ಬಿಳಿ ಎಳ್ಳಿನಿಂದ ಕಾಮಕಸ್ತೂರಿವರೆಗೆ; ಮಹಿಳೆಯರ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡುವ ಬೀಜಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಳಿ ಎಳ್ಳಿನಿಂದ ಕಾಮಕಸ್ತೂರಿವರೆಗೆ; ಮಹಿಳೆಯರ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡುವ ಬೀಜಗಳಿವು

ಬಿಳಿ ಎಳ್ಳಿನಿಂದ ಕಾಮಕಸ್ತೂರಿವರೆಗೆ; ಮಹಿಳೆಯರ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡುವ ಬೀಜಗಳಿವು

Women Health: ಹಾರ್ಮೋನುಗಳ ಅಸಮತೋಲನ ಮತ್ತು ಮೂಳೆ ದೌರ್ಬಲ್ಯ,ಇದು ಮುಖ್ಯವಾಗಿ ಮಹಿಳೆಯರಲ್ಲಿಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಯಾಗಿದೆ.ನೀವು ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಹೆಚ್ಚು ಆರೋಗ್ಯವಾಗಿರಲು ಈ ಮೂರು ರೀತಿಯ ಬೀಜಗಳನ್ನು ಸೇವಿಸಬೇಕು. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಮಹಿಳೆಯರ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡುವ ಬೀಜಗಳಿವು
ಮಹಿಳೆಯರ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡುವ ಬೀಜಗಳಿವು (Shutterstock )

ಮಹಿಳೆಯರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ವಯಸ್ಸಾದಂತೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ಋತುಬಂಧ, ಹಾರ್ಮೋನುಗಳ ಅಸಮತೋಲನ, ಮೂಳೆ ದೌರ್ಬಲ್ಯ ಇವು ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಾಗಿವೆ. ಚಿಕ್ಕ ವಯಸ್ಸಿನಲ್ಲಿ ಪಿಸಿಒಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಹೆಚ್ಚಳವೂ ಇದಕ್ಕೆ ಕಾರಣ. ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಹೆಚ್ಚು ಆರೋಗ್ಯವಾಗಿರಲು ಈ ಮೂರು ರೀತಿಯ ಬೀಜಗಳನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗುತ್ತವೆ. ಯಾವ ಮೂರು ಬಗೆಯ ಬೀಜಗಳನ್ನು ಸೇವಿಸುವುದು ಉತ್ತಮ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮಹಿಳೆಯರ ಆರೋಗ್ಯಕ್ಕಾಗಿ ತೆಗೆದುಕೊಳ್ಳಬೇಕಾದ 3 ರೀತಿಯ ಬೀಜಗಳು

ಬಿಳಿ ಎಳ್ಳು ಬೀಜಗಳು: ಬಿಳಿ ಎಳ್ಳು ಬೀಜಗಳು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್ ಹೇರಳವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಮಹಿಳೆಯರು ಬಿಳಿ ಎಳ್ಳಿನ ಬೀಜಗಳನ್ನು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು.

ಅಳವಿ ಬೀಜ: ಮಹಿಳೆಯರು ಈ ಬೀಜವನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ರಾತ್ರಿ ಈ ಬೀಜ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹಲವು ಲಾಭಗಳಿವೆ. ಇದು ರಕ್ತಹೀನತೆಯನ್ನು ಕಡಿಮೆ ಮಾಡಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ತೂಕ ಇಳಿಕೆಗೂ ಉತ್ತಮವಾಗಿದೆ. ಇವು ಕಬ್ಬಿಣ ಮತ್ತು ಫೋಲಿಕ್ ಆಮ್ಲದಿಂದ ಸಮೃದ್ಧವಾಗಿರುವುದಲ್ಲದೆ, ಅಳವಿ ಬೀಜಗಳು ಉತ್ಕರ್ಷಣ ನಿರೋಧಕಗಳಲ್ಲಿಯೂ ಹೇರಳವಾಗಿವೆ. ಅಳವಿ ಬೀಜಗಳಲ್ಲಿ 40.37 ಗ್ರಾಂ ಫೈಬರ್ ಮತ್ತು 22.4 ಗ್ರಾಂ ಪ್ರೋಟೀನ್ ಇರುತ್ತದೆ. ಇದಲ್ಲದೆ ಪೊಟ್ಯಾಸಿಯಮ್, ರಂಜಕ, ನಿಯಾಸಿನ್, ಕೊಬ್ಬು ಮತ್ತು ಪಿಷ್ಟ ಕೂಡ ಹೇರಳವಾಗಿದೆ.

ಕಾಮಕಸ್ತೂರಿ ಬೀಜ: ಒಮೆಗಾ 3 ಕೊಬ್ಬಿನಾಮ್ಲ, ನಾರಿನಂಶ ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೂಕ ಇಳಿಕೆಗೂ ಸಹಕಾರಿ. ಹಾರ್ಮೋನುಗಳನ್ನು ಸಮತೋಲನಗೊಳಿಸುವುದರ ಹೊರತಾಗಿ, ದಿನವಿಡೀ ದೇಹಕ್ಕೆ ಶಕ್ತಿ ತುಂಬಲು ಕಾಮಕಸ್ತೂರಿ ಅಥವಾ ಚಿಯಾ ಬೀಜಗಳನ್ನು ತಿನ್ನುವುದು ಸೂಕ್ತ. ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಇದು ಸಹಾಯಕವಾಗಿದೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ.

ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಈ ಮೂರು ರೀತಿಯ ಬೀಜಗಳನ್ನು ಸೂಪರ್ ಫುಡ್ ಎಂದೇ ಪರಿಗಣಿಸಲಾಗುತ್ತದೆ. ಅವುಗಳನ್ನು ತಿನ್ನುವುದು ಹಾರ್ಮೋನುಗಳ ಅಸಮತೋಲನ ಮತ್ತು ಮೂಳೆಯ ಬಲಕ್ಕೆ ಮಾತ್ರವಲ್ಲದೆ ಒಟ್ಟಾರೆ ಮಹಿಳೆಯರ ಆರೋಗ್ಯಕ್ಕೆ ಪ್ರಯೋಜನಕಾರಿ. ಪಲ್ಯ ಮಾಡಿ ಅಥವಾ ಸಲಾಡ್‌ಗಳಲ್ಲೂ ಬೆರೆಸಿ ಈ ಬೀಜಗಳನ್ನು ಸೇವಿಸಬಹುದು. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಇದನ್ನು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು.

Whats_app_banner