Kidney Problem: ನೀರು ಕುಡಿದ ಕೂಡಲೇ ಈ ಐದು ತೊಂದರೆಗಳು ಕಾಣಿಸ್ತಿದ್ಯಾ? ಹಾಗಾದರೆ ಕಿಡ್ನಿಗೆ ಸಮಸ್ಯೆಯಾಗಿದೆ ಎಂದರ್ಥ!
ಕಿಡ್ನಿಗೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸುವುದು ಸುಲಭ. ನೀವು ನೀರು ಕುಡಿದ ಕೂಡಲೇ ನಿಮಗೆ ಈ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಂಡರೆ, ನಿಮ್ಮ ಕಿಡ್ನಿಗೂ ಹಾನಿಯಾಗಿದೆ ಎಂದರ್ಥ.

ಕಿಡ್ನಿ, ಅಂದರೆ ಮೂತ್ರಪಿಂಡ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಕಿಡ್ನಿಯ ಆರೋಗ್ಯವನ್ನು ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ಮೂತ್ರಪಿಂಡದಲ್ಲಿ ಸಮಸ್ಯೆಯಾದರೆ ಅದರಿಂದ ಮುಂದೆ ನಾನಾ ರೀತಿಯ ತೊಂದರೆ ಕಾಣಿಸಿಕೊಳ್ಳಬಹುದು. ಕಿಡ್ನಿಯನ್ನು ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ಪರೀಕ್ಷಿಸಬೇಕು. ಕಾರ್ಯಾಚರಣೆಯಲ್ಲಿ ಏನಾದರೂ ವ್ಯತ್ಯಾಸವಾದರೆ, ಕೂಡಲೇ ವೈದ್ಯರ ಬಳಿ ಹೋಗಬೇಕು.
ದೇಹದ ಆರೋಗ್ಯದಲ್ಲಿ ಕಿಡ್ನಿಯ ಕಾರ್ಯ ಅತ್ಯಂತ ಮಹತ್ವದ್ದು. ರಕ್ತದಲ್ಲಿನ ಎಲ್ಲಾ ಕಲ್ಮಶ, ವಿಷದ ಅಂಶಗಳನ್ನು ಮೂತ್ರ ಪಿಂಡ ಸ್ವಚ್ಛಗೊಳಿಸುತ್ತದೆ. ಪ್ರತಿಕ್ಷಣ ಈ ಕ್ರಿಯೆ ಸರಾಗವಾಗಿ ನಡೆಯದಿದ್ದರೆ, ದೇಹದ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತದೆ. ಇಂದಿನ ಒತ್ತಡದ ಜೀವನಶೈಲಿ ಪರಿಣಾಮ ಕಿಡ್ನಿಯ ಮೇಲಾಗುತ್ತಿದೆ. ಇದರಿಂದ ಕಿಡ್ನಿ ಸಂಬಂಧಿತ ಒಂದೊಂದೇ ಸಮಸ್ಯೆಗಳು ಶುರುವಾಗುತ್ತವೆ. ಹೀಗಾಗಿ ಕಿಡ್ನಿಯ ಆರೋಗ್ಯದಲ್ಲಿ ಕಿಂಚಿತ್ತೂ ನಿರ್ಲಕ್ಷ್ಯ ಸಲ್ಲದು.
ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ, ಆರಂಭದಲ್ಲೇ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬಹುದು. ಇಲ್ಲವಾದರೆ ಮುಂದೆ ಕಿಡ್ನಿ ಕಾರ್ಯನಿರ್ವಹಣೆ ವಿಫಲವಾಗಿ, ಮರಣ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಕಿಡ್ನಿಗೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸುವುದು ಸುಲಭ. ನೀವು ನೀರು ಕುಡಿದ ಕೂಡಲೇ ನಿಮಗೆ ಈ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಂಡರೆ, ನಿಮ್ಮ ಕಿಡ್ನಿಗೂ ಹಾನಿಯಾಗಿದೆ ಎಂದರ್ಥ.
ನೀರು ಕುಡಿದ ಕೂಡಲೇ ನೋವು
ನೀವು ನೀರು ಅಥವಾ ದ್ರವರೂಪದ ಯಾವುದೇ ಪಾನೀಯ ಕುಡಿದ ಕೂಡಲೇ, ಅದು ನೇರವಾಗಿ ನಿಮ್ಮ ಕಿಡ್ನಿಯ ಮೇಲೆ ಪರಿಣಾಮ ಬೀರುತ್ತದೆ. ಆ ವೇಳೆ ಕಿಡ್ನಿಯಲ್ಲಿ ಏನಾದರೂ ವ್ಯತ್ಯಾಸವಾಗಿದ್ದರೆ, ದೇಹದಲ್ಲಿ ಅದರ ಪರಿಣಾಮ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ನೀರು ಕುಡಿದ ಕೂಡಲೇ ಕಿಡ್ನಿಯಲ್ಲಿ ನೋವು ಕಾಣಿಸಿಕೊಳ್ಳಬಹುದು, ಅಥವಾ ಸೂಜಿಯಲ್ಲಿ ಚುಚ್ಚಿದ ಅನುಭವವಾಗಬಹುದು. ಹಾಗೇನಾದರೂ ನೋವು ಕಾಣಿಸಿಕೊಂಡಲ್ಲಿ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಕಿಡ್ನಿಯಲ್ಲಿ ಸಮಸ್ಯೆಯಾಗಿರುವುದರಿಂದ, ಅದು ತನ್ನ ಕೆಲಸವನ್ನು ಸರಿಯಾಗಿ ಮಾಡಲಾಗದೇ, ನೋವು ಉಂಟಾಗಿರಬಹುದು.
