ವಾಯುಮಾಲಿನ್ಯದ ನಡುವೆ ಹೆಚ್ಚುತ್ತಿದೆ ಉಸಿರಾಟದ ಸಮಸ್ಯೆ; ಮನೆಗೆ ಏರ್ ಪ್ಯೂರಿಫೈಯರ್ ತರುವ ಯೋಚನೆ ಇದ್ದರೆ ಈ ಅಂಶಗಳನ್ನು ತಪ್ಪದೇ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಾಯುಮಾಲಿನ್ಯದ ನಡುವೆ ಹೆಚ್ಚುತ್ತಿದೆ ಉಸಿರಾಟದ ಸಮಸ್ಯೆ; ಮನೆಗೆ ಏರ್ ಪ್ಯೂರಿಫೈಯರ್ ತರುವ ಯೋಚನೆ ಇದ್ದರೆ ಈ ಅಂಶಗಳನ್ನು ತಪ್ಪದೇ ಗಮನಿಸಿ

ವಾಯುಮಾಲಿನ್ಯದ ನಡುವೆ ಹೆಚ್ಚುತ್ತಿದೆ ಉಸಿರಾಟದ ಸಮಸ್ಯೆ; ಮನೆಗೆ ಏರ್ ಪ್ಯೂರಿಫೈಯರ್ ತರುವ ಯೋಚನೆ ಇದ್ದರೆ ಈ ಅಂಶಗಳನ್ನು ತಪ್ಪದೇ ಗಮನಿಸಿ

World COPD Day: ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ಅಪಾಯದ ಹಂತವನ್ನು ತಲುಪಿದ್ದು, ಹಲವರು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಭಾರತದಾದ್ಯಂತ ವಾತಾವರಣ ಹದಗೆಡುತ್ತಿದ್ದು, ಏರ್‌ ಪ್ಯೂರಿಫೈಯರ್ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ನೀವು ನಿಮ್ಮ ಮನೆಗೆ ಪ್ಯೂರಿಫೈಯರ್ ತರುವ ಯೋಚನೆ ಇದ್ದರೆ ಈ ಅಂಶಗಳನ್ನು ತಪ್ಪದೇ ಗಮನಿಸಬೇಕು.

ಮನೆಗೆ ಏರ್ ಪ್ಯೂರಿಫೈಯರ್ ತರುವ ಯೋಚನೆ ಇದ್ದರೆ ಈ ಅಂಶಗಳನ್ನು ತಪ್ಪದೇ ಗಮನಿಸಿ
ಮನೆಗೆ ಏರ್ ಪ್ಯೂರಿಫೈಯರ್ ತರುವ ಯೋಚನೆ ಇದ್ದರೆ ಈ ಅಂಶಗಳನ್ನು ತಪ್ಪದೇ ಗಮನಿಸಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದ್ದು, ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ. ದೆಹಲಿ ಸುತ್ತಮುತ್ತ ದಟ್ಟ ಹೊಗೆ ತುಂಬಿಕೊಂಡಿದ್ದು ಉಸಿರಾಡುವುದಕ್ಕೂ ಕಷ್ಟವಾಗಿದೆ. ವಿಷಕಾರಿ ವಾತಾವರಣವು ಅಪಾಯದ ಮಟ್ಟಕ್ಕೆ ತಲುಪಿದ್ದು, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗಿದೆ.

ದೆಹಲಿ ಮಾತ್ರವಲ್ಲ ಅತಿಯಾದ ಕೈಗಾರಿಕೆ ಹಾಗೂ ವಾಹನಗಳ ಓಡಾಟದ ಕಾರಣದಿಂದ ಬಹುತೇಕ ಪ್ರಮುಖ ಪಟ್ಟಣಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಇದಕ್ಕಾಗಿ ಮನೆಗೆ ಏರ್ ಪ್ಯೂರಿಫೈಯರ್ ಖರೀದಿಸುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ನೀವು ಕೂಡ ನಿಮ್ಮ ಮನೆಗೆ ಏರ್ ಪ್ಯೂರಿಫೈಯರ್ ತರಬೇಕು ಅಂತಿದ್ದರೆ ಕೆಲವೊಂದು ಅಂಶಗಳನ್ನು ತಪ್ಪದೇ ಗಮನಿಸಬೇಕು. ಏರ್ ಪ್ಯೂರಿಫೈಯರ್ ವೈಶಿಷ್ಟ್ಯ, ಯಾವ ಫಿಲ್ಟರ್ ಇದ್ದರೆ ಮನೆಗೆ ಉತ್ತಮ ಎಂಬಿತ್ಯಾದಿ ವಿವರದ ಬಗ್ಗೆ ನೀವು ತಿಳಿದುಕೊಂಡಿರಬೇಕು.

