ವುಮೆನ್ಸ್‌ ಡೇ ಹತ್ರ ಬಂತು, ನಿಮ್ಮ ಗರ್ಲ್ಸ್‌ ಗ್ಯಾಂಗ್‌ ಜೊತೆ ಟ್ರಿಪ್‌ ಹೋಗ್ಬೇಕು ಅಂತಿದ್ರೆ ಭಾರತದ ಈ ಜಾಗಗಳಿಗೆ ಪ್ಲಾನ್‌ ಮಾಡಿ-womens day 2024 places to travel in india with your girl gang best place travel for girls in india goa rishikesh rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ವುಮೆನ್ಸ್‌ ಡೇ ಹತ್ರ ಬಂತು, ನಿಮ್ಮ ಗರ್ಲ್ಸ್‌ ಗ್ಯಾಂಗ್‌ ಜೊತೆ ಟ್ರಿಪ್‌ ಹೋಗ್ಬೇಕು ಅಂತಿದ್ರೆ ಭಾರತದ ಈ ಜಾಗಗಳಿಗೆ ಪ್ಲಾನ್‌ ಮಾಡಿ

ವುಮೆನ್ಸ್‌ ಡೇ ಹತ್ರ ಬಂತು, ನಿಮ್ಮ ಗರ್ಲ್ಸ್‌ ಗ್ಯಾಂಗ್‌ ಜೊತೆ ಟ್ರಿಪ್‌ ಹೋಗ್ಬೇಕು ಅಂತಿದ್ರೆ ಭಾರತದ ಈ ಜಾಗಗಳಿಗೆ ಪ್ಲಾನ್‌ ಮಾಡಿ

ಮಹಿಳಾ ದಿನಾಚರಣೆ ಹತ್ತಿರದಲ್ಲೇ ಇದೆ. ಈ ಬಾರಿ ಮಹಿಳಾ ದಿನಾಚರಣೆಗೆ ನಿಮ್ಮ ಗೆಳತಿಯರ ತಂಡದೊಂದಿಗೆ ದೂರದೂರಿಗೆ ಟ್ರಿಪ್‌ ಹೋಗೋಕೆ ಪ್ಲಾನ್‌ ಮಾಡ್ತಾ ಇದ್ರೆ, ಭಾರತದಲ್ಲಿನ ಬೆಸ್ಟ್‌ ಪ್ಲೇಸ್‌ಗಳ ಬಗ್ಗೆ ತಿಳಿಯಿರಿ. ಈ ತಾಣಗಳು ನಿಮ್ಮ ಪ್ರವಾಸವನ್ನು ಅವಿಸ್ಮರಣೀಯಗೊಳಿಸುವುದರಲ್ಲಿ ಅನುಮಾನವಿಲ್ಲ.

ವುಮೆನ್ಸ್‌ ಡೇ ಹತ್ರ ಬಂತು, ನಿಮ್ಮ ಗರ್ಲ್ಸ್‌ ಗ್ಯಾಂಗ್‌ ಜೊತೆ ಟ್ರಿಪ್‌ ಹೋಗ್ಬೇಕು ಅಂತಿದ್ರೆ ಭಾರತದ ಈ ಜಾಗಗಳಿಗೆ ಪ್ಲಾನ್‌ ಮಾಡಿ
ವುಮೆನ್ಸ್‌ ಡೇ ಹತ್ರ ಬಂತು, ನಿಮ್ಮ ಗರ್ಲ್ಸ್‌ ಗ್ಯಾಂಗ್‌ ಜೊತೆ ಟ್ರಿಪ್‌ ಹೋಗ್ಬೇಕು ಅಂತಿದ್ರೆ ಭಾರತದ ಈ ಜಾಗಗಳಿಗೆ ಪ್ಲಾನ್‌ ಮಾಡಿ

ಮಹಿಳಾ ದಿನಾಚರಣೆ ಸಮೀಪದಲ್ಲಿದೆ. ಈ ದಿನವು ಮಹಿಳೆಯರ ಅಸ್ಮಿತೆಯನ್ನು ಸಂಭ್ರಮಿಸುವ ದಿನ. ಮಹಿಳೆಯರ ಸ್ಥಾನಮಾನ, ಬದುಕನ್ನು ಬಿಂಬಿಸುವ ದಿನ. ಪ್ರತಿ ಬಾರಿ ಮಹಿಳೆಯರ ದಿನ ಒಂದಾಗಲೂ ಮಹಿಳೆಯ ಸ್ಥಾನಮಾನ, ಸಮಾಜದಲ್ಲಿ ಅವಳ ಪಾತ್ರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ನೀವು ಮಹಿಳೆಯರ ದಿನಾಚರಣೆ ಬಂದಾಗ ಒಂದಿಷ್ಟು ಪ್ಲಾನ್ಸ್‌ಗಳನ್ನು ಮಾಡಬಹುದು. ಈ ದಿನ ಅಥವಾ ಈ ದಿನಕ್ಕೆ ಹತ್ತಿರ ಇರುವ ದಿನಗಳಲ್ಲಿ ನಿಮ್ಮ ಸ್ನೇಹಿತೆಯರ ಜೊತೆ ಸೇರಿದಾಗ ದೊಡ್ಡ ದೊಡ್ಡ ಪ್ಲಾನ್‌ಗಳನ್ನು ಮಾಡಬಹುದು.

