ್ತದೆ.

ತೂಕ ಇಳಿಕೆಯಿಂದ ಋತುಚಕ್ರದ ಮೇಲೆ ಬೀರುವ ಪರಿಣಾಮಗಳೇನು?

ಅಧಿಕ ತೂಕದಿಂದ ಮಾತ್ರ ಋತುಚಕ್ರದ ಮೇಲೆ ಪ್ರಭಾವ ಬೀರುವುದಿಲ್ಲ. ಹಠಾತ್ ಆಗಿ ಅಥವಾ ಪದೇ ಪದೇ ತೂಕ ಇಳಿಸಿವುದರಿಂದಲೂ ಮಾಸಿಕ ಋತುಚಕ್ರದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ದೇಹದಲ್ಲಿ ಈಸ್ಟ್ರೊಜನ್ ಹಾರ್ಮೋನುಗಳ ಮಟ್ಟವೂ ಕಡಿಮೆಯಾಗಿ ಮಾಸಿಕ ಖುತುಚಕ್ರದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ತೂಕ ಇಳಿಸುವುದರಿಂದ ಋತುಚಕ್ರದ ಮೇಲೆ ಆಗುವ ಪರಿಣಾಮಗಳ ಕುರಿತು ಇಲ್ಲಿ ತಿಳಿಸಲಾಗಿದೆ.

ಕಡಿಮೆ ರಕ್ತಸ್ರಾವ/ಋತುಚಕ್ರ: ತೂಕ ಇಳಿಸುವುದರಿಂದ ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನುಗಳು ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಇದರಿಂದ ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು. ಒತ್ತಡ ಮತ್ತು ಆತಂಕ ಉಂಟಾದಾಗ, ಕಬ್ಬಿಣಾಂಶ ಮತ್ತು ಹಿಮೊಗ್ಲೋಬಿನ್ ಮಟ್ಟ ಕಡಿಮೆಯಾದಾಗ ಅಥವಾ ಇತರೆ ಪೋಷಕಾಂಶಗಳ ಕೊರತೆ ಉಂಟಾದಾಗ ಸಾಮಾನ್ಯವಾಗಿ ರಕ್ತಸ್ರಾವ ಆಗುವುದು ಕಡಿಮೆಯಾಗುತ್ತದೆ.

ಅಮೆನೋರಿಯಾ: ದಿಢೀರ್ ಆಗಿ ಹೆಚ್ಚು ತೂಕ ಇಳಿಸಿಕೊಂಡರೆ ಕನಿಷ್ಠ ಮೂರು ತಿಂಗಳು ಅಥವಾ ಅದಕ್ಕೂ ಜಾಸ್ತಿ ಋತುಚಕ್ರ ನಿಲ್ಲುತ್ತದೆ ಅಥವಾ ಸಂಪೂರ್ಣ ನಿಂತುಬಿಡುತ್ತದೆ. ಇದಕ್ಕೆ ಅಮೆನೋರಿಯಾ ಎನ್ನಲಾಗುತ್ತದೆ. ಇದರಿಂದ ಕೂದಲು ಉದುರುವಿಕೆ, ಮೊಡವೆ, ತಲೆನೋವು ಅಥವಾ ಮುಖದ ಮೇಲೆ ಅತಿಯಾದ ಕೂದಲು ಬರುವುದು, ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಕಡಿಮೆ ಈಸ್ಟ್ರೊಜನ್ ಹಾರ್ಮೋನುಗಳು ಕಡಿಮೆಯಾದಾಗ ದೇಹದಲ್ಲಿರುವ ಮೂಳೆಗಳು ದುರ್ಬಲವಾಗುತ್ತದೆ. ಈ ಹಾರ್ಮೋನ್ ಅಸಮತೋಲನದಿಂದಾಗಿ ಗರ್ಭಕೋಶದಲ್ಲಿ ಚೀಲಗಳು ನಿರ್ಮಾಣವಾದ ವೇಳೆ ಪಿಸಿಒಎಸ್ ಕಂಡುಬರುತ್ತದೆ. ಇದು ಬಂಜೆತನಕ್ಕೆ ಕಾರಣವಾಗುತ್ತದೆ.

ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು, ಸರಿಯಾಗಿ ಋತುಚಕ್ರ ನಿಭಾಯಿಸಲು ಇಲ್ಲಿದೆ 7 ಸೂತ್ರಗಳು:

  • ಆರೋಗ್ಯಕರ ಮತ್ತು ಸಮತೋಲನ ಆಹಾರ ಕಾಪಾಡಿಕೊಳ್ಳಿ. ಕಡಿಮೆ ಕೊಬ್ಬಿನಾಂಶವಿರುವ ಪ್ರೋಟಿನ್‌ ಹೊಂದಿರುವ ಹಣ್ಣು, ತರಕಾರಿ, ಧಾನ್ಯ ಮತ್ತು ಬೀಜಗಳನ್ನು ಸೇವಿಸಿ. ಸಕ್ಕರೆ ಮತ್ತು ಕೊಬ್ಬಿನಿಂದ ಕೂಡಿದ ಮಾಂಸ ಹಾಗೂ ಸಂಸ್ಕರಿತ ಆಹಾರಗಳನ್ನು ತ್ಯಜಿಸಿ.
  • ವಾಕಿಂಗ್, ಸೈಕ್ಲಿಂಗ್, ರನ್ನಿಂಗ್, ಯೋಗ, ಧ್ಯಾನ, ನಿಯಮಿತವಾಗಿ ಭಾರ ಎತ್ತುವಿಕೆಯಂತಹ ದೈಹಿಕ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ.
  • ನಿದ್ರೆ ಕಡಿಮೆಯಾದರೆ, ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರಿಸಿ.
  • ಒತ್ತಡದಿಂದ ಹಾರ್ಮೋನ್‌ಗಳ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಬೊಜ್ಜು ಹಾಗೂ ಆಹಾರ ಸೇವನೆಯಲ್ಲಿ ಪರಿಣಾಮ ಬೀರುತ್ತದೆ.
  • ದೇಹಕ್ಕೆ ಆಹಾರ ಮತ್ತು ನೀರಿನ ಅಂಶ ಸಮತೋಲನವಾಗಿರಬೇಕು. ಹೆಚ್ಚು ನೀರು ಕುಡಿಯುವುದರಿಂದ ಹಸಿವನ್ನು ತಡೆಗಟ್ಟುತ್ತದೆ. ಆದ್ದರಿಂದ ಊಟಕ್ಕೂ ಮುಂಚೆಯೇ ನೀರು ಕುಡಿಯಿರಿ.
  • ಸಕ್ಕರೆಯುಕ್ತ ಆಹಾರ ಮತ್ತು ಪಾನೀಯವನ್ನು ಕಡಿಮೆ ಮಾಡಿ. ಏಕೆಂದರೆ, ಇದರಿಂದ ತೂಕ ಹೆಚ್ಚಾಗುತ್ತದೆ ಹಾಗೂ ಇತರೆ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
  • ಹೆಚ್ಚು ಕ್ಯಾಲೋರಿಯುಳ್ಳ ಆಹಾರ ಸೇವನೆಯನ್ನು ಮಾಡುವುದು ಒಳ್ಳೆಯದಲ್ಲ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

  • ನಿಯಮಿತವಾಗಿದ್ದ ನಿಮ್ಮ ಋತುಚಕ್ರ ಅನಿಯಮಿತವಾಗಿ ಬದಲಾದರೆ
  • 7 ದಿನಗಳಿಗಿಂತ ಹೆಚ್ಚು ಕಾಲ ಮುಟ್ಟಾಗುತ್ತಲೇ ಇದ್ದರೆ
  • ಅಧಿಕ ರಕ್ತಸ್ರಾವವಾಗುತ್ತಿದ್ದರೆ ಅಥವಾ ಪ್ರತಿ ಗಂಟೆ ಅಥವಾ ಎರಡು ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸುತ್ತಿದ್ದರೆ
  • ಋತುಚಕ್ರವು 21 ದಿನಕ್ಕಿಂಡ ಕಡಿಮೆ ಅವಧಿಗೆ ಅಥವಾ 35 ದಿನಕ್ಕಿಂತ ಅಧಿಕ ಅವಧಿಗೆ ಆಗುತ್ತಿದ್ದರೆ
  • ಗರ್ಭೀಣಿಯಲ್ಲದಿದ್ದರು, 90 ದಿನಗಳ ನಂತರ ಋತುಚಕ್ರ ನಿಂತರೆ ನಿರ್ಲಕ್ಷ್ಯ ಬೇಡ.

ಈ ಮೇಲಿನ ಯಾವುದೇ ಲಕ್ಷಣಗಳನ್ನು ನೀವು ಎದುರಿಸುತ್ತಿದ್ದರೆ ಅಥವಾ ಇತರೆ ಸಮಸ್ಯೆಗಳಯ ಎದುರಾದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಸಲಹೆ ಪಡೆಯಿರಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ).

Priyanka Gowda

eMail