Union Budget 2023: ಅಭಿವೃದ್ಧಿಗೆ ಒತ್ತು, ಚುನಾವಣೆ ಮೇಲೆ ಕಣ್ಣು: ಏನಿರಲಿದೆ ಈ ಬಾರಿಯ ಸೀತಾರಾಮನ್ ಬಜೆಟ್ ಬುಟ್ಟಿಯಲ್ಲಿ?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2024 ರ ಹಣಕಾಸು ವರ್ಷದ ಕೇಂದ್ರ ಬಜೆಟ್, ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ.6.8 ರ ಮುನ್ಸೂಚನೆ ದರಕ್ಕೆ ಕೊಂಡೊಯ್ಯಲು ಅಡಿಪಾಯವನ್ನು ಹೊಂದಿಸುತ್ತದೆ. 2019 ರಿಂದ ಇದು ಸೀತಾರಾಮನ್ ಅವರು ಮಂಡನೆ ಮಾಡಿರುವ ಐದನೇ ಬಜೆಟ್ ಆಗಲಿದೆ. ಈ ಬಾರಿಯ ಬಜೆಟ್ ನಿರೀಕ್ಷೆಗಳ ಬಗ್ಗೆ ಇಲ್ಲಿದೆ ಮಾಹಿತಿ..
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2024 ರ ಹಣಕಾಸು ವರ್ಷದ ಕೇಂದ್ರ ಬಜೆಟ್, ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ.6.8 ರ ಮುನ್ಸೂಚನೆ ದರಕ್ಕೆ ಕೊಂಡೊಯ್ಯಲು ಅಡಿಪಾಯವನ್ನು ಹೊಂದಿಸುತ್ತದೆ. 2019 ರಿಂದ ಇದು ಸೀತಾರಾಮನ್ ಅವರು ಮಂಡನೆ ಮಾಡಿರುವ ಐದನೇ ಬಜೆಟ್ ಆಗಲಿದೆ.
ಊಹಿಸಬಹುದಾದಂತೆ, ಭಾರತದ ಮಧ್ಯಮ ವರ್ಗವು ಕೆಲವು ರೀತಿಯ ಆದಾಯ ತೆರಿಗೆ ಪರಿಹಾರವನ್ನು ಬಯಸುತ್ತಿದೆ. ತೆರಿಗೆ ಸ್ಲ್ಯಾಬ್ ಅನ್ನು ಬದಲಾಯಿಸದಿದ್ದರೂ ಮತ್ತು ಕಳೆದ ವರ್ಷ ಯಾವುದೇ ಹೊಸ ಕಡಿತವನ್ನು ಘೋಷಿಸದಿದ್ದರೂ, ಹಣದುಬ್ಬರವು ಜನರ ಆದಾಯದ ಬಹುಪಾಲನ್ನು ನುಂಗುತ್ತಿದೆ. ನಿರ್ಮಲಾ ಸೀತಾರಾಮನ್ ಅವರು 2017-18 ರಿಂದ ತೆರಿಗೆ ದರದಲ್ಲಿ ಮತ್ತು ಜುಲೈ 2014 ರಿಂದ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆಯನ್ನು ಮಾಡಿಲ್ಲ ಎಂಬುದು ವಿಶೇಷ.
ಸಾರ್ವತ್ರಿಕ ಚುನಾವಣೆಗೆ ಕೇವಲ ಒಂದು ವರ್ಷ ಇರುವ ಕಾರಣ, ಸಮತೋಲಿತ, ಜನಪರ ಬಜೆಟ್ ಮಂಡನೆಯಾಗುವ ಸಾಧ್ಯತೆ ದಟ್ಟವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಗೆಲ್ಲುವ ಭರವಸೆ ಹೊಂದಿದ್ದು, ಈ ಕಾರಣಕ್ಕೆ ರೈತರು ಮತ್ತು ಗ್ರಾಮೀಣ ಜನರಿಗಾಗಿ ಬೃಹತ್ ಕಲ್ಯಾಣ ಕಾರ್ಯಕ್ರಮಗಳುಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಕೂಡ ಇದೆ.
