ಕೇಂದ್ರ ಬಜೆಟ್‌ನಲ್ಲಿ, ಪಿಎಂ ಧನ ಧಾನ್ಯ ಕೃಷಿ ಯೋಜನೆಯಿಂದ 1.7 ಕೋಟಿ ಕೃಷಿಕರಿಗೆ ಅನುಕೂಲ, ಕೃಷಿ ಕ್ಷೇತ್ರಕ್ಕೆ ಬೇರೇನು ಕೊಡುಗೆ
Agriculture budget 2025: ಪ್ರಧಾನ ಮಂತ್ರಿ ದಂಢನ್ಯಾ ಕೃಷಿ ಯೋಜನಾ ಜಾರಿಗೊಳಿಸಲಾಗುತ್ತಿದ್ದು, ಇದು ದೇಶದ ಕಡಿಮೆ ಉತ್ಪಾದಕತೆ ಹೊಂದಿದ 100 ಜಿಲ್ಲೆಗಳಿಗಾಗಿ ರೂಪಿಸಲಾಗಿದೆ. ಕೃಷಿ ಉತ್ಪಾದಕತೆ ಮತ್ತು ಪಂಚಾಯತ್ ಮಟ್ಟದಲ್ಲಿ ಶೇಖರಣೆಯನ್ನು ಹೆಚ್ಚಿಸುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಕೃಷಿ ಕ್ಷೇತ್ರಕ್ಕೆ ಬೇರೇನು ಕೊಡುಗೆ ಇಲ್ಲಿದೆ ವಿವರ.

Agriculture budget 2025: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ1) ಸಂಸತ್ತಿನಲ್ಲಿ 8ನೇ ಸಲ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಈ ಕೇಂದ್ರ ಬಜೆಟ್ 2025 ಮುಖ್ಯವಾಗಿ 10 ಆದ್ಯತಾ ವಲಯಗಳ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಸಚಿವೆ ನಿರ್ಮಲಾ ಸೀತರಾಮನ್ ಹೇಳಿದರು. ಇದೇ ವೇಳೆ, ಕೃಷಿ ಕ್ಷೇತ್ರವೇ ಈ ಸಲದ ಎಂಜಿನ್ ಎಂದು ಹೇಳಿದರು.
ಕೇಂದ್ರ ಬೆಜಟ್ 2015; ಕೃಷಿ ಕ್ಷೇತ್ರಕ್ಕೆ ಏನೇನು ಕೊಡುಗೆ
ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನಾ ಜಾರಿಗೊಳಿಸಲಾಗುತ್ತಿದ್ದು, ಇದು ದೇಶದ ಕಡಿಮೆ ಉತ್ಪಾದಕತೆ ಹೊಂದಿದ 100 ಜಿಲ್ಲೆಗಳಿಗಾಗಿ ರೂಪಿಸಲಾಗಿದೆ. ಕೃಷಿ ಉತ್ಪಾದಕತೆ ಮತ್ತು ಪಂಚಾಯತ್ ಮಟ್ಟದಲ್ಲಿ ಶೇಖರಣೆಯನ್ನು ಹೆಚ್ಚಿಸುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಈ ಯೋಜನೆಯು 1.7 ಕೋಟಿ ಕೃಷಿಕರಿಗೆ ಸಹಕಾರಿಯಾಗಲಿದ್ದು, ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಇದು ಕೃಷಿಕರ ಆದಾಯ ವೃದ್ಧಿ ಮತ್ತು ಕೃಷಿ ಉತ್ಪಾದನೆ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ವಿವರಿಸಿದರು.
ಜಾಗತಿಕ ಅಭ್ಯಾಸಗಳನ್ನು ಅಗತ್ಯ ರೀತಿಯಲ್ಲಿ ಅಳವಡಿಸುವುದು
ಕೃಷಿ ಕ್ಷೇತ್ರದಲ್ಲಿ ಜಾಗತಿಕ ಅಭ್ಯಾಸಗಳನ್ನು ಅಗತ್ಯ ರೀತಿಯಲ್ಲಿ ಭಾರತದಲ್ಲೂ ಅಳವಡಿಸಲಾಗುವುದು.ನಮ್ಮ ಸರ್ಕಾರವು ದ್ವಿದಳ ಧಾನ್ಯಗಳಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದು, ಉದ್ದು, ತೊಗರಿ ಮತ್ತು ಮಸೂರ್ ಕೃಷಿಗಳನ್ನು ಮುಖ್ಯವಾಗಿಟ್ಟುಕೊಂಡು ಈ ಉಪಕ್ರಮ ಜಾರಿಗೊಳಿಸಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಆದಾಯ ಏರಿಕೆಯೊಂದಿಗೆ ಹಣ್ಣುಗಳಲ್ಲಿನ ಬಳಕೆ ಕೂಡ ಹೆಚ್ಚಾಗುತ್ತಿರುವುದರಿಂದ, ರೈತರಿಗೆ ಸಂಭಾವನೆ ಸಹ ರಾಜ್ಯಗಳ ಸಹಯೋಗದೊಂದಿಗೆ ಹೆಚ್ಚಾಗುತ್ತದೆ ಎಂದು ಸೀತಾರಾಮನ್ ಹೇಳಿದರು. ಬಿಹಾರದಲ್ಲಿ ವಿಶೇಷ ಅವಕಾಶವಿದೆ, ಮಖಾನಾ ಮಂಡಳಿಯನ್ನು ಬಿಹಾರದಲ್ಲಿ ಸ್ಥಾಪಿಸಲಾಗುವುದು. ಈ ಮಂಡಳಿಯು ಮಖಾನಾ ರೈತರಿಗೆ ತರಬೇತಿ ಮತ್ತು ಬೆಂಬಲವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಹೆಚ್ಚು ಇಳುವರಿ ಬೀಜಗಳ ರಾಷ್ಟ್ರೀಯ ಮಿಷನ್
ಹೆಚ್ಚಿನ ಇಳುವರಿ ನೀಡುವ ಬೀಜಗಳ ಬಗ್ಗೆ ಮೋದಿ ಸರ್ಕಾರವು ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸಲಿದೆ ಎಂದು ಹಣಕಾಸು ಸಚಿವರು ಹೇಳಿದರು. ಮೀನು ಮತ್ತು ಆಕ್ವಾ ಸಂಸ್ಕೃತಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್, ಈ ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕಾಗಿ ಅಂಡಮಾನ್ ಮತ್ತು ನಿಕೋಬಾರ್ ಮೇಲೆ ವಿಶೇಷ ಗಮನ ಹರಿಸಲಾಗುವುದು ಎಂದು ಹೇಳಿದರು.
ಹತ್ತಿ ತಳಿಗಳಿಗೆ 5 ವರ್ಷದ ಯೋಜನೆ
ಹತ್ತಿ ಪ್ರಭೇದಗಳಿಗೆ ಐದು ವರ್ಷಗಳ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಘೋಷಿಸಿತು, ಹಣಕಾಸು ಸಚಿವರು ರೈತರಿಗೆ ಉತ್ತಮ ವಿಜ್ಞಾನ ಬೆಂಬಲವನ್ನು ನೀಡಲಾಗುವುದು ಮತ್ತು ಜವಳಿ ವಲಯದಲ್ಲಿ ಬಳಸುವ ಹತ್ತಿಯ ಸ್ಥಿರ ಪೂರೈಕೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿ ಹೆಚ್ಚಳ
ಕೃಷಿಕರಿಗಾಘಿ ಮಾರ್ಪಡಿಸಿದ ಯೋಜನೆಯಡಿ ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಕಿಸಾನ್ ಕ್ರೆಡಿಟ್ ಕಾರ್ಡ್ಸ್ (ಕೆಸಿಸಿ) ಮೂಲಕ ತೆಗೆದುಕೊಂಡ ಸಾಲಗಳ ವ್ಯಾಪ್ತಿಯಲ್ಲಿ ಬರುತ್ತದೆ.
ಕೃಷಿಯನ್ನು ಹೊರತುಪಡಿಸಿ, ಯೂನಿಯನ್ ಬಜೆಟ್ 2025 ರಲ್ಲಿ ಆದ್ಯತಾ ವಲಯದಲ್ಲಿ ಉತ್ಪಾದನೆ, ಉದ್ಯೋಗ, ಎಂಎಸ್‌ಎಂಇಗಳು, ಉನ್ನತಿಗೇರಿಸುವ ಗ್ರಾಮೀಣ ಪ್ರದೇಶಗಳು ಮತ್ತು ನಾವೀನ್ಯತೆ ಸೇರಿವೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬೆಳವಣಿಗೆಯ ವೇಗ ಹೆಚ್ಚಿಸುವುದು, ಮಧ್ಯಮ ವರ್ಗವನ್ನು ಉನ್ನತಿಗೇರಿಸುವುದು. ದೇಶದ ಸಾಮರ್ಥ್ಯವನ್ನು ಅನ್ವೇಷಿಸಲು ಕೇಂದ್ರ ಸರ್ಕಾರವು ಪ್ರಯಾಣವನ್ನು ಪ್ರಾರಂಭಿಸುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ತಮ್ಮ ಕೇಂದ್ರ ಬಜೆಟ್ ಭಾಷಣದಲ್ಲಿ ಹೇಳಿದರು.

ವಿಭಾಗ