ಅಮೆಜಾನ್​ನಿಂದ ವಿದ್ಯಾರ್ಥಿನಿಯರಿಗೆ ಬಂಪರ್​; 2 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಘೋಷಿಸಿದ ಇ-ಕಾಮರ್ಸ್ ದೈತ್ಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆಜಾನ್​ನಿಂದ ವಿದ್ಯಾರ್ಥಿನಿಯರಿಗೆ ಬಂಪರ್​; 2 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಘೋಷಿಸಿದ ಇ-ಕಾಮರ್ಸ್ ದೈತ್ಯ

ಅಮೆಜಾನ್​ನಿಂದ ವಿದ್ಯಾರ್ಥಿನಿಯರಿಗೆ ಬಂಪರ್​; 2 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಘೋಷಿಸಿದ ಇ-ಕಾಮರ್ಸ್ ದೈತ್ಯ

Amazon: ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಅಥವಾ ವೃತ್ತಿಪರ ಪದವಿಗಳನ್ನು ಪಡೆಯುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯು ತಲಾ 2 ಲಕ್ಷ ರೂಪಾಯಿ 500 ವಿದ್ಯಾರ್ಥಿವೇತನ ಘೋಷಿಸಿದೆ.

ಅಮೆಜಾನ್​ನಿಂದ ವಿದ್ಯಾರ್ಥಿನಿಯರಿಗೆ ಬಂಪರ್​; 2 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಘೋಷಿಸಿದ ಇ-ಕಾಮರ್ಸ್ ದೈತ್ಯ
ಅಮೆಜಾನ್​ನಿಂದ ವಿದ್ಯಾರ್ಥಿನಿಯರಿಗೆ ಬಂಪರ್​; 2 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಘೋಷಿಸಿದ ಇ-ಕಾಮರ್ಸ್ ದೈತ್ಯ (AP)

ಟೆಕ್ ವಲಯದಲ್ಲಿ ಲಿಂಗ ಅಂತರ ಕಡಿಮೆ ಮಾಡುವ ಮತ್ತು ತಳಮಟ್ಟದಲ್ಲಿ ಟೆಕ್ ಶಿಕ್ಷಣ ವಿಸ್ತರಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಇ-ಕಾಮರ್ಸ್ ತಾಣ ಅಮೆಜಾನ್ ವಿದ್ಯಾರ್ಥಿನಿವೇತನ ನೀಡುವ ಕಾರ್ಯವನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. 2021 ರಲ್ಲಿ ಪ್ರಾರಂಭವಾದ ಅಮೆಜಾನ್‌ ಫ್ಯೂಚರ್ ಎಂಜಿನಿಯರ್ ಪ್ರೋಗ್ರಾಮ್ ಮೂಲಕ 8 ರಾಜ್ಯಗಳ 272 ಜಿಲ್ಲೆಗಳಲ್ಲಿ 3 ಮಿಲಿಯನ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮತ್ತು 20 ಸಾವಿರ ಶಿಕ್ಷಕರಿಗೆ ತರಬೇತಿ ನೀಡಿದೆ.

ಭಾರತದಲ್ಲಿ ಮಕ್ಕಳ ಕೌಶಲ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಅಮೆಜಾನ್, ಕ್ಲೌಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಕುರಿತು ತರಬೇತಿ ನೀಡುತ್ತಿದೆ. ಇದೀಗ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮತ್ತು ವೃತ್ತಿಪರ ಸಂಬಂಧಿತ ಶಿಕ್ಷಣ ಪ್ರವೇಶ ಪಡೆಯುತ್ತಿರುವ 500 ಮೆರಿಟ್ ಆಧಾರಿತ ವಿದ್ಯಾರ್ಥಿನಿಯರಿಗೆ ಅಮೆಜಾನ್ 2 ಲಕ್ಷ ರೂ ವಿದ್ಯಾರ್ಥಿವೇತನ ನೀಡಲು ಘೋಷಿಸಿದೆ.