ಜೀವ ವಿಮೆ, ನಿಶ್ಚಿತ ಠೇವಣಿ, ಬಾಂಡ್‌ಗಳು, ವಸತಿ ಮತ್ತು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆಯನ್ನು ಒಳಗೊಂಡಿರುವ 80C ಅಡಿಯಲ್ಲಿ, ತೆರಿಗೆ ಮಿತಿಯನ್ನು ಹೆಚ್ಚಿಸಲು ಹಣಕಾಸು ಸಚಿವಾಲಯವು ಪರಿಗಣಿಸಿತ್ತು. ಹೀಗಾದಲ್ಲಿ ಇದು ಉಳಿತಾಯವನ್ನು ಉತ್ತೇಜಿಸುತ್ತದೆ.
ಸೀತಾರಾಮನ್ ಅವರು ಬೆಳಗ್ಗೆ 11 ಗಂಟೆಗೆ ತಮ್ಮ ಬಜೆಟ್ ಭಾಷಣವನ್ನು ಪ್ರಾರಂಭಿಸಲಿದ್ದು, ಷೇರು ಮಾರುಕಟ್ಟೆಯ ಬೆಳವಣಿಗೆಗಗಳ ಮೇಲೆ ಎಲ್ಲರ ಕಣ್ಣಿದೆ.
ಮೋದಿ ಸರ್ಕಾರವು ತನ್ನ "ಮೇಕ್ ಇನ್ ಇಂಡಿಯಾ" ಮತ್ತು "ಆತ್ಮನಿರ್ಭರ ಭಾರತ" ನೀತಿಗಳನ್ನು ಹೆಚ್ಚು ಪ್ರಚುರಪಡಿಸಲಿದ್ದು, ದೇಶದಲ್ಲಿ ವ್ಯಾಪಾರ ಮತ್ತು ಉದ್ಯೋಗ ಸ್ಥಾಪಿಸಲು ಬಯಸುವ ತಯಾರಕರು ಮತ್ತು ಪೂರೈಕೆದಾರರಿಗೆ ಆರ್ಥಿಕ ಪ್ರಯೋಜನಗಳನ್ನು ನೀಡುವ ಸಾಧ್ಯತೆ ಇದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ಚೀನಾಕ್ಕೆ ಪರ್ಯಾಯವಾಗಿ ತನ್ನನ್ನು ತಾನು ಸ್ಥಾಪಿಸುವ ಪ್ರಯತ್ನಕ್ಕೆ ಮತ್ತಷ್ಟು ವೇಗ ದೊರೆಯಲಿರುವುದು ಖಚಿತ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವು ಕಳೆಗುಂದಿದ್ದರೂ, ಕಳೆದ ವರ್ಷ ಖಚಿತವಾದ ಪುನರುಜ್ಜೀವನ ಕಂಡಿದೆ. ತನ್ನ ಅದೃಷ್ಟವನ್ನು ಸುಧಾರಿಸಲು ಅನುಕೂಲಕರ ಯೋಜನೆಗಳು ಮತ್ತು ತೆರಿಗೆ ವಿನಾಯಿತಿಗಳನ್ನು ಈ ಕ್ಷೇತ್ರ ನಿರೀಕ್ಷಿಸುತ್ತದೆ. 2019ರಲ್ಲಿ ಜಿಎಸ್‌ಟಿ ಕೌನ್ಸಿಲ್, ಕೈಗೆಟುಕುವ ಮನೆಗಳ ಮೇಲಿನ ತೆರಿಗೆ ದರವನ್ನು ಶೇಕಡಾ 8 ರಿಂದ ಶೇಕಡಾ 1ಕ್ಕೆ ಇಳಿಸಿತ್ತು. ಈ ಬಾರಿಯ ಬಜೆಟ್‌ನಲ್ಲಿಯೂ ಇದೇ ರೀತಿಯ ಘೋಷಣೆಗಳನ್ನು ರಿಯಲ್ ಎಸ್ಟೇಟ್ ವಲಯ ನಿರೀಕ್ಷಿಸುತ್ತಿದೆ.
ಭಾರತದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವರಿಗೆ ಉದ್ಯೋಗ ಭದ್ರತೆ ಮತ್ತು ಎಲೆಕ್ಟ್ರಾನಿಕ್ ಸರಕುಗಳಂತಹ ಅವರು ಖರೀದಿಸಲು ಆದ್ಯತೆ ನೀಡುವ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸುವುದರ ಮೇಲೆ ಈ ಬಾರಿಹಯ ಬಜೆಟ್ ಗಮನ ಕೇಂದ್ರೀಕರಿಸಬಹುದು. ಶಿಕ್ಷಣ ಸಾಲಗಳಿಗೆ ಉತ್ತಮ ನಿಯಮಗಳು ಮತ್ತು ಶಾಲೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಇತರ ರೀತಿಯ ಹಣಕಾಸಿನ ಸಹಾಯವನ್ನು ನಿರೀಕ್ಷಿಸಲಾಗುತ್ತಿದೆ.
ಜಾಗತಿಕ ಪೂರೈಕೆ ಸಮಸ್ಯೆಗಳು, ಅಕಾಲಿಕ ಮಳೆ ಮತ್ತು ಪ್ರವಾಹಗಳು, ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ, 2022ರಲ್ಲಿ ಕೃಷಿ ವಲಯವು ಕಷ್ಟಕರ ಸಮಯವನ್ನು ಎದುರಿಸಿದೆ. ಸೀತಾರಾಮನ್ ಈ ವಲಯದ ಉತ್ತೇಜನಕ್ಕಾಗಿ ಉತ್ತಮ ಯೋಜನೆಗಳನ್ನು ಪ್ರಕಟಿಸಲಿದ್ದಾರೆ ಎಂಬ ಆಶಾವಾದ ಕೂಡ ಇದೆ.
ಕ್ರಿಪ್ಟೋಕರೆನ್ಸಿಗಳಿಗೆ ಪರ್ಯಾಯವಾಗಿ ಕಳೆದ ವರ್ಷದ ಬಜೆಟ್‌ನಲ್ಲಿ, ಡಿಜಿಟಲ್ ರುಪಾಯಿ ಅನ್ನು ಕಳೆದ ವರ್ಷದ ಬಜೆಟ್‌ನಲ್ಲಿ ಪರಿಚಯಿಸಲಾಗಿತ್ತು. ಕ್ರಿಪ್ಟೋ ವಹಿವಾಟುಗಳು ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಜನಪ್ರಿಯವಾಗಿವೆ, ಆದರೂ ನಿಯಂತ್ರಣದ ಬೂದು ಪ್ರದೇಶ ಇರುವುದರಿಂದ ಇದನ್ನು ಕೇಂದ್ರ ಸರ್ಕಾರವು ಅಪಾಯಕಾರಿ ಎಂದೇ ಪರಿಗಣಿಸಿದೆ. ಹಣಕಾಸು ಸಚಿವರು "ಡಿಜಿಟಲ್ ರೂಪಾಯಿ" ಕುರಿತು ಸ್ಥಿತಿ ನವೀಕರಣವನ್ನು ನೀಡಬಹುದು ಎನ್ನಲಾಗಿದೆ.
ಸ್ಥಿರ ಆಸ್ತಿ ಮತ್ತು ಪಟ್ಟಿ ಮಾಡದ ಷೇರುಗಳಿಗೆ ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ವಿಸ್ತರಿಸುವುದು, ತೈಲ ಚಿಲ್ಲರೆ ವ್ಯಾಪಾರಿಗಳಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇಂಧನವನ್ನು ಮಾರಾಟ ಮಾಡಲು ಪರಿಹಾರ, ಅಕ್ರಮ ಸಾಗಣೆಗಳನ್ನು ನಿಯಂತ್ರಿಸಲು ಚಿನ್ನದ ಮೇಲಿನ ಆಮದು ತೆರಿಗೆಯನ್ನು ಶೇಕಡಾ 10 ಕ್ಕೆ ಕಡಿತಗೊಳಿಸುವುದು ಮತ್ತು ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆ ರಕ್ಷಣಾ ಬಜೆಟ್ ಹೆಚ್ಚಳ ಈ ಬಾರಿಯ ಬಜೆಟ್‌ನ ಪ್ರಮುಖ ನಿರೀಕ್ಷೆಗಳಾಗಿವೆ.
ವಿಭಾಗ