World Oral Health Day: ಉಸಿರಿನ ದುರ್ನಾತದಿಂದ ಮುಜುಗರವೇ? ಇದಕ್ಕೆ ಕಾರಣವೇನು? ಮನೆಮದ್ದುಗಳಿಂದ ಪರಿಹಾರ ಕಂಡುಕೊಳ್ಳಬಹುದೇ?
ಕನ್ನಡ ಸುದ್ದಿ  /  ಜೀವನಶೈಲಿ  /  World Oral Health Day: ಉಸಿರಿನ ದುರ್ನಾತದಿಂದ ಮುಜುಗರವೇ? ಇದಕ್ಕೆ ಕಾರಣವೇನು? ಮನೆಮದ್ದುಗಳಿಂದ ಪರಿಹಾರ ಕಂಡುಕೊಳ್ಳಬಹುದೇ?

World Oral Health Day: ಉಸಿರಿನ ದುರ್ನಾತದಿಂದ ಮುಜುಗರವೇ? ಇದಕ್ಕೆ ಕಾರಣವೇನು? ಮನೆಮದ್ದುಗಳಿಂದ ಪರಿಹಾರ ಕಂಡುಕೊಳ್ಳಬಹುದೇ?

world oral health day march 20: ಇಂದು ವಿಶ್ವ ಬಾಯಿ ಆರೋಗ್ಯ ದಿನ. ಬಾಯಿಯ ನೈರ್ಮಲ್ಯದ ಕಾರಣದಿಂದ ಹಲವು ರೀತಿಯ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತವೆ. ಅವುಗಳಲ್ಲಿ ಉಸಿರಿನ ದುರ್ವಾಸನೆಯೂ ಒಂದು. ಉಸಿರಿನ ದುರ್ನಾತಕ್ಕೆ ಕಾರಣವೇನು? ಇದರ ಪರಿಹಾರಕ್ಕೆ ಮನೆಮದ್ದುಗಳೇನು? ಈ ಬಗ್ಗೆ ತಿಳಿಯೋಣ

ಉಸಿರಿನ ದುರ್ನಾತ
ಉಸಿರಿನ ದುರ್ನಾತ

ವಿಶ್ವದಲ್ಲಿ 4 ಜನರಲ್ಲಿ ಒಬ್ಬರಿಗೆ ಉಸಿರಿನ ದುರ್ನಾತದ ಸಮಸ್ಯೆ ಇರುತ್ತದೆ. ಬಾಯಿಯ ನೈರ್ಮಲ್ಯವೇ ಇದಕ್ಕೆ ಮುಖ್ಯ ಕಾರಣ. ಬಾಯಿಯ ದುರ್ನಾತದ ಕಾರಣದಿಂದ ಹಲವರು ಮುಜಗರಕ್ಕೆ ಒಳಗಾಗುತ್ತಾರೆ. ಇದರಿಂದ ಬೇರೆಯವರ ಎದುರು ಮಾತನಾಡಲು ಹಿಂಜರಿಕೆ ಅನುಭವಿಸುತ್ತಾರೆ.

ಬಾಯಿ ಅಂದರೆ ಹಲ್ಲು, ವಸಡಿನಲ್ಲಿ ಸಿಕ್ಕಿಕೊಂಡ ಆಹಾರವು ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ವಾಸನೆ ಉಂಟಾಗುತ್ತದೆ ಎನ್ನುತ್ತಾರೆ. ಕೆಲವೊಮ್ಮೆ ಉಸಿರಿನ ದುರ್ನಾತಕ್ಕೆ ಕಾರಣವೇನು ಎಂದು ತಿಳಿಯುವುದು ಕಷ್ಟವಾಗುತ್ತದೆ.

ಇಂದು ವಿಶ್ವ ಬಾಯಿ ಆರೋಗ್ಯ ದಿನ. ಈ ದಿನದಂದು ಉಸಿರಿನ ದುರ್ನಾತಕ್ಕೆ ಕಾರಣವೇನು? ಇದರ ಪರಿಹಾರಕ್ಕೆ ಮನೆಮದ್ದುಗಳೇನು? ಈ ಬಗ್ಗೆ ತಿಳಿಯೋಣ

ಉಸಿರಿನ ದುರ್ನಾತಕ್ಕೆ ಕಾರಣಗಳು?