ಹೆಣ್ಮಕ್ಕಳಿಗೆ ಟ್ರಿಪ್‌ ಮಾಡೋದು ಅಂದ್ರೆ ಬಹಳ ಖುಷಿ ಇರುತ್ತೆ. ಸೋಲೋ ಟ್ರಿಪ್‌ ಮಾಡೋದು ಇಷ್ಟ ಆದ್ರೂ, ಒಬ್ರೆ ಹೋಗೋಕೆ ಏನೋ ಭಯ. ಟ್ರಿಪ್‌ಗೆ ಹೋಗ್ಬೇಕಾದ್ರೆ ಗುಂಪಿನಲ್ಲಿ ಹೋದ್ರೆ ಎಂಜಾಯ್‌ ಮಾಡೋಕಾಗೋದು ಅನ್ನೋ ಫೀಲ್‌ ನಿಮ್ಮಲ್ಲೂ ಇದ್ರೆ, ನೀವು ನಿಮ್ಮ ಗರ್ಲ್ಸ್‌ ಗ್ಯಾಂಗ್‌ನ ರೆಡಿ ಮಾಡಿ. ಈ ಮಹಿಳಾ ದಿನಾಚರಣೆ ಸಂದರ್ಭ ನಿಮ್ಮ ಗರ್ಲ್ಸ್‌ ಗ್ಯಾಂಗ್‌ ಜೊತೆ ದೂರದೂರಿಗೆ ಟ್ರಿಪ್‌ ಹೋಗಬೇಕು ಅಂತಿದ್ರೆ ಈಗ್ಲೆ ಪ್ಲಾನ್‌ ಮಾಡಿ. ಭಾರತದಲ್ಲಿ ಗರ್ಲ್ಸ್‌ ಗ್ಯಾಂಗ್‌ ಜೊತೆ ಟ್ರಿಪ್‌ ಹೋಗೋಕೆ ಬೆಸ್ಟ್‌ ಎನ್ನಿಸುವ ತಾಣಗಳ ಪರಿಚಯ ಇಲ್ಲಿದೆ.

ಗೋವಾ

ಗೋವಾ ಭಾರತದ ಅತ್ಯಂತ ಸುಂದರ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದು. ಇಲ್ಲಿನ ತಿಳಿ ನೀಲಿ ಕಡಲುಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ನೀವು ನಿಮ್ಮ ಗೆಳತಿಯರ ಜೊತೆ ಟ್ರಿಪ್‌ ಪ್ಲಾನ್‌ ಮಾಡ್ತಾ ಇದ್ರೆ ಗೋವಾ ಹೇಳಿ ಮಾಡಿಸಿದ ಜಾಗ. ಇಲ್ಲಿನ ಕಡಲ ತೀರಗಳಲ್ಲಿ ನಲಿದಾಡುತ್ತಾ ಟೈಮ್‌ ಸ್ಪೆಂಡ್‌ ಮಾಡೋ ಖುಷಿ ಅನುಭವಿಸದವರಿಗೇ ಗೊತ್ತು. ಇಲ್ಲಿ ನೈಟ್‌ ಔಟ್‌ ಅಂತೂ ನಿಮಗೆ ಇಷ್ಟವಾಗದೇ ಇರಲು ಸಾಧ್ಯವೇ ಇಲ್ಲ. ಕೋಲಾ ಬೀಚ್ ಅಥವಾ ಅಗೋಂಡಾ ಬೀಚ್‌ನ ಮರಳಿನ ತೀರದಲ್ಲಿ ಆಟವಾಡುವ ಮಹಿಳಾ ದಿನವನ್ನು ಸಂಭ್ರಮಿಸಿ. ಇಲ್ಲಿನ ಕ್ಲಬ್‌-ಬಾರ್‌ಗಳಲ್ಲಿ ಪಾರ್ಟಿ ಮಾಡಿ, ಹಾಡಿ ಕುಣಿಯಿರಿ. ಹಳೆ ಗೋವಾದಲ್ಲಿನ ವಾಸ್ತ್ರಶಿಲ್ಪಗಳನ್ನು ಅನ್ವೇಷಿಸಿ. ಪ್ಯಾರಾಸೈಲಿಂಗ್ ಮತ್ತು ಜೆಟ್-ಸ್ಕೀಯಿಂಗ್‌ನಂತಹ ಜಲ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿ. ಇದರೊಂದಿಗೆ ಫೈನಲ್‌ ಆಗಿ ಸೀ ಫುಡ್‌ಗಳನ್ನು ಸವಿಯೋದು ಮರಿಬೇಡಿ.