ಏರ್ ಪ್ಯೂರಿಫೈಯರ್‌ ಏಕೆ ಖರೀದಿಸಬೇಕು?

ಏರ್ ಪ್ಯೂರಿಫೈಯರ್‌ ಮಾಲಿನ್ಯಕಾರಕಗಳು, ಅಲರ್ಜಿ ಹಾಗೂ ವಾತಾವರಣದಲ್ಲಿರುವ ಹಾನಿಕಾರಕ ಅಂಶಗಳನ್ನು ಫಿಲ್ಟರ್ ಮಾಡುವ ಸಾಧನವಾಗಿದ್ದು, ಇದು ಮನೆಯ ಒಳಗೆ ಶುದ್ಧ ಗಾಳಿ ಹರಡುವಂತೆ ಮಾಡುತ್ತದೆ. ಇದರಿಂದ ಉಸಿರಾಟ ಹಾಗೂ ಅಲರ್ಜಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಮನೆಯೊಳಗಿನ ವಾತಾವರಣ ಶುದ್ಧವಾಗಿರಲು ಏರ್ ಪ್ಯೂರಿಫೈಯರ್ ಬಳಕೆ ಉತ್ತಮ.

ಇದು ಮನೆಯೊಳಗಿನ ವಾತಾವರಣವನ್ನು ಶುದ್ಧಗೊಳಿಸುವುದು ಮಾತ್ರವಲ್ಲ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಿಯಂತ್ರಿಸುತ್ತದೆ. ಗಾಳಿಯನ್ನು ನಿರಂತರವಾಗಿ ಫಿಲ್ಟರ್ ಮಾಡುವ ಮೂಲಕ, ಈ ಸಾಧನಗಳು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುತ್ತವೆ. ವಿಶೇಷವಾಗಿ ಅಲರ್ಜಿ, ಆಸ್ತಮಾ ಅಥವಾ ಉಸಿರಾಟದ ಸಮಸ್ಯೆಗಳಿರುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿ.

ಏರ್ ಪ್ಯೂರಿಫೈಯರ್ ಹೇಗೆ ಕೆಲಸ ಮಾಡುತ್ತದೆ?

ಏರ್ ಪ್ಯೂರಿಫೈಯರ್‌ಗಳು ಗಾಳಿಯನ್ನು ಸ್ವಚ್ಛಗೊಳಿಸಲು ವಿವಿಧ ಶೋಧನಾ (ಫಿಲ್ಟರ್‌) ವಿಧಾನಗಳನ್ನು ಬಳಸುತ್ತವೆ. ಇದರಲ್ಲಿ ಹೈ-ಎಫಿಶಿಯೆನ್ಸಿ ಪರ್ಟಿಕ್ಯುಲೇಟ್ ಏರ್ (HEPA) ಫಿಲ್ಟರ್‌ಗಳು, ಆಕ್ಟಿವೇಟೆಡ್ ಕಾರ್ಬನ್ ಫಿಲ್ಟರ್‌ಗಳು, UV-C ಲೈಟ್ ತಂತ್ರಜ್ಞಾನ ಮತ್ತು ಅಯಾನೀಕರಣವೂ ಸೇರಿದೆ.

ಏರ್ ಪ್ಯೂರಿಫೈಯರ್ ಖರೀದಿಸುವ ಮೊದಲು ಪರಿಗಣಿಸಬೇಕಾದ ವಿಷಯಗಳು

ಶುದ್ಧೀಕರಣ ತಂತ್ರಜ್ಞಾನ (ಪ್ಯೂರಿಫಿಕೇಶನ್ ಟೆಕ್ನಾಲಜಿ)

ಶುದ್ಧೀಕರಣ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ದಕ್ಷತೆಯ ಕಣಗಳ ಗಾಳಿ (HEPA) ಫಿಲ್ಟರ್‌ಗಳು, UV-C ತಂತ್ರಜ್ಞಾನ ಮತ್ತು ಸಕ್ರಿಯ ಇಂಗಾಲದ ಫಿಲ್ಟರ್‌ಗಳು ಏರ್ ಪ್ಯೂರಿಫೈಯರ್‌ಗಳಲ್ಲಿ ಸಾಮಾನ್ಯವಾಗಿದೆ. ನೀವು ಖರೀದಿಸುವಾಗ ಪ್ಯೂರಿಫಿಕೇಶನ್ ಟೆಕ್ನಾಲಜಿ ಬಗ್ಗೆ ಅರಿಯುವುದು ಮುಖ್ಯವಾಗಿದೆ.

