Year in Review: 2024ರಲ್ಲಿ ಶೇಕಡ 30ಕ್ಕೂ ಹೆಚ್ಚು ರಿಟರ್ನ್ ತಂದುಕೊಟ್ಟ ಫ್ಲೆಕ್ಸಿಕ್ಯಾಪ್ ಮ್ಯೂಚುಯಲ್ ಫಂಡ್‌ಗಳಿವು- ವರ್ಷದ ಹಿನ್ನೋಟ
Year in Review: 2024ರಲ್ಲಿ ವಿವಿಧ ಫ್ಲೆಕ್ಸಿಕ್ಯಾಪ್ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವರಿಗೆ ಕೆಲವು ಫಂಡ್‌ಗಳು ಉತ್ತಮ ಲಾಭ ತಂದುಕೊಟ್ಟಿವೆ. ಮೋತಿಲಾಲ್ ಓಸ್ವಾಲ್ ಫ್ಲೆಕ್ಸಿ ಮ್ಯೂಚುಯಲ್ ಪಂಡ್, ಇನ್ವಸ್ಕೊ, ಜೆಎಂ, ಬ್ಯಾಂಕ್‌ಆಫ್ ಇಂಡಿಯಾ, ಎಚ್‌ಎಸ್‌ಬಿಸಿ, ಹೆಲಿಯೊಸ್ ಸೇರಿದಂತೆ ವಿವಿಧ ಫಂಡ್‌ಗಳು ಉತ್ತಮ ರಿಟರ್ನ್ ತಂದುಕೊಟ್ಟಿವೆ.
Year in Review: 2024ರಲ್ಲಿ ಅತ್ಯಧಿಕ ರಿಟರ್ನ್ ತಂದುಕೊಟ್ಟ ಫ್ಲೆಕ್ಸಿಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಯಾವುವು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಹಿಂದೂಸ್ತಾನ್ ಟೈಮ್ಸ್ ಕನ್ನಡದ ವರ್ಷದ ಹಿನ್ನೋಟದ ಮಾಲಿಕೆಯಲ್ಲಿ ಇಂದು ಈ ರೀತಿ ಉತ್ತಮ ರಿಟರ್ನ್ ತಂದುಕೊಟ್ಟ ಹತ್ತು ಮ್ಯೂಚುಯಲ್ ಫಂಡ್‌ಗಳ ಬಗ್ಗೆ ತಿಳಿಯೋಣ. ಮಾರುಕಟ್ಟೆಯಲ್ಲಿರುವ ಫ್ಲೆಕ್ಸಿ ಮ್ಯೂಚುಯಲ್ ಫಂಡ್‌ಗಳನ್ನು ವಿಶ್ಲೇಷಣೆ ಮಾಡಿದಾಗ 2024ರಲ್ಲಿ ಮೋತಿಲಾಲ್ ಒಸ್ವಾಲ್ ಪ್ಲೆಕ್ಸಿ ಕ್ಯಾಪ್ ಫಂಡ್ ಶೇಕಡ 47.40ರಷ್ಟು ರಿಟರ್ನ್ ತಂದುಕೊಟ್ಟಿದೆ. ಇನ್ವೆಸ್ಕೊ ಇಂಡಿಯಾದ ಫ್ಲೆಕ್ಸಿ ಕ್ಯಾಪ್ ಫಂಡ್ ಶೇಕಡ 37.85ರಷ್ಟು ರಿಟರ್ನ್ ತಂದುಕೊಟ್ಟಿದೆ.
ಏನಿದು ಫ್ಲೆಕ್ಸಿಕ್ಯಾಪ್ ಮ್ಯೂಚುಯಲ್ ಫಂಡ್?
