Amul Milk Rate: ಅಮುಲ್ ಹಾಲಿನ ದರ ಇಳಿಕೆ, ಅಮುಲ್ ಗೋಲ್ಡ್, ತಾಜಾ ಮಿಲ್ಕ್‌ ಸೇರಿ ಹಾಲಿನ ದರ 1 ರೂ ಇಳಿಸಿದ ಅಮುಲ್‌ ಕಂಪನಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Amul Milk Rate: ಅಮುಲ್ ಹಾಲಿನ ದರ ಇಳಿಕೆ, ಅಮುಲ್ ಗೋಲ್ಡ್, ತಾಜಾ ಮಿಲ್ಕ್‌ ಸೇರಿ ಹಾಲಿನ ದರ 1 ರೂ ಇಳಿಸಿದ ಅಮುಲ್‌ ಕಂಪನಿ

Amul Milk Rate: ಅಮುಲ್ ಹಾಲಿನ ದರ ಇಳಿಕೆ, ಅಮುಲ್ ಗೋಲ್ಡ್, ತಾಜಾ ಮಿಲ್ಕ್‌ ಸೇರಿ ಹಾಲಿನ ದರ 1 ರೂ ಇಳಿಸಿದ ಅಮುಲ್‌ ಕಂಪನಿ

Amul Milk Rate: ಸದಾ ಹಾಲಿನ ದರ ಏರಿಕೆಯಾಗುತ್ತಿದ್ದ ಕಾರಣ ನಿಟ್ಟುಸಿರು ಬಿಡುತ್ತಿದ್ದ ಅಮುಲ್ ಗ್ರಾಹಕರಿಗೆ ಒಂದು ಖುಷಿ ಸುದ್ದಿ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಪೈಪೋಟಿಗೆ ಇಳಿದಿರುವ ಅಮುಲ್ ತನ್ನ, ಅಮುಲ್ ಗೋಲ್ಡ್, ಅಮುಲ್ ತಾಜಾ ಮತ್ತು ಟೀ ಸ್ಪೆಷಲ್ ಹಾಲಿನ ದರವನ್ನು 1 ರೂಪಾಯಿ ಇಳಿಕೆ ಮಾಡಿದೆ.

ಅಮುಲ್ ಹಾಲಿನ ದರ ಇಳಿಕೆ: ಅಮುಲ್ ಗೋಲ್ಡ್, ತಾಜಾ ಮಿಲ್ಕ್‌ ಸೇರಿ ಹಾಲಿನ ದರ 1 ರೂಪಾಯಿಯನ್ನು ಅಮುಲ್ ಕಂಪನಿ ಇಳಿಕೆ ಮಾಡಿದೆ.
ಅಮುಲ್ ಹಾಲಿನ ದರ ಇಳಿಕೆ: ಅಮುಲ್ ಗೋಲ್ಡ್, ತಾಜಾ ಮಿಲ್ಕ್‌ ಸೇರಿ ಹಾಲಿನ ದರ 1 ರೂಪಾಯಿಯನ್ನು ಅಮುಲ್ ಕಂಪನಿ ಇಳಿಕೆ ಮಾಡಿದೆ.

Amul Milk Rate: ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆಯಲ್ಲಿ ತನ್ನ ಪಾಲು ಹೆಚ್ಚಿಸಿಕೊಳ್ಳುವುದಕ್ಕಾಗಿ ಪೈಪೋಟಿಗೆ ಇಳಿದಿರುವ ಗುಜರಾತ್‌ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ತನ್ನ ಅಮುಲ್ ಬ್ರ್ಯಾಂಡ್‌ನ ಹಾಲಿನ ದರವನ್ನು 1 ರೂಪಾಯಿ ಇಳಿಕೆ ಮಾಡಿದೆ. ಇದು ಇಂದಿನಿಂದಲೇ ಜಾರಿಗೆ ಬಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಮುಲ್ ಗೋಲ್ಡ್‌, ಅಮುಲ್ ತಾಜಾ ಮತ್ತು ಅಮುಲ್ ಟೀ ಸ್ಪೆ‍ಲ್‌ನ 1 ಕಿಲೋ ಹಾಲಿನ ದರ ಇಳಿಕೆಯಾಗಿದೆ.

ಗೋಲ್ಡ್, ತಾಜಾ ಮಿಲ್ಕ್‌ ಸೇರಿ ಹಾಲಿನ ದರ 1 ರೂಪಾಯಿ ಇಳಿಸಿದ ಅಮುಲ್‌

ಅಮುಲ್ ಹಾಲಿನ ದರವನ್ನು ಇಳಿಕೆ ಮಾಡಲಾಗಿದೆ. ಅಮುಲ್ ಗೋಲ್ಡ್‌, ಅಮುಲ್ ತಾಜಾ ಮತ್ತು ಅಮುಲ್ ಟೀ ಸ್ಪೆಷಲ್‌ 1 ಕೆಜಿ ಪ್ಯಾಕ್‌ನ ದರವನ್ನು 1 ರೂಪಾಯಿ ಇಳಿಸಲಾಗಿದೆ ಎಂದು ಗುಜರಾತ್ ಕೋ-ಆಪರೇಟಿವ್ ಹಾಲು ಮಾರ್ಕೆಟಿಂಗ್ ಫೆಡರೇಶನ್ ಫೆಡರೇಶನ್ ಫೆಡರೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಮುಲ್ ಗೋಲ್ಡ್‌, ಅಮುಲ್ ತಾಜಾ ಮತ್ತು ಅಮುಲ್ ಟೀ ಸ್ಪೆಷಲ್‌ ದರ ಎಷ್ಟು ಈಗ

