Women Health: ಬೇಸಿಗೆಯಲ್ಲಿ ಬಳಸಿ ಮರುಬಳಕೆಯ ಸ್ಯಾನಿಟರಿ ಪ್ಯಾಡ್; ನೈರ್ಮಲ್ಯಕ್ಕೂ ಆರೋಗ್ಯಕ್ಕೂ ಇದು ಉತ್ತಮ
Women Health: ಬೇಸಿಗೆಯಲ್ಲಿ ಮುಟ್ಟಿನ ದಿನಗಳನ್ನು ಕಳೆಯುವುದು ನಿಜಕ್ಕೂ ಕಷ್ಟಕರ. ಸ್ಯಾನಿಟರಿ ಪ್ಯಾಡ್‌ಗಳ ನಿರಂತರ ಬಳಕೆಯಿಂದ ಚರ್ಮದ ಕಿರಿಕಿರಿ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಇದಕ್ಕೆ ಮರುಬಳಕೆಯ ಪ್ಯಾಡ್ ಬಳಕೆ ಉತ್ತಮ ಪರಿಹಾರ ಎನ್ನುತ್ತಾರೆ ತಜ್ಞರು.

ಮುಟ್ಟಿನ ದಿನಗಳಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸ್ಯಾನಿಟರಿ ಪ್ಯಾಡ್‌ಗಳು ಉತ್ತಮ ಆಯ್ಕೆ ಎಂದರೆ ತಪ್ಪಾಗಲಿಕ್ಕಿಲ್ಲ. ಇವು ಧರಿಸಲು ಆರಾಮದಾಯಕ, ಬದಲಿಸಲು ಸುಲಭ ಹಾಗೂ ಚಿಕ್ಕ ಬ್ಯಾಗ್‌ನಲ್ಲೂ ಇರಿಸಿಕೊಂಡು ಹೋಗಬಹುದಾಗಿದೆ.
ಅದಾಗ್ಯೂ, ಮುಟ್ಟಿನ ನೈರ್ಮಲ್ಯಕ್ಕಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮಾತ್ರ ಪರ್ಯಾಯವಲ್ಲ, ಜೊತೆಗೆ ಅವು ಸಂಪೂರ್ಣ ಸುರಕ್ಷಿತವೂ ಅಲ್ಲ. ಬೇಸಿಗೆಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಚರ್ಮದ ಕಿರಿಕಿರಿ, ತುರಿಕೆ ಹಾಗೂ ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸಬಹುದು. ಅದರಲ್ಲೂ ಬೇಸಿಗೆಯಲ್ಲಿ ಕೆಟ್ಟ ವಾಸನೆಗೆ ಕಾರಣವಾಗುತ್ತವೆ. ಆದರೆ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮರುಬಳಕೆಯ ಸ್ಯಾನಿಟರಿ ಪ್ಯಾಡ್ ಬಳಸುವುದು ಉತ್ತಮ.
ಬಳಸಿ ಎಸೆಯುವ ಪ್ಯಾಡ್‌ಗಿಂತ ಮರುಬಳಕೆಯ ಪ್ಯಾಡ್‌ಗಳು ಹೇಗೆ ಉತ್ತಮ?
ಮರುಬಳಕೆಯ ಸ್ಯಾನಿಟರಿ ಪ್ಯಾಡ್‌ಗಳು ಅಥವಾ ಮರುಬಳಕೆ ಮಾಡಬಹುದಾದ ಬಟ್ಟೆಯ ಪ್ಯಾಡ್‌ಗಳು ಹಿಂದೆಲ್ಲಾ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಬಳಸುತ್ತಿದ್ದ ಮುಟ್ಟಿನ ಬಟ್ಟೆಗೆ ಪರ್ಯಾಯವಾಗಿದೆ. ಗ್ರಾಮೀಣ ಭಾಗಗಳಲ್ಲಿ ಎಂದಿಗೂ ಮಹಿಳೆಯರು ಇದನ್ನೇ ಬಳಸುತ್ತಿದ್ದಾರೆ.
