ಕನ್ನಡ ಸುದ್ದಿ  /  Nation And-world  /  168 Criminals Killed In Encounters In Uttar Pradesh Since 2017

UP Police Encounter: ಉತ್ತರ ಪ್ರದೇಶದಲ್ಲಿ 5 ವರ್ಷಗಳಲ್ಲಿ ನಡೆದ ಪೊಲೀಸ್​ ಎನ್​ಕೌಂಟರ್​ಗಳಲ್ಲಿ 168 ಕ್ರಿಮಿನಲ್‌ಗಳ ಹತ್ಯೆ..!

ಉತ್ತರ ಪ್ರದೇಶ ಪೊಲೀಸರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಶ್ಲಾಘಿಸಿದ್ದಾರೆ. ಏಕೆಂದರೆ ಕಳೆದ ಐದು ವರ್ಷಗಳಲ್ಲಿ 168 ಮೋಸ್ಟ್ ವಾಂಟೆಡ್​ ಕ್ರಿಮಿನಲ್​​ಗಳನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶ ಪೊಲೀಸರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಶ್ಲಾಘಿಸಿದ್ದಾರೆ. ಏಕೆಂದರೆ ಕಳೆದ ಐದು ವರ್ಷಗಳಲ್ಲಿ 168 ಮೋಸ್ಟ್ ವಾಂಟೆಡ್​ ಕ್ರಿಮಿನಲ್​​ಗಳನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.

ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಮಾರ್ಚ್ 20, 2017 ರಿಂದ ನವೆಂಬರ್ 20, 2022 ರವರೆಗೆ ಒಟ್ಟು 22,234 ಅಪರಾಧಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ 4,557 ಜನರನ್ನು ಎನ್‌ಕೌಂಟರ್‌ಗಳಲ್ಲಿ ಬಂಧಿಸಲಾಗಿದೆ. ಎನ್‌ಕೌಂಟರ್‌ಗಳಲ್ಲಿ ಒಟ್ಟು 168 ಅಪರಾಧಿಗಳನ್ನು ಹತ್ಯೆ ಮಾಡಲಾಗಿದೆ. ಇವರೆಲ್ಲರೂ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತಮ್ಮ ತಲೆಯ ಮೇಲೆ 75,000 ರೂಪಾಯಿಯಿಂದ 5 ಲಕ್ಷದವರೆಗೆ ಇನಾಮು ಹೊಂದಿದ್ದರು.

ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮಾತನಾಡಿ ಗುಂಡಿನ ಚಕಮಕಿಯಲ್ಲಿ 13 ಪೊಲೀಸ್ ಸಿಬ್ಬಂದಿಯೂ ಸಾವನ್ನಪ್ಪಿದ್ದಾರೆ ಮತ್ತು 1,375 ಪೊಲೀಸರು ಬುಲೆಟ್ ತಗುಲಿ ಗಾಯಗೊಂಡಿದ್ದಾರೆ ಎಂದು ಹೇಳಿದರು.

ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್‌ಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆ ಮತ್ತು ಇಲ್ಲಿಯವರೆಗೆ 2017 ರಿಂದ ಪೊಲೀಸರು ಮಾಡಿದ ಒಂದೇ ಒಂದು ಎನ್‌ಕೌಂಟರ್ ಕೂಡ ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯ ಹೊರತಾಗಿಲ್ಲ ಎಂದು ಪ್ರಶಾಂತ್ ಕುಮಾರ್ ತಿಳಿಸಿದರು.

ಎನ್​​ಕೌಂಟರ್​ನಲ್ಲಿ ಕೊಲ್ಲಲ್ಪಟ್ಟ ಡಕಾಯಿತ ಉದಯ್ ಭಾನ್ ಯಾದವ್ ಅಲಿಯಾಸ್​ ಗೌರಿ ಯಾದವ್ ತಲೆ ಮೇಲೆ ಐದು ಲಕ್ಷ ರೂಪಾಯಿ ಇನಾಮು ಇತ್ತು ಮತ್ತು ಈತ ಕೊಲೆ, ಡಕಾಯಿತಿ ಸೇರಿದಂತೆ 50 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮತ್ತೊಬ್ಬ ಕ್ರಿಮಿನಲ್ ಬಾಲ್‌ರಾಜ್ ಭಾಟಿ ಎಂಬಾತನ ತಲೆ ಮೇಲೆ2.5 ಲಕ್ಷ ರೂ. ಇನಾಮು ಹೊಂದಿದ್ದನು ಮತ್ತು ಈತನ ವಿರುದ್ಧ ಕನಿಷ್ಠ 20 ಪ್ರಕರಣಗಳು ದಾಖಲಾಗಿತ್ತು.

ಮೀರತ್ ವಲಯದಲ್ಲಿ ಗರಿಷ್ಠ 64 ಕ್ರಿಮಿನಲ್‌ಗಳನ್ನು ಕೊಲ್ಲಲಾಗಿದೆ ಎಂದು ಯುಪಿ ಎಡಿಜಿ ಹೇಳಿದ್ದಾರೆ, ಇದು ಎಂಟು ಪೊಲೀಸ್ ವಲಯಗಳಲ್ಲಿ ಬಂಧನಗಳ ಸಂಖ್ಯೆಯಲ್ಲಿ (6,494) ಅಗ್ರಸ್ಥಾನದಲ್ಲಿದೆ ಎಂದು ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

IPL_Entry_Point

ವಿಭಾಗ