ಕನ್ನಡ ಸುದ್ದಿ  /  Nation And-world  /  All You Need To Know About The Mega Road Show Of Pm Modi In Ahmedabad

PM Modi Roadshow: 50 ಕಿ.ಮೀ, 16 ಕ್ಷೇತ್ರ ತಲುಪಲಿರುವ ಮೋದಿ : ಇದು ಯಾರೂ ಮಾಡಿರದ 'ಮೆಗಾ ರೋಡ್ ಶೋ'..!

ಗುಜರಾತ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು (ಡಿ.01-ಗುರುವಾರ) ಅಹಮದಾಬಾದ್‌ನಲ್ಲಿ ಇಂದು ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಒಟ್ಟು 50 ಕಿ.ಮೀ ದೂರ ಕ್ರಮಿಸಲಿರುವ ಈ 'ಮೆಗಾ ರೋಡ್ ಶೋ', ದೇಶದ ರಾಜಕೀಯ ಇತಿಹಾಸದಲ್ಲೇ ನಾಯಕರೊಬ್ಬರು ಕೈಗೊಂಡ ಅತ್ಯಂತ ಬೃಹತ್‌ ರೋಡ್‌ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

ಪ್ರಧಾನಿ ಮೋದಿ ರೋಡ್‌ ಶೋ
ಪ್ರಧಾನಿ ಮೋದಿ ರೋಡ್‌ ಶೋ (PTI)

ಅಹಮದಾಬಾದ್:‌ ಗುಜರಾತ್‌ ವಿಧಾನಸಭೆ ಚುನಾವಣೆಗೆ ಇಂದು (ಡಿ.01-ಗುರುವಾರ) ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಡಿ.05(ಸೋಮವಾರ)ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರ ಅಹಮದಾಬಾದ್‌ನಲ್ಲಿ ಇಂದು ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಒಟ್ಟು 50 ಕಿ.ಮೀ ದೂರ ಕ್ರಮಿಸಲಿರುವ ಈ 'ಮೆಗಾ ರೋಡ್ ಶೋ', ದೇಶದ ರಾಜಕೀಯ ಇತಿಹಾಸದಲ್ಲೇ ನಾಯಕರೊಬ್ಬರು ಕೈಗೊಂಡ ಅತ್ಯಂತ ಬೃಹತ್‌ ರೋಡ್‌ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಧಾನಿ ಮೋದಿ ಕೈಗೊಂಡ 'ಮೆಗಾ ರೋಡ್ ಶೋ'ನಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುವ 16 ಕ್ಷೇತ್ರಗಳು ಬರುತ್ತವೆ. ನರೋಡಾ ಗಾಮ್‌ನಿಂದ ಆರಂಭವಾದ ಈ 'ಮೆಗಾ ರೋಡ್ ಶೋ', ಥಕ್ಕರ್‌ಬಾಪನಗರ, ಬಾಪುನಗರ್, ನಿಕೋಲ್, ಅಮರೈವಾಡಿ, ಮಣಿನಗರ, ಡ್ಯಾನಿಲಿಂಬ್ಡಾ, ಜಮಾಲ್‌ಪುರ್ ಖಾಡಿಯಾ, ಎಲಿಸ್‌ಬ್ರಿಡ್ಜ್, ವೆಜಲ್‌ಪುರ್, ಘಟ್ಲೋಡಿಯಾ, ನರನ್‌ಪುರ್ ಮತ್ತು ಸಬರಮತಿ ಸೇರಿದಂತೆ‌ ಒಟ್ಟು 16 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದೆ. ಈ 'ಮೆಗಾ ರೋಡ್ ಶೋ' ದಕ್ಷಿಣ ಗಾಂಧಿನಗರದಲ್ಲಿ ಮುಕ್ತಾಯಗೊಳ್ಳಲಿದೆ.

