Yoga Asanas: ದೈಹಿಕ ಯೋಗಕ್ಷೇಮಕ್ಕಿರಲಿ ವ್ಯಾಯಾಮ; ತೂಕ ಇಳಿಕೆಯಿಂದ ಜೀರ್ಣಶಕ್ತಿ ಹೆಚ್ಚಿಸುವವರೆಗೆ ಈ ಯೋಗಾಸನಗಳ ನಿರಂತರ ಅಭ್ಯಾಸ ಅಗತ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  Yoga Asanas: ದೈಹಿಕ ಯೋಗಕ್ಷೇಮಕ್ಕಿರಲಿ ವ್ಯಾಯಾಮ; ತೂಕ ಇಳಿಕೆಯಿಂದ ಜೀರ್ಣಶಕ್ತಿ ಹೆಚ್ಚಿಸುವವರೆಗೆ ಈ ಯೋಗಾಸನಗಳ ನಿರಂತರ ಅಭ್ಯಾಸ ಅಗತ್ಯ

Yoga Asanas: ದೈಹಿಕ ಯೋಗಕ್ಷೇಮಕ್ಕಿರಲಿ ವ್ಯಾಯಾಮ; ತೂಕ ಇಳಿಕೆಯಿಂದ ಜೀರ್ಣಶಕ್ತಿ ಹೆಚ್ಚಿಸುವವರೆಗೆ ಈ ಯೋಗಾಸನಗಳ ನಿರಂತರ ಅಭ್ಯಾಸ ಅಗತ್ಯ

ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಣೆಯಾಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ನಮ್ಮ ಒಟ್ಟಾರೆ ದೈಹಿಕ ಯೋಗಕ್ಷೇಮ ಸುಧಾರಿಸಲು ಪ್ರತಿನಿತ್ಯ 5 ಯೋಗಾಸನಗಳನ್ನು ಅಭ್ಯಾಸ ಮಾಡಬೇಕು.

ದೈಹಿಕ ಯೋಗಕ್ಷೇಮಕ್ಕೆ ಯೋಗ ಅವಶ್ಯ
ದೈಹಿಕ ಯೋಗಕ್ಷೇಮಕ್ಕೆ ಯೋಗ ಅವಶ್ಯ

ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಒಟ್ಟಾರೆ ನಮ್ಮ ಆರೋಗ್ಯ ಸುಧಾರಿಸಲು ನೆರವಾಗುತ್ತದೆ. ಅದರಲ್ಲೂ ಜಡಜೀವನಶೈಲಿಯನ್ನು ಅನುಸರಿಸುತ್ತಿರುವವರು ಯೋಗಾಭ್ಯಾಸ ಮಾಡುವುದು ಬಹಳ ಅವಶ್ಯ. ಇದು ಆರೋಗ್ಯವನ್ನು ಸುಧಾರಿಸುವ ಜೊತೆಗೆ, ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಒಟ್ಟಾರೆ ಯೋಗಕ್ಷೇಮಕ್ಕೆ ವ್ಯಾಯಾಮ ಉತ್ತಮವಾಗಿದೆ. ತಜ್ಞರು ಕೂಡ ವ್ಯಾಯಾಮಕ್ಕೆ ಒತ್ತು ನೀಡಲು ಸಲಹೆ ನೀಡುತ್ತಾರೆ.