ನೈಸರ್ಗಿಕ ನಾರುಗಳಾದ ಹತ್ತಿ, ಸೆಣಬು, ಬಿದಿರು ಇತ್ಯಾದಿಗಳಿಂದ ತಯಾರಿಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಮರುಬಳಕೆ ಮಾಡಬಹುದಾಗಿದೆ. ಇವುಗಳ ಹೊರ ಪದರವನ್ನು ಜಲನಿರೋಧಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಮುಟ್ಟಿನ ಸಮಯದಲ್ಲಿ ಈ ಪ್ಯಾಡ್‌ಗಳು ಹೀರಿಕೊಳ್ಳುವ ಜೊತೆಗೆ ಸೋರಿಕೆಯನ್ನು ನಿಯಂತ್ರಿಸುತ್ತವೆ.
ಮರುಬಳಕೆ ಮಾಡಬಹುದಾದ ಪ್ಯಾಡ್‌ಗಳು ಪರಿಸರಸ್ನೇಹಿಯಾಗಿದ್ದು, ಇದನ್ನು ಪದೇ ಪದೇ ತೊಳೆದು ಬಳಸಬಹುದಾಗಿದೆ ಎನ್ನುತ್ತಾರೆ ಜನಕಪುರಿ ಜೆಕೆ ಆಸ್ಪತ್ರೆಯ ನಿರ್ದೇಶಕಿ ಡಾ. ಶಿವಾನಿ ಸಿಂಗ್ ಕಪೂರ್.
ʼಒಂದೇ ಪ್ಯಾಡ್ ಅನ್ನು ಹಲವು ಬಾರಿ ಬಳಸುವ ಬದಲು ಪ್ರತಿ ಐದರಿಂದ, ಆರು ಗಂಟೆಗಳಿಗೊಮ್ಮೆ ಬದಲಿಸಬಹುದು ಹಾಗೂ ಪ್ರತಿಬಾರಿ ಸ್ವಚ್ಛಗೊಳಿಸುವುದು ಮುಖ್ಯವಾಗುತ್ತದೆ. ಕೇವಲ ಐದು ನಿಮಿಷದಲ್ಲಿ ಇದನ್ನು ಸ್ವಚ್ಛ ಮಾಡಬಹುದಾಗಿದ್ದು, ಯಾವುದೇ ಕಲ್ಮಶಗಳು ಉಳಿಯುವುದಿಲ್ಲ. ಅದರಲ್ಲೂ ಬೇಸಿಗೆಯಲ್ಲಿ ಬಳಸಿ ಎಸೆಯುವ ಪ್ಯಾಡ್‌ಗಿಂತ ಇವು ಬಹಳ ಉತ್ತಮʼ ಎಂದು ಹೆಲ್ತ್‌ಶಾಟ್ಸ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ ಸಿಂಗ್.
ಬೇಸಿಗೆಯಲ್ಲಿ ಮರುಬಳಕೆಯ ಪ್ಯಾಡ್ ಉತ್ತಮ ಎನ್ನುವುದಕ್ಕೆ ಕಾರಣಗಳು ಇಲ್ಲಿವೆ ನೋಡಿ.
ಬೆವರಿಗೆ ಬಾಯ್ ಹೇಳಿ
ಅತಿಯಾದ ಬೆವರುವಿಕೆಯ ಕಾರಣದಿಂದ ಬೇಸಿಗೆಯಲ್ಲಿ ಮುಟ್ಟಿನ ದಿನಗಳು ಸವಾಲಿನದ್ದಾಗಿರುತ್ತವೆ. ಹತ್ತಿಯ ಬಟ್ಟೆಯ ಪ್ಯಾಡ್‌ಗಳನ್ನು ಬಳಸುವುದರಿಂದ ಇವು ನಿಮ್ಮನ್ನು ತಾಜಾವಾಗಿಡಲು ಹಾಗೂ ಬೆವರು ನಿಲ್ಲದಂತೆ ನೋಡಿಕೊಳ್ಳುತ್ತವೆ. ಶೇ 100 ಅವು ನೈಸರ್ಗಿಕವಾಗಿರುವುದರಿಂದ ಹತ್ತಿ ಹಾಗೂ ಪಾಲಿಯೆಸ್ಟರ್ ಮುದ್ರಿತ ಬಟ್ಟೆಗಳಿಂದ ತಯಾರಿಸಲಾಗುತ್ತದೆ. ಇವು ಚರ್ಮದ ಮೇಲೆ ಯಾವುದೇ ದದ್ದುಗಳನ್ನು ಉಂಟು ಮಾಡುವುದಿಲ್ಲ.
ಗಾಳಿಯಾಡುವಂತಿರುತ್ತವೆ
ಎಸೆಯವ ಪ್ಯಾಡ್‌ಗಳಿಗಿಂತ ಬಟ್ಟೆಯ ಪ್ಯಾಡ್‌ಗಳು ಹೆಚ್ಚು ಉಸಿರಾಡುವಂತಿರುತ್ತವೆ. ಬಿಸಾಡಬಹುದಾದ ಪ್ಯಾಡ್‌ಗಳ ಮೇಲೆ ಪ್ಲಾಸ್ಟಿಕ್ ಪದರವನ್ನು ಹೊಂದಿದ್ದು ಅದು ನಿಮಗೆ ಅನಾನುಕೂಲವನ್ನು ಉಂಟುಮಾಡಬಹುದು. ದಿನವಿಡೀ ಇದನ್ನು ಧರಿಸುವುದರಿಂದ ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ, ಇದು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಹತ್ತಿ ಬಟ್ಟೆಯ ಪ್ಯಾಡ್‌ಗಳು ಆರಾಮದಾಯಕ ಮತ್ತು ಸೋಂಕಿನ ಅಪಾಯವನ್ನು ಉಂಟುಮಾಡುವುದಿಲ್ಲ.
ಆರಾಮದಾಯಕ
ಇದರ ಬಳಕೆಯು ನಮ್ಮ ಚರ್ಮವನ್ನು ಎಲ್ಲಾ ರೀತಿಯ ಅಸ್ವಸ್ಥತೆಗಳಿಂದ ರಕ್ಷಿಸಲು ಕೆಲಸ ಮಾಡುತ್ತದೆ. ಅವು ಜಿಗುಟಾಗಿರುವುದಿಲ್ಲ ಮತ್ತು ಚರ್ಮಕ್ಕೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ಜೊತೆಗೆ ಈ ಪ್ಯಾಡ್‌ಗಳು ಕಡಿಮೆ ಬೆಲೆಯನ್ನು ಹೊಂದಿರುವುದರಿಂದ, ನೀವು ಪ್ರತಿ ತಿಂಗಳ ವೆಚ್ಚವನ್ನು ತಪ್ಪಿಸಬಹುದು.
ರಾಸಾಯನಿಕಗಳಿಂದ ಮುಕ್ತವಾಗಿರುತ್ತವೆ
ಬಳಸಿ ಎಸೆಯುವ ಪ್ಯಾಡ್ ತಯಾರಿಕೆಯಲ್ಲಿ ಬಹಳಷ್ಟು ಕಠಿಣ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಯೋನಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮರುಬಳಕೆಯ ಪ್ಯಾಡ್‌ಗಳು ರಾಸಾಯನಿಕ ಮುಕ್ತವಾಗಿರುತ್ತವೆ ಹಾಗೂ ಅವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಆ ಕಾರಣಕ್ಕೆ ಒಂದು ಬಾರಿ ಬಳಸಿದ ನಂತರ ಅದನ್ನು ನೀರು ಮತ್ತು ಸೋಪಿನ ಸಹಾಯದಿಂದ ತೊಳೆದು ಪುನಃ ಬಳಸಬಹುದು.
