ವಿಶ್ವ ನಗು ದಿನ: ನಗ್ತಾ ಇರಿ, ನಗಿಸ್ತಾ ಇರಿ; ಅದಕ್ಕೂ ಮುನ್ನ ವಿಶ್ವ ನಗುವಿನ ದಿನದ ಇತಿಹಾಸ, ಮಹತ್ವ ತಿಳ್ಕೊಳ್ಳಿ
ಜಗತ್ತಿನ ಎಲ್ಲಾ ನೋವನ್ನು ಮರೆಸುವ ಅದ್ಭುತ ಶಕ್ತಿ ಎಂದರೆ ನಗು. ನಗು ಇದ್ದರೆ ಬದುಕು ಸ್ವರ್ಗ. ನಾವು ನಗುವುದು ಮಾತ್ರವಲ್ಲ, ಜಗತ್ತನ್ನು ನಗಿಸುತ್ತಾ ಬಾಳಬೇಕು. ಬದುಕು ಬದಲಿಸುವ ಶಕ್ತಿ ಇರುವ ನಗುವಿಗಾಗಿ ಒಂದು ದಿನವಿದೇ ಅದುವೇ ವಿಶ್ವ ನಗುವಿನ ದಿನ.

ಬದುಕಿನಲ್ಲಿ ಅದೆಷ್ಟೇ ನೋವಿರಲಿ, ದುಃಖವಿರಲಿ ಮುಖದಲ್ಲಿ ಮೂಡುವ ಈ ಒಂದು ಸಣ್ಣ ನಗು ಈ ಎಲ್ಲವನ್ನೂ ಮರೆಸಿ, ಹೊಸ ಪ್ರಪಂಚವನ್ನೇ ತೋರಿಸುತ್ತದೆ. ನಗು ಎಂಬುದು ಒಂದು ದಿವ್ಯೌಷಧಿಯಂತೆ. ನಾವು ನಗುವ ಜೊತೆಗೆ ಬೇರೆಯವರನ್ನೂ ನಗಿಸುತ್ತಾ ಬಾಳಬೇಕು. ನಗು ಸಹಜ ಧರ್ಮ, ನಗಿಸುವುದು ಪರಧರ್ಮ ಎನ್ನುವ ನಾಣ್ಣುಡಿಯೇ ಇದೆ. ನಗು ನೋವು ಮರೆಸುವ ಶಕ್ತಿ ಮಾತ್ರವಲ್ಲ, ಇದು ನಮ್ಮ ಯೋಗಕ್ಷೇಮವನ್ನೂ ಸುಧಾರಿಸುತ್ತದೆ. ಮಾನಸಿಕ ಆರೋಗ್ಯ ವೃದ್ಧಿಗೂ ನಗು ಬೇಕೇ ಬೇಕು. ನಮ್ಮ ಒಟ್ಟಾರೆ ಆರೋಗ್ಯ ಸುಧಾರಣೆಗೂ ನಗು ಮುಖ್ಯ. ನಗುವಿನ ಮಹತ್ವ ಹಾಗೂ ನಗುವಿನ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರವನ್ನು ವಿಶ್ವ ನಗುವಿನ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷ ಮೇ 4 ರಂದು ವಿಶ್ವ ನಗುವಿನ ದಿನವಿದೆ.
ನಗುತ್ತಾ, ನಗಿಸುತ್ತಾ ಬದುಕು ಸಾಗಿಸುವ ಸಂಕಲ್ಪ ಮಾಡುವ ಮುನ್ನ ವಿಶ್ವ ನಗು ದಿನದ ಇತಿಹಾಸ, ಮಹತ್ವ ತಿಳಿಯಿರಿ.
ವಿಶ್ವ ನಗು ದಿನದ ಇತಿಹಾಸ
ಪ್ರತಿವರ್ಷ ಮೇ ತಿಂಗಳ ಮೊದಲ ಭಾನುವಾರದಂದು ವಿಶ್ವ ನಗುವಿನ ದಿನವನ್ನು ಆಚರಿಸಲಾಗುತ್ತದೆ. 1988ರಲ್ಲಿ ಮೊದಲ ವಿಶ್ವ ನಗುವಿನ ದಿನವನ್ನು ಆಚರಿಸಲಾಯಿತು. ಜಾಗತಿಕ ನಗು ಯೋಗ ಆಂದೋಲನದ ಹಿಂದಿನ ದಾರ್ಶನಿಕ ಡಾ. ಮದನ್ ಕಟಾರಿಯಾ. ಇವರು ಮೊದಲ ಬಾರಿಗೆ ಮುಂಬೈನಲ್ಲಿ ವಿಶ್ವ ನಗು ದಿನವನ್ನು ಆಚರಿಸಿದರು. ನಂತರ ಇದು ಜಾಗತಿಕ ಆಂದೋಲನವಾಯಿತು.
