ಅಯ್ಯೋ ದೇವ್ರೇ! ವಿಮಾನದಲ್ಲಿ ಕೊಟ್ಟ ಊಟದಲ್ಲೂ ಇತ್ತು ಜಿರಳೆ: ನ್ಯೂಯಾರ್ಕ್‌ಗೆ ಹೋಗ್ತಿದ್ದ ಏರ್‌ಇಂಡಿಯಾ ವಿಮಾನದಲ್ಲಿದ್ದ ಪ್ರಯಾಣಿಕ ಈಗ ಅಸ್ವಸ್ಥ-air india passenger suffers from food poising after cockroach found in meal served on new york bound flight prs ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಯ್ಯೋ ದೇವ್ರೇ! ವಿಮಾನದಲ್ಲಿ ಕೊಟ್ಟ ಊಟದಲ್ಲೂ ಇತ್ತು ಜಿರಳೆ: ನ್ಯೂಯಾರ್ಕ್‌ಗೆ ಹೋಗ್ತಿದ್ದ ಏರ್‌ಇಂಡಿಯಾ ವಿಮಾನದಲ್ಲಿದ್ದ ಪ್ರಯಾಣಿಕ ಈಗ ಅಸ್ವಸ್ಥ

ಅಯ್ಯೋ ದೇವ್ರೇ! ವಿಮಾನದಲ್ಲಿ ಕೊಟ್ಟ ಊಟದಲ್ಲೂ ಇತ್ತು ಜಿರಳೆ: ನ್ಯೂಯಾರ್ಕ್‌ಗೆ ಹೋಗ್ತಿದ್ದ ಏರ್‌ಇಂಡಿಯಾ ವಿಮಾನದಲ್ಲಿದ್ದ ಪ್ರಯಾಣಿಕ ಈಗ ಅಸ್ವಸ್ಥ

Food Poison: ದೆಹಲಿಯಿಂದ ನ್ಯೂಯಾರ್ಕ್​ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಲಾದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ಇದರ ಚಿತ್ರ, ವಿಡಿಯೋ ನೆಟ್ಸ್​ನಲ್ಲಿ ವೈರಲ್ ಆಗುತ್ತಿದೆ.

ನ್ಯೂಯಾರ್ಕ್​ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ನೀಡಲಾದ ಊಟದಲ್ಲಿ ಊಟದಲ್ಲಿ ಜಿರಳೆ ಪತ್ತೆ
ನ್ಯೂಯಾರ್ಕ್​ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ನೀಡಲಾದ ಊಟದಲ್ಲಿ ಊಟದಲ್ಲಿ ಜಿರಳೆ ಪತ್ತೆ

ನವದೆಹಲಿ: ಏರ್​ ಇಂಡಿಯಾ ಪ್ರಯಾಣಿಕರೊಬ್ಬರು ದೆಹಲಿಯಿಂದ ನ್ಯೂಯಾರ್ಕ್​ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬಡಿಸಿದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ಇದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ತನ್ನ ಎರಡು ವರ್ಷದ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಸುಯೇಷಾ ಸಾವಂತ್ ಅವರಿಗೆ ನೀಡಿದ ಆಮ್ಲೆಟ್​ನಲ್ಲಿ ಜಿರಳೆ ಸಿಕ್ಕಿದೆ. ಅದರ ಫೋಟೋ ಜೊತೆಗೆ ಸಾವಂತ್ ಪೋಸ್ಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಮಾನಯಾನ ಸಂಸ್ಥೆಯು ಇದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿದೆ.

ದೆಹಲಿಯಿಂದ ನ್ಯೂಯಾರ್ಕ್​​ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತನಗೆ ನೀಡಲಾದ ಆಮ್ಲೆಟ್​​ನಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಸಾವಂತ್ ಪೋಸ್ಟ್​​ನಲ್ಲಿ ಹಂಚಿಕೊಂಡಿದ್ದಾರೆ. 'ಜಿರಳೆ ಪತ್ತೆಯಾಗುವುದಕ್ಕೂ ಮುನ್ನವೇ ನಾವು ಅರ್ಧಕ್ಕಿಂತ ಹೆಚ್ಚು ತಿಂದಿದ್ದೆವು. ನನ್ನ 2 ವರ್ಷದ ಮಗುವೇ ಹೆಚ್ಚು ತಿಂದಿದೆ. ಇದರ ಪರಿಣಾಮ ಫುಡ್ ಪಾಯಿಸನ್ ಆಗಿದೆ ಎಂದು ಸಾವಂತ್ ಪೋಸ್ಟ್​ನಲ್ಲಿ ಬರೆದಿದ್ದಾರೆ. ಅವರು ಊಟದಲ್ಲಿ ಜಿರಳೆ ಪತ್ತೆಯಾದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ಅನ್ನು ಸೆಪ್ಟೆಂಬರ್ 28ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಕ್ಷಣದಿಂದ ಇದು 50,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಏರ್ ಇಂಡಿಯಾ ಸೇರಿದಂತೆ ಅನೇಕ ಜನರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಪ್ರೀತಿಯ ಸಾವಂತ್, ನಿಮ್ಮ ಅನುಭವದ ಬಗ್ಗೆ ಕೇಳಲು ತುಂಬಾ ವಿಷಾದಿಸುತ್ತೇವೆ. ದಯವಿಟ್ಟು ನಿಮ್ಮ ಬುಕಿಂಗ್ ವಿವರಗಳನ್ನು ಡಿಎಂ ಮೂಲಕ ಹಂಚಿಕೊಳ್ಳಿ. ಇದರಿಂದ ನಾವು ತ್ವರಿತವಾಗಿ ತನಿಖೆ ಕೈಗೊಳ್ಳುತ್ತೇವೆ ಎಂದು ಏರ್​ಲೈನ್ಸ್​ ತಿಳಿಸಿದೆ.

ಸಾವಂತ್ ಪೋಸ್ಟ್ ಇಲ್ಲಿದೆ

ರಾಮಿ ಸ್ಯಾಮ್ ಎಂಬವರು ಪ್ರತಿಕ್ರಿಯಿಸಿದ್ದು, 'ಮೊದಲು ಆ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿ. ಅವರ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲಸವರು ಮಂದ ಬೆಳಕಿನಲ್ಲಿ ಊಟವನ್ನು ನೀಡಲಾಗುತ್ತದೆ. ಆದರೆ ಅಂತಹ ಸಮಯದಲ್ಲಿ ಏನಿರುತ್ತದೆ, ಏನಿರುವುದಿಲ್ಲ ಎಂಬುದು ಕಾಣುವುದಿಲ್ಲ. ಹೀಗಾಗಿ ಸರಿಯಾದ ಜಾಗ್ರತೆ ವಹಿಸುವುದು ಅಗತ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅದು ವಿಮಾನ, ರೈಲ್ವೆ ಅಡುಗೆ ಅಥವಾ ಹಾಸ್ಟೆಲ್​ಗಳಲ್ಲಿ ನೀಡಲಾಗುವ ಆಹಾರ, ಶಾಲೆಗಳಲ್ಲಿ ಮಧ್ಯಾಹ್ನದ ಊಟವು ಆಹಾರ ವಿಷವಾಗುತ್ತದೆ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ತನಿಖೆ ನಡೆಸಿ ಎಂದು ರತುಲ್ ಘೋಷ್ ಮನವಿ ಮಾಡಿದ್ದಾರೆ. ಹೀಗೆ ಇನ್ನೂ ಹಲವಾರು ಮಂದಿ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

mysore-dasara_Entry_Point

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.