Alaska Peninsula Earthquake: ಅಮೆರಿಕದ ಅಲಾಸ್ಕಾ ಪೆನಿನ್ಸುಲಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪನ; ಸುನಾಮಿ ಭೀತಿ ಕಡಿಮೆ; ವರದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Alaska Peninsula Earthquake: ಅಮೆರಿಕದ ಅಲಾಸ್ಕಾ ಪೆನಿನ್ಸುಲಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪನ; ಸುನಾಮಿ ಭೀತಿ ಕಡಿಮೆ; ವರದಿ

Alaska Peninsula Earthquake: ಅಮೆರಿಕದ ಅಲಾಸ್ಕಾ ಪೆನಿನ್ಸುಲಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪನ; ಸುನಾಮಿ ಭೀತಿ ಕಡಿಮೆ; ವರದಿ

ಅಲಾಸ್ಕಾ ಪೆನಿನ್ಸುಲಾದಲ್ಲಿ ಸಂಭವಿಸಿರುವ ಭೂಕಂಪನ 9.3 ಕಿಲೋ ಮೀಟರ್ ಆಳದಲ್ಲಿತ್ತು ಎಂದು ಯುಎಸ್‌ಜಿಎಸ್‌ ಮಾಹಿತಿ ನೀಡಿದೆ.

ಅಮೆರಿಕದ ಅಲಾಸ್ಕಾ ಪೆನಿನ್ಸುಲಾ ಪ್ರದೇಶದಲ್ಲಿ 7.4 ತೀವ್ರತೆಯ ಭೂಕಂಪನ ಸಂಭವಿಸಿದೆ.
ಅಮೆರಿಕದ ಅಲಾಸ್ಕಾ ಪೆನಿನ್ಸುಲಾ ಪ್ರದೇಶದಲ್ಲಿ 7.4 ತೀವ್ರತೆಯ ಭೂಕಂಪನ ಸಂಭವಿಸಿದೆ.

ವಾಷಿಂಗ್ಟನ್: ಅಮೆರಿಕದ (America) ಅಲಾಸ್ಕಾ ಪೆನಿನ್ಸುಲಾ (Alaska Peninsula) ಪ್ರದೇಶದಲ್ಲಿ ಪ್ರಬಲ ಭೂಕಂಪನವಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಮಾಹಿತಿ ನೀಡಿದೆ.

ರಿಕ್ಟರ್ ಮಾಪಕದಲ್ಲಿ 7.4 ಭೂಕಂಪನದ ತೀವ್ರತೆ ದಾಖಲಾಗಿದೆ. ಪ್ರಬಲ ಭೂಕಂಪನ ಸಂಭವಿಸುತ್ತಿದ್ದಂತೆ ಆರಂಭದಲ್ಲಿ ಸುನಾಮಿಯ ಎಚ್ಚರಿಕೆಯನ್ನು ನೀಡಲಾಗಿತ್ತು. ಕೆಲ ಸಮಯದ ನಂತರ ಸಣ್ಣ ಪ್ರಮಾಣ ಸುನಾಮಿಯ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಲಾಸ್ಕಾದಲ್ಲಿ ಸ್ಥಳೀಯ ಕಾಲಮಾನ ಶನಿವಾರ 10.48ಕ್ಕೆ ಭೂಮಿ ಕಂಪಿಸಿದ್ದು, 9.3 ಕಿಲೋ ಮೀಟರ್ (5.78 ಮೈಲುಗಳು) ಆಳದಲ್ಲಿದೆ. ಗಾಯ ಅಥವಾ ಯಾವುದೇ ಹಾನಿಯಾಗಿಲ್ಲ ಎಂದು ಯುಎಸ್‌ಜಿಎಸ್ ತಿಳಿಸಿದೆ.

ಎರಡು ವಾರಗಳ ಹಿಂದಷ್ಟೇ ಅಲಾಸ್ಕಾದ ಆಂಕಾರೇಜ್‌ನಲ್ಲಿ ಲಘು ಭೂಕಂಪ ಸಂಭವಿಸಿದ್ದು, ಅಲಾಸ್ಕಾದ ದಕ್ಷಿಣಕ್ಕೆ 12 ಮೈಲುಗಳಷ್ಚಚು ಹಾಗೂ ಈಗಲ್ ನದಿಯ ದಕ್ಷಿಣಕ್ಕೆ 2 ಮೈಲುಗಳಷ್ಟು ಆಳಕ್ಕಿತ್ತು ಎಂದು ವರದಿಯಾಗಿತ್ತು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.