Miss Universe 2023: ಅಂತಿಮ ಪ್ರಶ್ನೆಗೆ ಅನಿರೀಕ್ಷಿತ, ವಿಭಿನ್ನ ಉತ್ತರ ನೀಡಿದ ಮಿಸ್ ನಿಕರಾಗುವಾ ಶೆಯ್ನಿಸ್ ಪಲಾಸಿಯೋಸ್ 72ನೇ ಭುವನ ಸುಂದರಿ
ಮಿಸ್ ನಿಕರಾಗುವಾ 72ನೇ ಭುವನ ಸುಂದರಿ. ಅಂತಿಮ ಸುತ್ತಿನ ಪ್ರಶ್ನೆಗೆ ಶೆಯ್ನಿಸ್ ಪಲಾಸಿಯೋಸ್ ಅವರು ನೀಡಿದ ಉತ್ತರ ಅವರ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿತ್ತು. ಹೀಗಾಗಿ ಮಿಸ್ ಯೂನಿವರ್ಸ್ ಕಿರೀಟ ಅವರ ಮುಡಿಗೇರಿತು.

ಮಿಸ್ ನಿಕರಾಗುವಾ ಶೆಯ್ನಿಸ್ ಪಲಾಸಿಯೋಸ್ ಅವರು 72ನೇ ಭುವನ ಸುಂದರಿ (ಮಿಸ್ ಯೂನಿವರ್ಸ್) ಆಗಿ ಆಯ್ಕೆಯಾದರು. ಮಿಸ್ ಯೂನಿವರ್ಸ್ 2023 ಕಿರೀಟಕ್ಕಾಗಿ ನಡೆದ 90-ದೇಶಗಳ ಅಭ್ಯರ್ಥಿಗಳ ನಡುವಿನ ತೀವ್ರ ಪೈಪೋಟಿಯ ಬಳಿಕ, ಅಂತಿಮ ಸುತ್ತು ತಲುಪಿದ್ದ ಶೆಯ್ನಿಸ್ ಪಲಾಸಿಯೋಸ್ ಅವರು ಆ ಕಿರೀಟವನ್ನು ತಮ್ಮದಾಗಿಸಿಕೊಂಡರು.
ಟ್ರೆಂಡಿಂಗ್ ಸುದ್ದಿ
ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಥಾಯ್ಲೆಂಡ್ ಮತ್ತು ಮಿಸ್ ಆಸ್ಟ್ರೇಲಿಯಾ ಅವರೊಂದಿಗೆ ಅಂತಿಮ ಸುತ್ತಿಗೆ ಮುನ್ನಡೆ ಶೆಯ್ನಿಸ್ ಪಲಾಸಿಯೋಸ್ ವಿಜೇತರಾಗಿರುವುದಾಗಿ ಘೋಷಿಸಿದ ಕ್ಷಣ ಅತ್ಯಂತ ಭಾವುಕ ಕ್ಷಣವಾಗಿತ್ತು. ಮಿಸ್ ಯೂನಿವರ್ಸ್ 2022 ಆರ್ ಬೊನ್ನಿ ಗೇಬ್ರಿಯೆಲ್ ಅವರು ತನ್ನ ಉತ್ತರಾಧಿಕಾರಿ ಶೆಯ್ನಿಸ್ ಪಲಾಸಿಯೋಸ್ ಅವರಿಗೆ ಅಮೂಲ್ಯವಾದ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಸಿದರು.
ಭುವನ ಸುಂದರಿ 2023 ಕಿರೀಟವನ್ನು ಮುಡಿಗೇರಿಸಿಕೊಂಡ ಕ್ಷಣ
ಮಿಸ್ ನಿಕರಾಗುವಾ ಅವರು ಮಿಸ್ ಯೂನಿವರ್ಸ್ 2023 ಪ್ರಶಸ್ತಿಯನ್ನು ಗೆದ್ದಾಗ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದರು. ಮಿಸ್ ಥಾಯ್ಲೆಂಡ್ ಫಸ್ಟ್ ಪ್ಲೇಸ್ ಬಂದರು. ಭುವನ ಸುಂದರಿ ಸ್ಪರ್ಧೆಯಲ್ಲಿ ಮಿಸ್ ಆಸ್ಟ್ರೇಲಿಯಾದ ಎರಡನೇ ರನ್ನರ್ ಅಪ್ ಮೊರಾಯಾ ವಿಲ್ಸನ್ ಮತ್ತು ಮಿಸ್ ಥಾಯ್ಲೆಂಡ್ ಮೊದಲ ರನ್ನರ್ ಅಪ್ ಆಂಟೋನಿಯಾ ಪೋರ್ಸಿಲ್ಡ್ ಕ್ರಮವಾಗಿ ಅಸ್ಕರ್ ಪ್ರಶಸ್ತಿಗಳನ್ನು ಪಡೆದರು.
ಹೊಳೆಯುವ ಗ್ಲಾಮರ್ ಮತ್ತು ಸಂತೋಷದ ಕಣ್ಣೀರಿನ ನಡುವೆ, ಐತಿಹಾಸಿಕ ಕಿರೀಟವನ್ನು ಮಿಸ್ ನಿಕರಾಗುವ ಮುಡಿಗೇರಿಸಿಕೊಂಡ ಕ್ಷಣ ಹೀಗಿತ್ತು ನೋಡಿ..