ʼಯೋಗ ಎನ್ನುವುದು ಕೇವಲ ಒಂದು ಗಂಟೆಯ ದೇಹದಂಡನೆಯಲ್ಲಿ, ಇದು ಜೀವನಶೈಲಿಯ ಭಾಗ. ನಾವೆಲ್ಲರೂ ಇಂದು ಬ್ಯುಸಿ ಹಾಗೂ ಒತ್ತಡದ ಜೀವನಶೈಲಿಯ ಕಾರಣದಿಂದ ನಮ್ಮ ಯೋಗಕ್ಷೇಮ ಹಾಗೂ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಇಲ್ಲದಂತಾಗಿದೆ. ಆದರೆ ದಿನದಲ್ಲಿ 30 ನಿಮಿಷಗಳ ಕಾಲವಾದರೂ ದೈಹಿಕ ಚಟುವಟಿಕೆಗೆ ಗಮನ ನೀಡುವುದು ಬಹಳ ಅವಶ್ಯವಾಗಿದೆʼ ಎಂದು ಪ್ರಸಿದ್ಧ ಯೋಗ ತಜ್ಞೆ ಅನುಷ್ಕಾ ಪರ್ವಾನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಂತೆಯೇ ಇಡೀ ದೇಹದ ಸ್ನಾಯುಗಳನ್ನು ಸಕ್ರಿಯಗೊಳಿಸಲು, ದೇಹದಲ್ಲಿ ಚೈತನ್ಯ ಹಾಗೂ ಉಲ್ಲಾಸವನ್ನು ಅನುಭವಿಸಲು ಸಹಾಯ ಮಾಡುವ ಐದು ಆಸನಗಳು ಹಾಗೂ ಅವುಗಳನ್ನು ಮಾಡುವ ವಿಧಾನಗಳ ಬಗ್ಗೆ ಅವರು ಇಲ್ಲಿ ತಿಳಿಸಿದ್ದಾರೆ.

ಚಕ್ರವಾಕಾಸನ

ಬೆಕ್ಕು ಹಸುವಿನ ಭಂಗಿಯನ್ನು ಚಕ್ರವಾಕಾಸನ ಎಂದೂ ಕರೆಯುತ್ತಾರೆ. ಇದು ಬೆನ್ನುಮೂಳೆಯನ್ನು ಮುಂದಕ್ಕೆ ಬಾಗಿಸಿ ಮಾಡುವ ಯೋಗಾಸನ ವಿಧಾನವಾಗಿದೆ. ಇದು ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಬೆನ್ನು ಹಾಗೂ ಕತ್ತಿನ ಸ್ನಾಯುಗಳನ್ನು ವಿಸ್ತರಿಸುತ್ತದೆ. ಗರ್ಭಿಣಿಯರು ಹಾಗೂ ಮೊಣಕಾಲಿನ ಗಾಯವನ್ನು ಹೊಂದಿದ್ದರೆ ಈ ಭಂಗಿ ತಪ್ಪಿಸಬೇಕು.

ಮುಖ ಶ್ವಾನಾಸನ

ಅಧೋಮುಖ ಸ್ವನಾಸರ ಎಂದೂ ಇದನ್ನು ಕರೆಯಲಾಗುತ್ತದೆ. ಶ್ವಾನವು ಎರಡೂ ಕಾಲನ್ನು ಮುಂದಕ್ಕೆ ಚಾಚುವಂತೆ ದೇಹವನ್ನು ಮುಂದೆ ಚಾಚಬೇಕು. ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆ ಹೊಂದಿರುವವರು ಈ ಆಸನದಿಂದ ಪರಿಹಾರ ಕಂಡುಕೊಳ್ಳಬಹುದು. ಇದರೊಂದಿಗೆ ಪ್ರತಿದಿನ ಈ ಆಸನವನ್ನು ಅಭ್ಯಾಸ ಮಾಡುವುದರಿಂದ ತಲೆನೋವು, ನಿದ್ರಾಹೀನತೆ ಮತ್ತು ಆಯಾಸವು ಸುಧಾರಿಸುತ್ತದೆ. ಇದರಿಂದ ಮನಸ್ಸು ಶಾಂತಗೊಳ್ಳುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಇದು ಉತ್ತಮ ಎಂದು ಅಕ್ಷಯ ಯೋಗದ ಸಂಸ್ಥಾಪಕ ಹಿಮಾಲಿಯನ್‌ ಸಿದ್ಧಾ ಅಕ್ಷರ್‌ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆದರೆ ಈ ಯೋಗಾಸನವನ್ನು ಆರಂಭಿಸುವ ಮೊದಲು ಅರ್ಹ ತರಬೇತುದಾರರು ಅಥವಾ ವೈದ್ಯರೊಂದಿಗೆ ಸಲಹೆ ಪಡೆಯುವುದು ಉತ್ತಮ. ʼಕಾರ್ಪಕ್‌ ಟನಲ್‌ ಸಿಂಡ್ರೋಮ್, ಅತಿಸಾರ ಸಮಸ್ಯೆ ಇರುವವರು ಈ ಆಸನವನ್ನು ಮಾಡದೇ ಇರುವುದು ಉತ್ತಮ. ಗರ್ಭಾವಸ್ಥೆಯಲ್ಲಿರುವ ಹೆಣ್ಣುಮಕ್ಕಳಿಗೂ ಇದು ಒಳಿತಲ್ಲʼ ಎಂದು ಅವರು ಹೇಳುತ್ತಾರೆ.

