Periods: ಮುಟ್ಟಿನ ಸಮಯದಲ್ಲಿ ಸಿಹಿತಿಂಡಿ ತಿನ್ನುವುದರಿಂದ ಉಂಟಾಗುತ್ತೆ ಈ ತೊಂದರೆಗಳು
ಕನ್ನಡ ಸುದ್ದಿ  /  ಜೀವನಶೈಲಿ  /  Periods: ಮುಟ್ಟಿನ ಸಮಯದಲ್ಲಿ ಸಿಹಿತಿಂಡಿ ತಿನ್ನುವುದರಿಂದ ಉಂಟಾಗುತ್ತೆ ಈ ತೊಂದರೆಗಳು

Periods: ಮುಟ್ಟಿನ ಸಮಯದಲ್ಲಿ ಸಿಹಿತಿಂಡಿ ತಿನ್ನುವುದರಿಂದ ಉಂಟಾಗುತ್ತೆ ಈ ತೊಂದರೆಗಳು

ಮುಟ್ಟಿನ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆಯ ಮನಸ್ಥಿತಿ ವಿಭಿನ್ನವಾಗಿರುತ್ತದೆ. ಕೆಲವರಿಗೆ ಏನೂ ತಿನ್ನಬೇಕು ಅನಿಸುವುದಿಲ್ಲವಾದರೆ, ಇನ್ನೂ ಕೆಲವರಿಗೆ ಸಿಹಿ ತಿನ್ನುವ ಬಯಕೆ ಹೆಚ್ಚಾಗುತ್ತದೆ. ಆದರೆ, ಮುಟ್ಟಿನ ಸಮಯದಲ್ಲಿ ಸಿಹಿತಿಂಡಿ ತಿನ್ನುವುದರಿಂದ ಕೆಲವು ಅಡ್ಡಪರಿಣಾಮಗಳಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಮುಟ್ಟಿನ ಸಮಯದಲ್ಲಿ ಸಿಹಿತಿಂಡಿ ತಿನ್ನುವುದರಿಂದ ಉಂಟಾಗುತ್ತೆ ಈ ತೊಂದರೆಗಳು
ಮುಟ್ಟಿನ ಸಮಯದಲ್ಲಿ ಸಿಹಿತಿಂಡಿ ತಿನ್ನುವುದರಿಂದ ಉಂಟಾಗುತ್ತೆ ಈ ತೊಂದರೆಗಳು (PC: Canva)

ಮುಟ್ಟಿನ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆಯ ಮನಸ್ಥಿತಿ ವಿಭಿನ್ನವಾಗಿರುತ್ತದೆ. ಕೆಲವರಿಗೆ ನೋವು ಇರುವುದಿಲ್ಲ. ಆದರೆ, ಕೆಲವರಿಗೆ ವಿಪರೀತ ನೋವು ಇರುತ್ತದೆ. ಹೀಗಾಗಿ ಕೆಲವರು ಆಹಾರವನ್ನು ತಿನ್ನಲು ಬಯಸುವುದಿಲ್ಲ. ಇತರರಲ್ಲಿ, ಆಸೆಗಳು ಹೆಚ್ಚಾಗುತ್ತವೆ. ಅತಿಯಾಗಿ ತಿನ್ನುವ ಆಲೋಚನೆಗಳು ಬರುತ್ತವೆ. ವಿಶೇಷವಾಗಿ ಸಿಹಿತಿಂಡಿಗಳ ಹಂಬಲ ಹೆಚ್ಚಾಗುತ್ತಜೆ. ಆದರೆ, ಪಿರಿಯಡ್ಸ್ ಸಮಯದಲ್ಲಿ ಸಿಹಿ ತಿನ್ನಬಾರದು ಎಂದು ಹಲವರು ಹೇಳುತ್ತಾರೆ. ಪಿರಿಯಡ್ಸ್ ಸಮಯದಲ್ಲಿ ಸಿಹಿ ತಿನ್ನಲು ಹಂಬಲಿಸಲು ಒತ್ತಡವು ಮುಖ್ಯ ಕಾರಣವಾಗಿದೆ. ಪ್ರತಿಯೊಬ್ಬರೂ ಒತ್ತಡದಲ್ಲಿದ್ದಾಗ ಸಿಹಿತಿಂಡಿಗಳನ್ನು ತಿನ್ನಲು ಬಯಸುತ್ತಾರೆ. ಆದರೆ, ಮುಟ್ಟಿನ ಅವಧಿಯಲ್ಲಿ ಸಕ್ಕರೆಯ ಸಿಹಿತಿಂಡಿಗಳನ್ನು ತಿನ್ನುವುದರಿಂದ ಏನೆಲ್ಲಾ ಪರಿಣಾಮಗಳು ಉಂಟಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮುಟ್ಟಿನ ಸಮಯದಲ್ಲಿ ಸಕ್ಕರೆ ತಿನ್ನುವುದರಿಂದ ಉಂಟಾಗುವ ತೊಂದರೆಗಳು

