ಈ ಮಕ್ಕಳಿಗೆ ಏನಾಗಿದೆ? ಇಬ್ಬರು ಸಹಪಾಠಿಗಳನ್ನು ಗನ್‌ನಿಂದ ಶೂಟ್‌ ಮಾಡಿದ 15ರ ಬಾಲಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಈ ಮಕ್ಕಳಿಗೆ ಏನಾಗಿದೆ? ಇಬ್ಬರು ಸಹಪಾಠಿಗಳನ್ನು ಗನ್‌ನಿಂದ ಶೂಟ್‌ ಮಾಡಿದ 15ರ ಬಾಲಕ

ಈ ಮಕ್ಕಳಿಗೆ ಏನಾಗಿದೆ? ಇಬ್ಬರು ಸಹಪಾಠಿಗಳನ್ನು ಗನ್‌ನಿಂದ ಶೂಟ್‌ ಮಾಡಿದ 15ರ ಬಾಲಕ

ಐಡಿಯಾ ಪಬ್ಲಿಕ್‌ ಚಾರ್ಟರ್‌ ಸ್ಕೂಲ್‌ನ ನಿನ್ನೆ ಲೇ ಸ್ಟ್ರೀಟ್‌ ಮತ್ತು 45ನೇ ಸ್ಟ್ರೀಟ್‌ ನಡುವಿನ ಒಂದು ಬ್ಲಾಕ್‌ನಲ್ಲಿ ವಿದ್ಯಾರ್ಥಿಯು ಶೂಟ್‌ ಮಾಡಿದ್ದಾನೆ ಎಂದು ಡಿಸಿ ಮೆಟ್ರೊಪಾಲಿಟನ್‌ ಪೊಲೀಸ್‌ ಮುಖ್ಯಸ್ಥರಾದ ರಾಬರ್ಟ್‌ ಕಾಂಟಿ ಹೇಳಿದ್ದಾರೆ.

<p>ಈ ಮಕ್ಕಳಿಗೆ ಏನಾಗಿದೆ? ಇಬ್ಬರು ಸಹಪಾಠಿಗಳನ್ನು ಗನ್‌ನಿಂದ ಶೂಟ್‌ ಮಾಡಿದ 15ರ ಬಾಲಕ</p>
ಈ ಮಕ್ಕಳಿಗೆ ಏನಾಗಿದೆ? ಇಬ್ಬರು ಸಹಪಾಠಿಗಳನ್ನು ಗನ್‌ನಿಂದ ಶೂಟ್‌ ಮಾಡಿದ 15ರ ಬಾಲಕ

ವಾಷಿಂಗ್ಟನ್‌: ಇಲ್ಲಿನ ಹೈಸ್ಕೂಲ್‌ವೊಂದರಲ್ಲಿ ಹದಿನೈದು ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಇಬ್ಬರು ಸಹಪಾಠಿಗಳಿಗೆ ಗುಂಡಿಕ್ಕಿದ್ದಾನೆ ಎಂದು ವಾಷಿಂಗ್ಟನ್‌ ಡಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದ ಪ್ರಕಾರ, ಐಡಿಯಾ ಪಬ್ಲಿಕ್‌ ಚಾರ್ಟರ್‌ ಸ್ಕೂಲ್‌ನ ನಿನ್ನೆ ಲೇ ಸ್ಟ್ರೀಟ್‌ ಮತ್ತು 45ನೇ ಸ್ಟ್ರೀಟ್‌ ನಡುವಿನ ಒಂದು ಬ್ಲಾಕ್‌ನಲ್ಲಿ ವಿದ್ಯಾರ್ಥಿಯು ಶೂಟ್‌ ಮಾಡಿದ್ದಾನೆ ಎಂದು ಡಿಸಿ ಮೆಟ್ರೊಪಾಲಿಟನ್‌ ಪೊಲೀಸ್‌ ಮುಖ್ಯಸ್ಥರಾದ ರಾಬರ್ಟ್‌ ಕಾಂಟಿ ಹೇಳಿದ್ದಾರೆ.

