ವಿಶ್ವ ಪರಿಸರ ದಿನದಂದು ಭಾಷಣ, ಪ್ರಬಂಧ ಸ್ಪರ್ಧೆ ಇದ್ದರೆ ಗಮನಿಸಿ, ನಿಮಗಾಗಿ ಇಲ್ಲಿದೆ ಒಂದಿಷ್ಟು ಪಾಯಿಂಟ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  ವಿಶ್ವ ಪರಿಸರ ದಿನದಂದು ಭಾಷಣ, ಪ್ರಬಂಧ ಸ್ಪರ್ಧೆ ಇದ್ದರೆ ಗಮನಿಸಿ, ನಿಮಗಾಗಿ ಇಲ್ಲಿದೆ ಒಂದಿಷ್ಟು ಪಾಯಿಂಟ್ಸ್‌

ವಿಶ್ವ ಪರಿಸರ ದಿನದಂದು ಭಾಷಣ, ಪ್ರಬಂಧ ಸ್ಪರ್ಧೆ ಇದ್ದರೆ ಗಮನಿಸಿ, ನಿಮಗಾಗಿ ಇಲ್ಲಿದೆ ಒಂದಿಷ್ಟು ಪಾಯಿಂಟ್ಸ್‌

ಪರಿಸರ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವುದು, ಮಾಲಿನ್ಯದ ವಿರುದ್ಧ ಹೋರಾಡುವುದು, ಭವಿಷ್ಯದ ಹಸಿರ ಪ್ರಕೃತಿಯನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಪರಿಸರ ದಿನದಂದು ಪ್ರಬಂಧ, ಭಾಷಣ ಬರೆಯುವವರಿಗಾಗಿ ಇಲ್ಲಿದೆ ಟಿಪ್ಸ್‌.

ವಿಶ್ವ ಪರಿಸರ ದಿನದಂದು ಭಾಷಣ, ಪ್ರಬಂಧ ಸ್ಪರ್ಧೆ ಇದ್ದರೆ ಗಮನಿಸಿ, ನಿಮಗಾಗಿ ಇಲ್ಲಿದೆ ಒಂದಿಷ್ಟು ಪಾಯಿಂಟ್ಸ್‌
ವಿಶ್ವ ಪರಿಸರ ದಿನದಂದು ಭಾಷಣ, ಪ್ರಬಂಧ ಸ್ಪರ್ಧೆ ಇದ್ದರೆ ಗಮನಿಸಿ, ನಿಮಗಾಗಿ ಇಲ್ಲಿದೆ ಒಂದಿಷ್ಟು ಪಾಯಿಂಟ್ಸ್‌

ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಪರಿಸರ ಉಳಿಸುವ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ.

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಇದನ್ನು ಆಯೋಜಿಸಿದ್ದು, ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ಅರಣ್ಯನಾಶದ ವಿರುದ್ಧ ಕ್ರಮ ಕೈಗೊಳ್ಳಲು ಎಲ್ಲಾ ವಯಸ್ಸಿನ ಜನರನ್ನು ಪ್ರೋತ್ಸಾಹಿಸುತ್ತದೆ.

ವಿದ್ಯಾರ್ಥಿಗಳಿಗೆ ಸುಸ್ಥಿರ ಪರಿಸರ, ಸ್ವಚ್ಛತೆ ಹಾಗೂ ಹಸಿರನ್ನು ಉಳಿಸಲು ಕ್ರಮ ಕೈಗೊಳ್ಳಲು ಇದೊಂದು ಪರಿಪೂರ್ಣ ದಿನವಾಗಿದೆ. ಇದು ದಿನವು ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ನೆನಪಿಸುತ್ತದೆ.

ಪರಿಸರದ ದಿನದ ಪ್ರಯುಕ್ತ ಮಕ್ಕಳಿಗಾಗಿ ಭಾಷೆಯಲ್ಲಿ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಿದ್ದರೆ ಅವರಿಗಾಗಿ ಇಲ್ಲಿದೆ ಒಂದಿಷ್ಟು ಟಿಪ್ಸ್‌.

ವಿಶ್ವ ಪರಿಸರ ದಿನಕ್ಕೆ ಪ್ರಬಂಧ

ಪ್ರತಿವರ್ಷ ಜೂನ್ 5ಕ್ಕೆ ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಪರಿಸರದ ಸ್ವಚ್ಛತೆ ಕಾಪಾಡುವುದು, ಹಸಿರನ್ನು ಬೆಳಿಸಿ ಉಳಿಸುವುದು, ಮಾಲಿನ್ಯವನ್ನು ತಡೆಗಟ್ಟುವುದು ಹಾಗೂ ಭೂಮಿ ಮೇಲಿರುವ ಪ್ರತಿ ಜೀವಿಗೂ ಸುಸ್ಥಿರ ಜೀವನಕ್ಕೆ ನೆರವಾಗಲು ಪರಿಸರವನ್ನು ಅಣಿಗೊಳಿಸುವುದು ಈ ದಿನದ ಆಚರಣೆಯ ಉದ್ದೇಶ. ಪ್ರಕೃತಿಯನ್ನು ರಕ್ಷಿಸುವುದು, ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಕಡೆಗೆ ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರತಿಯೊಬ್ಬರಿಗೂ ಇದು ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.