ಭುವನ ಸುಂದರಿ 2023 ಕಿರೀಟ ಗೆಲ್ಲುವುದಕ್ಕೆ ಉತ್ತರಿಸಬೇಕಾಗಿದ್ದ ಪ್ರಶ್ನೆ ಇದಾಗಿತ್ತು..
ಮಿಸ್ ಯೂನಿವರ್ಸ್ 2023 ರ ಅಂತಿಮ ಪ್ರಶ್ನೆ “ನೀವು ಇನ್ನೊಬ್ಬ ಮಹಿಳೆಯಂತೆ ಒಂದು ವರ್ಷ ಬದುಕುವುದಾದರೆ ನೀವು ಯಾರನ್ನು ಆಯ್ಕೆ ಮಾಡುತ್ತೀರಿ ಮತ್ತು ಏಕೆ?”
ಮಿಸ್ ಆಸ್ಟ್ರೇಲಿಯಾ ತಾನು ತನ್ನ ತಾಯಿಯಂತೆ ಬದುಕಲು ಇಷ್ಟಪಡುತ್ತೇನೆ ಎಂದು ಹೇಳಿ ತಾಯಿಯನ್ನು ಗೌರವಿಸಿದರೆ, ಮಿಸ್ ಥಾಯ್ಲೆಂಡ್ ಅವರು ಮಲಾಲಾ ಯೂಸುಫ್‌ಜಾಯ್ ಎಂದು ಹೇಳಿದರು. ಆಕೆಯ ಹೋರಾಟ ಮತ್ತು ಸಾಧನೆಗಳು ನನಗೆ ಹೆಚ್ಚು ಸ್ಫೂರ್ತಿ ನೀಡುತ್ತವೆ ಎಂದು ಸ್ಪಷ್ಟಪಡಿಸಿದರು.
ಆದಾಗ್ಯೂ, ಮಿಸ್ ನಿಕರಾಗುವಾ ಅವರ ಉತ್ತರವು ಅತ್ಯಂತ ವಿಭಿನ್ನ ಮತ್ತು ಅನಿರೀಕ್ಷಿತವಾಗಿತ್ತು. ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಸ್ತ್ರೀವಾದದ ತಾಯಿ ಎಂದು ಕರೆಯಲ್ಪಡುವ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್ ಅವರ ಹೆಸರನ್ನು ಮಿಸ್ ನಿಕರಾಗುವಾ ಉಲ್ಲೇಖಿಸಿದರು.
ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಅರ್ಹ ಗೆಲುವನ್ನು ಅಭಿನಂದಿಸುವ ಕಾಮೆಂಟ್‌ಗಳು ತುಂಬಿ ತುಳುಕುತ್ತಿವೆ.
“ಮಿಸ್ ನಿಕರಾಗುವಾ ಗೆಲ್ಲಲು ಸಂಪೂರ್ಣವಾಗಿ ಅರ್ಹರು. ಗೆಲುವಿನ ಸಂತೋಷ ಅವರಿಗಷ್ಟೇ ಅಲ್ಲ. ಮಿಸ್ ಥಾಯ್ಲೆಂಡ್ ಅವರಿಗೂ ಇದೆ. ನೀವೂ ಉತ್ತಮ ಪ್ರದರ್ಶನ ನೀಡುತ್ತೀರಿ” ಎಂದು ಒಬ್ಬ ಅಭಿಮಾನ ಬರೆದುಕೊಂಡಿದ್ದಾರೆ.
“ಫಿಲಿಪಿನೋ ಅಭಿಮಾನಿಯಾಗಿ, ಮಿಸ್ ನಿಕರಾಗುವಾ ಈ ವರ್ಷ ಸ್ಪರ್ಧೆಯನ್ನು ಚಿಂದಿ ಉಡಾಯಿಸಿದರು. ಆದ್ದರಿಂದ ಅವರು ಈ ಕಿರೀಟಕ್ಕೆ ಅರ್ಹರು! ಹೊಸ ಮಿಸ್ ಯೂನಿವರ್ಸ್ ಆಗಿ ಅವಳ ಆಳ್ವಿಕೆಯನ್ನು ನೋಡಲು ಎದುರು ನೋಡುತ್ತಿದ್ದೇನೆ!” ಎಂದು ಮತ್ತೊಬ್ಬರು ಹೇಳಿದ್ದಾರೆ.
ಭುವನ ಸುಂದರಿ 2023ರ ಪ್ರಸಾರ
2023 ರ ಮಿಸ್ ಯೂನಿವರ್ಸ್ ಸ್ಪರ್ಧೆಯು ನವೆಂಬರ್ 18ರಂದು ಶನಿವಾರ ನಡೆಯಿತು. ಭಾರತೀಯ ಕಾಲಮಾನ ಪ್ರಕಾರನವೆಂಬರ್ 19 ರಂದು ಬೆಳಗ್ಗೆ 6:30ಕ್ಕೆ ಮಿಸ್ ಯೂನಿವರ್ಸ್‌ನ ಯೂಟ್ಯೂಬ್ ಚಾನೆಲ್ ಮತ್ತು ಅದರ ಎಕ್ಸ್ ಖಾತೆಯಲ್ಲಿ ಆನ್‌ಲೈನ್‌ನಲ್ಲಿ ಪ್ರಸಾರವಾಯಿತು.
ವಿಭಾಗ