Women Workout: ಪುರುಷರಿಗಿಂತ ಮಹಿಳೆಯರು ತಪ್ಪದೆ ಮಾಡಲೇಬೇಕಾದ ವ್ಯಾಯಾಮಗಳಿವು; ಪ್ರತಿದಿನ ಅಭ್ಯಾಸ ಮಾಡಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Women Workout: ಪುರುಷರಿಗಿಂತ ಮಹಿಳೆಯರು ತಪ್ಪದೆ ಮಾಡಲೇಬೇಕಾದ ವ್ಯಾಯಾಮಗಳಿವು; ಪ್ರತಿದಿನ ಅಭ್ಯಾಸ ಮಾಡಿಕೊಳ್ಳಿ

Women Workout: ಪುರುಷರಿಗಿಂತ ಮಹಿಳೆಯರು ತಪ್ಪದೆ ಮಾಡಲೇಬೇಕಾದ ವ್ಯಾಯಾಮಗಳಿವು; ಪ್ರತಿದಿನ ಅಭ್ಯಾಸ ಮಾಡಿಕೊಳ್ಳಿ

Women Workout: ಮಹಿಳೆಯರು ಮಾಡಬೇಕಾದ ಮತ್ತೊಂದು ವ್ಯಾಯಾಮ ಎಂದರೆ ಅದು ಪುಷ್‌ ಅಪ್ಸ್‌. ನಿಮ್ಮ ತೋಳುಗಳನ್ನು ಟೋನ್‌ ಮಾಡಲು, ನಿಮ್ಮ ಬ್ರೆಸ್ಟ್‌ಗಳನ್ನು ಫಿರ್ಮ್‌ ಮಾಡಲು, ಕಿಬ್ಬೊಟ್ಟೆಯ ಸ್ನಾಯುಗಳನ್ನು ಸ್ಥಿರಗೊಳಿಸಲು ಪುಷ್‌ ಅಪ್ಸ್‌ ಬಹಳ ಸಹಾಯಕಾರಿ.

ಮಹಿಳೆಯರು ತಪ್ಪದೆ ಮಾಡಬೇಕಾದ ವ್ಯಾಯಾಮಗಳು
ಮಹಿಳೆಯರು ತಪ್ಪದೆ ಮಾಡಬೇಕಾದ ವ್ಯಾಯಾಮಗಳು (PC: Freepik)

Women Workout: ಪ್ರತಿಯೊಬ್ಬರಿಗೂ ವ್ಯಾಯಾಮ ಅಗತ್ಯ. ನಮ್ಮ ದೇಹ ಹಾಗೂ ಮನಸ್ಸು ಚಟುವಟಿಕೆಯಿಂದ ಇರಬೇಕಾದರೆ ಪ್ರತಿದಿನ ಕನಿಷ್ಠ 20 ನಿಮಿಷಗಳಾದರೂ ವ್ಯಾಯಾಮ ಮಾಡಲು ಮೀಸಲಿಡಬೇಕು. ಆದರೆ ಮಹಿಳೆಯರು ಪುರುಷರಿಗಿಂತ ಸ್ವಲ್ಪ ವಿಭಿನ್ನವಾಗಿ ವ್ಯಾಯಾಮ ಮಾಡಬೇಕು. ವ್ಯಾಯಾಮದ ಉದ್ದೇಶ ಒಂದೇ ಆಗಿದ್ದರೂ ಮಹಿಳೆಯರು ಹಾಗೂ ಪುರುಷರ ಅಂಗರಚನೆ ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ಮಹಿಳೆಯರು ಕೆಲವೊಂದು ನಿರ್ದಿಷ್ಟ ವ್ಯಾಯಾಮಗಳನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಸ್ಮಿತ್‌ ಮೆಷಿನ್‌ ಬಳಕೆ ಬೇಡ

ಜಿಮ್‌ನಲ್ಲಿ ಮಹಿಳೆಯರು ಜಿಮ್‌ ಮೆಷಿನ್‌ ಬಳಸುವುದನ್ನು ಅವಾಯ್ಡ್‌ ಮಾಡಿ. ಏಕೆಂದರೆ ಕೃತಕ ಚಲನೆಯಿಂದ ಈ ಉಪಕರಣ ನಿಮ್ಮ ದೇಹವನ್ನು ನಿರ್ದಿಷ್ಟ ಮಾದರಿಯಲ್ಲಿ ಚಲಿಸುವಂತೆ ಮಾಡುತ್ತದೆ. ಇದರಿಂದ ನಿಮ್ಮ ಮೊಣಕಾಲು ಗಾಯಗೊಳ್ಳುವ ಸಾಧ್ಯತೆ ಇದೆ.

