ಕನ್ನಡ ಸುದ್ದಿ  /  Nation And-world  /  After 54 Days, Mother Of Miracle Baby Who Survived Turkey Earthquake Found

Miracle baby Mother: ಇನ್ನೊಂದು ಪವಾಡ, ಟರ್ಕಿ ಭೂಕಂಪದಲ್ಲಿ 52 ದಿನಗಳ ಬಳಿಕ ಬದುಕಿಬಂದ ಮಿರಾಕಲ್‌ ಮಗುವಿನ ಅಮ್ಮ, ನೆಟ್ಟಿಗರಿಂದ ಆನಂದಬಾಷ್ಪ

ಫೆಬ್ರವರಿ 13ರಂದು ಈ ಮಗುವಿನ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಮಗು ಬದುಕಿದ್ದು ಪವಾಡವೇ ಸರಿ ಎಂದು ಜನರು ಅಭಿಪ್ರಾಯಪಟ್ಟಿದ್ದರು. ಇದೀಗ ಆ ಮಗುವಿನ ಅಮ್ಮನೂ ಜೀವಂತವಾಗಿರುವ ಸುದ್ದಿ ಬಂದಿದೆ.

 ಟರ್ಕಿ ಭೂಕಂಪದಲ್ಲಿ 52 ದಿನಗಳ ಬಳಿಕ ಬದುಕಿಬಂದ ಮಿರಾಕಲ್‌ ಮಗುವಿನ ಅಮ್ಮ, ನೆಟ್ಟಿಗರಿಂದ ಆನಂದಬಾಷ್ಪ
ಟರ್ಕಿ ಭೂಕಂಪದಲ್ಲಿ 52 ದಿನಗಳ ಬಳಿಕ ಬದುಕಿಬಂದ ಮಿರಾಕಲ್‌ ಮಗುವಿನ ಅಮ್ಮ, ನೆಟ್ಟಿಗರಿಂದ ಆನಂದಬಾಷ್ಪ (Twitter)

ಟರ್ಕಿಯಲ್ಲಿ ಭಾರೀ ಭೂಕಂಪ ಸಂಭವಿಸಿದ ಬಳಿಕ ಅವಶೇಷಗಳಡಿಯಿಂದ 128 ಗಂಟೆಗಳ ನಂತರ ರಕ್ಷಿಸಲ್ಪಟ್ಟ "ಪವಾಡಸದೃಶ್ಯ ಕಂದಮ್ಮಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿತ್ತು. ಈ ಪುಟ್ಟ ಮಗುವಿನ ಫೋಟೊ ವೈರಲ್‌ ಆಗಿತ್ತು. ಆದರೆ, ಭೂಕಂಪದಲ್ಲಿ ಪುಟ್ಟ ಕಂದಮ್ಮನ ತಾಯಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಬಂದ ವರದಿ ಪ್ರಕಾರ ಆ ಅಮ್ಮ ಜೀವಂತವಾಗಿದ್ದಾರೆ. ಭೂಕಂಪ ಸಂಭವಿಸಿದ 52 ದಿನಗಳ ಬಳಿಕ ಬದುಕಿ ಬಂದಿದ್ದಾರೆ. ಈಕೆ ಬದುಕಿ ಬಂದಿರುವ ಕುರಿತು ಸಚಿವ ಆಂಟನ್ ಗೆರಾಶ್ಚೆಂಕೊ ಸ್ಪಷ್ಟಪಡಿಸಿದ್ದಾರೆ.

"ಟರ್ಕಿಯಲ್ಲಿ ಭೂಕಂಪದ ನಂತರ 128 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಕಳೆದ ಮಗುವಿನ ಈ ಚಿತ್ರವನ್ನು ನೀವು ಬಹುಶಃ ನೆನಪಿಸಿಕೊಳ್ಳುತ್ತೀರಿ. ಮಗುವಿನ ತಾಯಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಆ ತಾಯಿ ಜೀವಂತವಾಗಿದ್ದಾಳೆ! ಆಕೆಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಮಾರು 54 ದಿನಗಳ ಅಂತರ ಮತ್ತು ಡಿಎನ್‌ಎ ಪರೀಕ್ಷೆಯ ನಂತರ ಆ ಮಗು ಮತ್ತು ತಾಯಿ ಮತ್ತೆ ಒಟ್ಟಿಗೆ ಇದ್ದಾರೆ, ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇವರು ಮಾಡಿರುವ ಟ್ವೀಟ್‌ ಈಗಾಗಲೇ 5.1 ವೀಕ್ಷಣೆ ಪಡೆದುಕೊಂಡಿದೆ. ಇದನ್ನು ನೆಟ್ಟಿಗರು "ಇನ್ನೊಂದು ಪವಾಡ" ಎಂದು ಕರೆದಿದ್ದಾರೆ.

