Parenting: ಅನಾರೋಗ್ಯಕರ ಆಹಾರ ಸೇವನೆಯಿಂದ ಅತಿಯಾದ ಸ್ಕ್ರೀನ್ ಟೈಮ್‌ವರೆಗೆ; 2023ರಲ್ಲಿ ಪೋಷಕರನ್ನು ಚಿಂತೆಗೆ ದೂಡಿದ ಮಕ್ಕಳ ದುರಾಭ್ಯಾಸಗಳಿವು
ಮಕ್ಕಳ ಅಸಮರ್ಪಕ ಜೀವನಶೈಲಿಯು ಅವರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆಗಳವರೆಗೆ ಅಪಾಯವನ್ನು ಎದುರಿಸುವಂತೆ ಮಾಡಿದೆ. ಆರೋಗ್ಯಕ್ಕೆ ಹಾನಿಯನ್ನುಂಟುಮಾಡುವ ಹಾನಿಕಾರಕ ಅಭ್ಯಾಸಗಳು ಮಕ್ಕಳಲ್ಲಿ ದಿನೇ ದಿನೇ ಹೆಚ್ಚುತ್ತಿದೆ.
ಇತ್ತೀಚಿಗೆ ಮಕ್ಕಳು ಹೊರಗಡೆ ಆಟವಾಡುವುದೇ ಕಡಿಮೆಯಾಗಿದೆ. ಇದಕ್ಕೆ ಕಾರಣ ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಟಿವಿ, ಮೊಬೈಲ್ ನೋಡುವಂತಹ ಹೊಸ ರೂಢಿ ಅವರಲ್ಲಿ ಬೆಳೆಯುತ್ತಿದೆ. ಈ ರೀತಿಯ ಜಡ ಜೀವನಶೈಲಿ ಅವರಲ್ಲಿ ಅನೇಕ ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಿದೆ. ಅತಿಯಾದ ಟಿವಿ, ಮೊಬೈಲ್ ಸಮಯ ದೀರ್ಘಕಾಲದ ಕಾಯಿಲೆಗಳಿಗೆ ದಾರಿಮಾಡಿಕೊಡುತ್ತಿದೆ. ಮುಂಚೆ ವಯಸ್ಕರರಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಧುಮೇಹ, ಹೃದಯದ ಸಮಸ್ಯೆಗಳಂತಹ ಕಾಯಿಲೆಗಳು ಈಗ ಹದಿಹರೆಯದ ಮಕ್ಕಳಲ್ಲೂ ಕಾಣಸಿಗುತ್ತಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಹೊರಾಂಗಣ ಕ್ರೀಡೆಯಲ್ಲಿ ಕಡಿಮೆಯಾದ ಆಸಕ್ತಿ, ಸರಿಯಾಗಿ ನಿದ್ದೆ ಮಾಡದಿರುವುದು, ಅತಿಯಾಗಿ ಟಿವಿ ಅಥವಾ ಮೊಬೈಲ್ ನೋಡುವುದು ಇವೆಲ್ಲವೂ ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮಾನಸಿಕ ಅಸ್ವಸ್ಥತೆಗಳಂತಹ ಅಪಾಯಗಳು ಹೆಚ್ಚುತ್ತಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ವಿವಿಧ ಅಧ್ಯಯನಗಳು ಹೇಳುವುದು ಇದನ್ನೇ. ಬಾಲ್ಯದಲ್ಲಿಯೇ ರೂಢಿಸಿಕೊಂಡಿರುವ ಆರೋಗ್ಯಕರ ಆಹಾರ ಪದ್ಧತಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ಬೆಳವಣಿಗೆ ಸಹಾಯ ಮಾಡುತ್ತದೆ. ಜೀವನದಲ್ಲಿ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿಯಮಿತವಾಗಿ ಬೆಳಗಿನ ಉಪಾಹಾರವನ್ನು ಸೇವಿಸದ ಮತ್ತು ಸಿಹಿ ಮತ್ತು ಉಪ್ಪಿನ ಅಂಶ ಹೆಚ್ಚಾಗಿರುವ ತಿಂಡಿಗಳನ್ನು ತಿನ್ನುವ ಮಕ್ಕಳಲ್ಲಿ ಜೀವನಶೈಲಿ ಸಂಬಂಧಿತ ರೋಗಗಳ ಅಪಾಯ ಗಮನಾರ್ಹವಾಗಿ ಹೆಚ್ಚಲು ಕಾರಣವಾಗಿದೆ. ಈ ವರ್ಷ ಪೋಷಕರನ್ನು ಅತಿಯಾಗಿ ಚಿಂತೆಗೀಡಾಗಿಸಿದ ವಿಷಯವು ಇದೇ ಆಗಿದೆ. ಮಕ್ಕಳ ಅತಿಯಾದ ಟಿವಿ, ಮೊಬೈಲ್ ನೋಡುವ ಸಮಯ ಸ್ಥೂಲಕಾಯದಂತಹ ಸಮಸ್ಯೆ ಉಲ್ಭಣಗೊಳ್ಳಲು ಕಾರಣವಾಗಿದೆ. ಜೊತೆಗೆ ಅವರ ಮಾನಸಿಕ ಆರೋಗ್ಯದ ಮೇಲೂ ಒತ್ತಡವನ್ನು ಹೆಚ್ಚಿಸಿದೆ.
