ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ದಿನಾಂಕ ಪ್ರಕಟ; ಆನ್‌ಲೈನ್‌ ಖರೀದಿದಾರರಿಗೆ ಭರ್ಜರಿ ಡಿಸ್ಕೌಂಟ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ದಿನಾಂಕ ಪ್ರಕಟ; ಆನ್‌ಲೈನ್‌ ಖರೀದಿದಾರರಿಗೆ ಭರ್ಜರಿ ಡಿಸ್ಕೌಂಟ್‌

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ದಿನಾಂಕ ಪ್ರಕಟ; ಆನ್‌ಲೈನ್‌ ಖರೀದಿದಾರರಿಗೆ ಭರ್ಜರಿ ಡಿಸ್ಕೌಂಟ್‌

Amazon Great Republic Day sale: ಗಣರಾಜ್ಯೋತ್ಸವದ ಪ್ರಯುಕ್ತ ಈ ವರ್ಷದ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ಗೆ ದಿನಗಣನೆ ಆರಂಭವಾಗಿದೆ. ಜನವರಿ 13ರ ಅಪರಾಹ್ನದ ನಂತರ ಅಮೆಜಾನ್‌ ಸೇಲ್‌ ಆರಂಭವಾಗಲಿದೆ. ಅಮೆಜಾನ್‌ ಪ್ರೈಮ್‌ ಸದಸ್ಯರಿಗೆ ಹನ್ನೆರಡು ಗಂಟೆ ಮೊದಲೇ ಈ ಆಫರ್‌ಗಳು ದೊರಕಲಿವೆ.

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ಗೆ ದಿನಗಣನೆ; ಆನ್‌ಲೈನ್‌ ಖರೀದಿದಾರರಿಗೆ ಡಿಸ್ಕೌಂಟ್
ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ಗೆ ದಿನಗಣನೆ; ಆನ್‌ಲೈನ್‌ ಖರೀದಿದಾರರಿಗೆ ಡಿಸ್ಕೌಂಟ್

Amazon Great Republic Day sale: ಗಣರಾಜ್ಯೋತ್ಸವ ಪ್ರಯುಕ್ತ ಈ ವರ್ಷದ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ಗೆ ದಿನಗಣನೆ ಆರಂಭವಾಗಿದೆ. ರಿಪಬ್ಲಿಕ್‌ ಡೇ ಸಮಯದಲ್ಲಿ ಕಡಿಮೆ ದರಕ್ಕೆ ಉತ್ಪನ್ನಗಳನ್ನು ಖರೀದಿಸಲು ಈ ಮೂಲಕ ಅಮೆಜಾನ್‌ ಅವಕಾಶ ನೀಡುತ್ತದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌, ಆಪಲ್‌ ಐಫೋನ್‌, ಮ್ಯಾಕ್‌, ಟಿವಿ, ವಾಷಿಂಗ್‌ ಮೆಷಿನ್‌, ರೆಫ್ರಿಜರೇಟರ್‌ ಮಾತ್ರವಲ್ಲದೆ ಬಹುತೇಕ ಎಲ್ಲಾ ಉತ್ಪನ್ನಗಳಿಗೆ ಡಿಸ್ಕೌಂಟ್‌ ನೀಡಲಾಗುತ್ತದೆ.

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಯಾವಾಗ?

ಅಮೆಜಾನ್‌ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಈಗಾಗಲೇ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಬ್ಯಾನರ್‌ ಹಾಕಲಾಗಿದೆ. ಆದರೆ, ವೆಬ್‌ಸೈಟ್‌ನಲ್ಲಿಯೂ ಈ ಕುರಿತು ಮಾಹಿತಿ ಪ್ರಕಟಿಸಲಾಗಿದೆ. ಜನವರಿ 13ರ ಅಪರಾಹ್ನದ ನಂತರ ಅಮೆಜಾನ್‌ ಸೇಲ್‌ ಆರಂಭವಾಗಲಿದೆ. ಅಮೆಜಾನ್‌ ಪ್ರೈಮ್‌ ಸದಸ್ಯರಿಗೆ ಹನ್ನೆರಡು ಗಂಟೆ ಮೊದಲೇ ಈ ಆಫರ್‌ಗಳು ದೊರಕಲಿವೆ.