ಈ ವಾರ್ಷಿಕ ಆಚರಣೆಯು ವಿಶ್ವ ಶಾಂತಿಗೆ ಸಂತೋಷದಾಯಕ ಅಭಿವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ದಿನವು ನಗುವಿನ ಮೂಲಕ ಜಾಗತಿಕ ಏಕತೆ ಮತ್ತು ಸ್ನೇಹವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ನಗು ಯೋಗ ಚಳುವಳಿಯ ಜನರ ಮುಖದಲ್ಲಿ ನಗುವಿನ ಅಲೆ ಎಬ್ಬಿಸುವ ಕೆಲಸ ಮಾಡುತ್ತಿದೆ. ಸದ್ಯ ಪ್ರಪಂಚದಾದ್ಯಂತ 115ಕ್ಕೂ ಹೆಚ್ಚು ದೇಶಗಳಲ್ಲಿ ನಗು ಕ್ಲಬ್‌ಗಳು ವ್ಯಾಪಿಸಿರುವ ಕಾರಣ ಈ ದಿನವು ಪ್ರಪಂಚದಾದ್ಯಂತ ಸಂತೋಷ ಮತ್ತು ಸೌಹಾರ್ದತೆಯನ್ನು ಹರಡುವ ವ್ಯಾಪಕವಾಗಿ ಆಚರಿಸಲಾಗುವ ಕಾರ್ಯಕ್ರಮವಾಗಿ ವಿಕಸನಗೊಂಡಿದೆ. ನಗುವಿಗೆ ಪ್ರಪಂಚದಾದ್ಯಂತ ಸಂತೋಷವನ್ನು ಹರಡಿಸುವ ಕೆಲಸ ಮಾಡುತ್ತದೆ ಎಂಬುದನ್ನು ಈ ದಿನ ಪ್ರತಿನಿಧಿಸುತ್ತದೆ.
ವಿಶ್ವ ನಗು ದಿನದ ಮಹತ್ವ
ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರ ಆಚರಿಸುವ ವಿಶ್ವ ನಗು ದಿನವು ಸಂತೋಷ ಹರಡುವುದು, ನೋವನ್ನು ಮರೆಸುವುದು, ಹೀಲಿಂಗ್ ಪವರ್ (ಗುಣಪಡಿಸುವ ಶಕ್ತಿ) ಮತ್ತು ಏಕತೆಗಾಗಿ ನಗುವನ್ನು ಒಂದು ಸಾಧನವಾಗಿ ಉತ್ತೇಜಿಸಲು ಮೀಸಲಾಗಿರುವ ಜಾಗತಿಕ ಕಾರ್ಯಕ್ರಮವಾಗಿದೆ. ಈ ದಿನವು ವೈಯಕ್ತಿಕ ಯೋಗಕ್ಷೇಮ ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ನಗು ಬೀರುವ ಆಳವಾದ ಪ್ರಭಾವದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ನಗು ಸಂಸ್ಕೃತಿ, ಭಾಷೆ ಮತ್ತು ಧರ್ಮದ ಗಡಿಗಳನ್ನು ಮೀರುತ್ತದೆ, ಸಂಪರ್ಕಗಳನ್ನು ಬೆಳೆಸುತ್ತದೆ ಮತ್ತು ಆತ್ಮಗಳನ್ನು ಉನ್ನತೀಕರಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವುದು, ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುವುದು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸುವಂತಹ ನಗುವಿನ ಚಿಕಿತ್ಸಕ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ. ಈ ದಿನವು ಪ್ರಪಂಚದಾದ್ಯಂತ ಜನರು ಒಗ್ಗೂಡಲು, ನಗುವನ್ನು ಹಂಚಿಕೊಳ್ಳಲು ಮತ್ತು ಸಕಾರಾತ್ಮಕತೆಯನ್ನು ಹರಡಲು, ಸಂತೋಷದಾಯಕ ಮತ್ತು ಆರೋಗ್ಯಕರ ಜಗತ್ತಿಗೆ ಕೊಡುಗೆ ನೀಡಲು ಪ್ರೋತ್ಸಾಹಿಸುತ್ತದೆ.
ಏನೇ ಇರಲಿ, ಹೇಗೆ ಇರಲಿ ನಗು ನಗುತ್ತಾ ಬಾಳಿ. ನಗು ಹಂಚುವ ಮೂಲಕ ಆರೋಗ್ಯ, ಯೋಗಕ್ಷೇಮವನ್ನು ವೃದ್ಧಿಸಿಕೊಳ್ಳಿ ಎನ್ನುವುದನ್ನು ಈ ದಿನ ಪ್ರತಿಪಾದಿಸುತ್ತದೆ.