ಸ್ಕ್ವಾಟ್‌ಗಳು

ಮಹಿಳೆಯರಿಗೆ ಹೆಚ್ಚಿನ ಕೊಬ್ಬು ಸೊಂಟ ಹಾಗೂ ಕೆಳಭಾಗ ಸಂಗ್ರಹವಾಗಿರುತ್ತದೆ. ಆದ್ದರಿಂದ ನೀವು ಸ್ಕ್ವಾಟ್‌ ವ್ಯಾಯಾಮದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಈ ವ್ಯಾಯಾಮವು ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಲಭಗೊಳಿಸಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್‌ ಮಾಡಲು ಸಹಾಯಕವಾಗಿದೆ. ಅಲ್ಲದೆ ಸ್ಕ್ವಾಟ್‌ ಮಾಡುವುದರಿಂದ ಮೂಳೆಗಳ ಆರೋಗ್ಯ ಕೂಡಾ ಹೆಚ್ಚಾಗುತ್ತದೆ.

ಪುಷ್‌ ಅಪ್ಸ್‌

ಮಹಿಳೆಯರು ಮಾಡಬೇಕಾದ ಮತ್ತೊಂದು ವ್ಯಾಯಾಮ ಎಂದರೆ ಅದು ಪುಷ್‌ ಅಪ್ಸ್‌. ನಿಮ್ಮ ತೋಳುಗಳನ್ನು ಟೋನ್‌ ಮಾಡಲು, ನಿಮ್ಮ ಬ್ರೆಸ್ಟ್‌ಗಳನ್ನು ಫಿರ್ಮ್‌ ಮಾಡಲು, ಕಿಬ್ಬೊಟ್ಟೆಯ ಸ್ನಾಯುಗಳನ್ನು ಸ್ಥಿರಗೊಳಿಸಲು ಪುಷ್‌ ಅಪ್ಸ್‌ ಬಹಳ ಸಹಾಯಕಾರಿ. ಪುಷ್‌ ಅಪ್ಸ್‌ ನಿಮ್ಮ ದೇಹದ ಎಲ್ಲಾ ಭಾಗಗಳಿಗೂ ಸಮನಾದ ವ್ಯಾಯಾಮ ನೀಡುತ್ತದೆ. ಈ ವ್ಯಾಯಾಮ ಮಾಡಲು ಯಾವುದೇ ಜಿಮ್‌ ಉಪಕರಣಗಳ ಅಗತ್ಯವಿಲ್ಲ.

ಸೈಕ್ಲಿಂಗ್‌

ಮಹಿಳೆಯರಿಗೆ ಸೈಕ್ಲಿಂಕ್‌ ಬಹಳ ಅಗತ್ಯ. ಅದರಲ್ಲೂ 30 ವರ್ಷ ದಾಟಿದ ಮಹಿಳೆಯರಿಗೆ ಇದು ಬಹಳ ಮುಖ್ಯವಾದ ವ್ಯಾಯಾಮ. ಅಧ್ಯಯನದ ಪ್ರಕಾರ ವಾಕಿಂಗ್‌ಗಿಂತ ಮಹಿಳೆಯರು ಸೈಕ್ಲಿಂಗ್‌ ಮಾಡುವುದು ಹೆಚ್ಚು ಪ್ರಯೋಜನ ನೀಡುತ್ತದೆ.

ಸ್ವಿಮ್ಮಿಂಗ್‌

ಮಹಿಳೆಯರಿಗೆ ಸ್ವಿಮ್ಮಿಂಗ್‌ ಕೂಡಾ ಅತ್ಯುತ್ತಮ ವ್ಯಾಯಾಮವಾಗಿದೆ. ಈಜುವುದರಿಂದ ನಿಮ್ಮ ಹೃದಯಬಡಿತ ಹೆಚ್ಚಾಗುತ್ತದೆ. ಇದು ಸ್ನಾಯುಗಳನ್ನು ಟೋನ್‌ ಮಾಡುತ್ತದೆ. ಇಡೀ ದೇಹಕ್ಕೆ ವ್ಯಾಯಾಮ ನೀಡುತ್ತದೆ. ಈಜು ಮಹಿಳೆಯರಿಗೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಕಾಪಾಡುತ್ತದೆ.

ಯಾವುದೇ ವ್ಯಾಯಾಮ ಮಾಡುವ ಮುನ್ನ ವ್ಯಾಯಾಮದ ಬಗ್ಗೆ ಚೆನ್ನಾಗಿ ಗೊತ್ತಿರುವವರನ್ನು ಕೇಳಿ ತಿಳಿದುಕೊಳ್ಳಿ.

Whats_app_banner