ಅಮುಲ್‌ ತನ್ನ ಹಾಲು ಉತ್ಪನ್ನಗಳ ದರ ಇಳಿಕೆ ಮಾಡುವ ಮೊದಲು ಅಮುಲ್ ಗೋಲ್ಡ್‌, ಅಮುಲ್ ತಾಜಾ ಮತ್ತು ಅಮುಲ್ ಟೀ ಸ್ಪೆಷಲ್‌ ದರ ಎಷ್ಟಿತ್ತು ಎಂಬ ಕುತೂಹಲ ಸಹಜ. ಮಾಹಿತಿ ಪ್ರಕಾರ, ಅಮುಲ್ ಗೋಲ್ಡ್ ಒಂದು ಲೀಟರ್ ಹಾಲಿನ ದರ 66 ರೂಪಾಯಿ ಇತ್ತು. ಈಗ ಒಂದು ರೂಪಾಯಿ ಇಳಿಕೆಯಾದ ಕಾರಣ 65 ರೂಪಾಯಿ ಆಗಿದೆ. ಇನ್ನು ಅಮುಲ್ ಟೀ ಸ್ಪೆಷಲ್ 1 ಲೀಟರ್ ಹಾಲಿನ ದರ 62 ರೂಪಾಯಿ ಇದ್ದದ್ದು ಈಗ 61 ರೂಪಾಯಿ ಆಗಿದೆ. ಇನ್ನು, ಹೆಚ್ಚು ಬಳಕೆಯಲ್ಲಿರುವ ಅಮುಲ್ ತಾಜಾ ಹಾಲು ಒಂದು ಲೀಟರ್ ಪ್ಯಾಕೆಟ್‌ನ ದರ 54 ರೂಪಾಯಿ ಇತ್ತು. ಈಗ ಒಂದು ರೂಪಾಯಿ ಇಳಿಕೆಯಾಗಿರುವ ಕಾರಣ 53 ರೂಪಾಯಿ ಆಗಿದೆ.

ಕಳೆದ ವರ್ಷ ಜೂನ್‌ನಲ್ಲಿ ಅಮುಲ್‌ ಬೆಲೆ ಏರಿಕೆ; ದೆಹಲಿ ಮಾರುಕಟ್ಟೆಯಲ್ಲಿ ನಂದಿನಿ ಸಂಚಲನ

ಅಮುಲ್ ಕಂಪನಿಯು ಕಳೆದ ವರ್ಷ ಹಾಲಿನ ದರವನ್ನು ಹೆಚ್ಚಿಸಿತ್ತು. ನಂತರ ಕಂಪನಿಯು, ಅಮುಲ್ ಗೋಲ್ಡ್‌ 500 ಎಂಎಲ್ ಪ್ಯಾಕೆಟ್ ಬೆಲೆಯನ್ನು 1 ರೂಪಾಯಿ ಹೆಚ್ಚಿಸಿತ್ತು. ಇದರಿಂದಾಗಿ ಪ್ಯಾಕೆಟ್ ಬೆಲೆ 32 ರೂಪಾಯಿಯಿಂದ 33 ರೂಪಾಯಿಗೆ ಏರಿಕೆಯಾಗಿದೆ. ಒಂದು ಲೀಟರ್ ಅಮುಲ್ ಗೋಲ್ಡ್ ಪ್ಯಾಕೆಟ್ ಮೇಲೆ 2 ರೂಪಾಯಿ ಏರಿಕೆಯಾಗಿತ್ತು. ಹೀಗಾಗಿ ಒಂದು ಲೀಟರ್ ಅಮುಲ್ ಗೋಲ್ಡ್‌ ಬೆಲೆ 66 ರೂಪಾಯಿ ಆಗಿತ್ತು. ಅಮುಲ್ ಕಂಪನಿಯ ಪ್ರತಿಸ್ಪರ್ಧಿ ಮದರ್ ಡೈರಿ ಕೂಡ ಆ ಸಮಯದಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡಿತ್ತು. ಮದರ್ ಡೈರಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಹಾಲಿನ ಬೆಲೆಯನ್ನು ಹೆಚ್ಚಿಸಿತ್ತು. ಈಗ ಅಮುಲ್ ದರ ಇಳಿಕೆ ಮಾಡಿದ್ದರಿಂದ ಪ್ರತಿಸ್ಪರ್ಧಿ ಕಂಪನಿಗಳು ಕೂಡ ಹಾಲಿನ ದರ ಇಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.