ಈ ಅಪಾಯ ಉಂಟಾಗಬಹುದು: ಋತುಚಕ್ರದ ಸಮಯದಲ್ಲಿ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು. ದೇಹದಲ್ಲಿ ಉರಿಯೂತ ಹೆಚ್ಚಾಗಬಹುದು. ಗರ್ಭಾಶಯಕ್ಕೆ ರಕ್ತ ಪೂರೈಕೆಯೂ ಹೆಚ್ಚಾಗುತ್ತದೆ. ಇದರಿಂದ ನೀರು ವಿಪರೀತವಾಗಿ ಶೇಖರಣೆಗೊಂಡು ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಮುಟ್ಟಿನ ಸಮಯದಲ್ಲಿ ಕೆಲವರಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಸಕ್ಕರೆಯಿಂದ ಮಾಡಿದ ಆಹಾರವನ್ನು ಸೇವಿಸುವುದರಿಂದ ಆ ನೋವುಗಳು ಹೆಚ್ಚಾಗಬಹುದು. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಂತಹ ಹಾರ್ಮೋನ್‌ಗಳ ಪರಿಣಾಮವೂ ಈ ಅವಧಿಗಳಲ್ಲಿ ಹೆಚ್ಚು. ಇದು ಸಿಹಿ ತಿನ್ನುವ ಆಸೆಯನ್ನೂ ಹೆಚ್ಚಿಸುತ್ತವೆ.

ಹೊಟ್ಟೆಯ ತೊಂದರೆಗಳು: ಮುಟ್ಟಿನ ಪಿರಿಯಡ್ಸ್ ಸಮಯದಲ್ಲಿ ಹೆಚ್ಚು ಸಕ್ಕರೆ ತಿಂದರೆ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಹೊಟ್ಟೆಯಲ್ಲಿ ಅಸ್ವಸ್ಥತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಋತುಚಕ್ರದ ಸಮಯದಲ್ಲಿ ಹೊಟ್ಟೆ ಸೆಳೆತವನ್ನು ತಪ್ಪಿಸಲು ಸಕ್ಕರೆಯಿಂದ ತಯಾರಿಸಿದ ಆಹಾರವನ್ನು ತಿನ್ನುವುದು ಉತ್ತಮವಲ್ಲ. ಅಲ್ಲದೆ, ಪಿರಿಯಡ್ಸ್ ಸಮಯದಲ್ಲಿ ಪದಾರ್ಥಗಳನ್ನು ತಿನ್ನುವುದರಿಂದ ಅಸಿಡಿಟಿ, ಗ್ಯಾಸ್ ಸಮಸ್ಯೆ ಮತ್ತು ಹೊಟ್ಟೆ ನೋವು ಕೂಡ ಹೆಚ್ಚಾಗುತ್ತದೆ.

ಈಸ್ಟ್ರೊಜೆನ್ ಹೆಚ್ಚಾಗುತ್ತದೆ: ಮುಟ್ಟಿನ ಸಮಯದಲ್ಲಿ ಸಕ್ಕರೆ ತುಂಬಿದ ಆಹಾರವನ್ನು ಸೇವಿಸುವುದರಿಂದ ಈಸ್ಟ್ರೊಜೆನ್ ಹಾರ್ಮೋನ್ ಉತ್ಪಾದನೆಯು ಹೆಚ್ಚಾಗುತ್ತದೆ. ಅದು ಸಮಸ್ಯೆಯಾಗುತ್ತದೆ. ಪಿಸಿಒಡಿ ಹೊಂದಿದ್ದರೆ, ರೋಗಲಕ್ಷಣಗಳು ಹೆಚ್ಚಿದ ಈಸ್ಟ್ರೊಜೆನ್ ಮಟ್ಟಗಳಿಂದ ಕೂಡ ಪರಿಣಾಮ ಬೀರಬಹುದು.

ಚರ್ಮದ ಆರೋಗ್ಯಕ್ಕೆ ಸಕ್ಕರೆ ಉತ್ತಮವಲ್ಲ: ಋತುಚಕ್ರದ ಸಮಯದಲ್ಲಿ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಮುಖದ ಮೇಲೆ ಮೊಡವೆಗಳು ಉಂಟಾಗಬಹುದು. ಸಕ್ಕರೆ ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಸಕ್ಕರೆ ತಿನ್ನುವುದನ್ನು ಎಷ್ಟು ಕಡಿಮೆ ಮಾಡುವಿರೋ ಅಷ್ಟು ಒಳ್ಳೆಯದು. ಸಕ್ಕರೆ ಚರ್ಮದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಮಹಿಳೆಯರು ಋತುಚಕ್ರದ ಸಮಯದಲ್ಲಿ ಸಕ್ಕರೆಯಿಂದ ತಯಾರಿಸಿದ ಯಾವುದೇ ಪದಾರ್ಥವನ್ನು ಸೇವಿಸದಿರುವುದು ಉತ್ತಮ. ಇದರ ಬದಲು ಕಡುಬಯಕೆಯನ್ನು ಪೂರೈಸಲು ಡಾರ್ಕ್ ಚಾಕೋಲೇಟ್ ತಿನ್ನುವುದು ಉತ್ತಮ. ಇದು ಆರೋಗ್ಯಕರವೂ ಆಗಿದೆ.

(ಗಮನಿಸಿ: ಅಧ್ಯಯನಗಳು ಮತ್ತು ಆರೋಗ್ಯ ನಿಯತಕಾಲಿಕಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ. ಇದು ಕೇವಲ ಮಾಹಿತಿಯಾಗಿದೆ. ಇದು ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಆರೋಗ್ಯದ ಬಗ್ಗೆ ಏನೇ ಅನುಮಾನವಿದ್ದರೂ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.)

Whats_app_banner