ಕನ್ನಡ ಸುದ್ದಿ  /  Photo Gallery  /  World Cancer Day 2023

World Cancer Day 2023: ಫೆ.4 ವಿಶ್ವ ಕ್ಯಾನ್ಸರ್ ದಿನ...ಶ್ವಾಸಕೋಶ ಕ್ಯಾನ್ಸರ್‌ ಬಗ್ಗೆ ನಿಮಗೆಷ್ಟು ಮಾಹಿತಿ ಇದೆ..?

ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಶ್ವಾಸಕೋಶದ ಕ್ಯಾನ್ಸರ್ ಮಾರಣಾಂತಿಕ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ.  ಒಂದು ವೇಳೆ ಯಾವುದೇ ಅಪರೂಪದ ರೋಗ ಲಕ್ಷಣಗಳು ಕಂಡು ಬಂದರೆ ನೀವು ಮುನ್ನೆಚ್ಚರಿಕೆ ವಹಿಸಬೇಕಾಗಿರುವುದು ಬಹಳ ಅವಶ್ಯಕ. 
icon

(1 / 9)

ಶ್ವಾಸಕೋಶದ ಕ್ಯಾನ್ಸರ್ ಮಾರಣಾಂತಿಕ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ.  ಒಂದು ವೇಳೆ ಯಾವುದೇ ಅಪರೂಪದ ರೋಗ ಲಕ್ಷಣಗಳು ಕಂಡು ಬಂದರೆ ನೀವು ಮುನ್ನೆಚ್ಚರಿಕೆ ವಹಿಸಬೇಕಾಗಿರುವುದು ಬಹಳ ಅವಶ್ಯಕ. (Freepik)

ವಿಶ್ವಾದ್ಯಂತ ಅನೇಕ ಜನರು ಈ ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ, ಅತ್ಯಂತ ಭಯಾನಕ ಕ್ಯಾನ್ಸರ್ ಕೂಡಾ ಗುಣಪಡಿಸಬಹುದು.  
icon

(2 / 9)

ವಿಶ್ವಾದ್ಯಂತ ಅನೇಕ ಜನರು ಈ ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ, ಅತ್ಯಂತ ಭಯಾನಕ ಕ್ಯಾನ್ಸರ್ ಕೂಡಾ ಗುಣಪಡಿಸಬಹುದು.  (Freepik)

 ಇತರ ಕ್ಯಾನ್ಸರ್‌ಗಳಂತೆ, ಶ್ವಾಸಕೋಶದ ಕ್ಯಾನ್ಸರ್ ಕೂಡಾ ಅನೇಕ  ರೋಗಲಕ್ಷಣಗಳನ್ನು ಹೊಂದಿದೆ. ಈ ಲಕ್ಷಣಗಳು ಕಾಣಿಸಿಕೊಂಡರೆ ಬಹಳ ಎಚ್ಚರವಿರಬೇಕು. 
icon

(3 / 9)

 ಇತರ ಕ್ಯಾನ್ಸರ್‌ಗಳಂತೆ, ಶ್ವಾಸಕೋಶದ ಕ್ಯಾನ್ಸರ್ ಕೂಡಾ ಅನೇಕ  ರೋಗಲಕ್ಷಣಗಳನ್ನು ಹೊಂದಿದೆ. ಈ ಲಕ್ಷಣಗಳು ಕಾಣಿಸಿಕೊಂಡರೆ ಬಹಳ ಎಚ್ಚರವಿರಬೇಕು. (Freepik)

 ತೀವ್ರವಾದ ಕೆಮ್ಮು ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿದೆ. ನೀವು ಏನೇ ಔಷಧ ತೆಗೆದುಕೊಂಡರೂ ಕೆಮ್ಮು ಸ್ವಲ್ಪವೂ ಕಡಿಮೆ ಆಗದೆ, ಹೆಚ್ಚುತ್ತಲೇ ಇದ್ದರೆ ಅದು ಶ್ವಾಸಕೋಶ ಕ್ಯಾನ್ಸರ್‌ನ ಲಕ್ಷಣವಿರಬಹುದು. ಆದ್ದರಿಂದ ಇದು ಆಹಾರ ಸಮಸ್ಯೆಯಿಂದ ಬಂದ ಕೆಮ್ಮು, ವಾತಾವರಣ ಬದಲಾವಣೆಯ ಕೆಮ್ಮು ಎಂದು ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ತೋರಿಸಿ.  
icon

