ಕನ್ನಡ ಸುದ್ದಿ  /  Lifestyle  /  World Dosa Day 2024 How To Make Crispy Dosa By Left Over Bread Dosa Recipe Breakfast Recipes Rsm

Bread Dosa Recipe: ಇಂದು ವಿಶ್ವ ದೋಸೆ ದಿನ; ದೋಸೆ ಪ್ರಿಯರೇ ಉಳಿದ ಬ್ರೆಡ್‌ನಿಂದ ತಯಾರಿಸಿ ಗರಿ ಗರಿಯಾದ ದೋಸೆ; ರೆಸಿಪಿ ಹೀಗಿದೆ

World Dosa Day 2024: ಮನೆಯಲ್ಲಿ ಏನಾದರೂ ಅಡುಗೆ ಉಳಿದಿದ್ದರೆ ಅದನ್ನು ಎಸೆಯಲು ಬೇಸರವಾಗುತ್ತದೆ. ಆದರೆ ಉಳಿದ ಸಾಮಗ್ರಿಗಳಿಂದಲೇ ಹೊಸ ರುಚಿ ತಯಾರಿಸಿದರೆ ಹೇಗೆ? ಮನೆಗೆ ತಂದ ಬ್ರೆಡ್‌ ಉಳಿದಿದ್ದರೆ ನೀವು ಅದರಿಂದಲೇ ಗರಿ ಗರಿಯಾದ ರುಚಿಯಾದ ದೋಸೆ ತಯಾರಿಸಬಹುದು.

ಕ್ರಿಸ್ಪಿ ಬ್ರೆಡ್‌ ದೋಸೆ ರೆಸಿಪಿ ( ಸಾಂದರ್ಭಿಕ ಚಿತ್ರ)
ಕ್ರಿಸ್ಪಿ ಬ್ರೆಡ್‌ ದೋಸೆ ರೆಸಿಪಿ ( ಸಾಂದರ್ಭಿಕ ಚಿತ್ರ) (PC: Unsplash)

ಬ್ರೆಡ್ ದೋಸೆ: ಬ್ರೇಕ್‌ಫಾಸ್ಟ್‌ ಎಂದಾಗ ಮೊದಲು ನೆನಪಿಗೆ ಬರುವುದು ದೋಸೆ. ವಾರಕ್ಕೆ 2-3 ಬಾರಿಯಾದರೂ ದೋಸೆ ತಿನ್ನುವವರಿದ್ದಾರೆ. ಆದರೆ ಪ್ರತಿ ಬಾರಿ ಒಂದೇ ರೀತಿ ದೋಸೆ ಮಾಡಿದರೆ ತಿನ್ನುವವರಿಗೆ ಬೇಸರ ಎನಿಸಬಹುದು. ಆದ್ದರಿಂದ ಏನಾದರೂ ವೆರೈಟಿ ದೋಸೆ ತಯಾರಿಸಿ ನಿಮ್ಮವರನ್ನು ಇಂಪ್ರೆಸ್‌ ಮಾಡಿ.

ಬಹುತೇಕ ನಾವೆಲ್ಲಾ ಅಕ್ಕಿ, ಉದ್ದಿನಬೇಳೆಯಿಂದ ದೋಸೆ ತಯಾರಿಸುತ್ತೇವೆ. ಆದರೆ ನೀವು ಬ್ರೆಡನ್ನು ಮೇನ್‌ ಇಂಗ್ರೀಡಿಯಂಟ್‌ ಆಗಿ ಬಳಸಿ ಗರಿ ಗರಿಯಾದ ದೋಸೆ ತಯಾರಿಸಬಹುದು. ಈ ಬ್ರೆಡ್‌ ದೋಸೆಯನ್ನು ಮಕ್ಕಳು ಕೂಡಾ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಅವರ ಸ್ನಾಕ್ಸ್‌, ಲಂಚ್‌ ಬಾಕ್ಸ್‌ಗೆ ಕೂಡಾ ನೀವು ಬ್ರೆಡ್‌ ದೋಸೆಯನ್ನು ಹಾಕಿ ಕೊಡಬಹುದು. ತಯಾರಿಸುವುದು ಕೂಡಾ ಬಹಳ ಸುಲಭ. ಮಕ್ಕಳಿಗೆ ತಿನ್ನಿಸುವುದರಿಂದ ಮೈದಾ ಬ್ರೆಡ್‌ ಬದಲಿಗೆ ಬ್ರೌನ್‌ ಬ್ರೆಡ್‌ ಬಳಸಿದರೆ ಸೂಕ್ತ.

ಬ್ರೆಡ್ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ಬ್ರೆಡ್ ಸ್ಲೈಸ್‌ - 4
 • ಉಪ್ಪಿಟ್ಟು ರವೆ - 1 ಕಪ್
 • ಅಕ್ಕಿ ಹಿಟ್ಟು - 1 ಕಪ್
 • ದೊಡ್ಡ ಈರುಳ್ಳಿ - 1
 • ಹಸಿ ಮೆಣಸಿನಕಾಯಿ ಪೇಸ್ಟ್‌ - 1 ಟೀ ಚಮಚ
 • ಜೀರ್ಗೆ - 1/2 ಸ್ಪೂನ್‌
 • ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
 • ಉಪ್ಪು - ರುಚಿಗೆ ತಕ್ಕಷ್ಟು

ಬ್ರೆಡ್ ದೋಸೆ ತಯಾರಿಸುವ ವಿಧಾನ

 • ಮೊದಲು ಬ್ರೆಡ್‌ ತುಂಡುಗಳನ್ನು ಮಿಕ್ಸಿ ಜಾರ್‌ಗೆ ಸೇರಿಸಿ ಪುಡಿ ಮಾಡಿಕೊಳ್ಳಿ
 • ಅದರೊಂದಿಗೆ ರವೆ, ಅಕ್ಕಿಹಿಟ್ಟು, ಉಪ್ಪು, ಜೀರ್ಗೆ ಸೇರಿಸಿ ಮತ್ತೆ ಗ್ರೈಂಡ್‌ ಮಾಡಿ
 • ಇದಕ್ಕೆ ಹೊಂದಿಕೊಳ್ಳುವಷ್ಟು ನೀರು ಸೇರಿಸಿ ಮಿಕ್ಸ್‌ ಮಾಡಿಕೊಳ್ಳಿ.
 • ಈ ಮಿಶ್ರಣವನ್ನು ಒಂದು ಬೌಲ್‌ನಲ್ಲಿ ಸೇರಿಸಿ, ಅವಶ್ಯಕತೆ ಇದ್ದರೆ ಇನ್ನಷ್ಟು ನೀರು ಸೇರಿಸಿ ದೋಸೆ ಹಿಟ್ಟು ತಯಾರಿಸಿಕೊಳ್ಳಿ
 • ಈಗ ಸ್ಟೌವ್‌ ಮೇಲೆ ಪ್ಯಾನ್‌ ಇಟ್ಟು ಸ್ವಲ್ಪ ಎಣ್ಣೆ ಸವರಿ ದೋಸೆ ಹಾಕಿ
 • ಈ ದೋಸೆ ಮೇಲೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಮೇಲೆ ಇನ್ನಷ್ಟು ತುಪ್ಪ ಅಥವಾ ಎಣ್ಣೆ ಸೇರಿಸಿ.
 • ದೋಸೆ ಕಂದು ಬಣ್ಣಕ್ಕೆ ಬಂದ ನಂತರ ತೆಗೆದು ಪ್ಲೇಟ್‌ಗೆ ವರ್ಗಾಯಿಸಿ.
 • ಕಾಯಿ ಚಟ್ನಿಯೊಂದಿಗೆ ಈ ಬ್ರೆಡ್‌ ದೋಸೆಯನ್ನು ಎಂಜಾಯ್‌ ಮಾಡಿ.

ಗಮನಿಸಿ: ಈ ಬ್ರೆಡ್‌ ದೋಸೆಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆದ್ದರಿಂದ ಮಕ್ಕಳು , ವಯಸ್ಕರಿಗೆ ಯಾವುದೇ ಸಮಸ್ಯೆ ಇಲ್ಲ. ವಿಶೇಷವಾಗಿ ಬ್ರೌನ್ ಬ್ರೆಡ್ ಬಳಸುವುದರಿಂದ ಹೆಚ್ಚಿನ ಪೋಷಕಾಂಶಗಳು ಸಿಗುತ್ತದೆ. ಜೊತೆಗೆ ಇದರಲ್ಲಿ ಅಕ್ಕಿ ಹಿಟ್ಟು ಮತ್ತು ರವೆ ಬಳಸುವುದರಿಂದ ರುಚಿಯೂ ಚೆನ್ನಾಗಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು. ಒಮ್ಮೆ ಪ್ರಯತ್ನಿಸಿ ನೋಡಿ, ಖಂಡಿತ ನಿಮಗೆ ಇಷ್ಟವಾಗುತ್ತದೆ.

ವಿಭಾಗ