ಕನ್ನಡ ಸುದ್ದಿ  /  Nation And-world  /  Andhra Pradesh Assembly Election Date Announced Polling On May 13 And Result On June 4 Rmy

ಮೇ 13ಕ್ಕೆ ಆಂಧ್ರಪ್ರದೇಶ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ; ಜೂನ್ 4ಕ್ಕೆ ಫಲಿತಾಂಶ -Andhra Pradesh Assembly Election

Andhra Pradesh Assembly Election: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಲೋಕಸಭೆ ಚುನಾವಣೆಗೆ ದಿನಾಂಕವನ್ನು ಘೋಷಿಸುವ ಜೊತೆಗೆ ಆಂಧ್ರಪ್ರದೇಶ ವಿಧಾನಸಭೆಗೂ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಆಂಧ್ರ ಪ್ರದೇಶ ಸೇರಿ ಒಟ್ಟು 4 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿದರು.
ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಆಂಧ್ರ ಪ್ರದೇಶ ಸೇರಿ ಒಟ್ಟು 4 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿದರು. (HT)

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಹಬ್ಬಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇದರ ನಡುವೆಯೇ ನೆರೆಯ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೂ (Andhra Pradesh Assembly Election 2024) ದಿನಾಂಕವನ್ನು ಘೋಷಣೆ ಮಾಡಲಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಆಂಧ್ರಪ್ರದೇಶದ ಎಲ್ಲಾ 175 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಏಪ್ರಿಲ್ 18ಕ್ಕೆ ಅಧಿಸೂಚನೆ ಬಿಡುಗಡೆಯಾಗಲಿದ್ದು, ಮೇ 13 ಕ್ಕೆ ಮತದಾನ ನಡೆಯಲಿದೆ. ಇನ್ನ ಲೋಕಸಭೆ ಚುನಾವಣಾ ಫಲಿತಾಂಶದ ದಿನವೇ ಅಂದ್ರೆ ಜೂನ್ 4 ರಂದು ಆಂಧ್ರ ಪ್ರದೇಶದ ಫಲಿತಾಂಶ ಪ್ರಕಟವಾಗಲಿದೆ.

ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಿಎಂ ಜಗನ್ ಮೋಹನ್ ರೆಡ್ಡಿ ಭರ್ಜರಿ ಪ್ರಚಾರಗಳನ್ನು ಈಗಾಗಲೇ ಆರಂಭಿಸಿದೆ. ಅತ್ತ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಬಿಜೆಪಿ ಹಾಗೂ ನಟ ಕಂ ರಾಜಕಾರಣಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾದೊಂದಿಗೆ ಮೈತ್ರಿ ಮಾಡಿಕೊಂಡು ಶತಾಯಗತಾಯ ಸಿಎಂ ಜಗನ್ ಅವರನ್ನ ಮಣಿಸಲೇಬೇಕೆಂದು ಪಣತೊಟ್ಟು ರಾಜಕೀಯ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಜೊತೆಗೆ ಒಡಿಶಾ, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭಾ ಚುನಾವಣೆಯನ್ನೂ ಘೋಷಣೆ ಮಾಡಲಾಗಿದೆ. ಒಡಿಶಾ ವಿಧಾನಸಭೆಯ (Odisha Assembly Election 2024) ಒಟ್ಟು 147 ವಿಧಾನಸಭಾ ಕ್ಷೇತ್ರಗಳಿಗೆ 4 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಏಪ್ರಿಲ್ 18ಕ್ಕೆ ಅಧಿಸೂಚನೆ ಬಿಡುಗಡೆಯಾಗಲಿದ್ದು, ಮೇ 13ಕ್ಕೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ಏಪ್ರಿಲ್ 26ಕ್ಕೆ ಅಧಿಸೂಚನೆ ಹಾಗೂ ಮೇ 20 ಮತದಾನ ನಡೆಯಲಿದೆ. ಮೂರನೇ ಹಂತದ ಚುನಾವಣೆಗೆ ಏಪ್ರಿಲ್ 29 ರಂದು ಅಧಿಸೂಚನೆ ಬಿಡುಗಡೆಯಾದರೆ ಮೇ 25ಕ್ಕೆ ವೋಟಿಂಗ್ ನಡೆಯಲಿದೆ. ಇನ್ನ ನಾಲ್ಕನೇ ಹಾಗೂ ಕೊನೆಯ ಹಂತದ ಚುನಾವಣೆಗೆ ಮೇ 7 ರಂದು ಅಧಿಸೂಚನೆ ಹೊರಡಿಸಲಿದ್ದು, ಜೂನ್ 1 ರಂದು ಮತದಾನ ನಡೆಯಲಿದೆ.

ಅರುಣಾಚಲ ಪ್ರದೇಶ, ಸಿಕ್ಕಿಂಗೆ ಒಂದೇ ಹಂತದಲ್ಲಿ ಚುನಾವಣೆ

60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಅರುಣಾಚಲ ಪ್ರದೇಶಕ್ಕೆ (Arunachal Pradesh Assembly Election 2024) ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 20 ಅಧಿಸೂಚನೆ ಬಿಡುಗಡೆಯಾಗಲಿದ್ದು, ಏಪ್ರಿಲ್ 19ಕ್ಕೆ ಮತದಾನ ನಡೆಯಲಿದೆ. ಸಿಕ್ಕಿಂನಲ್ಲೂ (Sikkim Assembly Election 2024) 32 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಮಾರ್ಚ್ 29 ಕ್ಕೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 19ಕ್ಕೆ ವೋಟಿಂಗ್ ನಡೆಯಲಿದೆ. ಈ ನಾಲ್ಕೂ ರಾಜ್ಯಗಳ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ. ಅಂದೇ ಲೋಕಸಭೆಯ ಚುನಾವಣಾ ಫಲಿತಾಂಶವೂ ಬಹಿರಂಗವಾಗಿದೆ.

IPL_Entry_Point