(4 / 9)

 ತೀವ್ರವಾದ ಕೆಮ್ಮು ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿದೆ. ನೀವು ಏನೇ ಔಷಧ ತೆಗೆದುಕೊಂಡರೂ ಕೆಮ್ಮು ಸ್ವಲ್ಪವೂ ಕಡಿಮೆ ಆಗದೆ, ಹೆಚ್ಚುತ್ತಲೇ ಇದ್ದರೆ ಅದು ಶ್ವಾಸಕೋಶ ಕ್ಯಾನ್ಸರ್‌ನ ಲಕ್ಷಣವಿರಬಹುದು. ಆದ್ದರಿಂದ ಇದು ಆಹಾರ ಸಮಸ್ಯೆಯಿಂದ ಬಂದ ಕೆಮ್ಮು, ವಾತಾವರಣ ಬದಲಾವಣೆಯ ಕೆಮ್ಮು ಎಂದು ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ತೋರಿಸಿ.  (Freepik)

 ನೀವು ಕೆಮ್ಮುವಾಗ ಬಾಯಿಂದ ರಕ್ತ ಬಂದರೆ ಅದು ಶ್ವಾಸಕೋಶದ ಕ್ಯಾನ್ಸರ್‌ ಆಗಿರುವ ಸಾಧ್ಯತೆ ಇದೆ. ಕಫದೊಂದಿಗೆ ರಕ್ತ ಬಂದರೆ ತಡ ಮಾಡದೆ ಡಾಕ್ಟರ್‌ ಬಳಿ ಹೋಗಿ ಬನ್ನಿ.  
icon

(5 / 9)

 ನೀವು ಕೆಮ್ಮುವಾಗ ಬಾಯಿಂದ ರಕ್ತ ಬಂದರೆ ಅದು ಶ್ವಾಸಕೋಶದ ಕ್ಯಾನ್ಸರ್‌ ಆಗಿರುವ ಸಾಧ್ಯತೆ ಇದೆ. ಕಫದೊಂದಿಗೆ ರಕ್ತ ಬಂದರೆ ತಡ ಮಾಡದೆ ಡಾಕ್ಟರ್‌ ಬಳಿ ಹೋಗಿ ಬನ್ನಿ.  (Freepik)

 ಶ್ವಾಸಕೋಶದೊಳಗೆ ಕ್ಯಾನ್ಸರ್ ಕೋಶಗಳು ಬೆಳೆಯುವುದರಿಂದ, ಉಸಿರಾಡಲು ಕಷ್ಟವಾಗುತ್ತದೆ. ಎದೆ ನೋವಿನ ಲಕ್ಷಣಗಳ ಜೊತೆಗೆ ಉಸಿರಾಟದ ತೊಂದರೆಯು ಪ್ರಮುಖ ಲಕ್ಷಣವಾಗಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ವೈದ್ಯರು. 
icon

(6 / 9)

 ಶ್ವಾಸಕೋಶದೊಳಗೆ ಕ್ಯಾನ್ಸರ್ ಕೋಶಗಳು ಬೆಳೆಯುವುದರಿಂದ, ಉಸಿರಾಡಲು ಕಷ್ಟವಾಗುತ್ತದೆ. ಎದೆ ನೋವಿನ ಲಕ್ಷಣಗಳ ಜೊತೆಗೆ ಉಸಿರಾಟದ ತೊಂದರೆಯು ಪ್ರಮುಖ ಲಕ್ಷಣವಾಗಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ವೈದ್ಯರು. (Freepik)

 ಎದೆ ನೋವು, ಶ್ವಾಸಕೋಶದ ಕ್ಯಾನ್ಸರ್‌ನ ಮತ್ತೊಂದು ಆರಂಭಿಕ ಲಕ್ಷಣವಾಗಿದೆ. ತುರಿಕೆ ನೋವಿನ ಜೊತೆಗೆ ಕೆಲವೊಮ್ಮೆ ಎದೆನೋವು ಕೂಡಾ ಉಂಟಾಗುತ್ತದೆ. 
icon