ಭುಜಂಗಾಸನ

ಬೆನ್ನನ್ನು ಹಿಮ್ಮುಖವಾಗಿ ಬಾಗಿಸುವ ಆಸನವು ಭುಜಂಗಾಸನವಾಗಿದೆ. ಇದು ಸೂರ್ಯ ನಮಸ್ಕಾರ ಅನುಕ್ರಮದ ಒಂದು ಭಾಗವಾಗಿದೆ. ಸಂಸ್ಕೃತದಲ್ಲಿ, ಭುಜಂಗಾಸನ ಎಂಬ ಪದವು ಎರಡು ಪದಗಳ ಸಂಯೋಜನೆಯಿಂದ ಬಂದಿದೆ- 'ಭುಜಂಗ' ಇದು 'ನಾಗರ' ಮತ್ತು 'ಆಸನ' ಎಂದರೆ 'ಭಂಗಿ' ಎಂದು ಅನುವಾದಿಸುತ್ತದೆ. ಇದು ನಾಗರ ಹಾವು ಹೆಡೆ ಎತ್ತಿದಂತಹ ಭಂಗಿಯನ್ನು ಹೋಲುವ ಆಸನವಾಗಿದೆ.

ಹೊಟ್ಟೆ ಇಳಿಸಲು ಇದು ಉತ್ತಮ ಆಸನವಾಗಿದೆ. ಈ ಆಸನವು ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ಬೆನ್ನು ನೋವು, ಕಾರ್ಪಲ್‌ ಟನಲ್‌ ಸಿಂಡ್ರೋಮ್‌, ತಲೆನೋವು ಅಥವಾ ಗರ್ಭಧಾರಣೆಯ ಸಂದರ್ಭದಲ್ಲಿ ಈ ಭಂಗಿಯನ್ನು ಮಾಡದೇ ಇರುವುದು ಒಳಿತು ಎಂದು ಅಕ್ಷರ ಹೇಳುತ್ತಾರೆ.

ಮಾಲಾಸಾನ

ಸೊಂಟದಿಂದ ಮೇಲ್ಭಾಗವನ್ನು ಮೇಲೆತ್ತಿದಂತೆ ಕಾಣುವ ಈ ಆಸನದಲ್ಲಿ ಸೊಂಟದಿಂದ ಪಾದದವರೆಗೆ ನೆಲದ ಮೇಲಿರುತ್ತದೆ. ಬೆನ್ನುಮೂಳೆಯನ್ನು ಎತ್ತಿ ಹಿಡಿದಿರುವಂತಹ ಭಂಗಿ ಇದಾಗಿದೆ. ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಕಿಬ್ಬೊಟ್ಟೆಯ ಆರೋಗ್ಯ ಸುಧಾರಿಸುತ್ತದೆ, ಜೀರ್ಣಕ್ರಿಯೆಗೂ ಇದು ಸಹಾಯ ಮಾಡುತ್ತದೆ. ಚಯಾಪಚಯ ಶಕ್ತಿಯನ್ನು ಬಲಪಡಿಸುವ ಮೂಲಕ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

Whats_app_banner