ಅಮೆರಿಕ ವಿಮಾನ ದುರಂತ: 28 ಮೃತದೇಹ ಪತ್ತೆ, ಎಲ್ಲಾ 64 ಮಂದಿ ಸಾವನ್ನಪ್ಪಿರುವ ಶಂಕೆ; ಘಟನೆಯ ಪ್ರಮುಖ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕ ವಿಮಾನ ದುರಂತ: 28 ಮೃತದೇಹ ಪತ್ತೆ, ಎಲ್ಲಾ 64 ಮಂದಿ ಸಾವನ್ನಪ್ಪಿರುವ ಶಂಕೆ; ಘಟನೆಯ ಪ್ರಮುಖ ಅಂಶಗಳು

ಅಮೆರಿಕ ವಿಮಾನ ದುರಂತ: 28 ಮೃತದೇಹ ಪತ್ತೆ, ಎಲ್ಲಾ 64 ಮಂದಿ ಸಾವನ್ನಪ್ಪಿರುವ ಶಂಕೆ; ಘಟನೆಯ ಪ್ರಮುಖ ಅಂಶಗಳು

American Airlines plane crash: ಯುಎಸ್ ಮಿಲಿಟರಿ ಹೆಲಿಕಾಪ್ಟರ್ ಮತ್ತು ಪ್ರಯಾಣಿಕರ ಜೆಟ್ ಡಿಕ್ಕಿಯಾಗಿ ನದಿಗೆ ಅಪ್ಪಳಿಸಿದ ಘಟನೆಯಲ್ಲಿ ಯಾರೊಬ್ಬರೂ ಬದುಕುಳಿದ ಸುಳಿವಿಲ್ಲ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ವಿಮಾನ ದುರಂತ: 28 ಮೃತದೇಹ ಪತ್ತೆ, ಎಲ್ಲಾ 64 ಮಂದಿ ಸಾವನ್ನಪ್ಪಿರುವ ಶಂಕೆ
ಅಮೆರಿಕ ವಿಮಾನ ದುರಂತ: 28 ಮೃತದೇಹ ಪತ್ತೆ, ಎಲ್ಲಾ 64 ಮಂದಿ ಸಾವನ್ನಪ್ಪಿರುವ ಶಂಕೆ (AFP)

ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ ಮತ್ತು 64 ಪ್ರಯಾಣಿಕರಿದ್ದ ಪ್ರಯಾಣಿಕರ ಜೆಟ್ ನಡುವೆ ಸಂಭವಿಸಿದ ಭೀಕರ ಅಪಘಾತದಿಂದಾಗಿ ಯಾರೊಬ್ಬರೂ ಬದುಕಿರುವ ಸಾಧ್ಯತೆ ಇಲ್ಲ ಎಂದು ಯುಎಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ ಲೋಹದ ಹಕ್ಕಿಗಳು ಗಾಳಿಯಲ್ಲಿ ಹಾರುತ್ತಿದ್ದಾಗ ಪರಸ್ಪರ ಡಿಕ್ಕಿಯಾಗಿವೆ. ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ವಾಷಿಂಗ್ಟನ್ ಅಗ್ನಿಶಾಮಕದಳದ ಮುಖ್ಯಸ್ಥ ಜಾನ್ ಡೊನೆಲ್ಲಿ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಈಗಾಗಲೇ 28 ಶವಗಳನ್ನು ಹೊರತೆಗೆಯಲಾಗಿದ್ದು, ಒಂದು ಶವ ಹೆಲಿಕಾಪ್ಟರ್‌ನಲ್ಲಿತ್ತು ಎಂದು ಡೊನೆಲ್ಲಿ ಹೇಳಿದ್ದಾರೆ. ಉಳಿದ ಯಾರೂ ಬದುಕಿರುವ ನಂಬಿಕೆ ನಮಗಂತೂ ಇಲ್ಲ ಎಂದಿದ್ದಾರೆ.

ಅಮೆರಿಕನ್ ಏರ್‌ಲೈನ್ಸ್‌ನ ಅಂಗಸಂಸ್ಥೆ ಪಿಎಸ್ಎ ಏರ್ಲೈನ್ಸ್ ನಿರ್ವಹಿಸುವ ಪ್ರಾದೇಶಿಕ ಜೆಟ್, ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ವಾಷಿಂಗ್ಟನ್‌ನಲ್ಲಿರುವ ಪೊಟೊಮ್ಯಾಕ್ ನದಿಯ ಹಿಮಾವೃತ ನೀರಿಗೆ ಅಪ್ಪಳಿಸಿದೆ.