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌: ಬ್ಯಾಂಕ್‌ ಆಫರ್‌ಗಳು

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಪ್ರಯುಕ್ತ ಗ್ರಾಹಕರಿಗೆ ಸಾಕಷ್ಟು ಬ್ಯಾಂಕ್‌ ಆಫರ್‌ಗಳು ದೊರಕಲಿವೆ. ಎಸ್‌ಬಿಐ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಹೊಂದಿರುವವರಿಗೆ ಶೇಕಡ 10ರಷ್ಟು ಹೆಚ್ಚುವರಿ ಡಿಸ್ಕೌಂಟ್‌ ಇರಲಿದೆ. ಇದು ಇಎಂಐ ವಹಿವಾಟಿಗೆ ಮಾತ್ರ ಇರಲಿದೆ.

ಈ ಬಾರಿಯ ಅಮೆಜಾನ್‌ ಸೇಲ್‌ನಲ್ಲಿ ಸಾಕಷ್ಟು ಡೀಲ್ಸ್‌ಗಳು ಇರುವ ಸೂಚನೆಯಿದೆ. ಸ್ಮಾರ್ಟ್‌ಫೋನ್‌ಗಳು, ಗೃಹ ಬಳಕೆ ವಸ್ತುಗಳಿಗೆ ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳಿಗೆ ಅಮೆಜಾನ್‌ನಲ್ಲಿ ದರ ಕಡಿತ ಘೋಷಿಸುವ ಸೂಚನೆ ಇದೆ. ಈಗಾಗಲೇ ಕೆಲವು ಉತ್ಪನ್ನಗಳಿಗೆ ಎಷ್ಟು ಡಿಸ್ಕೌಂಟ್‌ ಇರಲಿದೆ ಎಂಬ ಮಾಹಿತಿಯನ್ನು ಅಮೆಜಾನ್‌ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕ್ಯಾಮೆರಾಗಳಿಗೆ ಶೇಕಡ 70 ಡಿಸ್ಕೌಂಟ್‌

ಡಿಎಸ್‌ಎಲ್‌ಆರ್‌, ಮಿರರ್‌ಲೆಸ್‌ ಕ್ಯಾಮೆರಾಗಳಿಗೆ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಭರ್ಜರಿ ಡಿಸ್ಕೌಂಟ್‌ ಪ್ರಕಟಿಸಲಾಗಿದೆ. ಕೆಲವು ಕ್ಯಾಮೆರಾಗಳಿಗೆ ಶೇಕಡ 70ರಷ್ಟು ಡಿಸ್ಕೌಂಟ್‌ ಪ್ರಕಟಿಸಲಾಗಿದೆ.

ಸ್ಮಾರ್ಟ್‌ಫೋನ್‌ಗಳಿಗೆ ದರ ಕಡಿತ

ಇತ್ತೀಚೆಗೆ ಬಿಡುಗಡೆಯಾದ ಹೊಸ ಸ್ಮಾರ್ಟ್‌ಫೋನ್‌ಗಳಿಗೂ ಡಿಸ್ಕೌಂಟ್‌ ಘೋಷಿಸಲಾಗಿದೆ. ಒನ್‌ಪ್ಲಸ್‌ 13, ಒನ್‌ಪ್ಲಸ್‌ 13 ಆರ್‌, ಐಕ್ಯೂ 13 5ಜಿ, ಐಫೋನ್‌ 15, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ 35 ಮುಂತಾದ ಸ್ಮಾರ್ಟ್‌ಫೋನ್‌ಗಳಿಗೆ ಅಮೆಜಾನ್‌ನಲ್ಲಿ ಡಿಸ್ಕೌಂಟ್‌ ಪ್ರಕಟವಾಗುವ ಸೂಚನೆಯಿದೆ. ಹಾನರ್‌ 200 5ಜಿ, ಗ್ಯಾಲಕ್ಸಿ ಎಸ್‌23 ಆಲ್ಟ್ರಾ, ರಿಯಲ್‌ ಮಿ ನಾರ್ಜೊ ಎನ್‌ 61, ರೆಡ್ಮಿ ನೋಟ್‌ 5ಜಿ ಸ್ಮಾರ್ಟ್‌ಫೋನ್‌ಗಳಿಗೂ ದರ ಕಡಿಮೆಯಾಗುವ ಸೂಚನೆಯಿದೆ. ಡೀಲ್‌ ದರ ಇನ್ನೂ ಪ್ರಕಟವಾಗಿಲ್ಲ.