ಋಷಿಕೇಶ

ಆಧಾತ್ಮದ ಜೊತೆಗೆ ಪ್ರಾಕೃತಿಕ ಸೌಂದರ್ಯದ ಸೊಬಗನ್ನೂ ಸವಿಯಬೇಕು ಅಂದ್ರೆ ನೀವು ಋಷಿಕೇಶಕ್ಕೆ ಭೇಟಿ ನೀಡಬೇಕು. ಈ ಆಧ್ಯಾತ್ಮಿಕ ಕೇಂದ್ರವು ಯೋಗ ಮತ್ತು ಧ್ಯಾನ ಕೇಂದ್ರಗಳಿಗೆ ಮಾತ್ರವಲ್ಲದೆ ವೈಟ್-ವಾಟರ್ ರಾಫ್ಟಿಂಗ್, ಬಂಗೀ ಜಂಪಿಂಗ್ ಮತ್ತು ಟ್ರೆಕ್ಕಿಂಗ್‌ನಂತಹ ರೋಮಾಂಚಕ ಸಾಹಸ ಕ್ರೀಡೆಗಳಿಗೂ ಹೆಸರುವಾಸಿ. ನಿಮ್ಮ ಬೆಳಗನ್ನು ಗಂಗಾ ನದಿಯ ತೀರದಲ್ಲಿ ಎಂಜಾಯ್‌ ಮಾಡಿ. ಹೆಚ್ಚು ಗದ್ದಲವಿಲ್ಲದ ಏಕಾಂತ ಸ್ಥಳಕ್ಕೆ ಭೇಟಿ ನೀಡಬೇಕು ಅಂತಿದ್ರೆ ನಿಮ್ಮ ಗೆಳತಿಯರ ಜೊತೆ ಋಷಿಕೇಶಕ್ಕೆ ಭೇಟಿ ನೀಡಿ.

ಜೈಪುರ

ನೀವು ಸೋಲೊ ಟ್ರಿಪ್‌ ಮಾಡೋಕಾಗಲಿ ಅಥವಾ ನಿಮ್ಮ ಗೆಳತಿಯರ ತಂಡದ ಜೊತೆ ಟ್ರಿಪ್‌ ಮಾಡೋಕಾಗ್ಲಿ ಜೈಪುರಕ್ಕಿಂತ ಉತ್ತಮ ಜಾಗ ಇನ್ನೊಂದಿಲ್ಲ. ಪಿಂಕಿ ಸಿಟಿ ಜೈಪುರದ ಅಂದವನ್ನು ಕಣ್ತುಂಬಿಕೊಳ್ಳಲು ಅದೃಷ್ಟ ಮಾಡಿರಬೇಕು. ರಾಜಸ್ಥಾನದ ರಾಜಮನೆತನಗಳ ಪರಂಪರೆಯು ನಿಮ್ಮನ್ನು ಬೇರೆಯದೇ ಲೋಕಕ್ಕೆ ಕರೆದ್ಯೊಯುವುದರಲ್ಲಿ ಎರಡು ಮಾತಿಲ್ಲ. ಭವ್ಯವಾದ ಅರಮನೆಗಳು, ವರ್ಣರಂಜಿತ ಬಜಾರ್‌ಗಳು ಮತ್ತು ರುಚಿಕರವಾದ ತಿನಿಸುಗಳು ನಿಮಗೆ ಅಲ್ಲಿಯೇ ಇದ್ದು ಬಿಡುವ ಎನ್ನುವ ಭಾವನೆ ಮೂಡುವಂತೆ ಮಾಡುವುದು ಸುಳ್ಳಲ್ಲ. ಸಾಂಪ್ರದಾಯಿಕ ಹವಾ ಮಹಲ್‌ಗೆ ಭೇಟಿ ನೀಡಿ, ಅಂಬರ್ ಕೋಟೆಯನ್ನು ಅನ್ವೇಷಿಸಿ ಮತ್ತು ಜೋಹಾರಿ ಬಜಾರ್ ಮತ್ತು ಬಾಪು ಬಜಾರ್‌ನ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಖರೀದಿಸಿ. ಇಲ್ಲಿನ ಹೆರಿಟೇಜ್‌ ಹೋಟೆಲ್‌ಗಳಲ್ಲಿ ಸ್ಟೇ ಮಾಡಿ. ಇನ್ನು ಇಲ್ಲಿನ ಸಾಂಸ್ಕೃತಿಕ ಪರಂಪರೆಯಲ್ಲಿ ನೀವೂ ಒಂದಾಗಬೇಕು ಅಂದ್ರೆ ರಾಜಸ್ಥಾನಿ ನೃತ್ಯಕ್ಕೆ ಹೆಜ್ಜೆ ಹಾಕೋದು ಮರಿಬೇಡಿ.

