ಆಪತ್ಕಾಲದಲ್ಲಿ ಮಹಿಳೆಯರನ್ನು ಕಾಪಾಡುವ ಆ್ಯಪ್‌ಗಳಿವು; ಕನಿಷ್ಠ ಒಂದು ಅಪ್ಲಿಕೇಶನ್ ನಿಮ್ಮ ಫೋನ್‌ನಲ್ಲಿ ಇರಲಿ-women safety applications in india list of apps for single woman safety my safetipin raksha security jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆಪತ್ಕಾಲದಲ್ಲಿ ಮಹಿಳೆಯರನ್ನು ಕಾಪಾಡುವ ಆ್ಯಪ್‌ಗಳಿವು; ಕನಿಷ್ಠ ಒಂದು ಅಪ್ಲಿಕೇಶನ್ ನಿಮ್ಮ ಫೋನ್‌ನಲ್ಲಿ ಇರಲಿ

ಆಪತ್ಕಾಲದಲ್ಲಿ ಮಹಿಳೆಯರನ್ನು ಕಾಪಾಡುವ ಆ್ಯಪ್‌ಗಳಿವು; ಕನಿಷ್ಠ ಒಂದು ಅಪ್ಲಿಕೇಶನ್ ನಿಮ್ಮ ಫೋನ್‌ನಲ್ಲಿ ಇರಲಿ

ಆಪತ್ತು ಯಾವಾಗ ಬೇಕಾದರೂ ಎದುರಾಗಬಹುದು. ಅದರಲ್ಲೂ ಮಹಿಳೆಯರಿಗೆ ತಮ್ಮ ಸುರಕ್ಷತೆ ತುಂಬಾ ಮುಖ್ಯ. ಕೆಲವೊಮ್ಮೆ ಚಾಣಾಕ್ಷ ನಡೆಯ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ನಿಮ್ಮ ಫೋನ್‌ನಲ್ಲಿ ಈ ಅಪ್ಲಿಕೇಶನ್‌ಗಳಿದ್ದರೆ, ಆ ಕೆಲಸ ಸುಲಭ.

ಆಪತ್ಕಾಲದಲ್ಲಿ ಮಹಿಳೆಯರನ್ನು ಕಾಪಾಡುವ ಆ್ಯಪ್‌ಗಳಿವು;
ಆಪತ್ಕಾಲದಲ್ಲಿ ಮಹಿಳೆಯರನ್ನು ಕಾಪಾಡುವ ಆ್ಯಪ್‌ಗಳಿವು; (freepik)

ಈ ಜಗತ್ತಿನಲ್ಲಿ ಯಾರೂ ಸುರಕ್ಷಿತರಲ್ಲ. ಅಪಾಯ ಯಾವಾಗ ಯಾರನ್ನು ಬೆನ್ನಟ್ಟುತ್ತದೆ ಎಂಬುದನ್ನು ಮುಂಚಿತವಾಗಿ ಊಹಿಸುವುದು ಕಷ್ಟ. ಅದರಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯು ಆಡಳಿತ ಮಟ್ಟದಲ್ಲಿ ದೊಡ್ಡ ಸವಾಲಾಗುತ್ತಿದೆ. ಹಾಗಂತಾ ಮನುಷ್ಯನಿಗೆ ಯಾವುದೋ ಅಗೋಚರ ಶಕ್ತಿಯ ಅಥವಾ ಕ್ರೂರ ಪ್ರಾಣಿಗಳ ಭಯವೋ ಇಲ್ಲ. ಮನುಷ್ಯನಿಗೆ ಮನುಷ್ಯನದ್ದೇ ಭಯ. ಹೆಣ್ಣು ಮಗಳೊಬ್ಬಳು ರಾತ್ರಿ ಹೊತ್ತು ಮಾತ್ರವಲ್ಲದೆ ಹಗಲು ಹೊತ್ತಿನಲ್ಲೇ ಹೊರಗಡೆ ಓಡಾಡಲು ಭಯಪಡುವಂತಹ ಸ್ಥಿತಿ ಈಗಲೂ ಇದೆ. ಹಾಗಂತಾ, ಅಪಾಯವಿದೆ ಎಂದು ಹೊರಗೆ ಹೋಗುವುದನ್ನು ನಿಲ್ಲಿಸಲು ಆಗುವುದಿಲ್ಲ. ನಮ್ಮ ಬೆಳವಣಿಗೆಗೆ ಯಾರಾದರೂ ಅಡ್ಡಿಯಾದರೆ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಹೀಗಾಗಿ ಯಾವುದೇ ಅಪಾಯವನ್ನು ಎದುರಿಸಲು ಸಿದ್ಧರಾಗಿರಿ.

