ವಿಶ್ವ ಪರಿಸರ ದಿನ ಯಾವಾಗ? ಪರಿಸರ ದಿನಾಚರಣೆಯ ಉದ್ದೇಶ, ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಿಶ್ವ ಪರಿಸರ ದಿನ ಯಾವಾಗ? ಪರಿಸರ ದಿನಾಚರಣೆಯ ಉದ್ದೇಶ, ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ವಿಶ್ವ ಪರಿಸರ ದಿನ ಯಾವಾಗ? ಪರಿಸರ ದಿನಾಚರಣೆಯ ಉದ್ದೇಶ, ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಹವಾಮಾನ ವೈಪರೀತ್ಯದ ಜೊತೆಗೆ ವರ್ಷದಿಂದ ವರ್ಷಕ್ಕೆ ಪರಿಸರ ನಾಶವಾಗುತ್ತಿರುವುದನ್ನು ತಡೆಯುವುದು ಹಾಗೂ ಭವಿಷ್ಯದ ಪೀಳಿಗೆಗೆ ಪರಿಸರದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಪರಿಸರ ದಿನ ಯಾವಾಗ, ಈ ದಿನದ ಇತಿಹಾಸ, ಮಹತ್ವವೇನು ತಿಳಿಯಿರಿ.

ವಿಶ್ವ ಪರಿಸರ ದಿನ 2025
ವಿಶ್ವ ಪರಿಸರ ದಿನ 2025 (PC: HT File Photo )

ಪರಿಸರ ನಮ್ಮ ಭೂಮಿಯು ಪ್ರಮುಖ ಭಾಗ, ಪರಿಸರ ಇಲ್ಲ ಎಂದರೆ ಈ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ನಗರೀಕರಣ, ಮನುಷ್ಯನ ದುರಾಸೆ, ತಂತ್ರಜ್ಞಾನಗಳ ಅತಿಯಾದ ಬೆಳವಣಿಗೆ ಹೀಗೆ ಹಲವು ಕಾರಣಗಳಿಣದ ದಿನೇ ದಿನೇ ಪರಿಸರ ನಾಶದ ಪ್ರಮಾಣ ಹೆಚ್ಚುತ್ತಿದೆ. ಮರ-ಗಿಡ, ನೆಲ, ಭೂಮಿ, ನೀರು, ನದಿ, ಆಕಾಶ ಹೀಗೆ ಹಲವು ಅಂಶಗಳೆಲ್ಲಾ ಸೇರಿ ಸುಂದರ ಪರಿಸರ ಎನ್ನಿಸಿಕೊಳ್ಳುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರದ ಪ್ರತಿ ಅಂಶಕ್ಕೂ ಹಾನಿಯಾಗುತ್ತಿದೆ. ಕೈಗಾರಿಕೆ, ನಗರೀಕರಣ ಹೆಚ್ಚುತ್ತಿರುವುದು ಪರಿಸರಕ್ಕೆ ಇನ್ನಿಲ್ಲದ ಹಾನಿಯಾಗಲು ಮೂಲವಾಗುತ್ತಿದೆ. ಅತಿಯಾದ ಪ್ಲಾಸ್ಟಿಕ್‌ ಬಳಕೆಯು ಸಸ್ಯಗಳು, ಪ್ರಾಣಿ ಸಂಕುಲಕ್ಕೆ ಮಾರಕವಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ನಗರೀಕರಣ, ಕಟ್ಟಡಗಳು ಹೆಚ್ಚುತ್ತಿರುವ ಭರದ ನಡುವೆ ಮರ-ಗಿಡಗಳು ಕಣ್ಣಿಗೆ ಕಾಣುವುದೇ ಅಪರೂಪವಾಗಿದೆ. ಇದರೊಂದಿಗೆ ಹವಾಮಾನ ವೈಪರೀತ್ಯದ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ. ಪ್ರಕೃತಿಯ ಮೂರು ಮೂಲ ಕಾಲಗಳಾದ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲಗಳು ಬದಲಾಗಿವೆ. ಯಾವಾಗೆಂದರೆ ಆವಾಗ ಮಳೆ ಬರುವುದು, ಯಾವಾಗೆಂದರೆ ಆವಾಗ ಬಿಸಿಲು ಬರುವುದು ಹೀಗೆ ಪರಿಸರ ವ್ಯವಸ್ಥೆಯೇ ಬುಡಮೇಲಾಗಿದೆ. ಈಗಾಗಲೇ ಶೇ 70 ರಷ್ಟು ಪರಿಸರ ನಾಶವಾಗಿದ್ದು, ಇನ್ನೂ ಮುಂದುವರಿದರೆ ಭವಿಷ್ಯದ ಪೀಳಿಗೆ ಪರಿಸರ, ಪ್ರಕೃತಿಯನ್ನು ಕಾಣುವುದು ಅನುಮಾನವಾಗಿದೆ. ಇದು ಮಾನವ ಸಂತತಿಯ ಅಳಿವಿಗೂ ಕಾರಣವಾಗಬಹುದು. ಹವಾಮಾನ ವೈಪರೀತ್ಯ ತಡೆಯುವುದು ಹಾಗೂ ಮನುಷ್ಯದ ಬದುಕಿಗೆ ಪರಿಸರದ ಮಹತ್ವವನ್ನು ಸಾರಿ ಹೇಳುವುದು, ಪರಿಸರ ಉಳಿಸುವ ಕರ್ತವ್ಯವನ್ನು ನೆನಪಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ವರ್ಷ ಪರಿಸರ ದಿನ ಯಾವಾಗ, ಈ ದಿನದ ಆಚರಣೆಯ ಉದ್ದೇಶ, ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ವಿಶ್ವ ಪರಿಸರ ದಿನ ಯಾವಾಗ?

