ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer: 40,000 ರೈಲ್ವೆ ಕೋಚ್‌ಗಳು ಮೇಲ್ದರ್ಜೆಗೆ, ವಂದೇ ಭಾರತ್ ಗುಣಮಟ್ಟಕ್ಕೆ ಭಾರತೀಯ ರೈಲ್ವೆ; ಏನಿದು ಯೋಜನೆ?

Explainer: 40,000 ರೈಲ್ವೆ ಕೋಚ್‌ಗಳು ಮೇಲ್ದರ್ಜೆಗೆ, ವಂದೇ ಭಾರತ್ ಗುಣಮಟ್ಟಕ್ಕೆ ಭಾರತೀಯ ರೈಲ್ವೆ; ಏನಿದು ಯೋಜನೆ?

ಪ್ರಯಾಣಿಕರ ಸುರಕ್ಷತೆ, ಅನುಕೂಲ ಮತ್ತು ಸೌಕರ್ಯವನ್ನು ಹೆಚ್ಚಿಸಲು ಭಾರತೀಯ ರೈಲ್ವೆಯ 40 ಸಾವಿರ ಸಾಂಪ್ರದಾಯಿಕ ರೈಲು ಬೋಗಿಗಳನ್ನು ವಂದೇ ಭಾರತ್ ಗುಣಮಟ್ಟಕ್ಕೆ ಪರಿವರ್ತಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಲ್ಲಿ ಏನೇನಿರಲಿದೆ ಎಂಬ ಮಾಹಿತಿ ಇಲ್ಲಿದೆ.

ವಂದೇ ಭಾರತ್ ಗುಣಮಟ್ಟಕ್ಕೆ ಭಾರತೀಯ ರೈಲ್ವೆ
ವಂದೇ ಭಾರತ್ ಗುಣಮಟ್ಟಕ್ಕೆ ಭಾರತೀಯ ರೈಲ್ವೆ

ಭಾರತೀಯ ರೈಲ್ವೆಯಲ್ಲಿ (Indian Railways) ಮುಂಬರುವ ವರ್ಷಗಳಲ್ಲಿ ಮಹತ್ತರ ಸುಧಾರಣೆಯಾಗಲಿದೆ. ಸದ್ಯ ಅಸ್ತಿತ್ವದಲ್ಲಿರುವ 40,000 ಸಾಂಪ್ರದಾಯಿಕ ಕೋಚ್‌ಗಳನ್ನು ವಂದೇ ಭಾರತ್ ಕೋಚ್‌ಗಳ ಗುಣಮಟ್ಟಕ್ಕೆ (Vande Bharat standard) ನವೀಕರಿಸಲು ನಿರ್ಧರಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ಹೆಚ್ಚುವರಿ ಅನುಕೂಲ ಕಲ್ಪಿಸುವ ಸಲುವಾಗಿ ಈಗಿರುವ ಸಾಮಾನ್ಯ ಕೋಚ್‌​ಗಳನ್ನು ವಂದೇ ಭಾರತ್ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

“ಪ್ರಯಾಣಿಕರ ಸುರಕ್ಷತೆ, ಅನುಕೂಲ ಮತ್ತು ಸೌಕರ್ಯವನ್ನು ಹೆಚ್ಚಿಸಲು 40 ಸಾವಿರ ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ಗುಣಮಟ್ಟಕ್ಕೆ ಪರಿವರ್ತಿಸಲಾಗುವುದು” ಎಂದು ಸೀತಾರಾಮನ್ ಫೆಬ್ರವರಿ 1ರ ಕೇಂದ್ರ ಬಜೆಟ್ ಭಾಷಣದಲ್ಲಿ ಹೇಳಿದರು.

ವಂದೇ ಭಾರತ್ ಗುಣಮಟ್ಟ ಎಂದರೇನು?

ವಂದೇ ಭಾರತ್ ರೈಲುಗಳು (Vande Bharat trains) ಪ್ರೀಮಿಯಂ ಗುಣಮಟ್ಟದ ಕೋಚ್‌ಗಳನ್ನು ಹೊಂದಿವೆ. ಸಂಪೂರ್ಣ ಹವಾನಿಯಂತ್ರಿತ ಮತ್ತು ಚೇರ್ ಕಾರ್ ಸೀಟರ್‌ಗಳಿರುವ ಈ ರೈಲು, ಸಣ್ಣ ಮತ್ತು ಮಧ್ಯಮ ದೂರದ ಪ್ರಯಾಣಕ್ಕಾಗಿ ರೂಪಿಸಲಾಗಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗಿಂತ ಉತ್ತಮ ಗುಣಮಟ್ಟದ ವಂದೇ ಭಾರತ್‌ನ ಸ್ಲೀಪರ್ ಕೋಚ್ ಆವೃತ್ತಿಯನ್ನು ಈ ವರ್ಷದ ಮಾರ್ಚ್‌ ವೇಳೆಗೆ ಹೊರತರುವ ನಿರೀಕ್ಷೆಯಿದೆ.