ಗಿಡಗಳನ್ನು ನೆಡುವ ಮೂಲಕ, ಮರುಬಳಕೆಯ ಕಾರ್ಯಕ್ರಮಗಳ ಮೂಲಕ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಶಪಥ ಮಾಡುವ ಮೂಲಕ ಜನರು ಈ ದಿನವನ್ನು ಆಚರಿಸಬಹುದು. ವಿದ್ಯಾರ್ಥಿಗಳು ಕೂಡ ಗಿಡಗಳನ್ನು ನೆಡುವ ಮೂಲಕ, ಮರುಬಳಕೆಯ ಬಗ್ಗೆ ಗಮನ ಹರಿಸುವ ಹಾಗೂ ಪರಿಸರ ಸ್ವಚ್ಛತೆಗೆ ಕೈ ಜೋಡಿಸುವ ಮೂಲಕ ವಿಶ್ವ ಪರಿಸರ ದಿನಕ್ಕೆ ತಮ್ಮದೇ ಕೊಡುಗೆ ನೀಡಬಹುದು.

ವಿಶ್ವ ಪರಿಸರ ದಿನವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೋರಾಡುವ ಅಗತ್ಯವನ್ನು ನಮಗೆ ಕಲಿಸುತ್ತದೆ. ಈ ದಿನದಂದು ನಾವೆಲ್ಲರೂ ನಮ್ಮ ಭೂಮಿಯನ್ನು ರಕ್ಷಿಸುತ್ತೇವೆ, ನಮ್ಮ ಭವಿಷ್ಯದ ಜನಾಂಗಕ್ಕಾಗಿ ಆರೋಗ್ಯಕರ ಭೂಮಿಯನ್ನು ರೂಪಿಸುತ್ತೇವೆ ಎನ್ನುವ ಪ್ರತಿಜ್ಞೆ ಮಾಡೋಣ. ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯ.

ವಿಶ್ವ ಪರಿಸರ ದಿನ 150 ಪದದ ಪ್ರಬಂಧ

ಪರಿಸರ ಉಳಿಸುವ ಮಹತ್ವ ಹಾಗೂ ಮಾಲಿನ್ಯದ ವಿರುದ್ಧ ಹೋರಾಡುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. 1972ರಲ್ಲಿ ವಿಶ್ವ ಸಂಸ್ಥೆಯು ವಿಶ್ವ ಪರಿಸರ ದಿನ ಆಚರಿಸಲು ಕರೆ ಕೊಟ್ಟಿತ್ತು. ಅಂದಿನಿಂದ ಇದೊಂದು ಜಾಗತಿಕ ಕಾರ್ಯಕ್ರಮವಾಗಿದೆ. ಮಾಲಿನ್ಯ, ಹವಾಮಾನ ವೈಪರೀತ್ಯ, ಅರಣ್ಯ ನಾಶ ಮುಂತಾದವುಗಳ ವಿರುದ್ಧ ಹೋರಾಡಲು ಈ ದಿನವು ನಮ್ಮನ್ನು ಪ್ರೇರೇಪಿಸುತ್ತದೆ.

ಪ್ರಕೃತಿಯು ನಮಗೆ ಬೇಕಾಗಿರುವುದನ್ನೆಲ್ಲಾ ನೀಡುತ್ತದೆ. ಶುದ್ಧ ಗಾಳಿ, ತಾಜಾ ನೀರು, ಆರೋಗ್ಯಕರ ಆಹಾರ, ನೈಸರ್ಗಿಕ ಸೌಂದರ್ಯ ಹೀಗೆ ಸಕಲವನ್ನೂ ಪರಿಸರ ನಮಗೆ ನೀಡುತ್ತದೆ. ಆದರೆ ಮನುಷ್ಯನ ದುರಾಸೆಯು ಈ ಸುಂದರ ಪ್ರಕೃತಿಯನ್ನು ಹಾಳುಗೆಡುವುತ್ತಿದೆ. ಮನುಷ್ಯನ ಚಟುವಟಿಕೆಗಳು ಪ್ರಕೃತಿಯನ್ನು ಇನ್ನಿಲ್ಲದಂತೆ ನಾಶ ಮಾಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ, ಗಾಳಿ, ಜಲ ಮಾಲಿನ್ಯಮ ಕಾಡುಗಳನ್ನು ಕಡಿಯುವುದು, ಭೂಮಿಯನ್ನು ಅಗೆಯುವುದು ಇಂತಹ ಚಟುವಟಿಕೆಗಳು ಪರಿಸರ ನಾಶಕ್ಕೆ ಮೂಲವಾಗುತ್ತಿವೆ.

ವಿದ್ಯಾರ್ಥಿಗಳಾಗಿ ನಾವೆಲ್ಲರೂ ಚಿಕ್ಕ ಅರ್ಥಪೂರ್ಣ ಬದಲಾವಣೆಯನ್ನು ಮಾಡಬೇಕು. ಬ್ಯಾಗ್‌ಗಳ ಮರಬಳಕೆ, ವಿದ್ಯುತ್ ಉಳಿಸುವುದು, ಗಿಡಗಳನ್ನು ಬೆಳೆಸುವುದು, ಸ್ನೇಹಿತರು ಹಾಗೂ ಕುಟುಂಬದವರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು.

ಪರಿಸರ ಎನ್ನುವುದು ನಮ್ಮ ಆಯ್ಕೆಯಲ್ಲ, ನಮ್ಮ ಜವಾಬ್ದಾರಿ ಎನ್ನುವುದನ್ನು ವಿಶ್ವ ಪರಿಸರ ದಿನ ನಮಗೆ ನೆನಪಿಸುತ್ತದೆ. ಇವತ್ತು ನಾವು ಗಿಡ ನೆಟ್ಟರೆ ನಾಳೆ ಹಾಗೂ ನಮ್ಮ ಭವಿಷ್ಯ ಹಸಿರಾಗಿರುತ್ತದೆ. ನಮ್ಮ ಭವಿಷ್ಯ ಉಜ್ವಲವಾಗುತ್ತದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.