No Tobacco Day 2023: ಆರೋಗ್ಯ ಸುಧಾರಣೆಯಿಂದ ಹಣದ ಉಳಿತಾಯದವರೆಗೆ ಧೂಮಪಾನ ತ್ಯಜಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿಗೆ ನೋಡಿ
ಮೇ 31 ವಿಶ್ವ ಧೂಮಪಾನ ನಿಷೇಧ ದಿನ. ಧೂಮಪಾನ ತ್ಯಜಿಸುವುದರಿಂದ ಕೇವಲ ಆರೋಗ್ಯ ಪ್ರಯೋಜನ ಮಾತ್ರವಲ್ಲ ಇನ್ನೂ ಹಲವು ಪ್ರಯೋಜನಗಳಿವೆ. ಅಂತಹ ಪ್ರಯೋಜನಗಳ ವಿವರ ಇಲ್ಲಿದೆ ನೋಡಿ
ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ. ಧೂಮಪಾನದಿಂದ ವ್ಯಕ್ತಿಯ ಆರೋಗ್ಯ ಸಮಸ್ಯೆ ಉಂಟಾಗುವ ಜೊತೆಗೆ ಸುತ್ತಲಿನ ಪರಿಸರಕ್ಕೂ ಹಾನಿಯಾಗುತ್ತದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (CDC) ಜಾಗತಿಕ ವರದಿಯ ಪ್ರಕಾರ, ಒಂದೇ ವರ್ಷದಲ್ಲಿ, ಸಿಗರೇಟ್ ಧೂಮಪಾನವು ಜಾಗತಿಕವಾಗಿ ಸಾವಿರಾರು ಮೆಟ್ರಿಕ್ ಟನ್‌ಗಳಷ್ಟು ಅಪಾಯಕಾರಿ ವಿಷಗಳಿಗೆ ಕೊಡುಗೆ ನೀಡುತ್ತದೆ. ಧೂಮಪಾನದಿಂದ ವಿಶೇಷವಾಗಿ ಮಕ್ಕಳು ಹಾಗೂ ಹಿರಿಯರು ಹೆಚ್ಚು ಸಮಸ್ಯೆ ಅನುಭವಿಸುತ್ತಾರೆ. ಧೂಮಪಾನ ಮಾಡುವ ಜನರು, ಅವರ ಸುತ್ತಮುತ್ತಲಿನವರು ಮತ್ತು ವಿಷಕಾರಿ ಅನಿಲ ಹೊರಸೂಸುವಿಕೆಯ ಮೂಲಕ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಪ್ರಮುಖ ಕಾಳಜಿಗಳಲ್ಲಿ ತಂಬಾಕು ಒಂದಾಗಿದೆ.
ಪ್ರತಿವರ್ಷ ಸುಮಾರು 8 ಮಿಲಿಯನ್ ಜನರ ತಂಬಾಕು ಸೇವನೆ ಹಾಗೂ ಧೂಮಪಾನದಿಂದ ಸಾವನ್ನಪ್ಪುತ್ತಾರೆ. ಇದರಲ್ಲಿ ಆಘಾತಕಾರಿ ಅಂಶ ಎಂದರೆ ಧೂಮಪಾನಿಗಳಲ್ಲದೇ ಇರುವವರು ಹೊಗೆಗೆ ತರೆದುಕೊಳ್ಳುವುದರಿಂದಲೂ ಸುಮಾರು 1.2 ಮಿಲಿಯನ್ ಸಾವುಗಳ ಸಂಭವಿಸುತ್ತಿವೆ. ತಂಬಾಕಿಗೆ ಸಂಬಂಧಿಸಿದ ತಡೆಗಟ್ಟಬಹುದಾದ ರೋಗಗಳಿಂದ ವ್ಯಕ್ತಿಗಳನ್ನು ರಕ್ಷಿಸಲು ಮಾತ್ರವಲ್ಲದೆ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಭವಿಷ್ಯವನ್ನು ಸ್ಥಾಪಿಸಲು ಧೂಮಪಾನವನ್ನು ತ್ಯಜಿಸುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಆ ಕಾರಣದಿಂದ ಪ್ರತಿವರ್ಷ ಮೇ 31 ರಂದು ನೋ ಟೊಬ್ಯಾಕೊ ಡೇ ಅಥವಾ ಧೂಮಪಾನ ನಿಷೇಧ ದಿನವನ್ನು ಆಚರಿಸಲಾಗುತ್ತದೆ.
ಧೂಮಪಾನ ತ್ಯಜಿಸುವುದರಿಂದ ಆರೋಗ್ಯಕ್ಕೆ ಉಂಟಾಗುವ ಪ್ರಯೋಜನಗಳ ಕುರಿತು ಮೆಡಿಬಡ್ಡಿಯವೈದ್ಯಕೀಯ ಕಾರ್ಯಾಚರಣೆಗಳ ಮುಖ್ಯಸ್ಥ್ಯೆ ಡಾ. ಗೌರಿ ಕುಲಕರ್ಣಿ ನ್ಯೂಸ್ 18 ಜೊತೆ ಮಾತನಾಡಿದ್ದಾರೆ.
