ಕನ್ನಡ ಸುದ್ದಿ  /  Nation And-world  /  Andhra Pradesh Assembly Election 2024 Tdp And Janasena First List Released Seat Sharing Details Here Rmy

ಆಂಧ್ರ ವಿಧಾನಸಭೆ ಚುನಾವಣೆಗೆ ಟಿಡಿಪಿ, ಜನಸೇನಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಯಾರಿಗೆ ಎಷ್ಟು ಸ್ಥಾನ -AP Assembly Election 2024

AP Assembly Election 2024: ಆಂಧ್ರ ವಿಧಾನಸಭೆ ಚುನಾವಣೆಗೆ ಟಿಡಿಪಿ, ಜನಸೇನಾ ಮೈತ್ರಿಯಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಟಿಡಿಪಿಗೆ 94, ಜನಸೇನಾಗೆ 24 ಕ್ಷೇತ್ರಗಳನ್ನು ಹಂಚಿಕೊಂಡಿವೆ.

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಂಧ್ರ ವಿಧಾನಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಟಿಡಿಗೆ 94 ಮತ್ತು ಜನಸೇನಾಗೆ 24 ಕ್ಷೇತ್ರಗಳನ್ನು ನೀಡಲಾಗಿದೆ.
ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಂಧ್ರ ವಿಧಾನಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಟಿಡಿಗೆ 94 ಮತ್ತು ಜನಸೇನಾಗೆ 24 ಕ್ಷೇತ್ರಗಳನ್ನು ನೀಡಲಾಗಿದೆ.

ವಿಶಾಖಪಟ್ಟಣಂ: ಆಂಧ್ರ ವಿಧಾನಸಭೆಗೆ (Andhra Pradesh Assembly Election 2024) ಅತಿ ಶೀಘ್ರದಲ್ಲೇ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದಕ್ಕೂ ಮುನ್ನವೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಈ ನಡುವೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗು ದೇಶಂ ಪಕ್ಷ (TDP) ಮತ್ತು ನಟ ಕಂ ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಅವರ ಜನಸೇನಾ (Janasena) ಮೈತ್ರಿಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ.

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಜಂಟಿಯಾಗಿ ಮೈತ್ರಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ನಾಯ್ಡು ಅವರ ನಿವಾಸದಲ್ಲಿ ಇಂದು (ಫೆಬ್ರವರಿ 24, ಶನಿವಾರ) ಸುದೀರ್ಘ ಚರ್ಚೆ ನಡೆಸಿದ ಬಳಿಕ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ನಾಯಕರು ತಿಳಿಸಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಜನಸೇನಾಗೆ 24 ಕ್ಷೇತ್ರಗಳನ್ನು ನೀಡಲಾಗಿದೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ 3 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ ಎಂದು ಟಿಡಿಪಿ ಮುಖ್ಯಸ್ಥ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದು, ಉಳಿದಂತೆ 94 ವಿಧಾನಸಭೆ ಕ್ಷೇತ್ರಗಳಲ್ಲಿ ಟಿಡಿಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

118 ಕ್ಷೇತ್ರಗಳಿಗೆ ಟಿಡಿಪಿ, ಜನಸೇನಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಉಳಿದ ಅಭ್ಯರ್ಥಿಗಳನ್ನು ಅತಿ ಶೀಘ್ರದಲ್ಲೇ ಘೋಷಿಸಲಾಗುತ್ತದೆ. ಮೈತ್ರಿಕೂಟದ ಭಾಗವಾಗಿ ಒಟ್ಟು 175 ವಿಧಾನಸಭೆ ಕ್ಷೇತ್ರಗಳ ಪೈಕಿ 24 ಸ್ಥಾನಗಳನ್ನು ಜನಸೇನೆಗೆ ಹಂಚಿಕೆ ಮಾಡಲಾಗಿದೆ. ಜನಸೇನಾ ಮುಖ್ಯಸ್ಥ ಕವನ್ ಕಲ್ಯಾಣ್ ಮೈತ್ರಿಕೂಟದಲ್ಲಿ ತಮಗೆ ಹಂಚಿಕೆಯಾಗಿರುವ 24 ಕ್ಷೇತ್ರಗಳ ಪೈಕಿ 5 ಸ್ಥಾನಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಉಳಿದ ಕ್ಷೇತ್ರಗಳಿಗೆ ಶೀಘ್ರದಲ್ಲೇ ಅಭ್ಯರ್ಥಿಗಳನ್ನು ಪ್ರಕಟಿಸಲಿದ್ದಾರೆ.