ಪ್ರಧಾನಿ ಮೋದಿ ಈ ಸುದೀರ್ಘ ಮಾರ್ಗವನ್ನು ಕ್ರಮಿಸಲು ಸರಿಸುಮಾರು 3.5 ಗಂಟೆಗಳನ್ನು ತೆಗೆದುಕೊಳ್ಳಲಿದ್ದು, ಈ 'ಮೆಗಾ ರೋಡ್ ಶೋ' ಈ ಬಾರಿಯ ಚುನಾವಣೆಯಲಿ ಬಿಜೆಪಿ ಹಮ್ಮಿಕೊಂಡ ಅತಿದೊಡ್ಡ ರಾಜಕೀಯ ಕಾರ್ಯಕ್ರಮವಾಗಿದೆ. ಹೂಮಾಲೆಗಳಿಂದ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಈ ಸುದೀರ್ಘ ಯಾತ್ರೆಯಲ್ಲಿ ಸಂಚರಿಸುತ್ತಿದ್ದಾರೆ. ಸಾವಿರಾರು ಬಿಜೆಪಿ ಖಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ಈ ರೋಡ್‌ನಲ್ಲಿ ಭಾಗವಹಿಸಿದ್ದಾರೆ.

ಇದು ಭಾರತೀಯ ರಾಜಕೀಯ ನಾಯಕರೊಬ್ಬರು ಹಮ್ಮಿಕೊಂಡ ಅತ್ಯಂತ ಬೃಹತ್‌ ರೋಡ್‌ ಶೋ ಎಂದು ಬಿಜೆಪಿ ಹೇಳಿದ್ದು, ದಾರಿಯಲ್ಲಿ ಸಿಗುವ ಪಂಡಿತ್ ದೀನದಯಾಳ್ ಉಪಾಧ್ಯಾಯ, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳಿಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡಿದ್ದಾರೆ.

ಬಿಜೆಪಿ ಸತತ 27 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, ಪ್ರತಿಬಾರಿಯ ಚುನಾವಣೆಯಲ್ಲೂ ಅದರ ಒಟ್ಟು ಸೀಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವಿಧಾನಸಭೆಯ ಒಟ್ಟು 182 ಸ್ಥಾನಗಳ ಪೈಕಿ ಈ ಬಾರಿ 140 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಬಿಜೆಪಿ ಈ ಬಾರಿ ಕಣಕ್ಕಿಳಿದಿದೆ. 2017ರಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿದ್ದರೆ, ಕಾಂಗ್ರೆಸ್‌ 77 ಸ್ಥಾನಗಳನ್ನು ಪಡೆದು ಪ್ರತಿಪಕ್ಷ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತ್ತು.

ಪ್ರಧಾನಿ ಮೋದಿ ಅವರು ರಾಜ್ಯದ ಅತ್ಯಂತ ಜನಪ್ರಿಯ ಮತ್ತು ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದು, ೨೦೧೪ರಲ್ಲಿ ದೇಶದ ಪ್ರಧಾನಿಯಾಗುವ ಮೊದಲು ಅವರು, ಒಟ್ಟು ಮೂರು ಅವಧಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಪ್ರಧಾನಿ ಮೋದಿ ಇದುವರೆಗೆ ಗುಜರಾತ್‌ನಲ್ಲಿ 20 ಬಿಜೆಪಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎರಡನೇ ಹಂತದ ಮತದಾನಕ್ಕೂ ಮುಂಚೆ ಪ್ರಧಾನಿ ಮೋದಿ ಏಳು ಕಡೆ ಬಿಜೆಪಿ ಚುನಾವಣಾ ಸಭೆಗಳನ್ನು ನಡೆಸಲಿದ್ದಾರೆ.

ಇಂದಿನ ಪ್ರಮುಖ ಸುದ್ದಿಗಳು

PM on G20 Presidency: "ಜಾಗತಿಕ ಮನಸ್ಥಿತಿ ಬದಲಾವಣೆ"ಯ ಸಮಯ: ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನವನ್ನು ವಿಶ್ಲೇಷಿಸಿದ ಮೋದಿ

ಭಾರತವು ಇಂದು(ಡಿ.01-ಗುರುವಾರ) ಔಪಚಾರಿಕವಾಗಿ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಈ ಐತಿಹಾಸಿಕ ಕ್ಷಣ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದು ಎಂದು ಬಣ್ಣಿಸಲಾಗಿದೆ. ಈ ಕುರಿತು ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದನ್ನು "ಜಾಗತಿಕ ಮನಸ್ಥಿತಿಯ ಬದಲಾವಣೆ " ಸಮಯ ಎಂದು ಕರೆದಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

IPL_Entry_Point