ವ್ಯಾಪ್ತಿ ಪ್ರದೇಶ (ಕವರೇಜ್ ಏರಿಯಾ)

ಏರ್ ಪ್ಯೂರಿಫೈಯರ್ ಖರೀದಿಸುವ ಮುನ್ನ ಇದು ಎಷ್ಟು ಪ್ರದೇಶದವರೆಗೆ ವ್ಯಾಪಿಸುತ್ತದೆ ಅಂದರೆ ಕೋಣೆಯ ಅಥವಾ ಮನೆಯ ಎಷ್ಟು ಜಾಗವನ್ನ ಆವರಿಸಿ ಗಾಳಿಯನ್ನು ಶುದ್ಧ ಮಾಡುತ್ತದೆ ಎಂಬುದನ್ನು ತಿಳಿಯುವುದು ಕೂಡ ಮುಖ್ಯವಾಗಿದೆ. ಶುದ್ಧೀಕರಣದ ಪರಿಣಾಮಕಾರಿತ್ವ, ಶಕ್ತಿಯ ದಕ್ಷತೆ ಮತ್ತು ವೆಚ್ಚ-ಪರಿಣಾಮಕಾರಿತ್ವವನ್ನು ನೇರವಾಗಿ ಪರಿಣಾಮ ಬೀರುತ್ತದೆ. ಸೂಕ್ತ ಗಾತ್ರದ ಫಿಲ್ಟರ್ ಗಾಳಿಯನ್ನು ಪರಿಣಾಮಕಾರಿಯಾಗಿ ಫಿಲ್ಟರ್ ಮಾಡುತ್ತದೆ. ಇದು ಫಿಲ್ಟರ್ ದೀರ್ಘಾಯುಷ್ಯವನ್ನು ವಿಸ್ತರಿಸುತ್ತದೆ, ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ. ನಿಮ್ಮ ಕೋಣೆಯ ಗಾತ್ರಕ್ಕೆ ಅನುಗುಣವಾಗಿ ಪ್ಯೂರಿಫೈಯರ್ ಖರೀದಿಸುವುದು ಮುಖ್ಯವಾಗುತ್ತದೆ.

ಕ್ಲೀನ್ ಏರ್ ಡೆಲಿವರಿ ದರ (CADR)

CADR ರೇಟಿಂಗ್ ವಿವಿಧ ಗಾತ್ರದ ಕಣಗಳನ್ನು ತೆಗೆದುಹಾಕುವಲ್ಲಿ ಏರ್ ಪ್ಯೂರಿಫೈಯರ್‌ನ ದಕ್ಷತೆಯನ್ನು ಸೂಚಿಸುತ್ತದೆ. ಗಾಳಿಯನ್ನು ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಶುದ್ಧ ಮಾಡುವುದು ಮುಖ್ಯವಾಗುತ್ತದೆ.

‌ಶಬ್ದದ ಮಟ್ಟ

ಏರ್‌ ಪ್ಯೂರಿಫೈಯರ್ ಖರೀದಿಸುವಾಗ ಶಬ್ದದ ಮಟ್ಟವನ್ನು ತಿಳಿಯುವುದು ಕೂಡ ಮುಖ್ಯವಾಗುತ್ತದೆ. ಕೂಲರ್‌ನಂತೆ ಅತಿಯಾದ ಶಬ್ದವು ನಿದ್ದೆಗೆ ಹಾನಿ ಪಡಿಸಬಹುದು. ಇದು ಕಿರಿಕಿರಿಗೆ ಕಾರಣವಾಗಬಹುದು. ಶಬ್ದ ಕಡಿಮೆ ಇರುವ ಸ್ಮಾರ್ಟ್ ಇನ್ವರ್ಟರ್ ಶುದ್ಧ ಗಾಳಿಯನ್ನು ಒದಗಿಸುತ್ತದೆ. ಶಬ್ದ ಮಟ್ಟವನ್ನು 23 dB ಯಷ್ಟು ಕಡಿಮೆ ಇರಿಸಬಹುದ. ಇದು ಮನೆಯಲ್ಲಿ ಕಿರಿಕಿರಿ ಇರುವುದಿಲ್ಲ.

