Yoga Poses for constipation: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ; ಈ ಯೋಗಾಸನಗಳನ್ನು ಮಾಡಿ, ಪ್ರಯೋಜನ ಪಡೆಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Yoga Poses For Constipation: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ; ಈ ಯೋಗಾಸನಗಳನ್ನು ಮಾಡಿ, ಪ್ರಯೋಜನ ಪಡೆಯಿರಿ

Yoga Poses for constipation: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ; ಈ ಯೋಗಾಸನಗಳನ್ನು ಮಾಡಿ, ಪ್ರಯೋಜನ ಪಡೆಯಿರಿ

Yoga Poses for constipation: ಭಾರತದ ಯೋಗಾಸನವು ಇಂದು ವಿಶ್ವದಾದ್ಯಂತ ಪ್ರಚಲಿತದಲ್ಲಿದೆ. ಪ್ರಪಂಚದ ಬಹುತೇಕ ಮಂದಿ ಯೋಗಾಸನದ ಮೊರೆ ಹೋಗುತ್ತಿದ್ದಾರೆ. ಯೋಗಾಭ್ಯಾಸದಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮಲಬದ್ಧತೆ ಸಮಸ್ಯೆಗೂ ಯೋಗಾಸನದಿಂದ ಪರಿಹಾರವಿದೆ. ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಯೋಗಾಸನಗಳನ್ನು ಅಭ್ಯಸಿಸಿ, ಸಮಸ್ಯೆಯನ್ನು ದೂರಮಾಡಿ.

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ; ಈ ಯೋಗಾಸನಗಳನ್ನು ಮಾಡಿ, ಪ್ರಯೋಜನ ಪಡೆಯಿರಿ
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ; ಈ ಯೋಗಾಸನಗಳನ್ನು ಮಾಡಿ, ಪ್ರಯೋಜನ ಪಡೆಯಿರಿ

ಯೋಗಾಭ್ಯಾಸದಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ವಿವಿಧ ರೀತಿಯ ಆಸನಗಳು ಕೆಲವು ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಚಳಿಗಾಲದಲ್ಲಿ ಕೆಲವರಿಗೆ ಆಲಸ್ಯದ ಸಮಸ್ಯೆ ಹೆಚ್ಚಿರುತ್ತದೆ. ಇನ್ನೂ ಕೆಲವರಿಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದಕ್ಕೆ ಯೋಗಾಸನದಲ್ಲಿ ಕೆಲವು ಪರಿಹಾರಗಳಿವೆ. ಈ ಯೋಗಾಸನಗಳನ್ನು ಮಾಡುವುದರಿಂದ ಕರುಳಿನ ಚಲನೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ಕೂಡ ಸಹಕಾರಿಯಾಗಿದೆ. ಅಂತಹ ಯೋಗಾಸನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮಲಬದ್ಧತೆ ಸಮಸ್ಯೆ ನಿವಾರಣೆಗೆ ಈ ಯೋಗಾಸನಗಳು ಪರಿಣಾಮಕಾರಿ

ಪವನಮುಕ್ತಾಸನ: ಪವನಮುಕ್ತಾಸನ ಮಾಡುವುದರಿಂದ ಕರುಳಿನ ಮೇಲೆ ಒತ್ತಡ ಬೀಳುತ್ತದೆ. ಚಲನೆ ಹೆಚ್ಚಾಗುತ್ತದೆ. ಕಿಬ್ಬೊಟ್ಟೆಯ ಅಂಗಗಳ ಮೇಲೆ ಒತ್ತಡ ಉಂಟಾಗುವುದರಿಂದ ಈ ಆಸನವು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಪವನಮುಕ್ತಾಸನ ಮಾಡಲು, ಮೊದಲಿಗೆ ನೆಲದ ಮೇಲೆ ಅಂಗಾತವಾಗಿ ನೇರವಾಗಿ ಮಲಗಬೇಕು. ಆನಂತರ ಯಾವುದಾದರೂ ಒಂದು ಕಾಲನ್ನು ಉದಾಹರಣೆಗೆ, ಬಲಗಾಲನ್ನು ನೆಲದಿಂದ ಮೇಲಕ್ಕೆ ಎತ್ತಿ ನಿಧಾನವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಮಂಡಿಯ ಬಳಿ ಬಗ್ಗಿಸಬೇಕು. ಮೊಣಕಾಲುಗಳನ್ನು ಮಡಚಿ ಎದೆಗೆ ತರಬೇಕು. ಎರಡೂ ಕಾಲುಗಳನ್ನು ಒಟ್ಟಿಗೆ ಈ ರೀತಿ ತರಬಹುದು.