ಬಾಯಿಯ ಆರೋಗ್ಯ ಸುಧಾರಿಸುತ್ತದೆ
ಧೂಮಪಾನ ಅಥವಾ ತಂಬಾಕು ಸೇವನೆಯಿಂದ ಹಲ್ಲುಗಳಲ್ಲಿ ಕಲೆ ಉಂಟಾಗುತ್ತದೆ. ಉಸಿರಿನ ದುರ್ನಾತಕ್ಕೂ ಇದು ಕಾರಣವಾಗುತ್ತದೆ. ಇದರೊಂದಿಗೆ ಹಲ್ಲು ಉದುರಲು ಹಾಗೂ ವಸಡಿನ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಧೂನಪಾನ ತ್ಯಜಿಸುವುದರಿಂದ ರಕ್ತದ ಹರಿವು ಸುಧಾರಿಸುತ್ತದೆ, ಊರಿಯೂತ ಕಡಿಮೆಯಾಗುತ್ತದೆ. ಇದು ವಸಡಿನ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಅಲ್ಲದೆ ಇದರಿಂದ ಬಾಯಿ ಕ್ಯಾನ್ಸರ್ ಅಪಾಯವೂ ಕಡಿಮೆಯಾಗುತ್ತದೆ.
ಶ್ವಾಸಕೋಶದ ಆರೋಗ್ಯ
ಧೂಮಪಾನವು ಶ್ವಾಸಕೋಶದ ಸಾಮರ್ಥ್ಯ ಮತ್ತು ಹೃದಯರಕ್ತನಾಳದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ದೈಹಿಕ ಚಟುವಟಿಕೆಗಳ ಸಮಸ್ಯೆಗಳೂ ಕಾರಣವಾಗಬಹುದು. ಧೂಮಪಾನವನ್ನು ನಿಲ್ಲಿಸುವುದರಿಂದ ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುತ್ತದೆ, ಈ ಹೆಚ್ಚಿದ ಶ್ವಾಸಕೋಶದ ಸಾಮರ್ಥ್ಯವು ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ಮಾನಸಿಕ ಯೋಗಕ್ಷೇಮ ಸುಧಾರಣೆ
ಧೂಮಪಾನ ನಿಷೇಧದಿಂದ ಒತ್ತಡ ನಿವಾರಣೆ ಸಾಧ್ಯ. ಇದು ಒಟ್ಟಾರೆ ಮಾನಸಿಕ ಯೋಗಕ್ಷೇಮಕ್ಕೂ ಸಹಕಾರಿ. ಮಾನಸಿಕ ಆರೋಗ್ಯದಲ್ಲಿನ ಈ ಸುಧಾರಣೆಯು ಮೆದುಳಿನ ಉತ್ತಮ ಆಮ್ಲಜನಕೀಕರಣ, ಹೆಚ್ಚಿದ ಆತ್ಮವಿಶ್ವಾಸ ಮತ್ತು ನಿಕೋಟಿನ್ ವ್ಯಸನಕ್ಕೆ ಸಂಬಂಧಿಸಿದ ಒತ್ತಡವನ್ನು ತೆಗೆದುಹಾಕುವುದಕ್ಕೆ ಕಾರಣವೆಂದು ಹೇಳಬಹುದು.
ವಾಸನೆ, ರುಚಿ ಗ್ರಹಿಕೆ ಸುಧಾರಿಸಲು
ಧೂಮಪಾನದಿಂದ ಕಾಲಾನಂತರದಲ್ಲಿ ವಾಸನೆ ಹಾಗೂ ರುಚಿಯ ಸಂವೇದನೆಗಳು ಕಡಿಮೆಯಾಗುತ್ತವೆ. ಆದರೆ ಧೂಮಪಾನ ತ್ಯಜಿಸಿದ ಮೇಲೆ ಇಂದ್ರಿಯಗಳು ಕ್ರಮೇಣ ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತವೆ. ಧೂಮಪಾನ ತ್ಯಜಿಸಿದ ಕೆಲವೇ ವಾರಗಳಲ್ಲಿ ವಾಸನೆ ಹಾಗೂ ರುಚಿ ಗ್ರಹಿಕೆಯ ಪ್ರಮಾಣ ಹೆಚ್ಚುತ್ತದೆ.
ಆರ್ಥಿಕ ಪ್ರಯೋಜನಗಳು
ಧೂಮಪಾನ ನಿಷೇದದಿಂದ ದೈಹಿಕ ಆರೋಗ್ಯ ಸುಧಾರಣೆ ಮಾತ್ರವಲ್ಲ, ಹಲವು ರೀತಿಯ ಆರ್ಥಿಕ ಪ್ರಯೋಜನಗಳೂ ಇವೆ. ಪ್ರತಿದಿನ ದೂಮಪಾನ ಮಾಡುವುದರಿಂದ ಸಾಕಷ್ಟು ಹಣ ಖರ್ಚಾಗುತ್ತದೆ. ಇದು ಆರೋಗ್ಯದ ಜೊತೆಗೆ ಸಂಪತ್ತನ್ನೂ ಕರಗಿಸುತ್ತದೆ. ಇದು ದುಬಾರಿ ದುರಾಭ್ಯಾಸ ಎನ್ನಬಹುದು. ಆ ಕಾರಣಕ್ಕೆ ಧೂಮಪಾನ ತ್ಯಜಿಸುವುದು ಉತ್ತಮ.
ವಿಭಾಗ