ನಿತ್ಯದ ಬದುಕಿನಲ್ಲಿ ಹೆಚ್ಚಿನ ಸಂದರ್ಭದಲ್ಲಿ ವಾಹನಗಳನ್ನು ಅವಲಂಬಿಸಬೇಕಾಗುತ್ತದೆ. ಕೆಲವೊಮ್ಮೆ ಕೆಲಸ ಕಾರ್ಯಗಳ ನಿಮಿತ್ತ ನಡೆದುಕೊಂಡು ಹೋಗಬೇಕಾಗುತ್ತದೆ. ಈ ಎಲ್ಲಾ ಸಮಯದಲ್ಲೂ ಸುರಕ್ಷತೆ ಮುಖ್ಯ. ನಮಗೆ ಅಪಾಯ ತಂದೊಡ್ಡುವವನು ಮನುಷ್ಯನೇ, ಆ ಅಪಾಯದಿಂದ ರಕ್ಷಿಸುವುದು ಕೂಡಾ ಮನುಷ್ಯನೇ. ಹೀಗಾಗಿ ಅಪಾಯದಲ್ಲಿರುವಾಗ, ಎದುರಾದ ಸನ್ನಿವೇಶದ ಬಗ್ಗೆ ಯಾರಿಗಾದರೂ ತಿಳಿಸುವುದು ಮುಖ್ಯ. ಈಗಿನ ತಂತ್ರಜ್ಞಾನದ ಬದುಕಿನಲ್ಲಿ ಇದಕ್ಕೆ ಕೆಲವೊಂದು ವ್ಯವಸ್ಥೆಗಳಿವೆ. ಪ್ರತಿಯೊಬ್ಬ ಸ್ತ್ರೀ ಕೂಡಾ ತಮ್ಮ ಮೊಬೈಲ್‌ ಫೋನ್‌ನಲ್ಲಿ ಕೆಲವೊಂದು ಅಪ್ಲಿಕೇಶನ್‌ಗಳನ್ನು ಇಟ್ಟುಕೊಂಡಿದ್ದರೆ, ಅಪಾಯದ ಸಮಯದಲ್ಲಿ ನೆರವಾಗುತ್ತದೆ.

ಬೇರೆ ಸ್ಥಳಗಳಿಗೆ ಪ್ರಯಾಣಿಸುವಾಗ ನೀವು ಹೊಂದಿರಬೇಕಾದ ಈ ಅಪ್ಲಿಕೇಶನ್‌ಗಳನ್ನು ಮೊಬೈಲ್‌ಗೆ ಇನ್‌ಸ್ಟಾಲ್‌ ಮಾಡಿಕೊಳ್ಳಿ

ಮೈ ಸೇಫ್ಟಿಪಿನ್ (My SafetiPin)

ಈ ಅಪ್ಲಿಕೇಶನ್‌ ಹಾಕಿಕೊಂಡರೆ, ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರನ್ನು ರಕ್ಷಕರಾಗಿ ಸೇರಿಸಿಕೊಳ್ಳಬಹುದು. ನೀವು ಎಲ್ಲಿ ಹೋಗುತ್ತೀರಿ ಅಬುದನ್ನು ಅವರು ಸುಲಭವಾಗಿ ತಿಳಿದುಕೊಳ್ಳುತ್ತಾರೆ. ಇದೇ ವೇಳೆ ನೀವು ಪ್ರಯಾಣಿಸುವ ಮಾರ್ಗದ ಸುರಕ್ಷತೆಯ ಎಷ್ಟಿದೆ ಎಂಬುದನ್ನು ಸ್ಕೋರ್‌ ಮೂಲಕ ನಿಮಗೆ ನೀಡುತ್ತದೆ. ಅಲ್ಲದೆ ಆ ಸ್ಥಳವು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಮುಂಚಿತವಾಗಿ ನಿಮಗೆ ತಿಳಿಸುತ್ತದೆ. ಜೊತೆಗೆ ಹತ್ತಿರದ ಸುರಕ್ಷಿತ ಪ್ರದೇಶ ಯಾವುದು ಎಂದು ಸಹ ನಿಮಗೆ ತಿಳಿಸುತ್ತದೆ.

