ದೆಹಲಿ ಮೆಟ್ರೋದಲ್ಲಿ ಮಹಿಳೆಯರ ಭಜನೆ; ಮಿಲಿಯನ್ ವೀಕ್ಷಣೆಗೊಳಪಟ್ಟ ವಿಡಿಯೋ
ಆಗಾಗ ಮೆಟ್ರೋದಲ್ಲಿ ಆಶ್ಚರ್ಯಕರ ಸಂಗತಿಗಳು ನಡೆಯುತ್ತಲೇ ಇರುತ್ತದೆ. ಈ ಬಾರಿ ದೆಹಲಿ ಮೆಟ್ರೋದಲ್ಲಿ ಮಹಿಳೆಯರು ಭಜನೆ ಮಾಡಿದ ವಿಡಿಯೋ ಒಂದು ವೈರಲ್ ಆಗಿದೆ.

ದೆಹಲಿ: ಆಗಾಗ ಮೆಟ್ರೋದಲ್ಲಿ ಆಶ್ಚರ್ಯಕರ ಸಂಗತಿಗಳು ನಡೆಯುತ್ತಲೇ ಇರುತ್ತದೆ. ಒಂದೊಂದು ಬಾರಿಯೂ ಒಂದೊಂದು ರೀತಿಯ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಹೆಚ್ಚಿನ ಸುದ್ದಿಗಳು ಮೆಟ್ರೋ ನಿಯಮ ಉಲ್ಲಂಘನೆಯ ಬಗ್ಗೆಯೇ ಇರುತ್ತದೆ. ಈ ಬಾರಿಯೂ ಅಂತಹದೇ ಒಂದು ಸುದ್ದಿ ಹಾಗೂ ಆಶ್ಚರ್ಯಕರ ವಿಡಿಯೋ ವೈರಲ್ ಆಗುತ್ತಿದೆ. ಅದೇನೆಂದರೆ ಒಂದಷ್ಟು ಮಹಿಳೆಯರು ಮೆಟ್ರೋದಲ್ಲಿ ಕುಳಿತುಕೊಂಡು ಭಜನೆ ಮಾಡುತ್ತಿರುತ್ತಾರೆ. ಆ ವಿಡಿಯೋ ವೈರಲ್ ಆಗಿದೆ. ಮುಂದೇನಾಗಿದೆ ಎಂಬುದನ್ನು ಗಮನಿಸಿ.
ಒಂದಷ್ಟು ಜನ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾ ಇರುತ್ತಾರೆ. ಅದೇ ಸಂದರ್ಭದಲ್ಲಿ ಎಲ್ಲರೂ ಡೋಲಕ್ ಹಾಗೂ ತಾಳಗಳನ್ನು ಹಿಡಿದುಕೊಂಡು ಭಜನೆ ಮಾಡಲು ಆರಂಭಿಸುತ್ತಾರೆ. ಭಜನೆ ಮಾಡುತ್ತಾ ಮಾಡುತ್ತಾ ಏರುಧ್ವನಿಯಲ್ಲಿ ಎಲ್ಲರಿಗೂ ಕೇಳುವಂತೆ ಭಜನೆ ಮಾಡುತ್ತಾ ಇರುತ್ತಾರೆ. ಇನ್ನು ಸೀಟ್ ಸಿಗದೇ ಇದ್ದ ಕೆಲವರು ನೆಲದ ಮೇಲೆ ಕುಳಿತುಕೊಂಡು ಡೋಲಕ್ ಭಾರಿಸುತ್ತಾ ಇರುತ್ತಾರೆ. ಅದೇ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಇನ್ನಿತರರು ಅವರನ್ನು ನೋಡುತ್ತಾ ಇರುತ್ತಿದ್ದರೆ, ಇನ್ನು ಕೆಲವರು ವಿಡಿಯೋ ಮಾಡಿಕೊಳ್ಳುತ್ತಾರೆ.
ಆದರೆ, ಮೆಟ್ರೋದಲ್ಲಿ ಈ ರೀತಿ ಭಜನೆ ಮಾಡಲು ಅವಕಾಶ ಇಲ್ಲ ಎನ್ನುವುದನ್ನು ಮೊದಲು ಯಾರೂ ತಿಳಿಸುವುದಿಲ್ಲ. ಮೆಟ್ರೋ ಅಧಿಕಾರಿಯೊಬ್ಬರು ಬಂದು ಇಲ್ಲಿ ಭಜನೆ ಮಾಡುವಂತಿಲ್ಲ ಎಂದು ಅವರನ್ನು ತಡೆಯುತ್ತಾರೆ. ನೆಲಕ್ಕೆ ಕುಳಿತವರು ಎದ್ದೇಳುತ್ತಾರೆ. ಎಲ್ಲರ ಗಮನವೂ ಅಲ್ಲೇ ಕೇಂದ್ರೀಕೃತವಾಗಿರುತ್ತದೆ. ಆ ನಂತರದಲ್ಲಿ ಭಜನೆ ಮಾಡುತ್ತಿದ್ದವರು ಭಜನೆ ನಿಲ್ಲಿಸುತ್ತಾರೆ.
ಮೆಟ್ರೋದಲ್ಲಿ ಹೀಗೆಲ್ಲ ಮಾಡುವಂತಿಲ್ಲ ಎಂದು ಹೇಳಿದಾಗ ಅವರು ಕ್ಷಮೆಯಾಚಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನೂ ಸಹ ಪಡೆದುಕೊಂಡಿದೆ. Instagram ಬಳಕೆದಾರ @billusanda7011 ಅವರು ಸೆರೆಹಿಡಿದ ಈ ಕ್ಷಣವು ವೈರಲ್ ಆಗುತ್ತಿದೆ. ಅದೇ ವಿಡಿಯೋ ತುಣುಕನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಈ ವೀಡಿಯೊ ಎರಡು ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ದೆಹಲಿ ಮೆಟ್ರೋ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊಂದಿದೆ. ನೆಲದ ಮೇಲೆ ಕುಳಿತುಕೊಳ್ಳುವುದು ಅಥವಾ ಯಾವುದೇ ರೀತಿಯ ಪ್ರದರ್ಶನ ನೀಡುವುದನ್ನು ಅನುಮತಿಸಲಾಗುವುದಿಲ್ಲ ಎಂಬುದನ್ನು ಮತ್ತೆ ಒತ್ತಿ ಹೇಳಿದೆ. ಇದೇ ರೀತಿ ಎಲ್ಲರೂ ನಿಯಮಗಳನ್ನು ಮೀರಲು ಆರಂಭಿಸಿದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಆ ಕಾರಣಕ್ಕಾಗಿ ಸಾರ್ವಜನಿಕರು ನಿಯಮಗಳ ಪಾಲನೆ ಮಾಡಬೇಕು.
ವಿಭಾಗ