ಪಾಂಡಿಚೇರಿ

ಫ್ರಾನ್ಸ್‌ಗೆ ಹೋದ ಅನುಭವ ನಿಮಗೆ ಸಿಗಬೇಕು ಅಂದ್ರೆ ನೀವು ಪಾಂಡಿಚೇರಿಗೆ ಭೇಟಿ ನೀಡಬೇಕು. ಇಲ್ಲಿನ ಬೀದಿಯಲ್ಲಿ ಸುತ್ತಾಡುತ್ತಿದ್ದರೆ ವಿದೇಶಗಳಲ್ಲಿ ಸುತ್ತಿದ ಅನುಭವ ನಿಮ್ಮದಾಗುವುದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಫ್ರೆಂಚ್‌ ಕ್ವಾಟರ್ಸ್‌ಗಳಲ್ಲಿನ ಬೀದಿಯಲ್ಲಿ ಉದ್ದಕ್ಕೂ ನಡೆದಾಡುವ ಖುಷಿಯೇ ಬೇರೆ. ಇಲ್ಲೂ ಕೂಡ ಆರೊವಿಲ್ಲೆ, ಪ್ಯಾರಡೈಸ್‌ನಂತಹ ಸುಂದರ ಕಡಲ ತೀರಗಳಿದ್ದು, ನಿಮ್ಮ ಗೆಳತಿಯರ ಗ್ಯಾಂಗ್‌ ಜೊತೆ ಈ ಬೀಚ್‌ಗಳಲ್ಲಿ ಎಂಜಾಯ್‌ ಮಾಡಬಹುದು. ಪಾಂಡಿಚೇರಿಯ ಪ್ರಶಾಂತ ವಾತಾವರಣ ನಿಮಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಲೇಹ್‌-ಲಡಾಕ್‌

ನಿಮ್ಮ ಬದುಕಿನ ದಿ ಬೆಸ್ಟ್‌ ಟ್ರಿಪ್‌ ಮಾಡ್ಬೇಕು ಅಂತಿದ್ರೆ ಈ ನಿಮ್ಮ ಗೆಳತಿಯರ ಗ್ಯಾಂಗ್‌ ಜೊತೆ ಲೇಹ್‌-ಲಡಾಕ್‌ಗೆ ಭೇಟಿ ನೀಡಬಹುದು. ಇಲ್ಲಿನ ಹಿಮಚ್ಛಾದಿತ ಪ್ರದೇಶಗಳಲ್ಲಿ ಬಿದ್ದು ಹೊರಳಾಡುತ್ತಾ ನಿಮ್ಮ ಕ್ಷಣವನ್ನು ಎಂಜಾಯ್‌ ಮಾಡಿ. ಹಿಮಚ್ಛಾದಿತ ಪರ್ವತಗಳು, ಸ್ಫಟಿಕ ಸ್ಪಷ್ಟ ಸರೋವರಗಳಲ್ಲಿ ನೀವು ಕಳೆದು ಹೋಗುತ್ತೀರಿ. ಪ್ಯಾಂಗೊಂಗ್ ಸರೋವರ ಮತ್ತು ನುಬ್ರಾ ಕಣಿವೆಯಂತಹ ಮನೋಹರವಾದ ಸ್ಥಳಗಳಿಗೆ ಬೈಕು ರೈಡ್‌ ಮಾಡಿ. ತಿಳಿ ನೀಲಿ ಆಕಾಶ, ಹೊಳೆಯವ ನಕ್ಷತ್ರಗಳ ಕಳೆಗೆ ಕ್ಯಾಂಪ್‌ ಹೂಡಿ. ಇಲ್ಲಿಯ ಹಳ್ಳಿಗಳ ಸುತ್ತಾಡಿ ಸೌಂದರ್ಯ ಅನುಭವಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)