24 ಕ್ಷೇತ್ರಗಳ ಪೈಕಿ ಜನಸೇನಾ ಘೋಷಿಸಿರುವ 5 ಅಭ್ಯರ್ಥಿಗಳ ವಿವರ

  1. ನೆಲ್ಲಿಮರ್ಲ - ಲೋಕಂ ಮಾಧವಿ
  2. ಅನಕಾಪಲ್ಲಿ - ಕೊಣತಾಳ ರಾಮಕೃಷ್ಣ
  3. ರಾಜನಗರಂ - ಬತ್ತುಲ ಬಲರಾಮ ಕೃಷ್ಣ
  4. ಕಾಕಿನಾಡ ಗ್ರಾಮಾಂತರ - ಪಂಥಂ ನಾನಾಜಿ
  5. ತೆನಾಲಿ - ನಾದೆಂದ್ಲ ಮನೋಹರ್

ಆಂಧ್ರ ವಿಧಾನಸಭೆ ಚುನಾವಣೆಗೆ ಟಿಡಿಪಿ ಘೋಷಿಸಿರುವ 94 ಅಭ್ಯರ್ಥಿಗಳು ಮತ್ತು ಕ್ಷೇತ್ರ

ಇಚ್ಛಾಪುರಂ- ಬೆಂದಾಳಂ ಅಶೋಕ್

ತೆಕ್ಕಲಿ- ಕಿಂಜರಾಪು ಅಚ್ಚನ್ ನಾಯ್ಡು

ಆಮದಾಲವಲಸ - ಕೂನ ರವಿಕುಮಾರ್

ರಾಜಂ (ಎಸ್‌ಸಿ)- ಕೊಂಡ್ರು ಮುರಳಿ ಮೋಹನ್

ಕುರುಪಂ (ಎಸ್ಟಿ) - ತೊಯಕ ಜಗದೇಶ್ವರಿ

ಪಾರ್ವತಿಪುರಂ (SC)- ವಿಜಯ್ ಬೋನೇಲ

ಸಾಲೂರು (ST) - ಗುಮ್ಮಡಿ ಸಂಧ್ಯಾ ರಾಣಿ

ಬೊಬ್ಬಿಲಿ- ಆರ್‌ಎಸ್‌ವಿಕೆಕೆ ರಂಗಾ ರಾವ್ (ಬೇಬಿ ನಯನಾ)

ಗಜಪತಿನಗರ - ಕೊಂಡಪಲ್ಲಿ ಶ್ರೀನಿವಾಸ್

ವಿಜಯನಗರ- ಪುಷ್ಪತಿ ಅದಿತಿ ವಿಜಯಲಕ್ಷ್ಮಿ ಗಜಪತಿರಾಜು

ವಿಶಾಖಪಟ್ಟಣ ಪೂರ್ವ- ವೆಲಗಪುಡಿ ರಾಮಕೃಷ್ಣ ಬಾಬು

ವಿಶಾಖಪಟ್ಟಣಂ ಪಶ್ಚಿಮ- ಪಿಜಿವಿಆರ್ ನಾಯ್ಡು (ಗನ್ನಬಾಬು)

ಅರಕು ಲೊಯ (ST)- ಸಿಯ್ಯಾರಿ ದೊನ್ನು ದೊರ

ಪಾಯಕರಾವುಪೇಟೆ (ಎಸ್‌ಸಿ)- ವಂಗಲಪುಡಿ ಅನಿತಾ

ನರಸೀಪಟ್ಟಣ- ಚಿಂತಕಾಯಲ ಅಯ್ಯಣ್ಣಪಾತ್ರಡು

ತುಣಿ- ಯನಮಲ ದಿವ್ಯ

ಪೆದ್ದಾಪುರ- ನಿಮ್ಮಕಾಯಿಲ ಚಿನ್ನರಾಜಪ್ಪ

ಅನಪರ್ತಿ- ನಲ್ಲಿಮಿಲ್ಲಿ ರಾಮ ಕೃಷ್ಣಾ ರೆಡ್ಡಿ

ಮುಮ್ಮಿಡಿವರಂ - ದಾಟ್ಲ ಸುಬ್ಬರಾಜು

ಗನ್ನವರಂ (ಎಸ್‌ಸಿ)- ಸರಿಪೆಲ್ಲ ರಾಜೇಶ್ ಕುಮಾರ್

ಕೊತ್ತಪೇಟೆ- ಬಂಡಾರು ಸತ್ಯಾನಂದ ರಾವ್

ಮಂಡಪೇಟ-ವೇಗುಳ್ಳ ಜೋಗೇಶ್ವರ ರಾವ್

ರಾಜಮಂಡ್ರಿ ನಗರ- ಆದಿರೆಡ್ಡಿ ವಾಸು

ಜಗ್ಗಂಪೇಟೆ- ಜ್ಯೋತುಲ ವೆಂಕಟಪ್ಪ ರಾವ್ (ನೆಹೂರು)