ಇದನ್ನೂ ಓದಿ | Bharat Ratna: ಚೌಧರಿ ಚರಣ್‌ ಸಿಂಗ್‌ ಬಗ್ಗೆ ನಿಮಗೆಷ್ಟು ಗೊತ್ತು? ಭಾರತ ರತ್ನ ಪುರಸ್ಕೃತ ದೇಶದ 5ನೇ ಪ್ರಧಾನಮಂತ್ರಿಯ ಕುರಿತು ತಿಳಿದುಕೊಳ್ಳೋಣ

ಅಶ್ವಿನಿ ವೈಷ್ಣವ್ ಹೇಳಿದ್ದೇನು?

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, ಪ್ರಯಾಣಿಕರಿಗೆ ವಂದೇ ಭಾರತ್ ಮತ್ತು ಅಮೃತ್ ಭಾರತ್ ಕೋಚ್‌ಗಳ ಅನುಭವ ಸಿಗುವಂತೆ ಕೋಚ್‌ಗಳನ್ನು ಅಪ್‌ಗ್ರೇಡ್‌ ಮಾಡಲಾಗುತ್ತದೆ. ನವೀಕರಣಗೊಳ್ಳಲಿರುವ 40,000 ಕೋಚ್‌ಗಳನ್ನು ಈ ಯೋಜನೆಯೊಂದಿಗೆ ಮೇಲ್ದರ್ಜೆಗೆ ಏರಿಸಬಹುದು ಎಂದು ಸಚಿವರು ಹೇಳಿದ್ದಾರೆ.

ಅಮೃತ್ ಭಾರತ್ ಮತ್ತು ವಂದೇ ಭಾರತ್ ರೈಲುಗಳು ಅರೆ-ಶಾಶ್ವತ ಸಂಯೋಜಕಗಳನ್ನು (semi-permanent couplers) ಹೊಂದಿವೆ. ಇದು ರೈಲುಗಳ ಸುರಕ್ಷತೆಯನ್ನು ಹೆಚ್ಚಿಸುತ್ತವೆ. ಇದೇ ವೇಳೆ ಈ 40,000 ಕೋಚ್‌ಗಳಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಚಾರ್ಜಿಂಗ್ ಪಾಯಿಂಟ್‌ಗಳು, ನೀರಿನ ಸ್ವಯಂಚಾಲಿತ ಮಾಪನ ವ್ಯವಸ್ಥೆ, ಜಿಪಿಎಸ್, ಸಿಸಿಟಿವಿ ಕ್ಯಾಮೆರಾಗಳು ಇತ್ಯಾದಿ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಆ ಮಟ್ಟಿಗೆ ಕೋಚ್‌ಗಳ ಸುಧಾರಣೆ ನಡೆಯಲಿದೆ.

ಎಲ್ಲಾ ಕೋಚ್‌ಗಳು ಹವಾನಿಯಂತ್ರಿತಗೊಳ್ಳುವುದಿಲ್ಲ

ಕೇವಲ ನಾನ್ ಎಸಿ ಬೋಗಿಗಳನ್ನು ಹವಾನಿಯಂತ್ರಿತ ಕೋಚ್‌ಗಳಾಗಿ ಪರಿವರ್ತಿಸುವುದು ಮಾತ್ರವಲ್ಲ. ನಾನ್ ಎಸಿ ಕೋಚ್‌ಗಳಲ್ಲಿ, ಶೌಚಾಲಯಗಳನ್ನು ಉತ್ತಮ ಗುಣಮಟ್ಟಕ್ಕೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಅಲ್ಲದೆ ಹಳೆಯ ಸೀಟುಗಳ ಬದಲಿಗೆ ಉತ್ತಮ ಗುಣಮಟ್ಟದ ಸೀಟ್‌ಗಳನ್ನು ಅಳವಡಿಸಲಾಗುತ್ತದೆ.

ಇದನ್ನೂ ಓದಿ | ಹನುಮ ಧ್ವಜ ವಿವಾದ 24 ಜನರ ಬಂಧನ; ಮಂಡ್ಯ ಕೆರಗೋಡು ಗ್ರಾಮದಲ್ಲಿ ಪ್ರತಿಭಟನೆ ತೀವ್ರ, 10 ಅಂಶಗಳ ವಿವರಣೆ

ಒಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಕೋಚ್‌ಗಳಲ್ಲಿ ಸುರಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸುವುದೇ ಈ ನಿರ್ಧಾರದ ಹಿಂದಿನ ಗುರಿ. ಮೇಲ್ದರ್ಜೆಗೆ ಏರಿಸುವುದರಿಂದ ನಾನ್ ಎಸಿ ರೈಲ್ವೆ ಕೋಚ್‌ಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ. ಶೌಚಾಲಯ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಸುಧಾರಣೆಗಳನ್ನು ಬೋಗಿಗಳಲ್ಲಿ ಮಾಡಲಾಗುತ್ತದೆ.

ಇದನ್ನೂ ಓದಿ | Explained; ಫ್ರಾನ್ಸ್, ಬೆಲ್ಜಿಯಂ ಸೇರಿ ಯುರೋಪ್ ರಾಷ್ಟ್ರಗಳಲ್ಲಿ ರೈತ ಪ್ರತಿಭಟನೆ ತೀವ್ರಗೊಳ್ಳಲು 3 ಕಾರಣಗಳು

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point