ಕನ್ನಡ ಸುದ್ದಿ  /  Nation And-world  /  Amazing Cross Connection: Rss-linked Magazine Organiser Targets Amazon, Says Funding Conversions

Amazing Cross Connection: ಮತಾಂತರಕ್ಕೆ ಅಮೆಜಾನ್‌ ಫಂಡಿಂಗ್‌ ಕುರಿತು ಆರ್ಗನೈಸರ್‌ ಹೇಳಿರುವುದೇನು? ಅಮೆಜಾನ್‌ ಏನು ಹೇಳ್ತಿದೆ?

Amazing Cross Connection: "ಅಮೇಜಿಂಗ್ ಕ್ರಾಸ್ ಕನೆಕ್ಷನ್" ಎಂಬ ಶೀರ್ಷಿಕೆಯ ಕವರ್ ಸ್ಟೋರಿಯಲ್ಲಿ, ಕಂಪನಿಯು "ಅಮೆರಿಕನ್ ಬ್ಯಾಪ್ಟಿಸ್ಟ್ ಚರ್ಚ್" ಹೆಸರಿನ ಸಂಸ್ಥೆಯೊಂದಿಗೆ ಹಣಕಾಸಿನ ಸಂಬಂಧವನ್ನು ಹೊಂದಿದೆ. ಆ ಸಂಸ್ಥೆಯು ಮತಾಂತರ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ ಎಂದು ನಿಯತಕಾಲಿಕವು ಆರೋಪಿಸಿದೆ. ಆದರೆ, ಅಮೆಜಾನ್ ಆರೋಪಗಳನ್ನು ನಿರಾಕರಿಸಿದೆ.

ಆರ್ಗನೈಸರ್‌ ನಿಯತಕಾಲಿಕದ ನ.20ರ ಸಂಚಿಕೆಯ ಮುಖಪುಟ
ಆರ್ಗನೈಸರ್‌ ನಿಯತಕಾಲಿಕದ ನ.20ರ ಸಂಚಿಕೆಯ ಮುಖಪುಟ (Organiser)

ಆರ್‌ಎಸ್‌ಎಸ್ ಮುಖವಾಣಿ ನಿಯತಕಾಲಿಕೆ ಆರ್ಗನೈಸರ್ ತನ್ನ ಇತ್ತೀಚಿನ ಅಂದರೆ ನ.20ರ ಸಂಚಿಕೆಯಲ್ಲಿ ಇ-ಕಾಮರ್ಸ್ ದೈತ್ಯ ಅಮೆಜಾನ್ ದೇಶದ ಈಶಾನ್ಯದಲ್ಲಿ ಧಾರ್ಮಿಕ ಮತಾಂತರಕ್ಕೆ ಹಣ ನೀಡುತ್ತಿದೆ ಎಂದು ಆರೋಪಿಸಿ ಕವರ್ ಸ್ಟೋರಿಯನ್ನು ಪ್ರಕಟಿಸಿದೆ.

"ಅಮೇಜಿಂಗ್ ಕ್ರಾಸ್ ಕನೆಕ್ಷನ್"(Amazing Cross Connection) ಎಂಬ ಶೀರ್ಷಿಕೆಯ ಕವರ್ ಸ್ಟೋರಿಯಲ್ಲಿ, ಕಂಪನಿಯು "ಅಮೆರಿಕನ್ ಬ್ಯಾಪ್ಟಿಸ್ಟ್ ಚರ್ಚ್" ಹೆಸರಿನ ಸಂಸ್ಥೆಯೊಂದಿಗೆ ಹಣಕಾಸಿನ ಸಂಬಂಧವನ್ನು ಹೊಂದಿದೆ. ಆ ಸಂಸ್ಥೆಯು ಮತಾಂತರ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ ಎಂದು ನಿಯತಕಾಲಿಕವು ಆರೋಪಿಸಿದೆ. ಆದರೆ, ಅಮೆಜಾನ್ ಆರೋಪಗಳನ್ನು ನಿರಾಕರಿಸಿದೆ.

"ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯು ಅಮೆರಿಕನ್ ಬ್ಯಾಪ್ಟಿಸ್ಟ್ ಚರ್ಚ್ (ABM) ನಡೆಸುತ್ತಿರುವ ಕ್ರಿಶ್ಚಿಯನ್ ಮತಾಂತರ ಕಾರ್ಯಕ್ಕೆ ಹಣಕಾಸು ನೆರವು ಒದಗಿಸುತ್ತಿದೆ. ಭಾರತದ ಬೃಹತ್ ಧಾರ್ಮಿಕ ಮತಾಂತರ ಮಿಷನ್‌ಗೆ ಧನಸಹಾಯ ಮಾಡಲು ಬಹುರಾಷ್ಟ್ರೀಯ ಕಂಪನಿಗಳು ಮತ್ತು ಎಬಿಎಂ ನಡೆಸುತ್ತಿರುವ ಮನಿ ಲಾಂಡರಿಂಗ್ ಜಾಲ ಹೆಣೆದಿರುವ ಸಾಧ್ಯತೆಯಿದೆ ಎಂದು ನಿಯತಕಾಲಿಕ ವಿವರಿಸಿದೆ.

ಭಾರತದಲ್ಲಿ ಆಲ್ ಇಂಡಿಯಾ ಮಿಷನ್ (ಎಐಎಂ) ಹೆಸರಿನ ಸಂಘಟನೆಯನ್ನು ಎಬಿಎಂ ನಡೆಸುತ್ತಿದೆ. ಈಶಾನ್ಯ ಭಾರತದಲ್ಲಿ 25,000 ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಿರುವುದಾಗಿ ಈ ಸಂಘಟನೆ ತನ್ನ ವೆಬ್‌ಸೈಟ್‌ನಲ್ಲಿ ಬಹಿರಂಗವಾಗಿ ಹೇಳಿಕೊಂಡಿದೆ ಎಂಬುದನ್ನು ಆರ್ಗನೈಸರ್‌ ಕವರ್‌ ಸ್ಟೋರಿ ಉಲ್ಲೇಖಿಸಿದೆ.