ಬಾಯಿಯೊಳಗೆ ಬ್ಯಾಕ್ಟೀರಿಯಾಗಳ ಹುಟ್ಟಿನಿಂದ ಉಸಿರಿನ ದುರ್ನಾತಕ್ಕೆ ಕಾರಣವಾಗುತ್ತವೆ. ಆಹಾರ ಸೇವನೆಯ ಸಂದರ್ಭದಲ್ಲಿ ಹಲ್ಲಿನ ಕುಳಿಗಳಲ್ಲಿ ಆಹಾರ ಉಳಿಯುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ಉಂಟಾಗುತ್ತವೆ. ಉಸಿರಿನ ದುರ್ನಾತಕ್ಕೆ ಪ್ರಮುಖ ಕಾರಣ ಬಾಯಿಯ ನೈರ್ಮಲ್ಯ. ಬ್ರಷ್‌ ಮಾಡದೇ ಇರುವುದು, ಅಸಮರ್ಪಕ ಬ್ರಷಿಂಗ್‌ ವಿಧಾನ, ನಾಲಿಗೆಯನ್ನು ಸ್ವಚ್ಛ ಮಾಡದೇ ಇರುವುದು, ಹಲ್ಲುಗಳ ನಡುವಿನ ಅಂತರದಲ್ಲಿ ಸ್ವಚ್ಛ ಮಾಡದೇ ಇರುವುದು ಈ ಕಾರಣಗಳಿಂದ ವಾಸನೆ ಉಂಟಾಗಬಹುದು.

ಬೆಳ್ಳುಳ್ಳಿ ಹಾಗೂ ಈರುಳ್ಳಿ ಹಲ್ಲಿನ ಸಂಧಿಯಲ್ಲಿ ಸಿಕ್ಕಿಕೊಳ್ಳುವುದೂ ದುರ್ನಾತಕ್ಕೆ ಪ್ರಮುಖ ಕಾರಣವಾಗುತ್ತದೆ. ಬಹುತೇಕ ಬಾಯಿ ನೈಮರ್ಲ್ಯದ ಕಾರಣದಿಂದಲೇ ಉಸಿರಿನ ದುರ್ನಾತ ಉಂಟಾದರೆ, ಇನ್ನೂ ಕೆಲವೊಮ್ಮೆ ಆಸಿಡ್‌ ರಿಫ್ಲಕ್ಸ್‌ ಕೂಡ ವಾಸನೆಗೆ ಕಾರಣವಾಗಬಹುದು. ಉಸಿರಿನ ದುರ್ನಾತದ ಸಮಸ್ಯೆ ಅತಿಯಾದಾಗ ತಜ್ಞರ ವೈದ್ಯ ಬಳಿ ತೋರಿಸುವುದು ಉತ್ತಮ. ಇದರಿಂದ ಸರಿಯಾದ ಕಾರಣ ಹಾಗೂ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.

ಉಸಿರಿನ ದುರ್ನಾತ ನಿವಾರಣೆಗೆ ಮನೆಮದ್ದುಗಳು

ಬಾಯಿಯನ್ನು ಸ್ವಚ್ಛವಾಗಿಡುವುದು

ಪ್ರತಿದಿನ ಸಮರ್ಪಕ ವಿಧಾನದಲ್ಲಿ ದಿನಕ್ಕೆ ಎರಡು ಬಾರಿ ಬ್ರಷ್‌ ಮಾಡುವುದು, ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳುವುದು, ಮೌತ್‌ವಾಶ್‌ ಬಳಸುವುದು, ಗುಣಮಟ್ಟದ ಟೂತ್‌ಪೇಸ್ಟ್‌ ಬಳಕೆ ಈ ಎಲ್ಲಾ ವಿಧಾನಗಳನ್ನು ಅನುಸರಿಸುವ ಮೂಲಕ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಉಸಿರಿನ ದುರ್ನಾತಕ್ಕೂ ಕಡಿವಾಣ ಹಾಕಬಹುದು.