ಫ್ಲೆಕ್ಸಿ ಅಂದರೆ ಫ್ಲೆಕ್ಸಿಬಲ್. ಇಲ್ಲಿ ಫಂಡ್ ಮ್ಯಾನೇಜರ್‌ಗೆ ಹೆಚ್ಚಿನ ಸ್ವಾತಂತ್ರ್ಯ ದೊರಕುತ್ತದೆ. ಷೇರು ಮಾರುಕಟ್ಟೆಯ ಎಲ್ಲಾ ಬಂಡವಾಳ ವಲಯದಲ್ಲಿಯೂ ಹೂಡಿಕೆ ಮಾಡುವ ಅವಕಾಶ ನೀಡುತ್ತದೆ. ಅಂದರೆ, ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್‌ಗಳಲ್ಲಿ ಹೂಡಿಕೆ ಮಾಡಲು ಯಾವುದೇ ಅಡೆತಡೆ ಇರುವುದಿಲ್ಲ. ಒಂದಿಷ್ಟು ಸಣ್ಣ ಷೇರುಗಳು, ಇನ್ನೊಂದಿಷ್ಟು ಮಧ್ಯಮ ಗಾತ್ರದ ಷೇರುಗಳು, ಮತ್ತು ಒಂದಿಷ್ಟು ಲಾರ್ಜ್ ಸ್ಕೇಲ್ ಷೇರುಗಳಲ್ಲಿ ಹೂಡಿಕೆ ಮಾಡುವ ಫ್ಲೆಕ್ಸಿಬಿಲಿಟಿ ಇರುತ್ತದೆ. ಮಾರುಕಟ್ಟೆಯ ಸ್ಥಿತಿಗೆ ತಕ್ಕಂತೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಷೇರುಗಳ ಮೇಲೆ ಹೂಡಿಕೆ ಮಾಡುವ ಅವಕಾಶ ದೊರಕುತ್ತದೆ.
ಫ್ಲೆಕ್ಸಿಕ್ಯಾಪ್ ಮ್ಯೂಚುಯಲ್ ಫಂಡ್‌ನ ಗುಣಲಕ್ಷಣಗಳು
- ಫ್ಲೆಕ್ಸಿ-ಕ್ಯಾಪ್ ಫಂಡ್‌ಗಳು ಯಾವುದೇ ಪ್ರಮಾಣದಲ್ಲಿ ಮಾರುಕಟ್ಟೆ ಕ್ಯಾಪ್‌ಗಳಾದ್ಯಂತ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಇತರೆ ಫಂಡ್‌ಗಳು ಇಷ್ಟು ಫ್ಲೆಕ್ಸಿಬಲ್ ಆಗಿರುವುದಿಲ್ಲ.
- ಫಂಡ್ ಮ್ಯಾನೇಜರ್‌ಗಳು ನಿರಂತರವಾಗಿ ಮಾರುಕಟ್ಟೆ ಪರಿಸ್ಥಿತಿಗಳನ್ನು ಮೌಲ್ಯಮಾಪನ ಮಾಡುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಆಸ್ತಿ ಹಂಚಿಕೆಯನ್ನು ಸರಿಹೊಂದಿಸುತ್ತಾರೆ.
- ಫ್ಲೆಕ್ಸಿ ಕ್ಯಾಪ್ ಫಂಡ್‌ಗಳನ್ನು ಕಂಪನಿಯ ಗಾತ್ರವನ್ನು ಲೆಕ್ಕಿಸದೆ "ಎಲ್ಲಿ ಮೌಲ್ಯ, ಎಲ್ಲಿ ಜಾಸ್ತಿ ಲಾಭವಿದೆಯೋ" ಅಲ್ಲಿಗೆ ಹೂಡಿಕೆಗಳನ್ನು ಷಫಲ್ ಮಾಡಬಹುದು.
- ಸಾಮಾನ್ಯವಾಗಿ ಪೋರ್ಟ್‌ಫೋಲಿಯೋದ ಶೇಕಡ 70ರಷ್ಟನ್ನು ಲಾರ್ಜ್ ಕ್ಯಾಪ್ ಷೇರುಗಳಿಗೆ ಹೂಡಿಕೆ ಮಾಡಲಾಗುತ್ತದೆ. ಶೇಕಡ 25-30 ಅನ್ನು ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
- ಫ್ಲೆಕ್ಸಿ ಕ್ಯಾಪ್ ಫಂಡ್‌ಗಳು ಹೆಚ್ಚು ಅಪಾಯ ಹೊಂದಿರುವ ಮ್ಯೂಚುಯಲ್ ಫಂಡ್‌ಗಳಾಗಿವೆ. ಮಾರುಕಟ್ಟೆಯ ಚಂಚಲ ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಿರುತ್ತದೆ.