ಅಚಂತ - ಪಿತಾನಿ ಸತ್ಯನಾರಾಯಣ

ಪಾಲಕೊಳ್ಳು- ನಿಮ್ಮಲ ರಾಮನಾಯ್ಡು

ಉಂಡಿ - ಮಂಟೆನ ರಾಮರಾಜ

ತಣುಕು- ಅರಿಮಿಲ್ಲಿ ರಾಧಾ ಕೃಷ್ಣ

ಏಲೂರು - ಬಡೇಟಿ ರಾಧಾ ಕೃಷ್ಣ

ಚಿಂತಲಪುಡಿ (SC) - ಸೋಂಗಾ ರೋಶನ್

ತಿರುವೂರು (SC) - ಕೋಳಿಕಪುಡಿ ಶ್ರೀನಿವಾಸ್

ನೂಜಿವೀಡು - ಕೊಲುಸು ಪಾರ್ಥಸಾರಧಿ

ಗನ್ನವರಂ - ಯರ್ಲಗಡ್ಡ ವೆಂಕಟ್ ರಾವ್

ಗುಡಿವಾಡ - ವೇಣಿಗಂಡ್ಲ ರಾಮು

ಪೇಡನ - ಪೇಪರ್ ಕೃಷ್ಣ ಪ್ರಸಾದ್

ಮಚಲಿಪಟ್ಟಣ- ಕೊಲ್ಲು ರವೀಂದ್ರ

ಪಾಮೇರು (ಎಸ್‌ಸಿ)- ವರ್ಲ ಕುಮಾರ ರಾಜ

ವಿಜಯವಾಡ ಸೆಂಟ್ರಲ್- ಬೋಂಡಾ ಉಮಾ

ವಿಜಯವಾಡ ಪೂರ್ವ- ಗದ್ದೆ ರಾಮಮೋಹನ ರಾವ್

ನಂದಿಗಾಮ (ಎಸ್‌ಸಿ)- ತಂಗಿರಾಳ ಸೌಮ್ಯ

ಜಗ್ಗಯ್ಯಪೇಟೆ - ಶ್ರೀರಾಮ್ ರಾಜಗೋಪಾಲ್ ಅವರ ತಾತ

ತಾಡಿಕೊಂಡ (ಎಸ್‌ಸಿ) - ತೆನಾಲಿ ಶ್ರವಣ್ ಕುಮಾರ್

ಮಂಗಳಗಿರಿ - ನಾರಾ ಲೋಕೇಶ್

ಪೊನ್ನೂರು - ಧೂಳಿಪಳ್ಳ ನರೇಂದ್ರ

ವೇಮುರು (ಎಸ್‌ಸಿ)- ನಕ್ಕಾ ಆನಂದ ಬಾಬು

ರಾಯಪಲ್ಲೆ - ಅಂದರೆ ಸತ್ಯ ಪ್ರಸಾದ್

ಬಾಪಟ್ಲ- ವೇಗೇಶ ನರೇಂದ್ರ ವರ್ಮಾ

ಪ್ರತ್ತಿಪಾಡು (ಎಸ್‌ಸಿ)- ಬಾರ್ಲಾ ರಾಮಾಂಜನೇಯು

ಚಿಲಕಲೂರಿಪೇಟೆ- ಪ್ರತಿಪತಿ ಪುಲ್ಲಾರಾವ್

ಸತ್ತೇನಪಲ್ಲೆ - ಕಣ್ಣಾ ಲಕ್ಷ್ಮೀನಾರಾಯಣ

ವಿನುಕೊಂಡ - ಜೀವಿ ಆಂಜನೇಯು

ಮಾಚರ್ಲ- ಜೂಲಕಂಠಿ ಬ್ರಹ್ಮಾನಂದ ರೆಡ್ಡಿ

ಯರ್ರಗೊಂಡಪಾಲೆಂ (SC)- ಗುಡೂರಿ ಎರಕ್ಷನ್ ಬಾಬು

ಪರ್ಚೂರು- ಏಲೂರಿ ಸಾಂಬಶಿವರಾವ್

ಅದ್ದಂಕಿ- ಗೊಟ್ಟಿಪಾಟಿ ರವಿಕುಮಾರ್

ಸಂತನೂತಲಪಾಡು- ಬೊಮ್ಮಾಜಿ ನಿರಂಜನ್ ವಿಜಯ್ ಕುಮಾರ್

ಒಂಗೋಲು- ದಾಮಚ್ರಾಳ ಜನಾರ್ದನ ರಾವ್

ಕೊಂಡಪಿ- ಡೋಲ ಶ್ರೀ ಬಾಲ ವೀರಾಂಜನೇಯ ಸ್ವಾಮಿ

ಕನಿಗಿರಿ - ನುಕ್ಕ ಉಗ್ರ ನರಸಿಂಹ ರೆಡ್ಡಿ

ಕವಲಿ- ಕಾವ್ಯ ಕೃಷ್ಣಾ ರೆಡ್ಡಿ

