ಕನ್ನಡ ಸುದ್ದಿ  /  Lifestyle  /  Yoga For Better Health Check It Here

Yoga Benefits for Better Health: ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗ; ಯೋಗ ರೂಢಿಸಿಕೊಂಡರೆ ಎಷ್ಟೆಲ್ಲ ಅನುಕೂಲ...

ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿಡಲು, ನಿಯಮಿತ ಯೋಗಾಸನ ನಮ್ಮ ನಿತ್ಯದ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯ. ಯೋಗಾಸನ ದೇಹವನ್ನು ಸದೃಢವಾಗಿಸುವುದರ ಜತೆಗೆ ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.

ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗ; ಯೋಗ ರೂಢಿಸಿಕೊಂಡರೆ ಎಷ್ಟೆಲ್ಲ ಅನುಕೂಲ...
ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗ; ಯೋಗ ರೂಢಿಸಿಕೊಂಡರೆ ಎಷ್ಟೆಲ್ಲ ಅನುಕೂಲ...

ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿಡಲು, ನಿಯಮಿತ ಯೋಗಾಸನ ನಮ್ಮ ನಿತ್ಯದ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯ. ಯೋಗಾಸನ ದೇಹವನ್ನು ಸದೃಢವಾಗಿಸುವುದರ ಜತೆಗೆ ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಯೋಗದ ಅಭ್ಯಾಸವು ಮುಖ್ಯವಾಗಿ ದೇಹ, ಉಸಿರು ಮತ್ತು ಮನಸ್ಸನ್ನು ಒಂದುಗೂಡಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಯೋಗಾಸನಗ ಅಭ್ಯಾಸ ಮಾಡುವುದರಿಂದ ಆರೋಗ್ಯ ಸುಧಾರಣೆ, ಮಾನಸಿಕ ಆರೋಗ್ಯವೂ ಸುಧಾರಿಸಲಿದೆ. ಹಾಗಾದರೆ, ಯೋಗದಿಂದಾಗುವ ಅನುಕೂಲಗಳೇನು? ನಿತ್ಯ ಯೋಗ ರೂಢಿಸಿಕೊಂಡರೆ ಏನೆಲ್ಲ ಆಗುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ..

ನಿಯಮಿತ ಯೋಗದ ಪ್ರಯೋಜನಗಳೇನು?

ಯೋಗವು ದೇಹದ ಒಟ್ಟಾರೆ ಫಿಟ್‌ನೆಸ್ ಸುಧಾರಿಸುವ ಕೆಲಸ ಮಾಡುತ್ತದೆ. ಅನೇಕ ನೋವು, ಕಾಯಿಲೆಗಳಿಗೂ ಇದು ರಾಮಬಾಣದಂತೆ ಪ್ರಯೋಜನಕಾರಿಯಾಗಬಲ್ಲದು .

ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ದೇಹಕ್ಕೆ ವಿಶ್ರಾಂತಿ ನೀಡುತ್ತದೆ

ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಒತ್ತಡದ ಸಮಸ್ಯೆ ಕಡಿಮೆಮಾಡುತ್ತದೆ.

ದೇಹದ ಸಮನ್ವಯತೆ ಸುಧಾರಿಸುತ್ತದೆ.

ಏಕಾಗ್ರತೆ ಸುಧಾರಣೆಯಾಗಲಿದೆ.

ಉತ್ತಮ ನಿದ್ರೆಗಾಗಿಯೂ ಯೋಗ ಸಹಕಾರಿ

ಜೀರ್ಣಕ್ರಿಯೆ ಮತ್ತು ಮಧುಮೇಹದ ಸಮಸ್ಯೆಗೆ ಯೋಗ ಪರಿಹಾರ

ಈ ಯೋಗಾಸನಗಳನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ

<p>ಬೆಳಗಿನ ಯೋಗ ಅಭ್ಯಾಸ ಮತ್ತಷ್ಟು ಪರಿಣಾಮಕಾರಿ</p>
ಬೆಳಗಿನ ಯೋಗ ಅಭ್ಯಾಸ ಮತ್ತಷ್ಟು ಪರಿಣಾಮಕಾರಿ

ಸೇತುಬಂಧಾಸನ ಮತ್ತು ಭುಜಂಗಾಸನ ಯೋಗದ ಅಭ್ಯಾಸವು ದೇಹದಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸುವುದರ ಜೊತೆಗೆ ಬೆನ್ನುನೋವನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಅದೇ ಸಮಯದಲ್ಲಿ, ಸೂರ್ಯ ನಮಸ್ಕಾರ, ವೃಕ್ಷಾಸನದಂತಹ ವ್ಯಾಯಾಮಗಳು ದೈಹಿಕ ಸಮನ್ವಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಪ್ರಾಣಾಯಾಮದ ಅಭ್ಯಾಸವು ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಮತ್ತು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತಪ್ಪಾಗಿ ಮಾಡಿದರೆ ಸ್ನಾಯು ಸೆಳೆತ...

ಯೋಗವು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಯೋಗ ಮಾಡುವಾಗ ಅದನ್ನು ತಪ್ಪಾದ ಭಂಗಿಯಲ್ಲಿ ಅಭ್ಯಾಸ ಮಾಡಿದರೆ ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಯೋಗ ಮಾಡುವ ಮುನ್ನ ಸರಿಯಾದ ತಿಳಿವಳಿಕೆ ತುಂಬ ಮುಖ್ಯ. ಮೊದಲಿಗೆ ನಿಧಾನವಾಗಿ ಪ್ರಾರಂಭಿಸಿ. ಕಾಲಾನಂತರದಲ್ಲಿ ಆಸನವನ್ನು ಹೆಚ್ಚಿಸಿ. ಇದೆಲ್ಲದಕ್ಕಿಂತ ಮುಖ್ಯವಾಗಿ ಸಂಬಂಧಿಸಿದ ತಜ್ಞರ ಸಹಾಯವನ್ನು ಪಡೆಯುವುದು ಬಹುಮುಖ್ಯ.