ʼಟಿವಿ ಅಥವಾ ಮೊಬೈಲ್ ನೋಡುವ ಸಮಯ ಹೆಚ್ಚಾಗಿರುವುದು, ಜಡ ಜೀವನಶೈಲಿ, ನಿದ್ದೆ ಕೊರತೆ ಇವೆಲ್ಲವೂ ಹೇಗೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆʼ ಎಂಬ ಬಗ್ಗೆ ನೋಯ್ಡಾದ ಮದರ್‌ಹುಡ್ ಆಸ್ಪತ್ರೆಗಳ ಸಲಹೆಗಾರ ಶಿಶುವೈದ್ಯ ಮತ್ತು ನಿಯೋನಾಟಾಲಜಿಸ್ಟ್ ಡಾ.ನಿಶಾಂತ್ ಬನ್ಸಾಲ್ ಅವರು ಹಿಂದೂಸ್ಥಾನ ಟೈಮ್ಸ್‌ಗೆ ತಿಳಿಸಿದ್ದಾರೆ.
ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಾನಿಕಾರಕ ಜೀವನಶೈಲಿಗಳು
1. ಜಡ ಜೀವನಶೈಲಿ
ಹೆಚ್ಚಿನ ಸಮಯದವರೆಗೆ ಟಿವಿಯ ಮುಂದೆ ಕುಳಿತುಕೊಳ್ಳುವುದು ಚಟುವಟಿಕೆ ಇಲ್ಲದಿರುವುದನ್ನು ಸೂಚಿಸುತ್ತದೆ. ಸುದೀರ್ಘ ಗಂಟೆಗಳ ಕಾಲ ಕುಳಿತುಕೊಳ್ಳುವುದು ದೈಹಿಕ ಚಲನೆ ಕಡಿಮೆ ಮಾಡಿ, ದೇಹದಲ್ಲಿ ಕ್ಯಾಲೋರಿ ಹೆಚ್ಚಾಗಿ, ತೂಕ ಹೆಚ್ಚಾಗುವಂತೆ ಮಾಡುತ್ತದೆ.
2. ಅನಾರೋಗ್ಯಕರ ಆಹಾರ ಪದ್ಧತಿ
ಟಿವಿ ನೋಡಲು ಒಂದೇ ಕಡೆ ಬಹಳ ಹೊತ್ತು ಕುಳಿತುಕೊಳ್ಳುವುದರಿಂದ ಮಕ್ಕಳು ಸ್ನಾಕ್ಯಗಳಂತಹ ಅನಾರೋಗ್ಯಕರ ಆಹಾರ ತಿನ್ನವು ಸಾಧ್ಯತೆ ಹೆಚ್ಚು. ಟಿವಿಯಲ್ಲಿ ಬರುವ ಚಿಪ್ಸ್, ಬಿಸ್ಕತ್ತುಗಳಂತಹ ಜಾಹಿರಾತುಗಳು ಅವರ ಆಹಾರದ ಮೇಲೆ ಪರಿಣಾಮ ಬೀರುತ್ತದೆ. ಅದು ಕಳಪೆ ಆಹಾರ ಪದ್ಧತಿ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ.
3. ನಿದ್ದೆಯ ಕೊರತೆ
ಮಲಗುವ ಮುನ್ನ ಟಿವಿ ನೋಡುವುದು ಮಕ್ಕಳ ನಿದ್ದೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಸಿವು ಮತ್ತು ಚಯಾಪಚಯವನ್ನು ನಿಯಂತ್ರಿಸುವ ಹಾರ್ಮೋನ್‌ಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ನಿದ್ದೆಯ ಕೊರತೆ ಅಥವಾ ಅಸಮರ್ಪಕ ನಿದ್ದೆಯಿಂದ ತೂಕ ಹೆಚ್ಚಾಗುವುದು ಮತ್ತು ಬೊಜ್ಜಿನ ಕಾಯಿಲೆಗಳು ಕಾಣಿಸುತ್ತವೆ.
4. ಕಡಿಮೆ ದೈಹಿಕ ಚಟುವಟಿಕೆ
ಮಕ್ಕಳು ಹೊರಾಗಾಂಣ ಕ್ರೀಡೆಗಳಲ್ಲಿ ಆಸಕ್ತಿ ಕಳೆದುಕೊಂಡಿರುವುದೇ ಕಡಿಮೆ ದೈಹಿಕ ಚಟುವಟಿಕಗೆ ಕಾರಣವಾಗಿದೆ. ಹೆಚ್ಚಿನ ಸಮಯ ಟಿವಿ ಅಥವಾ ಮೊಬೈಲ್ ಮುಂದೇ ಕುಳಿತುಕೊಂಡಿರುವುದು ಅನೇಕ ಕಾಯಿಲೆಗಳಿಗೆ ದಾರಿಯಾಗಿದೆ. ಅದರಲ್ಲಿ ಸ್ಥೂಲಕಾಯದ ಸಮಸ್ಯೆ ಪ್ರಮುಖವಾಗಿದೆ.
5 ಕಳಪೆ ಆಹಾರ ಸೇವನೆ
ಮಕ್ಕಳಲ್ಲಿ ಅತಿಯಾದ ಟಿವಿ, ಮೊಬೈಲ್ ಸಮಯವು ಅವರಲ್ಲಿ ಒತ್ತಡ ಆತಂಕ ಅಥವಾ ಖಿನ್ನತೆಗೆ ಕಾರಣವಾಗಬಹುದು. ಇದು ಅನಾರೋಗ್ಯಕರ ಆಹಾರ ಸೇವನೆ ಪ್ರಚೋದಿಸಬಹುದು. ಬಹಳ ಸಮಯದವರೆಗೆ ಆಹಾರ ಸೇವಿಸುವುದು, ಜಾಹಿರಾತಿನಲ್ಲಿ ಬರುವ ಆಹಾರಗಳನ್ನು ಸೇವಿಸುವುದು, ಇವೆಲ್ಲವೂ ಸ್ಥೂಲಕಾಯ ಸಮಸ್ಯೆಗೆ ಕಾರಣವಾಗುತ್ತದೆ.