ಹಸಿಮೆಣಸು ಕತ್ತರಿಸುವಾಗ ಕೈ ಉರಿಯುವುದು ಯಾಕೆ ಗೊತ್ತಾ? ಕೈ ಉರಿಯದಂತೆ ನೀವೇನು ಮಾಡಬಹುದು, ಇಲ್ಲಿದೆ ಐಡಿಯಾ
Green chilly: ನೀವು ಹಸಿಮೆಣಸು ಕತ್ತರಿಸುವಾಗಲೆಲ್ಲ ತುಂಬಾ ಜಾಗ್ರತೆ ವಹಿಸಿ ಕತ್ತರಿಸುತ್ತೀರ. ಯಾಕೆಂದರೆ ಇದರ ರಸ ನಿಮಗೆ ತಾಗಿದರೆ ನಿಮ್ಮ ಕೈ ಉರಿಯಲು ಆರಂಭಿಸುತ್ತದೆ. ಆದರೆ ಯಾಕೆ ಈ ರೀತಿ ಆಗುತ್ತದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ನೀವು ತುಂಬಾ ಸಲ ಅಂದುಕೊಂಡಿರಬಹುದು ಮೆಣಸಿನಕಾಯಿ ಕತ್ತರಿಸಿದರೆ ಯಾಕೆ ಕೈ ಉರಿಯುತ್ತದೆ ಎಂದು. ಇದಕ್ಕೆ ಒಂದು ಮುಖ್ಯ ಕಾರಣವಿದೆ ಮೆಣಸಿನಕಾಯಿಯಲ್ಲಿರುವ ಒಂದು ಅಂಶ ನಿಮ್ಮ ಕೈಗಳಿಗೆ ಉರಿ ಅನುಭವವನ್ನು ನೀಡುತ್ತದೆ. ಅದರಲ್ಲೂ ಬಿಸಿನೀರು ತಾಕಿದಾಗ ಅದು ಇನ್ನು ಹೆಚ್ಚಿಗೆ ಉರಿದಂತೆ ನಿಮಗೆ ಭಾಸವಾಗುತ್ತದೆ. ಇದಕ್ಕೆ ಕಾರಣ ಏನು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಈ ಅಂಶವೇ ಕಾರಣ
ನೀವು ಗಮನಿಸಿರಬಹುದು. ಹಸಿ ಮೆಣಸಿನ ಒಳಗಡೆಯಿಂದ ಒಂದು ರೀತಿಯ ಪರಿಮಣ ಬರುತ್ತದೆ. ಅದರಿಂದ ಒಂದು ರೀತಿಯ ನೀರಿನ ಅಂಶವೂ ಬರುತ್ತದೆ. ಆದರೆ ಅದು ಕ್ಯಾಪ್ಸೈಸಿನ್ ಎಂಬ ಒಂದು ಸಸ್ಯಾಂಶವಾಗಿರುತ್ತದೆ. ಅದು ತಗುಲಿದಾಗ ನಿಮ್ಮ ಕೈಗಳು ಉರಿಯಲು ಆರಂಭಿಸುತ್ತದೆ. ಮಾನವನ ದೇಹ ಆ ಅಂಶಕ್ಕೆ ರಿಯಾಕ್ಟ್ ಮಾಡುತ್ತದೆ. ಮೆಣಸು ಕತ್ತರಿಸುವಾಗ ನೀವು ಹೆಚ್ಚು ಕಾಪ್ಸೈನಿನ್ ಕೈಗೆ ತಾಗಿಸಿಕೊಂಡರೆ ಮಾತ್ರ ಉರಿಯಾಗುತ್ತದೆ.
ಉರಿದಾಗ ಹೀಗೆ ಮಾಡಿ
ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯುತ್ತಿದ್ದರೆ ಅದನ್ನು ತಪ್ಪಿಸಲು ಫ್ರಿಡ್ಜ್‌ನಿಂದ ಐಸ್ ತುಂಡನ್ನು ತೆಗೆದುಕೊಂಡು ಅದನ್ನು ನಿಮ್ಮ ಕೈಗಳಿಗೆ ಉಜ್ಜಿಕೊಳ್ಳಿ. ಐಸ್ ಪ್ಯಾಕ್‌ಗಳು ನಿಮ್ಮಕೈಗಳ ಉರಿಯನ್ನು ಕಡಿಮೆ ಮಾಡುತ್ತದೆ. ಪರಿಹಾರ ನೀಡುತ್ತದೆ. ಉರಿ ಕಡಿಮೆ ಮಾಡಲು ಅಲೋವೆರಾವನ್ನು ಕೈಗಳಿಗೆ ಹಚ್ಚಿಕೊಳ್ಳಬಹುದು.
ತಣ್ಣೀರು ಅಥವಾ ಹಾಲು ಬಳಸಿ ನಿಮ್ಮ ಕೈ ಉರಿದಾಗ ಉರಿಯುವ ಜಾಗಕ್ಕೆ ಇವುಗಳನ್ನು ಹಾಕಿ. ಹಾಲಿನಲ್ಲಿರುವ ಕ್ಯಾಲ್ಸಿಯಮ್ ಕಾಪ್ಸೈನನ್ನು ಹೆಚ್ಚು ಸಮಯ ಇರದಂತೆ ನೋಡಿಕೊಳ್ಳುತ್ತದೆ. ಬೇಕರಿ ಸೋಡಾವನ್ನು ಸಹ ಬಳಸಬಹುದು. ಮೆಣಸು ಕತ್ತರಿಸಿದ ಮೇಲೆ, ನೀವು ಕೈಗಳನ್ನು ಚೆನ್ನಾಗಿ ಸೋಪ್ ಹಾಕಿ ತೊಳೆದುಕೊಳ್ಳಿ.
ಈ ರೀತಿ ಮುಂಜಾಗ್ರತೆ ಇರಲಿ
ಮೆಣಸುಗಳನ್ನು ಕತ್ತರಿಸುವಾಗ ಹ್ಯಾಂಡ್ ಗ್ಲೌಸ್ ಬಳಕೆ ಮಾಡಿ. ತಣ್ಣೀರು ಅಥವಾ ಹಾಲಿನಿಂದ ಮೊದಲೇ ಒಮ್ಮೆ ಕೈಗೆ ಲೇಪನ ಮಾಡಿಕೊಳ್ಳಿ. ಮೆಣಸುಗಳನ್ನು ಕತ್ತರಿಸುವಾಗ ನಿಮ್ಮ ಕೈಗಳ ಮೇಲೆ ನಿಗಾ ಇರಲಿ. ಆದಷ್ಟು ಮಾಡಿ ಅವುಗಳ ರಸ ತಾಗದಂತೆ ಮುಂಜಾಗ್ರತೆಯಿಂದ ಕಟ್ ಮಾಡಿ.
ವಿಭಾಗ