4 ವರ್ಷಗಳ ತನಕ ವಿದ್ಯಾರ್ಥಿವೇತನ

ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ್ದ ಕೆರಿಯರ್ಸ್ ಆಫ್ ದಿ ಫ್ಯೂಚರ್ ಶೃಂಗಸಭೆ 2025 ಯಲ್ಲಿ ಅಮೆಜಾನ್‌ ಫ್ಯೂಚರ್ ಎಂಜಿನಿಯರ್ ಪ್ರೋಗ್ರಾಮ್ ಈ ಬಗ್ಗೆ ಘೋಷಿಸಿದೆ. 4 ವರ್ಷಗಳ ತನಕ ವಿದ್ಯಾರ್ಥಿವೇತನ ನೀಡುವುದು ತಿಳಿಸಿದೆ. ಟೈಯರ್-2 (50,000 ರಿಂದ 99,999 ಜನಸಂಖ್ಯೆ ಹೊಂದಿರುವ ನಗರಗಳು) ನಗರಗಳಲ್ಲಿ 6 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿರುವುದಾಗಿ ತಿಳಿಸಿದೆ. ಈ ಕಾರ್ಯಕ್ರಮದ ಮೂಲಕ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಕನ್ನಡ, ಒರಿಯಾ ಮತ್ತು ಮರಾಠಿ ಸೇರಿ 7 ಭಾರತೀಯ ಭಾಷೆಗಳಲ್ಲಿ ಕಲಿಕಾ ಸಾಮಗ್ರಿಗಳಿಗೆ ಪ್ರವೇಶವನ್ನು ಒದಗಿಸುತ್ತದೆ.

ಸುಧಾರಿತ ಕಂಪ್ಯೂಟರ್ ವಿಜ್ಞಾನ ಮಾಡ್ಯೂಲ್​​ಗಳೊಂದಿಗೆ ವರ್ಧಿಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಅಧಿಕಾರ ನೀಡುತ್ತದೆ. ಅದೇ ಸಮಯದಲ್ಲಿ ಅಡಿಪಾಯ ಎಐ ಪರಿಕಲ್ಪನೆ, ಕೋಡಿಂಗ್ ಪ್ರಿನ್ಸಿಪಲ್ಸ್ ಮತ್ತು ತಂತ್ರಜ್ಞಾನದ ಪರಿವರ್ತಕ ಶಕ್ತಿಯ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಸಮೀರ್ ಕುಮಾರ್ ಹೇಳಿದ್ದೇನು?

ಈ ಕಾರ್ಯಕ್ರಮದ ಮೂಲಕ ಆರ್ಥಿಕ ಸಹಾಯದ ಜೊತೆಗೆ ಸಮಗ್ರ ಬೆಂಬಲವನ್ನೂ ನೀಡಲಾಗುತ್ತದೆ. ಇದರಲ್ಲಿ ಅಮೆಜಾನ್ ಉದ್ಯೋಗಿಗಳಿಂದ ಮಾರ್ಗದರ್ಶನ, ಸುಧಾರಿತ ವೈಯಕ್ತಿಕಗೊಳಿಸಿದ ಕೋಡಿಂಗ್ ಬೂಟ್ ಕ್ಯಾಂಪ್​ಗಳು, ಕಲಿಕೆ ಮತ್ತು ವೃತ್ತಿಜೀವನದ ಅಭಿವೃದ್ಧಿಗೆ ವೈಯಕ್ತಿಕ ಲ್ಯಾಪ್​ಟಾಪ್​​ಗಳಿಗೆ​ ಅನುಮತಿ ನೀಡಲಾಗುತ್ತದೆ. ಮೆಜಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ಮಾತನಾಡಿ, ‘ಅಮೆಜಾನ್​ನಲ್ಲಿ ಶಿಕ್ಷಣದ ಮೂಲಕ ಭಾರತದ ಡಿಜಿಟಲ್ ವಿಭಜನೆ ನಿವಾರಿಸಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.

‘ನಮ್ಮ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮವು ಮಹಿಳಾ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ರೂಪಾಯಿಗಳ 500 ಮೆರಿಟ್ ಆಧಾರಿತ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಿದೆ. ಈಗಾಗಲೇ 8 ರಾಜ್ಯಗಳಲ್ಲಿ 3 ಮಿಲಿಯನ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳು, 20 ಸಾವಿರ ಶಿಕ್ಷಕರಿಗೆ ತರಬೇತಿ ನೀಡಿದ್ದೇವೆ. ಭವಿಷ್ಯಕ್ಕೆ ಸಿದ್ಧವಾದ ಕೌಶಲ್ಯಗಳೊಂದಿಗೆ ಭಾರತದ ಯುವಕರನ್ನು ಸಬಲೀಕರಣಗೊಳಿಸುವ ಮೂಲಕ ನಾವು ಮುಂದಿನ ಪೀಳಿಗೆಯ ಟೆಕ್ ನಾವೀನ್ಯಕಾರರನ್ನು ಪೋಷಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.