ಶಕ್ತಿ ದಕ್ಷತೆ

ಗಾಳಿಯನ್ನು ಶುದ್ಧೀಕರಿಸುವುದರ ಹೊರತಾಗಿ, ಏರ್ ಪ್ಯೂರಿಫೈಯರ್‌ನ ಶಕ್ತಿಯ ದಕ್ಷತೆಯನ್ನು ಪರಿಗಣಿಸುವುದು ದೀರ್ಘಾವಧಿಯ ವೆಚ್ಚ ಉಳಿತಾಯಕ್ಕೆ ಪ್ರಮುಖವಾಗಿದೆ. ಹಾಗಾಗಿ ಖರೀದಿಸುವ ಮುನ್ನವೇ ಏನರ್ಜಿ ಎಫಿಷಿಯೆನ್ಸಿ ಬಗ್ಗೆ ತಿಳಿದುಕೊಳ್ಳಿ.

ಫಿಲ್ಟರ್ ರಿಪ್ಲೇಸ್‌ಮೆಂಟ್‌

ಏರ್ ಪ್ಯೂರಿಫೈಯರ್‌ನ ಪರಿಣಾಮಕಾರಿತ್ವವನ್ನು ಕಾಪಾಡಿಕೊಳ್ಳಲು ನಿಯಮಿತ ಫಿಲ್ಟರ್ ಬದಲಿ ನಿರ್ಣಾಯಕವಾಗಿದೆ. ಆದರೆ ಫಿಲ್ಟರ್ ಪದೇ ಪದೇ ಬದಲಿಸಲು ದುಬಾರಿ ಇದ್ದರೆ ಕಷ್ಟವಾಗಬಹುದು. ಹಾಗಾಗಿ ಫಿಲ್ಟರ್ ರಿಪ್ಲೇಸ್‌ಮೆಂಟ್‌ ಬಗ್ಗೆ ತಿಳಿದುಕೊಳ್ಳುವುದು ಕೂಡ ಅವಶ್ಯ.

ಸ್ಮಾರ್ಟ್ ಫೀಚರ್ಸ್‌ಗಳು

ಇದು ಸ್ಮಾರ್ಟ್‌ಯುಗ, ಇಲ್ಲಿ ಎಲ್ಲವೂ ಸ್ಮಾರ್ಟ್ ಆಗಿದ್ದರೆ ಚೆನ್ನ. ನೀವು ಏರ್‌ ಪ್ಯೂರಿಫೈಯರ್‌ ಖರೀದಿಸುವಾಗಲೂ ಸ್ಮಾರ್ಟ್ ಫೀಚರ್ಸ್‌ಗಳ ಬಗ್ಗೆ ಗಮನ ಹರಿಸುವುದು ಅವಶ್ಯವಾಗುತ್ತದೆ. ಇಂದಿನ ಒತ್ತಡ ಜೀವನಕ್ಕೆ ಅದು ಮುಖ್ಯ ಕೂಡ. ವೈಫೈ ರಿಮೋಟ್ ಇರುವ ಪ್ಯೂರಿಫೈಯರ್‌ ಖರೀದಿಸಿದರೆ ಉತ್ತಮ.

ವಿನ್ಯಾಸ ಮತ್ತು ಪೋರ್ಟಬಿಲಿಟಿ

ಏರ್ ಪ್ಯೂರಿಫೈಯರ್‌ನ ವಿನ್ಯಾಸವು ಮನೆಯ ಲುಕ್‌ ಹೆಚ್ಚಿಸುವುದು ಮಾತ್ರವಲ್ಲ, ಇದು ಅದರ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತದೆ. ಕಾಂಪ್ಯಾಕ್ಟ್ ಮತ್ತು ಸೊಗಸಾದ ವಿನ್ಯಾಸದೊಂದಿಗೆ ಏರ್ ಪ್ಯೂರಿಫೈಯರ್‌ಗಳ ಖರೀದಿಗೆ ಆದ್ಯತೆ ನೀಡಿ.

ಬೆಲೆ ಪರಿಗಣನೆ

ಏರ್ ಪ್ಯೂರಿಫೈಯರ್ ಖರೀದಿಸುವಾಗ ಬೆಲೆ ಪರಿಗಣನೆಯು ನಿರ್ಣಾಯಕವಾಗಿದೆ. ಇದು ನಿಮ್ಮ ಬಜೆಟ್ ಮತ್ತು ಮಾಲೀಕತ್ವದ ಒಟ್ಟಾರೆ ವೆಚ್ಚವನ್ನು ನೇರವಾಗಿ ಪರಿಣಾಮ ಬೀರುತ್ತದೆ. ಮುಂಗಡ ವೆಚ್ಚ, ಫಿಲ್ಟರ್ ಬದಲಿ ವೆಚ್ಚಗಳು ಮತ್ತು ಶಕ್ತಿಯ ಬಳಕೆಯನ್ನು ನಿರ್ಣಯಿಸುವುದು ಆರ್ಥಿಕವಾಗಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಗಾಳಿಯ ಗುಣಮಟ್ಟದಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯವಾಗಿದ್ದರೂ, ಕೈಗೆಟುಕುವಿಕೆ ಮತ್ತು ಕ್ರಿಯಾತ್ಮಕತೆಯ ನಡುವಿನ ಸಮತೋಲನವನ್ನು ಕಂಡುಹಿಡಿಯುವುದು ನಿಮ್ಮ ಹಣಕ್ಕೆ ಉತ್ತಮ ಮೌಲ್ಯವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

ಬ್ರ್ಯಾಂಡ್ ಖ್ಯಾತಿ ಮತ್ತು ಗ್ರಾಹಕರ ವಿಮರ್ಶೆಗಳು

ಏರ್ ಪ್ಯೂರಿಫೈಯರ್‌ನಲ್ಲಿ ಹೂಡಿಕೆ ಮಾಡುವಾಗ, ಬ್ರ್ಯಾಂಡ್‌ನ ಖ್ಯಾತಿಯು ಮುಖ್ಯವಾಗಿದೆ. ಇದರೊಂದಿಗೆ ಖರೀದಿಗೂ ಮುನ್ನ ಅಮೆಜಾನ್, ಫಿಪ್ಲಕಾರ್ಟ್‌ನಂತಹ ವೇದಿಕೆಯಲ್ಲಿ ರೇಟಿಂಗ್ಸ್ ಹಾಗೂ ಗ್ರಾಹಕರ ವಿಮರ್ಶೆ ನೋಡುವುದನ್ನೂ ಮರೆಯಬೇಡಿ.

ವಾರಂಟಿ ಹಾಗೂ ಸರ್ವೀಸ್‌

ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಗೆ ವಿಶ್ವಾಸಾರ್ಹ ಗ್ರಾಹಕ ಬೆಂಬಲ ಮತ್ತು ವಾರಂಟಿ ಅತ್ಯಗತ್ಯ ಪರಿಗಣನೆಗಳಾಗಿವೆ. ಏರ್ ಪ್ಯೂರಿಫೈಯರ್‌ ಖರೀದಿಸುವಾಗಲೂ ಈ ಅಂಶಗಳನ್ನು ತಪ್ಪದೇ ಗಮನಿಸಿ.

ನಿಮ್ಮ ಏರ್ ಪ್ಯೂರಿಫೈಯರ್ ಅನ್ನು ಎಲ್ಲಿ ಇರಿಸಬೇಕು?

ನಿಮ್ಮ ಏರ್ ಪ್ಯೂರಿಫೈಯರ್‌ಗೆ ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದರಿಂದ ಅದರ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಸಂಭಾವ್ಯವಾಗಿ ಶೇ 20 ವರೆಗೆ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ನಿಮ್ಮ ಪ್ಯೂರಿಫೈಯರ್ ಅನ್ನು ಇರಿಸುವಾಗ, ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಅತಿ ಹೆಚ್ಚು ಮಾಲಿನ್ಯಕಾರಕ ಸಾಂದ್ರತೆ ಮತ್ತು ಸಾಕಷ್ಟು ಗಾಳಿಯ ಹರಿವು ಇರುವ ಪ್ರದೇಶಗಳನ್ನು ಗುರುತಿಸಿ.

Whats_app_banner