ಮೌತ್‌ಫ್ರೆಷ್ನರ್ ಅಂತ ಡ್ರೈಐಸ್ ಸೇವಿಸಿ ಬಾಯಲ್ಲಿ ಉರಿ, ರಕ್ತದ ವಾಂತಿ; ಗುರುಗ್ರಾಮ್‌ನಲ್ಲಿ ಐವರು ಆಸ್ಪತ್ರೆಗೆ ದಾಖಲು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮೌತ್‌ಫ್ರೆಷ್ನರ್ ಅಂತ ಡ್ರೈಐಸ್ ಸೇವಿಸಿ ಬಾಯಲ್ಲಿ ಉರಿ, ರಕ್ತದ ವಾಂತಿ; ಗುರುಗ್ರಾಮ್‌ನಲ್ಲಿ ಐವರು ಆಸ್ಪತ್ರೆಗೆ ದಾಖಲು

ಮೌತ್‌ಫ್ರೆಷ್ನರ್ ಅಂತ ಡ್ರೈಐಸ್ ಸೇವಿಸಿ ಬಾಯಲ್ಲಿ ಉರಿ, ರಕ್ತದ ವಾಂತಿ; ಗುರುಗ್ರಾಮ್‌ನಲ್ಲಿ ಐವರು ಆಸ್ಪತ್ರೆಗೆ ದಾಖಲು

ಮೌತ್‌ಫ್ರೆಷ್ನರ್‌ ಬದಲು ಡ್ರೈಐಸ್‌ ಸೇವಿಸಿದ ಪರಿಣಾಮ ಐದು ಮಂದಿ ರಕ್ತದ ವಾಂತಿ ಮಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಹರಿಯಾಣದ ಗುರುಗ್ರಾಮ್ ಹೋಟೆಲ್‌ನಲ್ಲಿ ನಡೆದಿದೆ.

ಗುರುಗ್ರಾಮ್‌ನ ಮಾಲ್‌ವೊಂದರಲ್ಲಿರುವ ಹೋಟೆಲ್‌ನಲ್ಲಿ ಮೌತ್‌ಫ್ರೆಷ್ನರ್ ಅಂತ ಡ್ರೈಐಸ್ ತಿಂದ ಪರಿಣಾಮ ರಕ್ತ ವಾಂತಿ ಮಾಡಿಕೊಂಡು ಐವರು ಆಸ್ಪತ್ರೆ ಸೇರಿದ್ದಾರೆ.
ಗುರುಗ್ರಾಮ್‌ನ ಮಾಲ್‌ವೊಂದರಲ್ಲಿರುವ ಹೋಟೆಲ್‌ನಲ್ಲಿ ಮೌತ್‌ಫ್ರೆಷ್ನರ್ ಅಂತ ಡ್ರೈಐಸ್ ತಿಂದ ಪರಿಣಾಮ ರಕ್ತ ವಾಂತಿ ಮಾಡಿಕೊಂಡು ಐವರು ಆಸ್ಪತ್ರೆ ಸೇರಿದ್ದಾರೆ.

ಗುರುಗ್ರಾಮ್ (ಹರಿಯಾಣ): ಹೋಟೆಲ್‌ನಲ್ಲಿ ಊಟದ ನಂತರ ಮೌತ್‌ಫ್ರೆಷ್ನರ್‌ ಬದಲು ಡ್ರೈ ಐಸ್ ಸೇವಿಸಿದ ಪರಿಣಾಮ ಬಾಯಲ್ಲಿ ಉರಿ ಹಾಗೂ ರಕ್ತದ ವಾಂತಿ ಮಾಡಿಕೊಂಡು ಐವರು ಆಸ್ಪತ್ರೆಗೆ ಸೇರಿರುವ ಘಟನೆ ಹರಿಯಾದ ಗುರುಗ್ರಾಮ್‌ನಲ್ಲಿ ನಡೆದಿದೆ.

ಗುರುಗ್ರಾಮದ ಸೆಕ್ಟರ್ 90 ರ ರೆಸ್ಟೋರೆಂಟ್‌ನಲ್ಲಿ ರಾತ್ರಿ ಊಟದ ನಂತರ ಮೌತ್ ಫ್ರೆಷ್ನರ್ ಬದಲು ಡ್ರೈಐಸ್ ನೀಡಲಾಗಿದೆ. ಇದನ್ನು ಸೇವಿಸಿದವರಿಗೆ ಆರಂಭದಲ್ಲಿ ಬಾಯಲ್ಲಿ ಉರಿ ಆರಂಭವಾಗಿದೆ. ಮತ್ತೊಬ್ಬರು ರಕ್ತದ ವಾಂತಿಯನ್ನೇ ಮಾಡಿದ್ದಾರೆ. ಉರಿ ಕಡಿಮೆಯಾಗದ ಕಾರಣ ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾರ್ಚ್ 2 ರಂದು ಮಾಣಿಕ್ ಗೋಯೆಂಕಾ ಎಂಬುವರು ತನ್ನ ಪತ್ನಿ ಪ್ರೀತಿಕಾ ರುಸ್ತಗಿ, ಸ್ನೇಹಿತರಾದ ದೀಪಕ್ ಅರೋರಾ ಮತ್ತು ಅವರ ಪತ್ನಿ ಹಿಮಾನಿ, ಅಂಕಿತ್ ಕುಮಾರ್ ಮತ್ತು ಅವರ ಪತ್ನಿ ನೇಹಾ ಸಬರ್ವಾಲ್ ಮತ್ತು ಕುಮಾರ್ ಮತ್ತು ನೇಹಾ ಅವರ ಒಂದು ವರ್ಷದ ಮಗಳೊಂದಿಗೆ ಲಫಾರೆಸ್ಟಾ ಕೆಫೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ನಿಜಕ್ಕೂ ಅಲ್ಲಿ ಆಗಿದ್ದೇನು ಎಂಬುದನ್ನ ವಿವರಿಸಿದ ಕುಮಾರ್

ರಾತ್ರಿ 10 ಗಂಟೆಗೆ ಇವರೆಲ್ಲಾ ಊಟ ಮಾಡಿ ಪರಿಚಾರಕಿಯೊಬ್ಬರು "ಮಿಶ್ರಿ" ಅಥವಾ ಸಿಹಿಕಾರವನ್ನ ಹೋಲುವ ಹರಳುಗಳ ಬಟ್ಟಲನ್ನು ಇವರಿಗೆ ನೀಡಿದ್ದಾರೆ. ಕುಮಾರ್ ಮತ್ತು ಅವರ ಪುತ್ರಿಯನ್ನ ಹೊರತುಪಡಿಸಿ ಅವರ ಗುಂಪಿನಲ್ಲಿ ಎಲ್ಲರೂ ಈ ಹರಳುಗಳನ್ನು ಸೇವಿಸಿದರು. ಕೆಲವೇ ಸೆಕೆಂಡುಗಳಲ್ಲಿ ಅವರ ಬಾಯಿಯಿಂದ ರಕ್ತಸ್ರಾವವಾಗಲು ಪ್ರಾರಂಭಿಸಿದೆ. ಒಂದು ರೀತಿಯ ರಾಸಾಯನಿಕ ಪ್ರತಿಕ್ರಿಯೆಯಿಂದ ಅವರ ಬಾಯಿ ಸುಟ್ಟುಹೋಗಿತ್ತು. ನಂತರ ರಕ್ತದ ವಾಂತಿ ಮಾಡಿದರು. ನಾವು ಕಿರುಚಿದೆವು ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ರೆಸ್ಟೋರೆಂಟ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಾನು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದೆ, ಮತ್ತು ಪೊಲೀಸ್ ತಂಡವು 30 ನಿಮಿಷಗಳ ನಂತರ ಬಂದಿತು ಎಂದು ಅಂಕಿತ್ ಕುಮಾರ್ ಘಟನೆ ಬಗ್ಗೆ ವಿವರಿಸಿದ್ದಾರೆ.

ಪ್ರೀತಿಕಾ ಅವರ ಸ್ಥಿತಿ ಇತರರಂತೆ ಗಂಭೀರವಾಗಿರಲಿಲ್ಲ, ಮತ್ತು ನಾನು ಅವರನ್ನು ಎರಡು ಕಾರುಗಳಲ್ಲಿ ಸೆಕ್ಟರ್ 90 ರ ಆಸ್ಪತ್ರೆಗೆ ಕರೆದೊಯ್ದೆ. ತಮ್ಮ ಪತ್ನಿ ಗೋಯೆಂಕಾ, ಅರೋರಾ ಮತ್ತು ಹಿಮಾನಿ ಇನ್ನೂ ಆಸ್ಪತ್ರೆಯಲ್ಲಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ. "ವೈದ್ಯರು ಹಿಮಾನಿಯನ್ನು ವಾರ್ಡ್‌ಗೆ ಸ್ಥಳಾಂತರಿಸಿದ್ದಾರೆ. ಆದರೆ ಇತರರು ಇನ್ನೂ ತೀವ್ರ ನಿಗಾ ಘಟಕದಲ್ಲಿದ್ದಾರೆ. ಪ್ರೀತಿಕಾ ಅವರನ್ನು ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ ಅಂತ ಹೇಳಿದ್ದಾರೆ. ಡ್ರೈ ಐಸ್ ಎಂದು ಶಂಕಿಸಲಾದ ಕೆಲವು ಹರಳುಗಳನ್ನು ವೈದ್ಯರಿಗೆ ತೋರಿಸಲು ರೆಸ್ಟೋರೆಂಟ್‌ ಉದ್ಯೋಗಿಗಳಿಂದ ಬಲವಂತವಾಗಿ ತೆಗೆದುಕೊಂಡು ನಂತರ ಪೊಲೀಸರಿಗೆ ನೀಡಿದ್ದೇನೆ ಎಂದು ಕುಮಾರ್ ತಿಳಿಸಿದ್ದಾರೆ.

ಶೀಘ್ರದಲ್ಲೇ ಇವರಿಗೆ ನೀಡಿರುವ ಹರಳುಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ಮನೇಸರ್) ದೀಪಕ್ ಕುಮಾರ್ ಜೇವಾರಿಯಾ ಹೇಳಿದ್ದಾರೆ. ಅತಿಥಿಗಳಿಗೆ ಸಿಹಿಕಾರಕಗಳ ಬದಲು ಹಾನಿಕಾರಕ ರಾಸಾಯನಿಕಗಳನ್ನು ಹೇಗೆ ನೀಡಲಾಯಿತು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ರೆಸ್ಟೋರೆಂಟ್‌ಗೆ ನೀಡಲಾದ ಎಲ್ಲಾ ಪರವಾನಗಿಗಳನ್ನು ನಾವು ಪರಿಶೀಲಿಸುತ್ತೇವೆ ಅಂತಲೂ ಹೇಳಿದ್ದಾರೆ.

ಕುಮಾರ್ ಅವರ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 328 (ವಿಷದಿಂದ ಗಾಯಗೊಳಿಸುವುದು) ಅಡಿಯಲ್ಲಿ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಪರಿಚಾರಕಿ ಮತ್ತು ಇತರ ಅಪರಿಚಿತ ರೆಸ್ಟೋರೆಂಟ್ ಉದ್ಯೋಗಿಗಳ ವಿರುದ್ಧ ಭಾನುವಾರ ಎಫ್ಐಆರ್ ದಾಖಲಿಸಲಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.