ಪ್ರತಿ ವರ್ಷ ಜೂನ್‌ 5 ರಂದು ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದು ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಸರ ಉಳಿಸುವ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಮೀಸಲಾಗಿರುವ ಮಹತ್ವದ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿದೆ.

ವಿಶ್ವ ಪರಿಸರ ದಿನದ ಇತಿಹಾಸ

1973 ರಿಂದ ವಿಶ್ವ ಪರಿಸರ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ರಮವನ್ನು ಉತ್ತೇಜಿಸಲು 1972 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ವಿಶ್ವ ಪರಿಸರ ದಿನ ಆಚರಣೆಯನ್ನು ಜಾರಿಗೆ ತಂದಿತು.

ಪ್ರತಿ ವರ್ಷ, ಪರಿಸರ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಲು ವಿಭಿನ್ನ ಥೀಮ್ ಅನ್ನು ಆಯ್ಕೆ ಮಾಡಲಾಗುತ್ತದೆ. ಮಾಲಿನ್ಯ, ಅಕ್ರಮ ವನ್ಯಜೀವಿ ವ್ಯಾಪಾರ, ವಾಯು ಮಾಲಿನ್ಯ ಮತ್ತು ಆಹಾರ ತ್ಯಾಜ್ಯ ಹೀಗೆ ವಿವಿಧ ಥೀಮ್‌ಗಳ ಮೇಲೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗಿತ್ತು.

ವಿಶ್ವ ಪರಿಸರ ದಿನದ ಮಹತ್ವ

ದಿನೇ ದಿನೇ ಕ್ಷೀಣಿಸುತ್ತಿರುವ ಪರಿಸರ ವ್ಯವಸ್ಥೆಯು ಮುಂದೊಂದು ದಿನ ನಾಶವಾದರೆ ಈ ಭೂಮಿಯನ್ನು ಊಹಿಸಲೂ ಸಾಧ್ಯವಿಲ್ಲ. ತಂತ್ರಜ್ಞಾನದ ಬೆಳವಣಿಗೆ, ನಗರೀಕರಣ, ಕೈಗಾರಿಕೆ ಈ ಎಲ್ಲವೂ ದೇಶದ ಅಭಿವೃದ್ಧಿ ಪೂರಕ ನಿಜ. ಆದರೆ ಮನುಷ್ಯ ಭವಿಷ್ಯ ನಿಂತಿರುವುದು ಪರಿಸರ ವ್ಯವಸ್ಥೆಯ ಮೇಲೆ, ಪರಿಸ್ಥರ ವ್ಯವಸ್ಥೆಯ ಕೊಂಡಿ ದಿನೇ ದಿನೇ ಕಳಚುತ್ತಿದೆ. ಆದರೆ ಈ ಕೊಂಡಿಯನ್ನು ಭದ್ರವಾಗಿಸಿ, ಪರಿಸರವನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬರದ್ದು, ಇಂದಿನ ಮಕ್ಕಳು, ಯುವಜನತೆ ಪರಿಸರದ ಬಗ್ಗೆ ಕಾಳಜಿ ಹಾಗೂ ಪರಿಸರ ಉಳಿಸುವ ಮೇಲೆ ಗಮನ ಹರಿಸಬೇಕು. ಪರಿಸರ ನಾಶದ ಪರಿಣಾಮವನ್ನು ಅರಿತು ಪರಿಸರ ರಕ್ಷಣೆಯ ಮೇಲೆ ಗಮನ ಹರಿಸಬೇಕು. ಹವಾಮಾನ ವೈಪರೀತ್ಯ ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕು, ಹೀಗೆ ಪರಿಸರವನ್ನು ಉಳಿಸಿ, ಬೆಳೆಸುವ ಕರ್ತವ್ಯವನ್ನು ಯುವಪೀಳಿಗೆ ಸೇರಿದಂತೆ ಪ್ರತಿಯೊಬ್ಬರು ನಿರ್ವಹಿಸಬೇಕು ಎನ್ನುವುದನ್ನು ಸಾರುವುದೇ ವಿಶ್ವ ಪರಿಸರ ದಿನದ ಉದ್ದೇಶ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.