ನೆಲ್ಲೂರು ನಗರ- ಪಿ.ನಾರಾಯಣ

ನೆಲ್ಲೂರು ಗ್ರಾಮಾಂತರ- ಕೋಟಂ ರೆಡ್ಡಿ ಶ್ರೀಧರ್ ರೆಡ್ಡಿ

ಗುಡೂರು (ಎಸ್‌ಸಿ)- ಪಾಸಂ ಸುನೀಲ್ ಕುಮಾರ್

ಸುಳ್ಳೂರುಪೇಟೆ (ಎಸ್‌ಸಿ) ನೆಲವೇಲ ವಿಜಯಶ್ರೀ

ಉದಯಗಿರಿ - ಕಾಕರ್ಲ ಸುರೇಶ್

ಕಡಪ - ಮಾಧವಿ ರೆಡ್ಡಿ

ರಾಯಚೋಟಿ- ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ

ಪುಲಿವೆಂದುಲ- ಮಾರೆಡ್ಡಿ ರವೀಂದ್ರನಾಥ ರೆಡ್ಡಿ

ಮೈದುಕೂರು - ಪುಟ್ಟ ಸುಧಾಕರ್ ಯಾದವ್

ಅಲ್ಲಗಡ್ಡ - ಭೂಮಾ ಅಖಿಲ ಪ್ರಿಯಾ ರೆಡ್ಡಿ

ಶ್ರೀಶೈಲಂ- ಬುದ್ಧರಾಜ ಶೇಖರ್ ರೆಡ್ಡಿ

ಕರ್ನೂಲ್- ಟಿ.ಜಿ.ಭರತ್

ಪಣ್ಯಂ - ಗೌರು ಚಾರ್ತಿಹಾ ರೆಡ್ಡಿ

ನಂದ್ಯಾಲ- ಎನ್‌ಎಂಡಿ. ಫಾರೂಕ್

ಬನಗಾನಪಲ್ಲಿ - ಬಿ.ಸಿ.ಜನಾರ್ದನರೆಡ್ಡಿ

ಡೋನ್- ಕೋಟ್ಲ ಸೂರ್ಯ ಪ್ರಕಾಶ್ ರೆಡ್ಡಿ

ಪತ್ತಿಕೊಂಡ- ಕೆ.ಇ.ಶ್ಯಾಮ್ ಬಾಬು

ಕೋಡುಮೂರು- ಮಡಿಕೇರಿ ದಸ್ತಗಿರಿ

ರಾಯದುರ್ಗಂ-ಕಾಲ್ವ ಶ್ರೀನಿವಾಸ್

ಉರವಕೊಂಡ - ಪಿ.ಕೇಶವ

ತಾಡಿಪತ್ರಿ- ಜೆ. ಸಿ. ಅಶ್ಮಿತ್ ರೆಡ್ಡಿ

ಸಿಂಗನಮಲ (SC) - ಬಂಡಾರು ಶ್ರಾವಣಿ ಶ್ರೀ

ಕಲ್ಯಾಣದುರ್ಗಂ - ಆಮಿಲಿನೇನಿ ಸುರೇಂದರ್ ಬಾಬು

ರಾಪ್ತಾಡು - ಪರಿಟಾಲ ಸುನೀತಾ

ಮಡಕಶಿರ (ಎಸ್‌ಸಿ) - ಎಂ ಇ ಸುನೀಲ್ ಕುಮಾರ್

ಹಿಂದೂಪುರ- ನಂದಮೂರಿ ಬಾಲಕೃಷ್ಣ

ಪೆನುಕೊಂಡ - ಸವಿತಾ

ತಂಬಳ್ಳಪಲ್ಲೆ - ಜಯಚಂದ್ರ ರೆಡ್ಡಿ

ಪೀಲೇರು - ನಲ್ಲಾರಿ ಕಿಶೋರ್ ಕುಮಾರ್ ರೆಡ್ಡಿ

ನಗರಿ - ಗಾಲಿ ಭಾನು ಪ್ರಕಾಶ್

ಗಂಗಾಧರ ನೆಲ್ಲೂರು- ಡಾ.ವಿ.ಎಂ.ಥಾಮಸ್

ಚಿತ್ತೂರು - ಗುರ್ಜಾಲ ಜಗನ್ ಮೋಹನ್

ಪಲಮನೇರು- ಎನ್.ಅಮರನಾಥ ರೆಡ್ಡಿ

ಕುಪ್ಪಂ- ನಾರಾ ಚಂದ್ರಬಾಬು ನಾಯ್ಡು

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point