ಬಾಲಾಸನ: ಬಾಲಾಸನ ಮಾಡುವುದರಿಂದ ನರಮಂಡಲ ಮತ್ತು ಜೀರ್ಣಾಂಗ ವ್ಯವಸ್ಥೆಯು ಪ್ರಚೋದನೆಯಾಗುತ್ತದೆ. ಈ ಆಸನವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕರುಳುಗಳು ಉತ್ತಮವಾಗಿ ಚಲಿಸುತ್ತವೆ. ಈ ಆಸನದಿಂದ ದೇಹದಲ್ಲಿರುವ ತ್ಯಾಜ್ಯಗಳು ಸುಲಭವಾಗಿ ಹೊರ ಹೋಗುತ್ತವೆ. ಬಾಲಾಸನ ಮಾಡಲು, ಮೊದಲು ನಿಮ್ಮ ಮೊಣಕಾಲುಗಳ ಮೇಲೆ ಕುಳಿತುಕೊಳ್ಳಿ. ಅದರ ನಂತರ, ಮುಂದಕ್ಕೆ ಬಾಗಿ ಮತ್ತು ನಿಮ್ಮ ಮುಂದೋಳುಗಳನ್ನು ನೆಲದ ಮೇಲೆ ಇರಿಸಿ. ಹಣೆಯೂ ನೆಲಕ್ಕೆ ತಾಗಬೇಕು. ಈ ಆಸನವು ಹಾಸಿಗೆಯ ಮೇಲೆ ಮಲಗಿರುವ ಮಗುವಿನಂತೆ ಇರುತ್ತದೆ. ಅದಕ್ಕೆ ಆ ಆಸನಕ್ಕೆ ಬಾಲಾಸನ ಎಂದು ಹೆಸರುಬಂದಿದೆ.

ತ್ರಿಕೋನಾಸನ: ದೇಹವನ್ನು ತಿರುಚಿ ಮಾಡುವ ತ್ರಿಕೋನಾಸನವು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಆಸನವು ಹೊಟ್ಟೆ ಮತ್ತು ಬೆನ್ನಿನ ಮೇಲೆ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಆಸನವನ್ನು ಮಾಡುವುದರಿಂದ ಚಯಾಪಚಯವನ್ನು ಸುಧಾರಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಒಂದೇ ಸ್ಥಳದಲ್ಲಿ ನಿಂತು, ಎಡ ಪಾದವನ್ನು ಬಲಗೈಯ ಬೆರಳುಗಳಿಂದ, ನಂತರ ಎಡಗೈಯ ಬೆರಳುಗಳು ಬಲ ಪಾದಕ್ಕೆ ತಾಗುವಂತೆ ಸೊಂಟವನ್ನು ಬಗ್ಗಿಸಿ ಮತ್ತು ದೇಹವನ್ನು ತಿರುಗಿಸಿ ಈ ಆಸನವನ್ನು ಮಾಡಲಾಗುತ್ತದೆ.

ಮಲಾಸನ: ಮಲಸಾನ ಮಾಡುವುದರಿಂದ ಹೊಟ್ಟೆಯ ಕೆಳಭಾಗದ ಮೇಲೆ ಒತ್ತಡ ಬೀಳುತ್ತದೆ. ಇದು ಅಲ್ಲಿನ ಸ್ನಾಯುಗಳಿಗೆ ಮಸಾಜ್ ಮಾಡಿದಂತಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ. ಈ ಆಸನದಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಮಲಾಸನ ಮಾಡಲು, ಮೊದಲು ಕೈ ಜೋಡಿಸಿ ನಿಲ್ಲಬೇಕು. ನಂತರ ಕಾಲುಗಳನ್ನು ಅಗಲವಾಗಿ ಹರಡಿ ಮತ್ತು ಪಾದದ ಮೇಲೆ ಭಾರವನ್ನು ಇರಿಸಿ ಕುಳಿತುಕೊಳ್ಳಬೇಕು. ಈ ಆಸನದಲ್ಲಿ ಪಾದವನ್ನು ಯಾವುದೇ ರೀತಿಯಲ್ಲಿ ಚಲಿಸಬಾರದು. ಮೊಣಕಾಲುಗಳು ಸಾಧ್ಯವಾದಷ್ಟು ಅಗಲ ಮಾಡಬೇಕು. ಈ ಆಸನ ಮಾಡಲು ಕಷ್ಟವಾದರೆ ಬೆಂಬಲ ಸಪೋರ್ಟ್ ತೆಗೆದುಕೊಳ್ಳಬಹುದು. ಈ ಭಂಗಿಯು ಮಲವಿಸರ್ಜನೆಗೆ ಕುಳಿತಂತೆ ಇರುತ್ತದೆ. ದೇಹವು ತ್ಯಾಜ್ಯವನ್ನು ಉತ್ತಮವಾಗಿ ಹೊರಹಾಕಲು ಸಹಾಯ ಮಾಡುತ್ತದೆ.

Whats_app_banner