(7 / 9)

 ಎದೆ ನೋವು, ಶ್ವಾಸಕೋಶದ ಕ್ಯಾನ್ಸರ್‌ನ ಮತ್ತೊಂದು ಆರಂಭಿಕ ಲಕ್ಷಣವಾಗಿದೆ. ತುರಿಕೆ ನೋವಿನ ಜೊತೆಗೆ ಕೆಲವೊಮ್ಮೆ ಎದೆನೋವು ಕೂಡಾ ಉಂಟಾಗುತ್ತದೆ. (Freepik)

ನಿಮಗೆ ಹಸಿವಾಗದೆ ಇದ್ದರೂ ಅದು ಕ್ಯಾನ್ಸರ್‌ನ ಲಕ್ಷಣ ಇರಬಹುದು. ಇತರ ಸಮಸ್ಯೆ ಇಲ್ಲದಿದ್ದರೂ, ನೀವು ಬಹಳ ಹೊತ್ತು ತಿನ್ನದಿದ್ರೂ ನಿಮಗೆ ಹಸಿವೇ ಆಗುತ್ತಿಲ್ಲ ಎಂದರೆ, ಈ ಸಮಸ್ಯೆ ಬಹಳ ದಿನಗಳ ಕಾಲ ಇದ್ದರೆ ತಪ್ಪದೆ ವೈದ್ಯರನ್ನು ಭೇಟಿ ಮಾಡಿ. 
icon

(8 / 9)

ನಿಮಗೆ ಹಸಿವಾಗದೆ ಇದ್ದರೂ ಅದು ಕ್ಯಾನ್ಸರ್‌ನ ಲಕ್ಷಣ ಇರಬಹುದು. ಇತರ ಸಮಸ್ಯೆ ಇಲ್ಲದಿದ್ದರೂ, ನೀವು ಬಹಳ ಹೊತ್ತು ತಿನ್ನದಿದ್ರೂ ನಿಮಗೆ ಹಸಿವೇ ಆಗುತ್ತಿಲ್ಲ ಎಂದರೆ, ಈ ಸಮಸ್ಯೆ ಬಹಳ ದಿನಗಳ ಕಾಲ ಇದ್ದರೆ ತಪ್ಪದೆ ವೈದ್ಯರನ್ನು ಭೇಟಿ ಮಾಡಿ. (Freepik)

ಇವೆಲ್ಲದರ ಜೊತೆಗೆ ನೀವು ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡರೆ ಅದೂ ಕೂಡಾ ಶ್ವಾಸಕೋಶದ ಕ್ಯಾನ್ಸರ್‌ ಲಕ್ಷಣವಾಗಿರಬಹುದು. ಆದರೆ ಧೈರ್ಯ ಕಳೆದುಕೊಳ್ಳಬೇಡಿ. ನೀವು ಚಿಂತೆ ಮಾಡಿದರೆ ಅದು ನಿಮ್ಮನ್ನು ಮತ್ತಷ್ಟು ಕುಗ್ಗಿಸುತ್ತದೆ. ಆದ್ದರಿಂದ ಧೈರ್ಯದಿಂದ ಸಮಸ್ಯೆ ಎದುರಿಸಿ. 
icon

(9 / 9)

ಇವೆಲ್ಲದರ ಜೊತೆಗೆ ನೀವು ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡರೆ ಅದೂ ಕೂಡಾ ಶ್ವಾಸಕೋಶದ ಕ್ಯಾನ್ಸರ್‌ ಲಕ್ಷಣವಾಗಿರಬಹುದು. ಆದರೆ ಧೈರ್ಯ ಕಳೆದುಕೊಳ್ಳಬೇಡಿ. ನೀವು ಚಿಂತೆ ಮಾಡಿದರೆ ಅದು ನಿಮ್ಮನ್ನು ಮತ್ತಷ್ಟು ಕುಗ್ಗಿಸುತ್ತದೆ. ಆದ್ದರಿಂದ ಧೈರ್ಯದಿಂದ ಸಮಸ್ಯೆ ಎದುರಿಸಿ. (Freepik)


IPL_Entry_Point

ಇತರ ಗ್ಯಾಲರಿಗಳು