ಅಮೆಜಾನ್‌ ಸ್ಮೈಲ್‌ ಲೋಗೋ ಜತೆಗೆ ಅಮೆಜಾನ್‌ ಸೈಟ್‌ನ ಲಿಂಕ್‌ ಅನ್ನು ಎಐಎಂ ತನ್ನ ಟ್ವಿಟರ್‌ ಖಾತೆಯಲ್ಲಿ 2021ರ ಜೂನ್‌ 21ರಂದು ಶೇರ್‌ ಮಾಡಿದೆ. ಇದರ ಸ್ಕ್ರೀನ್‌ ಶಾಟ್‌ ಅನ್ನು ಆರ್ಗನೈಸರ್‌ ತನ್ನ ಕವರ್‌ ಸ್ಟೋರಿಯಲ್ಲಿ ಬಳಸಿಕೊಂಡಿದೆ. ಸದ್ಯ ಈ ಟ್ವಿಟರ್‌ನಲ್ಲಿ ಈ ಖಾತೆಯನ್ನು ಹುಡುಕಿದರೆ ಸಿಗುತ್ತಿಲ್ಲ.

ಈ ನಡುವೆ, ಆರ್ಗನೈಸರ್‌ನ ಕವರ್‌ ಸ್ಟೋರಿ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಪ್ರಕಟಿಸಿದ್ದು, ಅದರಲ್ಲಿ ಅಮೆಜಾನ್‌ ಇಂಡಿಯಾದ ಪ್ರತಿನಿಧಿಗಳನ್ನು ಮತ್ತು ವರದಿಯಲ್ಲಿ ಉಲ್ಲೇಖವಾಗಿರುವ ಸಂಸ್ಥೆಗಳ ಪ್ರತಿನಿಧಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾಗಿ ಹೇಳಿದೆ.

ಈ ವರದಿ ಪ್ರಕಾರ, ಮಜಾನ್‌ ಇಂಡಿಯಾ ಪ್ರತಿನಿಧಿಗಳು ಹೇಳಿರುವುದಿಷ್ಟು - ಅಮೆಜಾನ್ ಇಂಡಿಯಾ ಕಂಪನಿಗೆ ಆಲ್ ಇಂಡಿಯಾ ಮಿಷನ್ ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ಯಾವುದೇ ಸಂಬಂಧ ಇಲ್ಲ. ಅಮೆಜಾನ್ ಇಂಡಿಯಾ ಮಾರುಕಟ್ಟೆಯಲ್ಲಿ AmazonSmile ಪ್ರೋಗ್ರಾಂ ಕಾರ್ಯನಿರ್ವಹಿಸುವುದಿಲ್ಲ. ಆದರೆ, AmazonSmile ಪ್ರೋಗ್ರಾಂ ಎಲ್ಲಿ ಕಾರ್ಯನಿರ್ವಹಿಸುತ್ತದೆಯೋ ಅಲ್ಲಿ, ಗ್ರಾಹಕರು ತಮ್ಮ ಇಚ್ಛೆಯ ಎನ್‌ಜಿಒಗಳಿಗೆ ದೇಣಿಗೆ ನೀಡಬಹುದು. ಈ ಪ್ರೋಗ್ರಾಂನಲ್ಲಿರುವ ಎನ್‌ಜಿಒಗಳ ಯಾವುದೇ ಚಾರಿಟಿ ಅಭಿಪ್ರಾಯಕ್ಕೆ ಕಂಪನಿಯ ಅನುಮೋದನೆ ಇಲ್ಲ.

ಆರ್ಗನೈಸರ್‌ ತನ್ನ ಸೆಪ್ಟೆಂಬರ್‌ ಸಂಚಿಕೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್‌)ದ ವರದಿ ಪ್ರಕಟಿಸಿತ್ತು. ಆಗ ಅಮೆಜಾನ್‌ನ ಫಂಡಿಂಗ್‌ ಸಮಸ್ಯೆ ಅರಿವಿಗೆ ಬಂತು ಎಂದು ಕವರ್‌ ಸ್ಟೋರಿಯಲ್ಲಿ ಹೇಳಿದೆ. ಎನ್‌ಸಿಪಿಸಿಆರ್‌ ಮುಖ್ಯಸ್ಥ ಪ್ರಿಯಾಂಕ್‌ ಕನೂನ್‌ಗೊ ಅವರನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ಮಾತನಾಡಿಸಿದ್ದು, ಅನಾಥಾಶ್ರಮಗಳ ಮೂಲಕ ಅಕ್ರಮವಾಗಿ ಮತಾಂತರ ಮಾಡಲಾಗುತ್ತಿದೆ ಮತ್ತು ಅಮೆಜಾನ್‌ನಿಂದ ಇದಕ್ಕೆ ಫಂಡಿಂಗ್‌ ಆಗುತ್ತಿದೆ ಎಂದು ಆರೋಪಿಸಿ ಅರುಣಾಚಲ ಪ್ರದೇಶದಿಂದ ಸೆಪ್ಟೆಂಬರ್‌ನಲ್ಲಿ ದೂರು ಬಂದಿತ್ತು ಎಂದು ಹೇಳಿದ್ಧಾರೆ ಎಂದು ವರದಿ ಮಾಡಿದೆ.

ವಿಭಾಗ