ಅಮೆಜಾನ್ ರಿಪಬ್ಲಿಕ್‌ ಮಾರಾಟದ ಸಮಯದಲ್ಲಿ, ಗ್ರಾಹಕರು ಬ್ಯಾಂಕ್ ಕೊಡುಗೆಗಳು, ಕಡಿಮೆ ವೆಚ್ಚದ ಇಎಂಐ ಮತ್ತು ವಿನಿಮಯ ಕೊಡುಗೆಗಳ ಪ್ರಯೋಜನವನ್ನು ಪಡೆಯುತ್ತಾರೆ. ಇದರಿಂದ ಖರೀದಿದಾರರು ಇನ್ನಷ್ಟು ಉಳಿತಾಯವನ್ನು ಮಾಡಲು ಸಾಧ್ಯವಾಗುತ್ತದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಂ35 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ ಎ35 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ ಎ55 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ ಎಂ15 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್‌21ಎಫ್‌ಇ 5ಜಿ, ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್‌24 5ಜಿ, ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಝಡ್‌ ಫ್ಲಿಪ್ 6,5, ಒನ್​ಪ್ಲಸ್ 11 ಆರ್‌ 5ಜಿ, ಒನ್​ಪ್ಲಸ್ 12, ಒನ್​ಪ್ಲಸ್ 12ಆರ್‌ ಒನ್​ಪ್ಲಸ್ ನಾರ್ಡ್ ಸಿಇ 4 ಲೈಟ್ 5ಜಿ, ಒನ್​ಪ್ಲಸ್ ನಾರ್ಡ್ ಸಿಇ 4 ಮತ್ತು ಇತರ ಒನ್​ಪ್ಲಸ್ ಮಾದರಿಗಳಿಗೂ ಡಿಸ್ಕೌಂಟ್‌ ಇರಲಿದೆ.

ಐಕ್ಯೂ ಝಡ್‌9ಎಸ್‌ 5ಜಿ, ಝಡ್‌9ಎಸ್‌ ಪ್ರೊ 5ಜಿ, ಝಡ್‌9 5ಜಿ, ಝಡ್‌9 ಲೈಟ್‌ 5ಜಿ, ಝಡ್‌9 ಎಕ್ಸ್‌ 5ಜಿ, ಐಕ್ಯೂ ನಿಯೋ 9 ಪ್ರೊ 5ಜಿ, ಐಕ್ಯೂ ಝಡ್‌7 ಪ್ರೊ 5ಜಿ, ಐಕ್ಯೂ 12 5ಜಿ, ರಿಯಲ್ ಮಿ ನಾರ್ಜೊ 70 ಪ್ರೊ 5G, ರಿಯಲ್ ಮಿ GT 6T 5ಜಿ, ರಿಯಲ್ ಮಿ ನಾರ್ಜೊ ಎನ್‌61, ನಾರ್ಜೊ 70ಎಕ್ಸ್‌ 5ಜಿ ಮತ್ತು ನಾರ್ಜೊ ಎನ್‌65 5ಜಿ, ಶವೋಮಿ 14 ಸಿವಿ, ರೆಡ್ಮಿ 13 5ಜಿ, ರೆಡ್ಮಿ ನೋಟ್ 13 5ಜಿ, ರೆಡ್ಮಿ ನೋಟ್ 13 ಪ್ರೊ ಪ್ಲಸ್, ಶವೋಮಿ 14, ರೆಡ್ಮಿ 13C 5ಜಿ, ರೆಡ್ಮಿ ಎ3ಎಕ್ಸ್‌ ಮತ್ತು ರೆಡ್ಮಿ ನೋಟ್ 13 ಪ್ರೊ 5ಜಿ ಮೊಬೈಲ್‌ಗಳಿಗೂ ಭರ್ಜರಿ ದರ ಕಡಿತ ಇರುವ ಸೂಚನೆಯಿದೆ. ಪೋಕೋ ಎಕ್ಸ್‌6 ನಿಯೋ 5ಜಿ, ಪೋಕೋ ಎಂ6 5ಜಿ, ಪೋಕೋ ಸಿ65, ಪೋಕೋ ಎಕ್ಸ್‌ 6 5ಜಿ ಮತ್ತು ಪೋಕೋ ಎಂ6 ಪ್ರೊ 5ಜಿ ಸೇರಿದಂತೆ ಇತರ ಪೋಕೋ ಮೊಬೈಲ್ ಫೋನ್‌ಗಳಿಗೂ ದರ ಕಡಿತ ಪ್ರಕಟಿಸುವ ಸೂಚನೆಯಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.