ವರ್ಷಾಂತ್ಯಕ್ಕೆ ಸ್ಪೆಷಲ್ ರೆಸಿಪಿ ಮಾಡ್ಬೇಕು ಅಂತಿದ್ರೆ ಕೊಲ್ಲಾಪುರಿ ಶೈಲಿಯ ಮಟನ್ ಸುಕ್ಕ ಮಾಡಿ; ಇದರ ರುಚಿ ಎಲ್ರಿಗೂ ಇಷ್ಟ ಆಗುತ್ತೆ
ಕೊಲ್ಲಾಪುರಿ ಶೈಲಿಯ ಖಾದ್ಯಗಳು ಮಾಂಸಾಹಾರ ಪ್ರಿಯರಿಗೆ ಹೆಚ್ಚು ಇಷ್ಟವಾಗುತ್ತದೆ. ಢಾಬಾಗಳಲ್ಲಿ ಸಿಗುವ ಕೊಲ್ಲಾಪುರಿ ಚಿಕನ್, ಮಟನ್ ಖಾದ್ಯಗಳಿಗೆ ಬೇಡಿಕೆ ಹೆಚ್ಚು. ಈ ವರ್ಷಾಂತ್ಯಕ್ಕೆ ನೀವೇನಾದ್ರೂ ಸ್ಪೆಷಲ್ ರೆಸಿಪಿ ಮಾಡಬೇಕು ಅಂತಿದ್ರೆ ಕೊಲ್ಲಾಪುರಿ ಮಟನ್ ಸುಕ್ಕ ಮಾಡಿ. ಇದು ಖಂಡಿತ ನಿಮ್ಮ ಮನೆಮಂದಿಗೆಲ್ಲಾ ಇಷ್ಟ ಆಗುತ್ತೆ.
ಢಾಬಾಗಳ ಆಹಾರವನ್ನು ಇಷ್ಟಪಡುವವರಿಗೆ ಕೊಲ್ಲಾಪುರಿ ಖಾದ್ಯಗಳ ರುಚಿ ತಿಳಿದಿರುತ್ತದೆ. ಅದರಲ್ಲೂ ಇಲ್ಲಿನ ಮಾಂಸಾಹಾರಿ ಖಾದ್ಯಗಳು ಸಖತ್ ಫೇಮಸ್. ಕೊಲ್ಲಾಪುರಿ ಶೈಲಿಯ ಚಿಕನ್, ಮಟನ್ ಖಾದ್ಯಗಳ ರುಚಿ ನಿಜಕ್ಕೂ ತುಂಬಾನೇ ಡಿಫ್ರೆಂಟ್. ಕೊಲ್ಲಾಪುರಿ ಮಟನ್ ಖಾದ್ಯಗಳು ನಿಮ್ಮ ಬಾಯಲ್ಲಿ ನೀರೂರಿಸದೇ ಇರುವುದಿಲ್ಲ.
ಸಾಮಾನ್ಯವಾಗಿ ಇಯರ್ ಎಂಡ್ ಸಮಯದಲ್ಲಿ ವಿಶೇಷ ಖಾದ್ಯಗಳನ್ನು ಮಾಡಿ ತಿನ್ನುವ ಅಭ್ಯಾಸ ಹಲವರಿಗಿದೆ. ನಾಳೆ (ಡಿಸೆಂಬರ್ 31) 2024ರ ಕೊನೆಯ ದಿನವಾಗಿದ್ದು, ನೀವು ಸ್ಪೆಷಲ್ ರೆಸಿಪಿ ಮಾಡ್ಬೇಕು ಅಂತಿದ್ರೆ ಕೊಲ್ಲಾಪುರಿ ಮಟನ್ ಸುಕ್ಕ ಮಾಡಬಹುದು. ಈ ರೆಸಿಪಿ ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ. ಇದನ್ನು ಮಾಡೋದು ಹೇಗೆ ಏನೆಲ್ಲಾ ಬೇಕು ಎಂಬುದನ್ನು ನೋಡೋಣ.
ಕೊಲ್ಲಾಪುರಿ ಮಟನ್ ಸುಕ್ಕ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಕುರಿ ಮಾಂಸ – ಅರ್ಧ ಕೆಜಿ, ಈರುಳ್ಳಿ – 4, ಬೆಳ್ಳುಳ್ಳಿ – ಐದಾರು ಎಸಳು, ತೆಂಗಿನಕಾಯಿ – ಕಾಲು ಕಪ್, ಎಣ್ಣೆ – 4 ಚಮಚ, ಶುಂಠಿ –ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಕೊಲ್ಲಾಪುರಿ ಈರುಳ್ಳಿ–ಬೆಳ್ಳುಳ್ಳಿ ಮಸಾಲೆ – 2 ಟೀ ಚಮಚ, ಕಾಶ್ಮೀರಿ ಚಿಲ್ಲಿಪುಡಿ – 1 ಚಮಚ.