"ಎಂತಹ ಸಂತೋಷದ ಸುದ್ದಿ. ಅವರಿಬ್ಬರೂ ಜೀವಂತವಾಗಿರುವುದು ನನಗೆ ಖುಷಿ ತಂದಿದೆ. ಅವರು ಮತ್ತೆ ಒಂದಾಗಿದ್ದಾರೆ. ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿರುವುದಕ್ಕೆ ಧನ್ಯವಾದಗಳು" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

"ನೋವಿನ ಕತೆ, ಆದರೆ, ಈ ಕತೆ ಸುಂದರ ಅಂತ್ಯಕಂಡಿದೆ. ಮಗು ಮತ್ತು ತಾಯಿ ಒಂದಾಗಿರುವುದು ಆನಂದಬಾಷ್ಪ ತರಿಸಿದೆ" ಎಂದು ಇನ್ನೊಬ್ಬರು ಟ್ವಿಟ್ಟರ್‌ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.

"ಎಷ್ಟು ಸುಂದರವಾದ ಕತೆಯಿದೆ. ಮಗು ಮತ್ತು ತಾಯಿ ಮತ್ತೆ ಒಂದಾಗಿದ್ದಾರೆ. ಮಗುವನ್ನು ಮತ್ತೆ ನೋಡಿಕೊಳ್ಳುವಷ್ಟು ತಾಯಿ ಆರೋಗ್ಯವಾಗಿರಲಿ ಎಂದು ಹಾರೈಸುವೆ. ಆಕೆಯ ಮುಂದಿನ ಜೀವನ ಸಂತೋಷದಿಂದ ಕೂಡಿರಲಿ" ಎಂದು ಮತ್ತೊಬ್ಬರು ಟ್ವಿಟ್ಟರ್‌ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.

ಫೆಬ್ರವರಿ 13ರಂದು ಈ ಮಗುವಿನ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಮಗು ಬದುಕಿದ್ದು ಪವಾಡವೇ ಸರಿ ಎಂದು ಜನರು ಅಭಿಪ್ರಾಯಪಟ್ಟಿದ್ದರು.

ಫೆಬ್ರವರಿ 6 ರಂದು ಟರ್ಕಿಯ ಮಧ್ಯಭಾಗದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ತೀವ್ರ ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿರಾರು ಕಟ್ಟಡಗಳು ನೆಲಸಮವಾಗಿವೆ. ಟರ್ಕಿಯಲ್ಲಿ ಮಾತ್ರ ಸಾವಿನ ಸಂಖ್ಯೆ 42,000ಕ್ಕೂ ಅಧಿಕ ಎಂದು ಹೇಳಲಾಗಿದೆ.

ಸಿರಿಯಾದಲ್ಲಿ ಸುಮಾರು 5 ಸಾವಿರ ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡರು. 

ಭಾರತಕ ಕೂಡ ಟರ್ಕಿಗೆ ನೆರವಿನ ಹಸ್ತ ಚಾಚಿತ್ತು. ಎನ್ ಡಿಆರ್ ಎಸ್ ತಂಡಗಳು, ವೈದ್ಯಕೀಯ ಉಪಕರಣಗಳು, ಮೆಡಿಸಿನ್ ಗಳ ನೆರವು ನೀಡಿತ್ತು. ಆಪರೇಷನ್ ದೋಸ್ತ್ ಹೆಸರಿನಲ್ಲಿ ಪರಿಹಾರ ಕಾರ್ಯಾಚರಣೆ ಮುಗಿಸಿ ಎನ್ ಡಿಆರ್ ಎಫ್ ನ ಕೊನೆಯ ತಂಡ ಭಾರತಕ್ಕೆ ವಾಪಸ್ ಆಗಿದೆ.

IPL_Entry_Point