ಕನ್ನಡ ಸುದ್ದಿ  /  ಜೀವನಶೈಲಿ  /  Press Freedom Day: ಮಾಧ್ಯಮಗಳಿಗೂ ಬೇಕು ಸ್ವಾತಂತ್ರ್ಯ; ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಇತಿಹಾಸ, ಮಹತ್ವ ತಿಳಿಯಿರಿ

Press Freedom Day: ಮಾಧ್ಯಮಗಳಿಗೂ ಬೇಕು ಸ್ವಾತಂತ್ರ್ಯ; ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಇತಿಹಾಸ, ಮಹತ್ವ ತಿಳಿಯಿರಿ

ಜಾಗತಿಕ ವಿದ್ಯಮಾನಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ಜಗತ್ತಿನಲ್ಲಿ ನಡೆಯುವ ಸಕಲವೂ ಮಾಧ್ಯಮಗಳ ಮೂಲಕವೇ ಜನರನ್ನು ತಲುಪುತ್ತವೆ. ಇಂತಹ ಮಾಧ್ಯಮಗಳಿಗೂ ಸ್ವಾತಂತ್ರ್ಯ ಬೇಕು‌ ಎಂಬುದನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ 2024
ವಿಶ್ವ ಪತ್ರಿಕಾ ಸ್ವಾತಂತ್ರ್ಯ 2024

ಮಾಧ್ಯಮವನ್ನು ಸಂವಿಧಾನದ 4ನೇ ಆಯಾಮ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ನಡೆಯುವ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಮಾಧ್ಯಮಗಳನ್ನು ಮಾಡುತ್ತವೆ. ಸತ್ಯವನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮದ ಮೇಲಿದೆ. ಆದರೂ ಕೆಲವೊಮ್ಮೆ ಮಾಧ್ಯಮಗಳು ತಮ್ಮ ಕಾರ್ಯನಿರ್ವಹಿಸುವಾಗ ಬೆದರಿಕೆಗಳು, ಹಿಂಸೆ, ಸೆನ್ಸಾರ್‌ನಂತಹ ಸವಾಲುಗಳು ಎದುರಾಗುತ್ತದೆ. ಸರ್ಕಾರ ಹಾಗೂ ಸಾರ್ವಜನಿಕರು ಮಾಧ್ಯಮಗಳು ಹಾಗೂ ಪತ್ರಕರ್ತರಿಗೆ ನ್ಯಾಯಮಾರ್ಗದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಪೂರಕ ವಾತಾವರಣವನ್ನು ಕಲ್ಪಿಸಬೇಕು. ಪತ್ರಕರ್ತರು ಹಾಗೂ ಮಾಧ್ಯಮರಂಗ ಎದುರಿಸುತ್ತಿರುವ ಸವಾಲು ಹಾಗೂ ಅವರು ಕೆಲಸ ಮಾಡುತ್ತಿರುವ ರೀತಿ ಸುಗಮವಾಗಿದೆಯೇ ಎಂಬುದನ್ನು ತಿಳಿಯುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಇದು ಪತ್ರಕರ್ತರಾಗುವುದು ಸುಲಭದ ಕೆಲಸವಲ್ಲ ಎಂಬುದನ್ನು ನೆನಪಿಸುತ್ತದೆ. ಈ ವಿಶೇಷ ದಿನವನ್ನು ಆಚರಿಸುವ ಈ ಹೊತ್ತಿನಲ್ಲಿ ಈ ದಿನದ ಆಚರಣೆ ಹೇಗೆ ಬಂತು, ಇದರ ಇತಿಹಾಸ, ಮಹತ್ವದ ಕುರಿತು ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಪತ್ರಿಕಾ ದಿನದ ಆಚರಣೆ ಯಾವಾಗ?

ಪ್ರತಿ ವರ್ಷ ಮೇ 3 ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಶುಕ್ರವಾರ ಪತ್ರಿಕಾ ಸ್ವಾತಂತ್ರ್ಯ ದಿನವಿದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಇತಿಹಾಸ

1991ರಲ್ಲಿ ಯುನೆಸ್ಕೊ ಸಾಮಾನ್ಯ ಸಮ್ಮೆಳನದ ಶಿಫಾರಸಿನ ನಂತರ 1993ರಲ್ಲಿ ಯುನೈಟೆಡ್‌ ನೇಷನ್ಸ್‌ ಜನರಲ್‌ ಅಸೆಂಬ್ಲಿಯು ಪ್ರತಿ ವರ್ಷ ಮೇ 3 ರಂದು ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲು ಆರಂಭಿಸಿತು. 1994ರಲ್ಲಿ ಮೊದಲ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಈ ದಿನ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ತಿಳಿಸುವ ಜೊತೆಗೆ ಮಾಧ್ಯಮರಂಗದಲ್ಲಿದ್ದು ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ಪತ್ರಕರ್ತರನ್ನು ನೆನಪಿಸಿಕೊಳ್ಳುವುದು ಹಾಗೂ ಗೌರವಿಸುವ ಕೆಲಸವನ್ನೂ ಮಾಡಲಾಗುತ್ತದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯದ ದಿನದ ಮಹತ್ವ

ಈ ವರ್ಷ ಪತ್ರಿಕಾ ಸ್ವಾತಂತ್ರ್ಯ ದಿನ ಥೀಮ್‌ ʼಜಗತ್ತಿಗಾಗಿ ಮಾಧ್ಯಮ, ನೈಸರ್ಗಿಕ ಬಿಕ್ಕಟ್ಟಿನ ಮುಖಪುಟವಾಗಿ ಪ್ರತಿಕೋದ್ಯಮʼ ಎಂಬುದು ಈ ವರ್ಷ ಥೀಮ್‌ ಆಗಿದೆ. ಸಾರ್ವಜನಿಕರಿಗೆ ಯಾವಾಗಲೂ ಎಲ್ಲಾ ರೀತಿಯ ಮಾಹಿತಿಗಳು ಲಭ್ಯವಾಗಬೇಕು, ಪತ್ರಕರ್ತರು ತಮ್ಮ ಕೆಲಸಗಳನ್ನು ಮಾಡಲು ಸುರಕ್ಷಿತ ಸ್ಥಳ ಹಾಗೂ ಅವಕಾಶವನ್ನು ಸರ್ಕಾರ ಕಲ್ಪಿಸಬೇಕು ಎಂಬುದನ್ನು ಪುನರುಚ್ಚರಿಸಲು ಸಹಾಯ ಮಾಡುವ ದಿನ ಇದಾಗಿದೆ. ಈ ದಿನವು ಸತ್ಯವನ್ನು ಹೇಳಲು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಎಲ್ಲಾ ಸಮಯದಲ್ಲೂ ಗೌರವಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರಿಗೆ ನೆರವಾಗುತ್ತದೆ. ಇದು ಮಾಧ್ಯಮ ಸಂಸ್ಥೆಗಳು ಹಾಗೂ ಪತ್ರಕರ್ತರ ಗೌರವವನ್ನು ಬೆಂಬಲಿಸುವ ದಿನವೂ ಆಗಿದೆ.

ವಿಭಾಗ