ಐಡಿಯಾ ಶಾಲೆಯ 350 ವಿದ್ಯಾರ್ಥಿಗಳನ್ನು ಮತ್ತು ಹೆಚ್ಚುವರಿ ಸಿಬ್ಬಂದಿಗಳನ್ನು ಲಾಕ್‌ಡೌನ್‌ ಮಾಡಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷ ಎರಡು ಸಾವಿರಕ್ಕೂ ಹೆಚ್ಚು ಕಾನೂನುಬಾಹಿರ ಗುಂಡಿನ ದಾಳಿಗಳು ನಡೆದಿವೆ. ಕಳೆದ ವರ್ಷ ಸುಮಾರು 800 ಕಾನೂನುಬಾಹಿರ ಗುಂಡಿನ ದಾಳಿಗಳಾಗಿದ್ದವು ಎಂದು ಡಿಸಿ ವಾಷಿಂಗ್ಟನ್‌ ಪೊಲೀಸ್‌ನ ಮುಖ್ಯಸ್ಥರು ಹೇಳಿದ್ದಾರೆ.

ಪ್ರತ್ಯೇಕ ಘಟನೆಯೊಂದರಲ್ಲಿ, ಮೊನ್ನೆ ಹರೆಯದ ವ್ಯಕ್ತಿಯೊಬ್ಬ ವಾಷಿಂಗ್ಟನ್‌ನಲ್ಲಿ ಶೂಟೌಟ್‌ ಮಾಡಿದ್ದ. "ಅಮೆರಿಕದಲ್ಲಿ ಹಿಂಸಾಚಾರ ಹೆಚ್ಚುತ್ತಿದ್ದು, ಗನ್‌ ಬಳಕೆ ನಿಷೇಧಿಸಬೇಕಿದೆʼʼ ಎಂದು ಅಮೆರಿಕದ ಅಧ್ಯಕ್ಷ ಜೋಯ್‌ ಬಿಡೆನ್‌ ಹೇಳಿದ್ದಾರೆ.

ಬಂದೂಕು ಬಳಕೆಗೆ ಕಡಿವಾಣ ಹಾಕುವ, ಲೈಸನ್ಸ್‌ ನಿಯಮಗಳಿಗೆ ಕಠಿಣ ನಿಯಮಗಳನ್ನು ವಿಧಿಸುವ ಕುರಿತು ಅಮೆರಿಕದಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲಿ ಮಕ್ಕಳು, ದೊಡ್ಡವರು ಎಲ್ಲರೂ ಸುಲಭವಾಗಿ ಗನ್‌ ಪಡೆಯುತ್ತಿದ್ದಾರೆ. ಅಲ್ಲಿನ ಗನ್‌ ಸಂಸ್ಕೃತಿ ಹೆಚ್ಚುತ್ತಿರುವುದು ಆತಂಕಕಾರಿಯಾಗಿ ಪರಿಣಮಿಸಿದೆ. ಇತ್ತೀಚೆಗಂತಹ ಕಾರಣವೇ ಇಲ್ಲದೆ ಗೇಮ್‌ಗಳಲ್ಲಿ ಶೂಟ್‌ ಮಾಡಿದಂತೆ ಇತರರ ಮೇಲೆ ಗುಂಡಿನ ದಾಳಿ ನಡೆಸುವುದೂ ಹೆಚ್ಚಾಗುತ್ತಿದೆ.

ಅಮೆರಿಕದಲ್ಲಿ ಗನ್‌ ಬಳಕೆ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಅಲ್ಲಿನ ಗನ್‌ ಲಾಬಿ ಪ್ರಮುಖ ಕಾರಣವಾಗಿದೆ. ಅವರಿಗೆ ಇದೊಂದು ಬಿಸ್ನೆಸ್‌ ಎನ್ನಲಾಗುತ್ತಿದೆ. ಹೈಸ್ಕೂಲ್‌ ವಿದ್ಯಾರ್ಥಿಯೊಬ್ಬ ಕಳೆದ ವರ್ಷ ಅಮೆರಿಕದ ಮಿಚಿಗನ್‌ ಹೈಸ್ಕೂಲ್‌ನಲ್ಲಿ ಗುಂಡಿನ ದಾಳಿ ನಡೆಸಿ ಮೂವರು ವಿದ್ಯಾರ್ಥಿಗಳ ಸಾವಿಗೆ ಕಾರಣನಾಗಿದ್ದ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಆ ಘಟನೆಯಲ್ಲಿ ಶಾಲೆಯ ಟೀಚರ್‌ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದರು. ಆಕ್ಸ್‌ಫರ್ಡ್‌ ಹೈಸ್ಕೂಲ್‌ನಲ್ಲಿ ಮಧ್ಯಾಹ್ನದ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಶೂಟೌಟ್‌ ನಡೆಸಿದ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ. ಆತನ ಬಳಿ ಸೆಮಿ ಆಟೋಮಿಕ್‌ ಹ್ಯಾಂಡ್‌ ಗನ್‌ ಇತ್ತು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.