ವಾಷಿಂಗ್ಟನ್ ವಿಮಾನ ಅಪಘಾತದ ಪ್ರಮುಖ ಅಂಶಗಳು

  • 64 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ಅಮೆರಿಕದ ಪಿಎಸ್ಎ ಏರ್‌ಲೈನ್ಸ್ ವಿಮಾನವು ಬುಧವಾರ (ಜನವರಿ 29) ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ವಾಷಿಂಗ್ಟನ್‌ ಪೊಟೊಮ್ಯಾಕ್ ನದಿಯ ಹಿಮಾವೃತ ನೀರಿಗೆ ಅಪ್ಪಳಿಸಿದೆ.
  • ನದಿಯಿಂದ 28 ಶವಗಳನ್ನು ಹೊರತೆಗೆಯಲಾಗಿದ್ದು, ಅಪಘಾತದಿಂದ ಯಾರೂ ಬದುಕುಳಿದಿಲ್ಲ ಎಂದು ವಾಷಿಂಗ್ಟನ್ ಅಗ್ನಿಶಾಮಕ ಮುಖ್ಯಸ್ಥ ಜಾನ್ ಡೊನೆಲ್ಲಿ ಹೇಳಿದ್ದಾರೆ.
  • ರೇಗನ್ ನ್ಯಾಷನಲ್‌ನಲ್ಲಿ ಎಲ್ಲಾ ವಿಮಾನಗಳನ್ನು ಲ್ಯಾಂಡ್‌ ಮಾಡಲು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಆದೇಶಿಸಿದೆ.
  • ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಎರಡೂ ವಿಮಾನಗಳು ಉತ್ತಮ ಗೋಚರತೆಯೊಂದಿಗೆ ರಾತ್ರಿ ಹಾರಾಟ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  • ರಕ್ಷಣಾ ಕಾರ್ಯಾಚರಣೆಯಲ್ಲಿ 300 ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಅಗ್ನಿಶಾಮಕ ಮುಖ್ಯಸ್ಥ ಡೊನೆಲ್ಲಿ ಹೇಳಿದ್ದಾರೆ. ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ | Brazil Plane crash: ಬ್ರೆಜಿಲ್‌ನಲ್ಲಿ ಭೀಕರ ವಿಮಾನ ದುರಂತ, 62 ಮಂದಿ ದುರ್ಮರಣ, ನೆಲಕ್ಕಪ್ಪಳಿಸಿದ ವಿಡಿಯೊ ವೈರಲ್‌

  • ವಿಮಾನದಲ್ಲಿ ಹಲವಾರು ಕ್ರೀಡಾಪಟುಗಳು, ತರಬೇತುದಾರರು ಮತ್ತು ಅಧಿಕಾರಿಗಳು ಇದ್ದರು ಎಂದು ಯುಎಸ್ ಫಿಗರ್ ಸ್ಕೇಟಿಂಗ್ ಹೇಳಿದೆ. ಅಲ್ಲದೆ ರಷ್ಯಾದ ದಂಪತಿಗಳಾದ ಎವ್ಗೆನಿಯಾ ಶಿಶ್ಕೋವಾ ಮತ್ತು ವಾಡಿಮ್ ನೌಮೊವ್ ಕೂಡಾ ಜೆಟ್‌ನಲ್ಲಿದ್ದರು ಎಂದು ಮಾಸ್ಕೋ ಅಧಿಕಾರಿಗಳು ದೃಢಪಡಿಸಿದ್ದಾರೆ.
  • ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಮರ್ಶಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. "ಹೆಲಿಕಾಪ್ಟರ್ ಮೇಲೆ ಅಥವಾ ಕೆಳಗೆ ಏಕೆ ಹೋಗಲಿಲ್ಲ? ತಿರುಗಲಿಲ್ಲ ಏಕೆ? ನಿಯಂತ್ರಣ ಗೋಪುರವು ಹೆಲಿಕಾಪ್ಟರ್‌ಗೆ ಏನು ಮಾಡಬೇಕೆಂದು ಏಕೆ ಹೇಳಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | America Plane Crash: ಅಮೆರಿಕ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ 64 ಜನರಿದ್ದ ವಿಮಾನ, ಹಲವರ ಸಾವಿನ ಶಂಕೆ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.