Banana Bread Recipe: ಬಾಳೆಹಣ್ಣು ಬಹಳ ಹಣ್ಣಾಗಿದ್ರೆ ಎಸೆಯುವ ಬದಲಿಗೆ ಬನಾನ ಬ್ರೆಡ್ ಮಾಡಿ..ರೆಸಿಪಿ ಇಲ್ಲಿದೆ
ಬಹಳ ಹಣ್ಣಾದ ಬಾಳೆಹಣ್ಣುಗಳು ತಿನ್ನಲು ರುಚಿ ಇರುವುದಿಲ್ಲ. ಹಾಗಂತ ಅದನ್ನು ಎಸೆಯಲು ಕೂಡಾ ಮನಸಾಗುವುದಿಲ್ಲ. ಆದರೆ ಅದರ ಬದಲಿಗೆ ಅದರಿಂದ ಏನಾದರೂ ತಿಂಡಿ ತಯಾರಿಸಿದರೆ ಹೇಗೆ..? ಬಹಳ ಹಣ್ಣಾದ ಬಾಳೆಹಣ್ಣಿನಿಂದ ಬನಾನ ಬ್ರೆಡ್(ಕೇಕ್) ತಯಾರಿಸಬಹುದು. ಇದು ತಿನ್ನಲು ಬಹಳ ರುಚಿಯಾಗಿರುತ್ತದೆ. ಮಕ್ಕಳು ಕೂಡಾ ಇಷ್ಟಪಟ್ಟು ತಿನ್ನುತ್ತಾರೆ.
ಎಷ್ಟೋ ಬಾರಿ ಮನೆಗೆ ತಂದ ಹಣ್ಣುಗಳು ಬೇಗ ಕೊಳೆಯುತ್ತವೆ. ಅಥವಾ ಹಣ್ಣಾಗುತ್ತದೆ. ಬಾಳೆಹಣ್ಣು ಕೂಡಾ ಹಾಗೇ. ಮರೆತೋ ಅಥವಾ ಸಮಯ ಇಲ್ಲದ ಕಾರಣಕ್ಕೋ ಅದನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿ ಮರೆಯುತ್ತೇವೆ.
ಹಾಗೆ ಬಹಳ ಹಣ್ಣಾದ ಬಾಳೆಹಣ್ಣುಗಳು ತಿನ್ನಲು ರುಚಿ ಇರುವುದಿಲ್ಲ. ಹಾಗಂತ ಅದನ್ನು ಎಸೆಯಲು ಕೂಡಾ ಮನಸಾಗುವುದಿಲ್ಲ. ಆದರೆ ಅದರ ಬದಲಿಗೆ ಅದರಿಂದ ಏನಾದರೂ ತಿಂಡಿ ತಯಾರಿಸಿದರೆ ಹೇಗೆ..? ಬಹಳ ಹಣ್ಣಾದ ಬಾಳೆಹಣ್ಣಿನಿಂದ ಬನಾನ ಬ್ರೆಡ್(ಕೇಕ್) ತಯಾರಿಸಬಹುದು. ಇದು ತಿನ್ನಲು ಬಹಳ ರುಚಿಯಾಗಿರುತ್ತದೆ. ಮಕ್ಕಳು ಕೂಡಾ ಇಷ್ಟಪಟ್ಟು ತಿನ್ನುತ್ತಾರೆ.
ಬನಾನ ಬ್ರೆಡ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಹಣ್ಣಾದ ಬಾಳೆಹಣ್ಣುಗಳು - 2
ಸಕ್ಕರೆ - 1/2 ಕಪ್
ಎಣ್ಣೆ - 1/2 ಕಪ್
ಮೈದಾ ಹಿಟ್ಟು - 1 1/2 ಕಪ್
ಬೇಕಿಂಗ್ ಪೌಡರ್ - 1 ಟೀ ಸ್ಪೂನ್
ಬೇಕಿಂಗ್ ಸೋಡಾ - 1/2 ಟೀ ಸ್ಪೂನ್
ಹಾಲು - 1/4 ಕಪ್
ಬನಾನ ಬ್ರೆಡ್ ತಯಾರಿಸುವ ವಿಧಾನ
ಬಾಳೆಹಣ್ಣಿನ ಸಿಪ್ಪೆ ಬಿಡಿಸಿ ಒಂದು ಬೌಲ್‌ನಲ್ಲಿ ಮ್ಯಾಷರ್‌ನಿಂದ ಅಥವಾ ಫೋರ್ಕ್‌ನಿಂದ ಮ್ಯಾಷ್ ಮಾಡಿಕೊಳ್ಳಿ
ಇದರೊಂದಿಗೆ ಸಕ್ಕರೆ ಹಾಗೂ ಎಣ್ಣೆ ಸೇರಿಸಿ 2 ನಿಮಿಷ ಚೆನ್ನಾಗಿ ವಿಸ್ಕ್ ಮಾಡಿಕೊಳ್ಳಿ
ಇದರೊಂದಿಗೆ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಸೇರಿಸಿ ಮಿಕ್ಸ್ ಮಾಡಿ
ಮಿಶ್ರಣ ಗಟ್ಟಿಯಾದರೆ ಸ್ವಲ್ಪ ಹಾಲು ಸೇರಿಸಿ ಮತ್ತೆ ಮಿಕ್ಸ್ ಮಾಡಿ
ಕೇಕ್ ಟಿನ್‌ಗೆ ಎಣ್ಣೆಯಿಂದ ಗ್ರೀಸ್ ಮಾಡಿ( ಕೇಕ್ ಟಿನ್ ಇರದಿದ್ದರೆ ಅದಕ್ಕೆ ಹೊಂದು ಪಾತ್ರೆ ಬಳಸಿ) ಕೇಕ್ ಬ್ಯಾಟರ್ ಸುರಿಯಿರಿ
ಇದನ್ನು ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಯಲ್ಲಿಟ್ಟು 40 ನಿಮಿಷ ಬೇಕ್ ಮಾಡಿದರೆ ಬನಾನ ಬ್ರೆಡ್ ರೆಡಿ
ಗಮನಿಸಿ: ಮೈದಾಹಿಟ್ಟಿನ ಬದಲಿಗೆ ಗೋಧಿಹಿಟ್ಟನ್ನು ಕೂಡಾ ಬಳಸಬಹುದು
ವಿಭಾಗ