ವಾಟರ್ ಬಾಟಲ್ ಬೇಕಿಲ್ಲ, ಜಪಾನ್ ದೇಶದ ಜನರಿಗೆ ನಲ್ಲಿಯಲ್ಲೇ ಸಿಗುತ್ತೆ ಶುದ್ಧ ಕುಡಿಯುವ ನೀರು: ರಂಗಸ್ವಾಮಿ ಮೂಕನಹಳ್ಳಿ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ವಾಟರ್ ಬಾಟಲ್ ಬೇಕಿಲ್ಲ, ಜಪಾನ್ ದೇಶದ ಜನರಿಗೆ ನಲ್ಲಿಯಲ್ಲೇ ಸಿಗುತ್ತೆ ಶುದ್ಧ ಕುಡಿಯುವ ನೀರು: ರಂಗಸ್ವಾಮಿ ಮೂಕನಹಳ್ಳಿ ಬರಹ

ವಾಟರ್ ಬಾಟಲ್ ಬೇಕಿಲ್ಲ, ಜಪಾನ್ ದೇಶದ ಜನರಿಗೆ ನಲ್ಲಿಯಲ್ಲೇ ಸಿಗುತ್ತೆ ಶುದ್ಧ ಕುಡಿಯುವ ನೀರು: ರಂಗಸ್ವಾಮಿ ಮೂಕನಹಳ್ಳಿ ಬರಹ

ಇಂದು ಎಲ್ಲೇ ಹೋದರು ಬಹುತೇಕರು ಮಿನರಲ್ ವಾಟರ್ ಅನ್ನೇ ಬಳಸುತ್ತಿದ್ದಾರೆ. ಆದರೆ, ಜಪಾನ್ ದೇಶದಲ್ಲಿನಲ್ಲಿಯಲ್ಲಿ ಬರುವ ನೀರನ್ನು ಕುಡಿಯಬಹುದು.ಅದು ತುಂಬಾ ಸುರಕ್ಷಿತ. ಈ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಅವರು ತಮ್ಮ ಫೇಸ್​ಬುಕ್​​ನಲ್ಲಿ ಬರೆದುಕೊಂಡಿದ್ದು,ಇದು ಹೆಚ್ಚು ಜನರನ್ನು ತಲುಪಲಿ ಎಂಬ ಉದ್ದೇಶದಿಂದ'ಎಚ್​​ಟಿ ಕನ್ನಡ'ದಲ್ಲಿ ಮರುಪ್ರಕಟಿಸಿದ್ದೇವೆ.

ಜಪಾನ್‍ನಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಬರಹ
ಜಪಾನ್‍ನಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಬರಹ (ಸಂಗ್ರಹ ಚಿತ್ರ)

ರಂಗಸ್ವಾಮಿ ಮೂಕನಹಳ್ಳಿ ಅವರ ಫೇಸ್​ಬುಕ್​ ಪೋಸ್ಟ್​

“ಜಪಾನ್ ದೇಶದಲ್ಲಿ ನಲ್ಲಿಯಲ್ಲಿ ಬರುವ ನೀರನ್ನು ಕುಡಿಯಬಹುದು. ಅದು ಸೇಫ್ ಎನ್ನುವ ಮಾತುಗಳು ಅಲ್ಲಿ ಇಳಿದ ತಕ್ಷಣ ಕೇಳಿಸಲು ಶುರುವಾಗುತ್ತದೆ. ಇಲ್ಲಿನ ಲೋಕಲ್ ಚೈನ್ ಆಫ್ ಹೋಟೆಲ್‍ಗಳಲ್ಲಿ ನೀರಿನ ಬಾಟಲ್ ಇಡುವ ಶಿಷ್ಟಾಚಾರ ಬಿಟ್ಟಿದ್ದಾರೆ. ಎಲ್ಲೆಡೆ ಟಾಪ್ ವಾಟರ್ ಗುಡ್ ಫಾರ್ ಡ್ರಿಂಕಿಂಗ್ ಎನ್ನುವ ಫಲಕಗಳನ್ನು ಕಾಣಬಹುದು. ಕೆಲವೊಂದು ಇಂಟರ್‌ನ್ಯಾಷನಲ್ ಬ್ರಾಂಡ್ ಹೋಟೆಲ್‍ಗಳು ಮಾತ್ರ ಇಂದಿಗೂ ವಾಟರ್ ಬಾಟಲ್ ಹೋಟೆಲ್ ಕೊಠಡಿಯಲ್ಲಿ ಇಡುತ್ತಿವೆ.

ಪ್ರವಾಸಿಗರಾಗಿ ಹೋದವರಲ್ಲಿ ಟಾಪ್ ವಾಟರ್ ಕುಡಿಯುವ ಬಗ್ಗೆ ಒಂದಷ್ಟು ಅನುಮಾನಗಳು ಇದ್ದೆ ಇರುತ್ತವೆ. ಹೀಗಾಗಿ ಎಲ್ಲಾ ಸೂಪರ್ ಮಾರ್ಕೆಟ್‍ಗಳಲ್ಲಿ ಪ್ಯಾಕ್ಡ್ ವಾಟರ್ ಬಾಟಲ್ ಸಿಗುತ್ತದೆ. ಆದರೆ ಇಲ್ಲೊಂದು ವಿಚಿತ್ರವನ್ನು ಗಮನಿಸಿದೆ. ಅದೇನೆಂದರೆ ಇಲ್ಲಿ ಅರ್ಧ ಲೀಟರ್ ನೀರಿನ ಬಾಟಲ್ ಎಂದುಕೊಂಡು ಕೊಂಡರೆ ಅದು ೫೦೦ ಎಂಎಲ್ ಬದಲಿಗೆ ೬೦೦ ಎಂಎಲ್ ಇರುತ್ತದೆ. ಇದೇಕೆ ಎಂದು ಇದರ ಹಿಂದೆ ಬಿದ್ದಾಗ ತಿಳಿದದ್ದು:

೧) ಬೆಳಿಗ್ಗೆ , ಮಧ್ಯಾಹ್ನ ಮತ್ತು ರಾತ್ರಿ ಹೀಗೆ ಒಟ್ಟಾರೆ ೬೦೦ ಎಂಎಲ್ ಪ್ರತಿ ಬಾರಿ ಸೇವಿಸಬೇಕು ಎನ್ನುತ್ತದೆ ಜಪಾನ್. ನಿಮಗೆ ಆಶ್ಚರ್ಯ ಎನ್ನಿಸಬಹುದು ಮಾರುಕಟ್ಟೆಯಲ್ಲಿ ೫೦ ಪ್ರತಿಶತಕ್ಕೂ ಹೆಚ್ಚು ಮಾರಾಟವಾಗುವುದು ಈ ೬೦೦ ಎಂಎಲ್ ಬಾಟಲ್ಗಳು. ಅಂದರೆ ಜಪಾನಿಯರ ಪ್ರಕಾರ ನಿತ್ಯ ಕನಿಷ್ಠ ೧೮೦೦ ಎಂಎಲ್ ನೀರು ಕುಡಿಯಬೇಕು.

೨) ಸೈಕಲ್‍ನ ಬಾಟೆಲ್ ಹೋಲ್ಡರ್‌ನಲ್ಲಿ ೫೦೦ ಎಂಎಲ್ ಬಾಟಲ್ಗಿಂತ ೬೦೦ ಎಂಎಲ್ ಬಾಟೆಲ್ ಸರಿಯಾಗಿ ಕೂರುತ್ತದೆಯಂತೆ !

೩) ಐನೂರು ಎಂಎಲ್ ಬಾಟಲ್ ಮತ್ತು ೬೦೦ ಎಂಎಲ್ ಬಾಟಲ್ ಉತ್ಪಾದನೆಗೆ ಹೆಚ್ಚಿನ ಪ್ಲಾಸ್ಟಿಕ್ ಬೇಕಿಲ್ಲ, ಖರ್ಚು ಹೆಚ್ಚಾಗುವುದಿಲ್ಲ .

ಜಪಾನ್ ನಾಗರಿಕರು ಮನೆಯಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಕೆಲಸದ ಜಾಗದಲ್ಲಿ ಅದನ್ನು ಮತ್ತೆ ತುಂಬಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇವರ ವಾಟರ್ ಬಾಟಲ್ ಕೂಡ ೬೦೦ ಎಂಎಲ್ ದಾಗಿರುತ್ತದೆ !

ಜಪಾನ್ ವಿಶ್ವದ ಇತರ ಎಲ್ಲಾ ದೇಶಗಳಿಗಿಂತ ಅತ್ಯಂತ ಕಠಿಣ ನಿಯಮಗಳನ್ನು ಹೊಂದಿದೆ. ಹೀಗಾಗಿ ಇಲ್ಲಿ ಪ್ಯಾಕ್ಡ್ ವಾಟರ್ ಬಾಟಲ್‌ನಲ್ಲಿ ಸಿಗುವ ನೀರನ್ನು ಕೂಡ ನೆಮ್ಮದಿಯಾಗಿ, ಭಯವಿಲ್ಲದೆ ಕುಡಿಯಬಹುದು.”

ಈ ಪೋಸ್ಟ್​ಗೆ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ

“ಮೂರು ದಶಕಗಳ ಹಿಂದೆ ಸುರೇಶ್ ಮೂನಾ ಸರ್ ಹೇಳಿದ್ದು: ಒಬ್ಬರು ರಷ್ಯಾ ಪ್ರಜೆ ಭಾರತಕ್ಕೆ ಬಂದಿದ್ದರು. ಮಿನರಲ್ ವಾಟರ್ ಅನ್ನೇ ಬಳಸಿದರೂ ಸಹ ಅವರಿಗೆ ಅಲರ್ಜಿ ಆಯಿತು” ಎಂದು ಎಂದು ಫೇಸ್​ಬುಕ್​ ಬಳಕೆದಾರರೊಬ್ಬರು ಕಾಮೆಂಟ್​ ಮಾಡಿದ್ದಾರೆ.

“BWSSB ಅವರು ಸರಬರಾಜು ಮಾಡುವ ನೀರನ್ನೇ ನಾವು ಕುಡಿಯುವುದು. ಫಿಲ್ಟರ್ ಸಹ ಬಳಸುವುದಿಲ್ಲ. ಆರೋಗ್ಯವಾಗಿಯೇ ಇದ್ದೇವೆ” ಎಂದು ಮತ್ತೊಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ನನಗೂ ಎಲ್ಲಿ ಹೋದರೂ ನೀರಿನ ಪ್ರಾಬ್ಲಂ, ಅದಕ್ಕೆ ಕಾಯಿಸಿದ ನೀರನ್ನೇ ಕುಡಿತೀನಿ” ಅಂತಾ ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. “ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ” ಎಂದು ಮತ್ತೊಬ್ಬ ಫೇಸ್‌ಬುಕ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Whats_app_banner