ಕೊಲ್ಲಾಪುರಿ ಮಟನ್ ಸುಕ್ಕ ಮಾಡುವ ವಿಧಾನ
ಮಟನ್ ಸುಕ್ಕ ಮಾಡಲು ಮೊದಲು ಮಟನ್ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ. ಅದನ್ನು ಪಾತ್ರೆಯೊಂದರಲ್ಲಿ ಹಾಕಿ ಅದಕ್ಕೆ ಅರಿಸಿನ, ಉಪ್ಪು, ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ. ಇದನ್ನು ಅರ್ಧ ಗಂಟೆ ಮ್ಯಾರಿನೇಟ್ ಮಾಡಿ. ಈ ಹೊತ್ತಿಗೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಈ ಒಂದು ಪಾತ್ರೆಯಲ್ಲಿ 2 ಚಮಚ ತೆಂಗಿನತುರಿ, ಒಂದು ಚಮಚ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ. ಈ ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಸೇರಿಸಿ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಅದಕ್ಕೆ ಮ್ಯಾರಿನೇಟ್ ಮಾಡಿಕೊಂಡ ಮಟನ್ ಹಾಗೂ ಮೇಲೆ ಹೇಳಿದ ಮಿಶ್ರಣ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಇದು ಚೆನ್ನಾಗಿ ಫ್ರೈ ಆದ ಬಳಿಕ ನೀರು ಸೇರಿಸಿ. ಮಟನ್ ಬೇಯಿಸುವಾಗ ಬಿಸಿ ನೀರು ಹಾಕುವುದು ಉತ್ತಮ. ಯಾಕೆಂದರೆ ಬಿಸಿನೀರು ಮಟನ್‌ನ ರುಚಿಯನ್ನು ಹೆಚ್ಚಿಸುತ್ತದೆ.
ಈಗ ಸ್ವಲ್ಪ ಈರುಳ್ಳಿ, ತೆಂಗಿನಕಾಯಿ ತುರಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಅನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ಇದು ತಣ್ಣಗಾದಾಗ ಮೇಲೆ ಇದನ್ನು ತರಿತರಿಯಾಗಿ ರುಬ್ಬಿಟ್ಟುಕೊಳ್ಳಿ. ಮಟನ್ ಫ್ರೈ ಮಾಡಲು ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಉಳಿದ ಹೆಚ್ಚಿಟ್ಟುಕೊಂಡ ಈರುಳ್ಳಿ ಸೇರಿಸಿ ಫ್ರೈ ಮಾಡಿಕೊಳ್ಳಿ. ಅದಕ್ಕೆ ಈರುಳ್ಳಿ–ಬೆಳ್ಳುಳ್ಳಿ ಮಸಾಲೆ, ಕೊತ್ತಂಬರಿ ಪುಡಿ, ಗರಂಮಸಾಲೆ ಸೇರಿಸಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿ. ನಂತರ ಮೊದಲೇ ಬೇಯಿಸಿಕೊಂಡ ಮಟನ್ ಮಾಂಸಗಳನ್ನು ಸೇರಿಸಿ ಫ್ರೈ ಮಾಡಿ. ಎಣ್ಣೆ ಚೆನ್ನಾಗಿ ಬೇರ್ಪಡುವವರೆಗೂ ಕೈಯಾಡಿಸುತ್ತಿರಿ. ಮಟನ್ ಬೇಯುತ್ತಿರುವಾಗ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಅಗತ್ಯ ಇರುವಷ್ಟು ನೀರು ಕೂಡ ಹಾಕಿ. ನೀರು ಹೆಚ್ಚಾಗಬಾರದು. ಇದನ್ನು ಪುನಃ 8 ರಿಂದ 10 ನಿಮಿಷಗಳ ಕಾಲ ಕುದಿಸಿದರೆ ಕೊಲ್ಲಾಪುರಿ ಶೈಲಿಯ ಮಟನ್ ಸುಕ್ಕಾ ತಿನ್ನಲು ಸಿದ್ಧ.
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ವಿಭಾಗ