ಲವಂಗ ಅಗಿಯುವುದು

ದಿನದಲ್ಲಿ 2,3 ಲವಂಗ ಅಗಿಯುವುದರಿಂದ ಬಾಯಿಯ ವಾಸನೆಯನ್ನು ನಿಯಂತ್ರಿಸಬಹುದು. ಲವಂಗ ಸೇವನೆ ಹಲ್ಲಿನ ಆರೋಗ್ಯಕ್ಕೂ ಉತ್ತಮ. ಹಲ್ಲುನೋವಿದ್ದಾಗ ಲವಂಗದ ಎಣ್ಣೆ ಹಲ್ಲಿನ ಮೇಲೆ ಲವಂಗದ ಎಣ್ಣೆ ಸವರುವುದರಿಂದ ನೋವಿಗೆ ಪರಿಹಾರ ಕಂಡುಕೊಳ್ಳಬಹುದು.

ಬೇಕಿಂಗ್‌ ಸೋಡಾ

ಬೇಕಿಂಗ್‌ ಸೋಡಾದಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಗುಣವಿದೆ. ಆ ಕಾರಣಕ್ಕೆ ಟೂತ್‌ಪೇಸ್ಟ್‌ಗಳಲ್ಲೂ ಬೇಕಿಂಗ್‌ ಸೋಡಾ ಬಳಸಲಾಗುತ್ತದೆ. ಒಂದು ಕಪ್‌ ಬಿಸಿನೀರಿನಲ್ಲಿ 2 ಚಮಚ ಬೇಕಿಂಗ್‌ ಸೋಡಾ ಸೇರಿಸಿ ಬಾಯಿ ಮುಕ್ಕಳಿಸಿ.

ಗ್ರೀನ್‌ ಟೀ

ಸಂಶೋಧನೆಗಳ ಪ್ರಕಾರ ಗ್ರೀನ್‌ ಟೀ ಸೋಂಕುನಿವಾರಕ ಮತ್ತು ಡಿಯೋಡರೈಸಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ತಾತ್ಕಾಲಿಕವಾಗಿ ಉಸಿರಿಗೆ ತಾಜಾತನ ನೀಡುತ್ತದೆ. ಗ್ರೀನ್‌ ಟೀಯನ್ನು ರಾತ್ರಿ ಕುದಿಸಿ ಫ್ರಿಜ್‌ನಲ್ಲಿಡಿ. ಬೆಳಿಗ್ಗೆ ಅದಕ್ಕೆ ನೀರು ಸೇರಿಸಿ ಆಗಾಗ ಕುಡಿಯುತ್ತಿರಿ. ಪುದಿನಾ ಸೊಪ್ಪಿನ ಟೀಯಿಂದಲೂ ಇದನ್ನು ಮಾಡಬಹುದು.

ವಿನೆಗರ್‌

ವಿನೆಗರ್‌ನಲ್ಲಿ ನೈಸರ್ಗಕ ಆಸಿಟಿಕ್‌ ಆಮ್ಲವಿದೆ. ಈ ಆಮ್ಲದ ಪರಿಣಾಮದಿಂದ ಬ್ಯಾಕ್ಟೀರಿಯಾಗಳು ಹುಟ್ಟುವುದಿಲ್ಲ. ವಿನೆಗರ್‌ ಅನ್ನು ಮೌತ್‌ವಾಷ್‌ ರೀತಿ ಬಳಸುವುದರಿಂದ ಬಾಯಿಯ ಅಥವಾ ಉಸಿರಿನ ದುರ್ನಾತಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಸೋಂಪು

ಸೋಂಪಿನ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುವುದು ಮಾತ್ರವಲ್ಲ, ಉಸಿರಿನ ದುರ್ವಾಸನೆಗೂ ಬ್ರೇಕ್‌ ಹಾಕಬಹುದು. ಸೋಂಪು ಅನ್ನು ಹಸಿಯಾಗಿ ಅಥವಾ ಹರಿದು ಸೇವಿಸಬಹುದು.

ಆಪಲ್‌ ಸೀಡರ್‌ ವಿನೆಗರ್‌

ಬಾಯಿಯ ದುರ್ನಾತ ತಡೆಯಲು ಆಪಲ್‌ ಸೀಡರ್‌ ವಿನೆಗರ್‌ ಕೂಡ ಉತ್ತಮ ಮನೆಮದ್ದು. ಇದನ್ನು ನೀರಿನೊಂದಿಗೆ ಸೇರಿಸಿ, 30 ನಿಮಿಷಗಳ ಕಾಲ ಬಾಯಿ ಮುಕ್ಕಳಿಸುವುದರಿಂದ ಉಸಿರಿನ ದುರ್ನಾತ ಕಡಿಮೆಯಾಗುತ್ತದೆ.