2024ರಲ್ಲಿ ಶೇಕಡ 30ಕ್ಕಿಂತ ಹೆಚ್ಚು ರಿಟರ್ನ್ ತಂದುಕೊಟ್ಟ ಫ್ಲೆಕ್ಸಿಕ್ಯಾಪ್ ಮ್ಯೂಚುಯಲ್ ಫಂಡ್‌ಗಳು
ರಾಯಿಟರ್ಸ್ ವರದಿ ಪ್ರಕಾರ 2024ರಲ್ಲಿ ಹೂಡಿಕೆದಾರರಿಗೆ ಹೆಚ್ಚು (ಶೇಕಡ 30ಕ್ಕಿಂತ ಹೆಚ್ಚು) ರಿಟರ್ನ್ ತಂದುಕೊಟ್ಟ 10 ಮ್ಯೂಚುಯಲ್ ಫಂಡ್‌ಗಳ ವಿವರ ಇಲ್ಲಿದೆ.
1 | ಮೋತಿಲಾಲ್ ಓಸ್ವಾಲ್ ಫ್ಲೆಕ್ಸಿ ಕ್ಯಾಪ್ ಫಂಡ್ | ಶೇಕಡ 47.40 |
2 | ಇನ್ವೆಸ್ಕೊ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್ | ಶೇಕಡ 37.85 |
3 | ಜೆಎಂ ಫ್ಲೆಕ್ಸಿಕ್ಯಾಪ್ ಫಂಡ್ | ಶೇಕಡ 36.79 |
4 | ಬ್ಯಾಂಕ್ ಆಫ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್ | ಶೇಕಡ 35.43 |
5 | ಎಚ್‌ಎಸ್‌ಬಿಸಿ ಫ್ಲೆಕ್ಸಿ ಕ್ಯಾಪ್ ಫಂಡ್ | ಶೇಕಡ 33.00 |
6 | ಹೆಲಿಯೊಸ್ ಫ್ಲೆಕ್ಸಿ ಕ್ಯಾಪ್ ಫಂಡ್ | ಶೇಕಡ 32.26 |
7 | 360 ಒನ್‌ಫ್ಲೆಕ್ಸಿ ಫಂಡ್ | ಶೇಕಡ 31.61 |
8 | ಐಟಿಐ ಫ್ಲೆಕ್ಸಿ ಕ್ಯಾಪ್ ಫಂಡ್ | ಶೇಕಡ 31.62 |
9 | ಎಡೆಲ್ವೀಸ್ ಫ್ಲೆಕ್ಸಿ ಕ್ಯಾಪ್ ಫಂಡ್ | ಶೇಕಡ 30.60 |
10 | ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಕ್ಯಾಪ್ ಫಂಡ್ | ಶೇಕಡ 30.58 |
ಡಿಸ್‌ಕ್ಲೈಮರ್/ಹಕ್ಕುನಿರಾಕರಣೆ: ಇಲ್ಲಿ ನೀಡಲಾದ ವಿವರಗಳು ಮಾಹಿತಿ ನೀಡುವ ಉದ್ದೇಶಕ್ಕಷ್ಟೇ. ಷೇರು ಮಾರುಕಟ್ಟೆ ಹೂಡಿಕೆಯು ಹಣಕಾಸು ಅಪಾಯಗಳನ್ನು ಹೊಂದಿರುತ್ತದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡವು ಯಾವುದೇ ಷೇರುಗಳಲ್ಲಿ, ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಂತೆ ಓದುಗರಿಗೆ ಶಿಫಾರಸು ಮಾಡುವುದಿಲ್ಲ. ಷೇರು ಮಾರುಕಟ್ಟೆ ಮತ್ತು ಹೂಡಿಕೆ ಕುರಿತು ತಜ್ಞರಿಂದ ಮಾಹಿತಿ ಪಡೆದುಕೊಂಡು ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಿ.