ಕನ್ನಡ ಸುದ್ದಿ  /  Nation And-world  /  6 Killed And 3 Critically Injured In Mumbai-pune Expressway Accident

Mumbai-Pune Expressway accident: ಭೀಕರ ರಸ್ತೆ ಅಪಘಾತ: 6 ಮಂದಿ ಸಾವು, ಮೂವರ ಸ್ಥಿತಿ ಗಂಭೀರ

ಕಂಟೈನರ್​​ಗೆ ಕಾರು​ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿರುವ ಹಾಗೂ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪನ್ವೇಲ್‌ನ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ನಸುಕಿನ ಜಾವ ನಡೆದಿದೆ.

 ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ

ಮುಂಬೈ (ಮಹಾರಾಷ್ಟ್ರ): ಕಂಟೈನರ್​​ಗೆ ಕಾರು​ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿರುವ ಹಾಗೂ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪನ್ವೇಲ್‌ನ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ನಸುಕಿನ ಜಾವ ನಡೆದಿದೆ.

ವರದಿಗಳ ಪ್ರಕಾರ ಒಂಬತ್ತು ಪ್ರಯಾಣಿಕರೊಂದಿಗೆ ವೇಗವಾಗಿ ಬಂದ ಕಾರು ಹಿಂದಿನಿಂದ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಪನ್ವೇಲ್‌ನ ಖೋಪೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಕಾರು ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕಳೆದ ವಾರ ಉತ್ತರ ಪ್ರದೇಶದಲ್ಲಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದರು ಮತ್ತು ನಾಲ್ವರು ಗಾಯಗೊಂಡಿದ್ದರು. ಮಥುರಾದ ಸುರಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಎರಡು ಕಾರುಗಳು ಅಪಘಾತಕ್ಕೀಡಾಗಿತ್ತು. ಗಾಯಾಳುಗಳನ್ನು ಮಥುರಾ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಟೆಸ್ಲಾ ಕಾರಿನ ಬ್ರೇಕ್​ ಫೇಲ್ಯೂರ್.. ಶಾಲಾ ಬಾಲಕಿ ಸೇರಿ ಇಬ್ಬರ ಜೀವ ಬಲಿ

ಟೆಸ್ಲಾ ಕಾರಿನ ಬ್ರೇಕ್​ ಫೇಲ್ಯೂರ್ ಆಗಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಕಾರು ಚಾಲಕ ಕಾರನ್ನು ಪಾರ್ಕ್​ ಮಾಡಲು ಮುಂದಾಗುವ ವೇಳೆ ಬ್ರೇಕ್​ ಫೇಲ್ಯೂರ್ ಆಗಿದೆ. ಹೆಚ್ಚಿನ ವೇಗದಲ್ಲಿ ಕಾರು ಟೇಕ್ ಆಫ್ ಆಗಿ ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನಗಳಿಗೆ ಗುದ್ದಿಕೊಂಡು ಹೋಗಿದೆ. ಘಟನೆಯಲ್ಲಿ ಶಾಲಾ ಬಾಲಕಿ ಸೇರಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

ಟಿಎಂಸಿ ಸಂಸದನ ಕಾರು ಡಿಕ್ಕಿ ಹೊಡೆದು 4 ವರ್ಷದ ಮಗು ಸಾವು

ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಸಂಸದನ ಕಾರು ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಲ್ಲಿ ನಡೆದಿದೆ. ಮುರ್ಷಿದಾಬಾದ್ ಸಂಸದ ಅಬು ತಾಹೆರ್ ಖಾನ್ ಅವರ ಕಾರು ಇದಾಗಿದ್ದು, ಅಪಘಾತವಾದ ತಕ್ಷಣವೇ ಬಾಲಕನನ್ನು ಅಬು ತಾಹೆರ್ ಖಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಇತ್ತ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಚಲಿಸುತ್ತಿದ್ದ ರೈಲಿನಿಂದ ಯೋಧನನ್ನು ತಳ್ಳಿದ ಟಿಟಿಇ: ಎರಡೂ ಕಾಲು ಕಳೆದುಕೊಂಡ ಸೈನಿಕ

ಚಲಿಸುತ್ತಿದ್ದ ರೈಲಿನಿಂದ ಯೋಧನನ್ನು ಟಿಕೆಟ್​ ಪರೀಕ್ಷಕ (ಟಿಟಿಇ) ತಳ್ಳಿದ್ದು, ಪರಿಣಾಮ ಯೋಧನ ಎರಡೂ ಕಾಲುಗಳು ಕಟ್​ ಆಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಘಟನೆಯ ನಂತರ, ಯೋಧನ ಸಹ ಸೈನಿಕರು ಟಿಟಿಇಯನ್ನು ಥಳಿಸಿ ರೈಲನ್ನು ನಿಲ್ಲಿಸಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ ಯೋಧನು ಬರೇಲಿ ರೈಲು ನಿಲ್ದಾಣದಲ್ಲಿ ದಿಬ್ರುಗಢದಿಂದ ನವದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಅನ್ನು ಹತ್ತಲು ಬಂದಿದ್ದಾರೆ. ಚಲಿಸುತ್ತಿದ್ದ ರೈಲನ್ನೇ ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಟಿಟಿಇ ಯೋಧನನ್ನು ಹತ್ತಲು ಬಿಡದೆ ದೂಕಿದ್ದಾರೆ. ಗಾಯಗೊಂಡ ಯೋಧನನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಟಿಇ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಜಿಆರ್‌ಪಿ ಇನ್ಸ್‌ಪೆಕ್ಟರ್, ಅಜಿತ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

IPL_Entry_Point