ಮಗನ ನಿಧನ ಬಳಿಕ ಸೊಸೆಗೆ ಎಲ್ಲಾ ಪರಿಹಾರ ಸಿಕ್ಕಿದೆ; ಎನ್ಒಕೆ ನೀತಿ ಪರಿಷ್ಕರಣೆಗೆ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಪೋಷಕರ ಒತ್ತಾಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಗನ ನಿಧನ ಬಳಿಕ ಸೊಸೆಗೆ ಎಲ್ಲಾ ಪರಿಹಾರ ಸಿಕ್ಕಿದೆ; ಎನ್ಒಕೆ ನೀತಿ ಪರಿಷ್ಕರಣೆಗೆ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಪೋಷಕರ ಒತ್ತಾಯ

ಮಗನ ನಿಧನ ಬಳಿಕ ಸೊಸೆಗೆ ಎಲ್ಲಾ ಪರಿಹಾರ ಸಿಕ್ಕಿದೆ; ಎನ್ಒಕೆ ನೀತಿ ಪರಿಷ್ಕರಣೆಗೆ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಪೋಷಕರ ಒತ್ತಾಯ

ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪೋಷಕರು ತಮಗೆ ಪರಿಹಾರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಎಲ್ಲಾ ಪರಿಹಾರ ಸೊಸೆಗೆ ಹೋಗಿದೆ. ಹೀಗಾಗಿ ಸೇನೆಯಲ್ಲಿನ ನೆಕ್ಸ್ಟ್ ಆಫ್ ಕೀನ್ ನೀತಿಯನ್ನು ಪರಿಷ್ಕರಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಮಗನ ನಿಧನ ಬಳಿಕ ಸೊಸೆಗೆ ಎಲ್ಲಾ ಪರಿಹಾರ ಸಿಕ್ಕಿದೆ; ಎನ್ಒಕೆ ನೀತಿ ಪರಿಷ್ಕರಣೆಗೆ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಪೋಷಕರ ಒತ್ತಾಯ
ಮಗನ ನಿಧನ ಬಳಿಕ ಸೊಸೆಗೆ ಎಲ್ಲಾ ಪರಿಹಾರ ಸಿಕ್ಕಿದೆ; ಎನ್ಒಕೆ ನೀತಿ ಪರಿಷ್ಕರಣೆಗೆ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಪೋಷಕರ ಒತ್ತಾಯ

ದೆಹಲಿ: ಮದುವೆಯಾದ ಕೇವಲ 5 ತಿಂಗಳಿಗೆ ಮಗ ಸೇನೆಯಲ್ಲಿ ಹುತಾತ್ಮನಾಗಿದ್ದಾನೆ. ಮಗನ ಸಾವಿನ ಬಳಿಕ ಸೊಸೆಗೆ ಎಲ್ಲಾ ರೀತಿಯ ಪರಿಹಾರವನ್ನು ನೀಡಲಾಗಿದೆ. ನಮಗೆ ಪುತ್ರನ ಫೋಟೊ ಅಷ್ಟೇ ಉಳಿದಿದೆ. ಹೀಗಾಗಿ ನೆಕ್ಸ್ಟ್ ಆಫ್ ಕೀನ್ (ಎನ್‌ಒಕೆ) ನೀತಿಯನ್ನು ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಮ್ಮ ಮಗನಿಗೆ ಮರಣೋತ್ತರ ಕೀರ್ತಿ ಚಕ್ರವನ್ನು ನೀಡಲಾಯಿತು. ಇದು ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ. ಆದರೆ ಸೇನಾ ಸಿಬ್ಬಂದಿಯ ಮರಣದ ಸಂದರ್ಭದಲ್ಲಿ ಕುಟುಂಬಗಳಿಗೆ ಹಣಕಾಸಿನ ನೆರವು ಹಂಚಿಕೆಯ ನೀತಿಯನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಟಿವಿ9 ಭಾರತ ವರ್ಷ್‌ಗೆ ಸಂರ್ಶನ ನೀಡಿರುವ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಂದೆ ರವಿ ಪ್ರತಾಪ್ ಸಿಂಗ್ ಮತ್ತು ತಾಯಿ ಮಂಜು ಸಿಂಗ್, ಪುತ್ರನ ಸಾವಿನ ಬಳಿಕ ಸೊಸೆ ಹೆಚ್ಚಿನ ಪರಿಹಾರಗಳನ್ನು ಸ್ವೀಕರಿಸುತ್ತಾಳೆ. ಆದರೆ ಅವರು ಇನ್ಮುಂದೆ ನಮ್ಮೊಂದಿಗೆ ವಾಸಿಸುವುದಿಲ್ಲ ಎಂದು ಹೇಳಿದ್ದಾರೆ. ಎನ್‌ಒಕೆಗಾಗಿ ನಿಗದಿಪಡಿಸಿದ ಮಾನದಂಡಗಳು ಸರಿಯಾಗಿಲ್ಲ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೂ ಮಾತನಾಡಿದ್ದೇವೆ. ಅಂಶುಮಾನ್ ಅವರ ಪತ್ನಿ ಈಗ ನಮ್ಮೊಂದಿಗೆ ವಾಸಿಸುತ್ತಿಲ್ಲ. ಅವರ ಮದುವೆಯಾಗಿ ಕೇವಲ 5 ತಿಂಗಳಾಗಿತ್ತು. ಅವರಿಗೆ ಮಕ್ಕಳಿಲ್ಲ. ನಾವು ಕೀರ್ತಿ ಚಕ್ರವನ್ನು ಸ್ವೀಕರಿಸುವವರಾಗಿದ್ದರೂ ನಮ್ಮ ಮಗನ ಪೋಟೊವನ್ನು ಮಾತ್ರ ಗೋಡೆಯ ಮೇಲೆ ಹಾರದೊಂದಿಗೆ ನೇತುಹಾಕಿದ್ದೇನೆ ಎಂದು ರವಿ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಹೀಗಾಗಿ ಎನ್‌ಒಕೆ ನೀತಿಯ ವ್ಯಾಖ್ಯಾನವನ್ನು ಸರಿಪಡಿಸಬೇಕೆಂದು ನಾವು ಬಯಸುತ್ತೇವೆ. ಹುತಾತ್ಮರ ಪತ್ನಿ ಈಗ ಅನೇಕ ಅವಲಂಬನೆಗಳನ್ನು ಹೊಂದಿರುವ ಕುಟುಂಬದೊಂದಿಗೆ ಇರಬೇಕೆಂದು ನಿರ್ಧರಿಸಿದ್ದಾರೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ರವಿ ಸಿಂಗ್ ಅವರ ಮಾತುಗಳಿಗೆ ಅವರ ಪತ್ನಿ ಮಂಜು ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇತರ ಪೋಷಕರು ಇದೇ ರೀತಿಯ ಕಷ್ಟಗಳನ್ನು ಸಹಿಸಿಕೊಳ್ಳುವುದನ್ನು ತಡೆಯಲು ಎನ್‌ಒಕೆ ನೀತಿಯಲ್ಲಿ ಬದಲಾವಣೆಗಳು ಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಪ್ರಸ್ತುತ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಸೇನೆಗೆ ಸೇರಿದಾಗ, ಅವರ ಪೋಷಕರು ಅಥವಾ ಪೋಷಕರ ಹೆಸರನ್ನು ಅವರ ಹತ್ತಿರದ ಸಂಬಂಧಿಗಳನ್ನು ಸೂಚಿಸುವ ಅವರ ಬದುಕಿನ ಸಂಬಂಧಿಕರು ಎಂದು ದಾಖಲಿಸಲಾಗುತ್ತದೆ. ಆದರೆ ಒಬ್ಬ ವ್ಯಕ್ತಿಯು ಮದುವೆಯಾದ ನಂತರ ಅವರ ಸಂಗಾತಿ ಎನ್‌ಒಕೆ ದಾಖಲೆಯಲ್ಲಿ ಪೋಷಕರನ್ನಾಗಿ ಬದಲಾಯಿಸಲಾಗುತ್ತದೆ. 2023ರ ಕಳೆದ ವರ್ಷ ಜುಲೈನಲ್ಲಿ ಸಿಯಾಚಿನ್‌ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ್ದರು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.