ದಿನಪೂರ್ತಿ ಸುಸ್ತು
ಕೆಲವರಿಗೆ ದಿನಪೂರ್ತಿ ಸುಸ್ತು, ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ನೋಡಲು ಅವರು ಆರೋಗ್ಯವಾಗಿದ್ದರೂ, ಅವರಿಗೆ ಏನಾದರೂ ದೈಹಿಕ ಸಮಸ್ಯೆ ಕಾಡುತ್ತಿರಬಹುದು. ಮತ್ತು ಜನರು ಕೂಡ ಅದನ್ನು ಅಷ್ಟೇ ಸುಲಭದಲ್ಲಿ ನಿರ್ಲಕ್ಷಿಸುತ್ತಾರೆ. ಕೆಲವರಿಗೆ ನೀರು ಕುಡಿದ ಕೂಡಲೇ ದೇಹ ದುರ್ಬಲವಾದಂತೆ ಅನ್ನಿಸಬಹುದು. ಅದು ಕೂಡ ಕಿಡ್ನಿ ಸಮಸ್ಯೆಯಾಗಿರುವ ಸೂಚನೆಯಾಗಿದೆ. ತೊಂದರೆಗೊಳಗಾದ ಕಿಡ್ನಿಗೆ ಹೆಚ್ಚಿನ ಒತ್ತಡ ಬೀಳುವುದರಿಂದ, ದೇಹದ ಒಟ್ಟಾರೆ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತದೆ.
ಮೂತ್ರ ವಿಸರ್ಜನೆಯಲ್ಲಿ ತೊಂದರೆ
ಕಿಡ್ನಿಯ ಕುರಿತಾದ ಸಮಸ್ಯೆಗಳನ್ನು ನೀವು ಮೂತ್ರ ವಿಸರ್ಜನೆಯಲ್ಲಿ ಕೂಡ ಕಂಡುಕೊಳ್ಳಬಹುದು. ದಿನದಲ್ಲಿ ಸಾಕಷ್ಟು ನೀರು ಕುಡಿದ ಬಳಿಕವೂ ನಿಮಗೆ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿಲ್ಲ ಎಂದಾದರೆ ಕಿಡ್ನಿಯಲ್ಲಿ ಸಮಸ್ಯೆಯಾಗಿದೆ ಎಂದರ್ಥ. ಕಿಡ್ನಿಗೆ ತೊಂದರೆಯಾದರೆ ಅದು ನೀವು ಕುಡಿದ ನೀರನ್ನು ಸರಿಯಾಗಿ ಶುದ್ಧೀಕರಿಸುತ್ತಿಲ್ಲ. ಕಲ್ಮಶವನ್ನು ಹೊರಹಾಕುತ್ತಿಲ್ಲ ಎಂದರ್ಥ. ಹಾಗಾದಾಗ ಪಾದದಲ್ಲಿ ಕೂಡ ಊತ ಕಾಣಿಸಿಕೊಳ್ಳಬಹುದು.
ವಾಕರಿಕೆ ಆಗಬಹುದು
ನೀರು ಅಥವಾ ಪಾನೀಯ ಸೇವಿಸಿದಾಗ ದೇಹದಲ್ಲಿ ಏನಾದರೂ ವ್ಯತ್ಯಾಸವಾಗುತ್ತಿದೆ ಮತ್ತು ಒಂದು ರೀತಿ ನಿಮಗೆ ಅಹಿತಕರ ಅನುಭವವಾಗುತ್ತಿದೆ ಎಂದರೆ, ಕಿಡ್ನಿಯಲ್ಲಿ ಸಮಸ್ಯೆಯಾಗಿರಬಹುದು. ಕೆಲವೊಮ್ಮೆ ವಾಕರಿಕೆ ಕೂಡ ತರಿಸಬಹುದು.
ನೀರು ಕುಡಿದ ಕೂಡಲೇ ಮೂತ್ರ ವಿಸರ್ಜನೆ
ಜತೆಗೆ, ಪಾನೀಯ ಸೇವಿಸಿದ ಕೂಡಲೇ ಪ್ರತಿ ಬಾರಿಯೂ ಮೂತ್ರ ವಿಸರ್ಜಿಸುವಂತೆ ಆಗುತ್ತಿದ್ದರೆ ಅದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ನೀರು ಕುಡಿದ ಕೂಡಲೇ ಮೂತ್ರ ವಿಸರ್ಜನೆಯಾಗುವುದು ಆರೋಗ್ಯವಂತ ಕಿಡ್ನಿಯ ಲಕ್ಷಣವಲ್ಲ. ಅದಕ್ಕೆ ಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗುವುದು ಸೂಕ್ತ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ತಜ್ಞರನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯಿರಿ.)

ವಿಭಾಗ