ಬಿ ಸೇಫ್‌ (b Safe)

ಕೆಲವೊಮ್ಮೆ ನಾವು ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡುವಂತೆ ನಟಿಸುವ ಮೂಲಕವೂ ಅಪಾಯದಿಂದ ಪಾರಾಗಬಹುದು. ಆದರೆ ನೀವು ಯಾರಿಗಾದರೂ ಕರೆ ಮಾಡಲು ಮತ್ತು ಅವರಿಂದ ಕರೆ ಬರುವಂತೆ ಮಾಡಲು ಸಮಯ ತೆಗೆದುಕೊಳ್ಳಬಹುದು. ಇದಕ್ಕೆ ಈ ಅಪ್ಲಿಕೇಶನ್‌ ಬೆಸ್ಟ್. ಇದರಲ್ಲಿರುವ ಫೇಕ್ ಕಾಲ್ ಆಪ್ಷನ್‌ನಲ್ಲಿ ಎಷ್ಟು ಸೆಕೆಂಡ್‌ಗೆ ನಿಮಗೆ ಫೋನ್ ಬರಬೇಕು ಎಂದು ಹೇಳಿದರೆ ಫೇಕ್ ಕಾಲ್‌ ರಿಂಗ್ ಆಗುತ್ತದೆ. ಆ ಮೂಲಕ ಯಾರೋ ನಿಮ್ಮನ್ನು ಕರೆದಿದ್ದಾರೆ ಎಂದು ಇನ್ನೊಬ್ಬರು ಅರ್ಥಮಾಡಿಕೊಳ್ಳುತ್ತಾರೆ. ಇದಲ್ಲದೆ, ಈ ಅಪ್ಲಿಕೇಶನ್ ತುರ್ತು ಸಮಯದಲ್ಲಿ ಮಾಹಿತಿಯನ್ನು ಒದಗಿಸಲು SOS ಬಟನ್ ಮತ್ತು ಗಾರ್ಡಿಯನ್ಸ್ ಆಯ್ಕೆಗಳನ್ನು ಕೂಡಾ ಹೊಂದಿದೆ. ನಿಮ್ಮನ್ನು ಲೈವ್ ಆಗಿ ಟ್ರ್ಯಾಕ್ ಮಾಡುವ ಸೌಲಭ್ಯವೂ ಇದೆ.

ರಕ್ಷಾ (Raksha) ವಿಮೆನ್‌ ಸೇಫ್ಟಿ ಅಪ್ಲಿಕೇಶನ್

ಈ ಅಪ್ಲಿಕೇಶನ್‌ನಲ್ಲಿ ಮಹಿಳೆಯರನ್ನು ಅಪಾಯದಿಂದ ರಕ್ಷಿಸುವ ಕೌಶಲ್ಯಗಳ ಕುರಿತು ವಿಡಿಯೊಗಳು ಮತ್ತು ಮಾಹಿತಿ ಇವೆ. ಅಪಾಯದಲ್ಲಿರುವಾಗ ಈ ಅಪ್ಲಿಕೇಶನ್ ತೆರೆಯಲು ಸಾಧ್ಯವಾಗದಿದ್ದರೆ, ವಾಲ್ಯೂಮ್ ಬಟನ್ ಒತ್ತುವ ಮೂಲಕ ತುರ್ತು ಸಂಪರ್ಕಗಳಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸುವ ಆಯ್ಕೆ ಇದೆ. ಇದು ಪೊಲೀಸರನ್ನು ಸಂಪರ್ಕಿಸುವ ಮತ್ತು ತುರ್ತು ಸಂಪರ್ಕಗಳಿಗೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುವ ಸೌಲಭ್ಯವನ್ನು ಹೊಂದಿದೆ.

ಇತರ ಆಯ್ಕೆಗಳು

ಇವುಗಳ ಜೊತೆಗೆ ತುರ್ತು ಸಂದರ್ಭಗಳಲ್ಲಿ ಮಹಿಳಾ ಸಹಾಯವಾಣಿ ಸಂಖ್ಯೆ 181 ಮತ್ತು ಪೊಲೀಸ್ ಸಂಖ್ಯೆ 100ಕ್ಕೆ ಕರೆ ಮಾಡಬಹುದು. ಇದೇ ವೇಳೆ ನೀವು ವಾಸಿಸುವ ಪ್ರದೇಶವನ್ನು ಅವಲಂಬಿಸಿ ಮಹಿಳಾ ಸುರಕ್ಷತೆಗಾಗಿ ಸರ್ಕಾರ ನೀಡುವ ವಿಶೇಷ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಬಳಸಿ.