ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಶೀಘ್ರದಲ್ಲೇ ಓಡಾಟ; ಸುಸಜ್ಜಿತ ರೈಲಿನ ವೈಶಿಷ್ಟ್ಯಗಳಿವು
ಭಾರತದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಓಡಾಡುವ ದಿನ ಸಮೀಪಿಸುತ್ತಿದೆ. ಈಗಾಗಲೇ ನಿರ್ಮಾಣ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಪ್ರಾಯೋಗಿಕ ಹೋರಾಟವು ಮುಂದಿನ ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಲಿದೆ ಎಂದು ವರದಿ ತಿಳಿವೆ.
ದೇಶದೆಲ್ಲೆಡೆ ಈಗ ವಂದೇ ಭಾರತ್ ರೈಲು ಓಡಾಟ ನಡೆಸುತ್ತಿವೆ. ಎಸಿ ಸೀಟರ್ ರೈಲು ದೇಶದಲ್ಲಿ ಯಶಸ್ವಿಯಾಗಿದ್ದು, ಇದರ ಮುಂದುವರೆದ ಭಾಗವಾಗಿ ಈ ವರ್ಷ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಕೂಡಾ ಓಡಾಡುವ ಸಾಧ್ಯತೆ ಇದೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಾಯೋಗಿಕ ಓಡಾಟವು ಈ ಬಾರಿಯ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ನಡೆಯುವ ನಿರೀಕ್ಷೆಯಿದೆ. ಪ್ರಯೋಗಾರ್ಥವಾಗಿ ಈ ರೈಲು ದೆಹಲಿಯಿಂದ ಮುಂಬೈಗೆ ಓಡುವ ಸಾಧ್ಯತೆಯಿದೆ. ಈ ಎರಡು ನಗರಗಳ ನಡುವಿನ ರೈಲು ಸಂಚಾರಕ್ಕೆ ಹೆಚ್ಚು ಬೇಡಿಕೆಯಿದ್ದು, ಮಾರ್ಗವು ಸದಾ ಕಾರ್ಯನಿರತವಾಗಿರುತ್ತದೆ.
ಇಂಡಿಯನ್ ಟೆಕ್ ಅಂಡ್ ಇನ್ಫ್ರಾ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಾಕಿದೆ. 'ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಆಗಸ್ಟ್ 15ಕ್ಕಿಂತ ಮುಂಚಿತವಾಗಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ. ರೈಲು ಆರಂಭದಲ್ಲಿ ದೆಹಲಿ ಮತ್ತು ಮುಂಬೈ ನಡುವೆ ಗುಜರಾತ್ ಮೂಲಕವಾಗಿ ರೈಲು ಓಡಾಟ ನಡೆಸಲಿದೆ.
ಅತ್ತ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸ್ಲೀಪರ್ ರೈಲಿನ ತಯಾರಿಕೆಯು ಅಂತಿಮ ಹಂತದಲ್ಲಿದೆ ಎಂದು ವರದಿಗಳು ಸೂಚಿಸುತ್ತವೆ. ಈ ರೈಲಿನಲ್ಲಿ 16 ಬೋಗಿಗಳು ಇರಲಿದೆ. ಅವುಗಳಲ್ಲಿ ಥರ್ಡ್ ಎಸಿಯ 10 ಕೋಚ್‌ಗಳು, ಸೆಕೆಂಡ್ ಎಸಿಯ 4 ಹಾಗೂ ಫಸ್ಟ್ ಎಸಿಯ ಒಂದು ಕೋಚ್ ಇರಲಿದೆ. ರೈಲಿನಲ್ಲಿ ಎರಡು ಸೀಟಿಂಗ್ ಕಮ್ ಲಗೇಜ್ ರೇಕ್ (SLR) ಕೋಚ್‌ಗಳು ಕೂಡಾ ಇರಲಿವೆ.
ಮೊದಲ ಹಂತದಲ್ಲಿ ರೈಲು ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸುವ ನಿರೀಕ್ಷೆಯಿದೆ. ನಂತರ, ವೇಗವನ್ನು ಕ್ರಮೇಣ ಗಂಟೆಗೆ 160 ಕಿಮೀಗೆ ಹೆಚ್ಚಿಸುವ ಯೋಜನೆ ಹಾಕಲಾಗಿದೆ.
ವರದಿಗಳ ಪ್ರಕಾರ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ವಂದೇ ಭಾರತ್ ಸ್ಲೀಪರ್ ರೈಲಿನ ರೈಲಿನ ಕೆಲಸ ಭರದಿಂದ ಸಾಗುತ್ತಿದೆ ಎಂದಿದ್ದಾರೆ. ಎರಡು ತಿಂಗಳೊಳಗೆ ಮೊದಲ ರೈಲು ಓಡಾಡಲಿದೆ ಎಂದು ಹೇಳಿದ್ದಾರೆ. BEML ಲಿಮಿಟೆಡ್ ಬೆಂಗಳೂರಿನಲ್ಲಿರುವ ತನ್ನ ರೈಲು ಘಟಕದಲ್ಲಿ ರೈಲು ಸೆಟ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ದುಬೈನ ಪಂಚತಾರಾ ಹೋಟೆಲ್ ಅಟ್ಲಾಂಟಿಸ್ ಬಾಲ್ಕನಿಯಲ್ಲಿ ಬಟ್ಟೆ ಒಣಹಾಕಿದ ಭಾರತ ಮೂಲದ ಅಮ್ಮ; ವೈರಲ್ ವಿಡಿಯೋ